ದೇವರಿಗೆ ಗಂಟೆ ನಾದಾದ ಮೂಲಕ ಪೂಜೆ ಸಲ್ಲಿಸುವುದು ಹೇಗೆ

0
1053

ಯಾವುದೇ ದೇವಸ್ಥಾನಗಳಿಗೆ ಹೋದರು ಮೊದಲು ನಾವು ಮಾಡುವ ಕೆಲಸ ಎಂದರೆ ಗಂಟೆ ಬಾರಿಸುತ್ತೇವೆ ನಂತರವೇ ದೇವರಿಗೆ ಕೈ ಮುಗಿಯುವುದನ್ನು ಗಮನಿಸಿರಬಹುದು .ಈ ರೀತಿ ಮಾಡುವುದು ಯಾಕೆ ಎಂದು ನಿಮಗೆ ಗೊತ್ತೇ ಹಾಗು ದೇವರಿಗೆ ಪೂಜೆ ಸಲ್ಲಿಸುವ ವೇಳೆಯಲ್ಲಿ ಗಂಟೆಯನ್ನು ಬಾರಿಸುತ್ತಾರೆ ಇದಕ್ಕೆಲ್ಲ ಏನು ಕಾರಣ ಗೊತ್ತೇ.

ನಾವು ಗಂಟೆಯನ್ನು ಬಾರಿಸಿದಾಗ ಅದರಿಂದ ಬರುವ ಓಂ ಎಂಬ ಶಬ್ದ ವನ್ನು ನಾವು ಗಮನಿಸಿಲ್ಲ ಆದರೆ ಈ ಗಂಟೆಯನ್ನು ಬಾರಿಸಿದಾಗ ಬರುವ ಶಬ್ದ ಓಂ ಎಂದು ಜೊತೆಗೆ ಈ ಓಂ ಎಂಬ ಶಬ್ದ ನಮಗೆ ಕೇಳಿಸಬೇಕು ಎಂದರೆ ಮೊದಲು ದೇವಸ್ಥಾನವು ನಿಶಬ್ದವಾಗಿ ಇರಬೇಕು ಜೊತೆಗೆ ಗಂಟೆಯನ್ನು ತುಂಬ ಜೋರಾಗಿ ಪದೇ ಪದೇ ಬಾರಿಸುತ್ತಲೇ ಇದ್ದಾರೆ ಈ ಓಂ ಎಂಬುದು ನಮಗೆ ಕೇಳಿಸುವುದಿಲ್ಲ ಯಾವಾಗಲು ಗಂಟೆಯನ್ನು ಒಂದು ಬಾರಿ ಬಾರಿಸಿ ನಿಲ್ಲಿಸಿ ಆಗ ಬಾರಿಸಿದ ಶಬ್ದ ಜೋರಾಗಿ ಕೇಳಿಸಿ ನಿದಾನವಾಗಿ ನಿಲ್ಲುತ್ತದೆ ಆಗ ಓಂ ಎಂಬುದುದನ್ನು ಕೇಳಿಸಿಕೊಳ್ಳಬಹುದು. ದೇವರಿಗೆ ಪೂಜೆ ಮಾಡುವಾಗ ಗಂಟೆಯನ್ನೇ ಬಾರಿಸಿಕೊಂಡು ಪೂಜೆ ಸಲ್ಲಿಸುತ್ತಾರೆ ಆ ಗಂಟೆಯೂ ಹಿತ್ತಳೆಯದು ಆಗಿರುತ್ತದೆ ಈ ಗಂಟೆಯಲ್ಲಿ ಏನಿದೆ ಗೊತ್ತೇ

ಈ ಗಂಟೆಯ ನಾಲಗೆಯಲ್ಲಿ ಸರಸ್ವತಿಯೂ ಮುಖದಲ್ಲಿ ಬ್ರಹ್ಮನೂ ಹೊಟ್ಟೆಯಲ್ಲಿ ರುದ್ರನೂ ದಂಡದಲ್ಲಿ ವಾಸುಕಿಯೂ ತುದಿಯಲ್ಲಿ ಚಕ್ರವೂ ಅಧಿದೇವತೆಗಳಾಗಿ ನೆಲೆಸಿರುತ್ತಾರೆ  ಪದ್ಮಪುರಾಣದಲ್ಲಿ ಸರ್ವವಾದ್ಯಮಯಿ ಘಂಟಾವಾದ್ಯಭಾವೇ ನಿಯೋಜಯೇತ್ ಎಂದು ತಿಳಿಸಿರುವಂತೆ ಗಂಟೆ ಸರ್ವಮಂಗಳ ವಾದ್ಯಗಳ ಪ್ರತೀಕವಾಗಿದೆ. ಸ್ಕಾಂದ ಪುರಾಣದಲ್ಲಿ ಘಂಟಾನಾದೇನ ದೇವೇಶಃ ಪ್ರೀತೋಭವತಿ ಕೇಶವಃ. ಎಂದಿದೆ. ನಾಗಾರಿ ಚಿಹ್ನಿತಾ ಘಂಟಾ ರಥಾಂಗೇನಾ ಸಮನ್ವಿತಾ ವಾದನಾತ್ ಕುರುತೇನಾಶಂ ಜನ್ಮಮೃತ್ಯು ಭಯಾ ನಿ ಚ ಎಂಬ ಆರ್ಯೋಕ್ತಿಯೂ ಇದೆ. ಇದರಂತೆ ಭಗವಂತನ ನಿತ್ಯ ಕಿಂಕರನಾದ ಗರುಡ ಇಲ್ಲವೆ ಚಕ್ರದಿಂದ ಅಂಕಿತವಾದ ಗಂಟೆಯ ನಾದದಿಂದ ಭಗವಂತ ಪ್ರೀತನಾಗುತ್ತಾನಾಗಿ ಜನ್ಮಮೃತ್ಯು ಭಯಗಳು ತಪ್ಪುತ್ತವೆ ಎಂಬುದು ನಂಬಿಕೆ ‘

ನಾವು ದೇವಸ್ಥಾನಗಳಿಗೆ ಹೋಗುವುದು ಮನಸ್ಸಿಗೆ ಶಾಂತಿ ಸಿಗಲಿ ಎಂಬ ಕಾರಣದಿಂದ ಅದರಿಂದ ಕೆಲವರು ದೇವಸ್ಥಾನಗಳಲ್ಲಿ ಹೋಗಿ ಕಣ್ಣು ಮುಚ್ಚಿ ಶಾಂತ ಸ್ವಭಾವದಿಂದ ಕುಳಿತು ಪ್ರಾಥನೆ ಸಲ್ಲಿಸುವ ವೇಳೆ ಗಂಟೆಯನ್ನು ಬಾರಿಸಿದರೆ ಶಬ್ದ ಮಾಡಬೇಡಿ ಎಂದು ಹೇಳುತ್ತಾರೆ ನಿಜ ದೇವರ ಬಳಿ ಮನಸ್ಸಿನ ಚಂಚಲತೆ ಹೋಗಿ ಮನಸ್ಸಿಗೆ ಶಾಂತಿ ಸಿಗಲಿ ಎಂದು ಹೋಗುತ್ತಾರೆ ಆದರೆ ಅಲ್ಲಿ ಕೆಲವರು ಹೆಚ್ಚು ಮಾತನಾಡುವುದು ಹೆಚ್ಚು ಗಂಟೆ ಬಾರಿಸುವುದನ್ನು ಮಾಡುತ್ತಿದ್ದಾರೆ ಅದರಿಂದ ಮನಸ್ಸಿಗೆ ಶಾಂತಿ ಸಿಗುವುದಿಲ್ಲ ಹಾಗಾಗಿ ದೇವಸ್ಥಾನಗಳಲ್ಲಿ ಯಾವಾಗಲು ನಿಶಬ್ದವಾಗಿ ಇರಬೇಕು ಗಂಟೆ ಇದೆ ಎಂದು ಬಾರಿಸುತ್ತಲೇ ಇರಬಾರದು.

ಗಂಟೆಯನ್ನು ಸರಿಯಾದ ರೀತಿಯಲ್ಲಿ ಬಾರಿಸಿದಾಗ ಎರಡು ರೀತಿಯ ಸ್ವರಗಳು ಹೊರಹೊಮ್ಮುತ್ತವೆ. (1) ಪ್ರವಾಹ ಧ್ವನಿ, (2) ಗುಂಜನ ಸ್ವರ ಗಂಟೆಯಿಂದ ಹೊರ ಹೊಮ್ಮುವ ಶಬ್ದದಲ್ಲಿ ಪ್ರಹಾರ ಧ್ವನಿಯನ್ನು ಬಿಟ್ಟು ಐದು ಮುಖ್ಯ ಅಂಶ ಸ್ವರಗಳನ್ನು ಗುರುತಿಸಬಹುದೆಂದು ತಿಳಿಯಲಾಗಿದೆ. ಇವನ್ನು ನಾಮಿನಲ್, ಪಂಚಮ, ಟರ್ಸ್, ಮೂಲನಾದ ಮತ್ತು ಗುಂಜನಸ್ವರವೆಂದು ಕರೆಯುತ್ತಾರೆ. ಹೆಚ್ಚಿನ ಸ್ಥಾಯಿ ಇರುವ ಇನ್ನೂ ಕೆಲವು ಅಂಶಸ್ವರಗಳಿರುವುದಾದರೂ ಅವು ಬಹು ಬೇಗ ಕಾಲದೊಂದಿಗೆ ನಶಿಸಿಹೋಗುತ್ತವೆ.

ದೇವರಿಗೆ ಪೂಜೆ ಮಾಡುವ ಸಂದರ್ಭದಲ್ಲಿ ಗಂಟೆ ಬಾರಿಸುವುದರ ಇನ್ನೊಂದು ಕಾರಣ ಏನೆಂದರೆ ದೇವರಿಗೆ ಪೂಜೆ ಮಾಡುವಾಗ ಯಾವುದೇ ರೀತಿಯ ಕೆಟ್ಟ ದೃಷ್ಟಿಗಳು .ಯಾವುದೇ ಕೆಟ್ಟ ಶಕ್ತಿಗಳು ಹೊಳಗೆ ಪ್ರವೇಶ ಮಾಡಬಾರದು ಎಂಬ ಕಾರಣದಿಂದ ಈ ಗಂಟೆಯ ಬಾರಿಸುತ್ತಾರೆ ಈ ಗಂಟೆಯ ನಾದದಿಂದ ದೇವಸ್ಥಾನದ ಒಳಗೆ ಯಾವುದೇ ರೀತಿಯ ಕೆಟ್ಟ ಶಕ್ತಿಗಳು ಬರದೇ ಜನರ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಎಲ್ಲರ ಮನಸ್ಸಿನಲ್ಲಿ ಇರುವ ಗೊಂದಲಗಳು ದೂರವಾಗುತ್ತವೆ. ಮನಸ್ಸಿನ ಚಂಚಲತೆ ಹೋಗುತ್ತದೆ ಮನಸ್ಸು ಒಂದು ರೀತಿಯ ಶಾಂತಿ ಸಿಕ್ಕಿ ಮನಸ್ಸು ಉಲ್ಲಾಸ ವಾಗುತ್ತದೆ. ಅದರಿಂದ ಇನ್ನು ಮೇಲೆ ನೀವು ದೇವಸ್ಥಾನಕ್ಕೆ ಹೋದಾಗ ಗಂಟೆಯನ್ನು ಒಂದು ಬಾರಿ ಮಾತ್ರ ಬಾರಿಸಿ ಜೊತೆಗೆ ಅದರಿಂದ ಬರುವ ನಾದವನ್ನು ಕೇಳಿಸಿಕೊಳ್ಳಿ ಅದು ಮನಸ್ಸಿಗೆ ಸಂತೋಷ ನೀಡುತ್ತದೆ ಮನಸ್ಸಿಗೆ ಮುದ ನೀಡುತ್ತದೆ. ಶಾಂತಿ ಸಿಗುತ್ತದೆ

LEAVE A REPLY

Please enter your comment!
Please enter your name here