ಮೇಲುಕೋಟೆಯು ಕರ್ನಾಟಕದ ಸುಪ್ರಸಿದ್ದ ಪ್ರವಾಸಿ ತಾಣವಾಗಿ ಹೆಸರು ಪಡೆದಿದೆ ಇದು ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಒಂದು ಹಳ್ಳಿಯಾಗಿದೆ. ಈ ಮೇಲಿಕೋಟೆಯಲ್ಲಿಹೊಯ್ಸಳರು ಕಟ್ಟಿಸಿದ ಚೆಲುವರಾಯಸ್ವಾಮಿ ದೇವಸ್ಥಾನ ಪ್ರಸಿದ್ಧ ಧಾರ್ಮಿಕ ಕೆಂದ್ರವಾಗಿದೆ. ಈ ಸ್ಥಳವು ಶ್ರೀವೈಷ್ಣವ ಪಂಥದ ಒಂದು ಕೇಂದ್ರ. ಇಲ್ಲಿ ಬೆಟ್ಟದ ಮೇಲೆ ಯೋಗ ನರಸಿಂಹಸ್ವಾಮಿಯ ದೇವಸ್ಥಾನವಿದೆ.
ಈ ಮೇಲುಕೋಟೆಯಲ್ಲಿ ಒಂದಲ್ಲ ಎರಡಲ್ಲ ಲೆಕ್ಕ ಎಣಿಸಲು ಕಷ್ಟ ಅಷ್ಟು ದೇಗುಲಗಳು ಇಲ್ಲಿವೆ ಜೊತೆಗೆ ಈ ಮೇಲಿಕೋಟೆಯಲಿ ನೋಡುವ ಸ್ಥಳಗಳು ಎಷ್ಟಿವೆ ಎಂದು ತಿಳಿದ್ದಿದ್ದಿರಾ ಮೇಲುಕೋಟೆಗೆ ಎಲ್ಲರು ಹೋಗಿರುತ್ತೇವೆ ಆದರೆ ಅಲ್ಲಿ ಕನಿಷ್ಠ ಐದು ಇಲ್ಲ ಹತ್ತು ದೇವರ ದರ್ಶನ ಮಾಡಿರುತ್ತೇವೆ ಅಲ್ಲವೇ ಆದರೆ ಇಲ್ಲಿ ನೋಡುವ ಸ್ಥಳಗಳು ಎಷ್ಟಿವೆ ನೋಡಿ.
ವಿಶಿಷ್ಟ ವಾಸ್ತುಶಿಲ್ಪದ ವಿಶಾಲವಾದ ಐತಿಹಾಸಿಕ ಪುರಾಣ ಪ್ರಸಿದ್ಧ ಶ್ರೀ ಚೆಲುವರಾಯಸ್ವಾಮಿ ದೇಗುಲ ಹಾಗೂ ಬೆಟ್ಟದ ಮೇಲೆ ನೆಲೆ ನಿಂತಿರುವ ಯೋಗನರಸಿಂಹ ದೇವಾಲಯದ ನಡುವೆ ಬದರಿ ನಾರಾಯಣ ದೇವಾಲಯ, ಪಟ್ಟಾಭಿರಾಮ ದೇವಾಲಯ, ಶಾಂಡಿಲ್ಯದ ಸನ್ನಿಧಿ, ಕುಲಶೇಖರ್ ಆಳ್ವಾರ್ ಸನ್ನಿಧಿ, ಕೇಶವ ದೇವರ ಸನ್ನಿಧಿ, ಮಾರಮ್ಮನ ಸನ್ನಿಧಿ, ಪೇಟೆ ಆಂಜನೇಯ ಸನ್ನಿಧಿ, ನಮ್ಮಾಳ್ವಾರ್ ಗುಡಿ, ತಿರುಮಂಗೈ ಆಳ್ವಾರ್ ಗುಡಿ, ಪೇಟೆ ಕೃಷ್ಣದೇವರ ಗುಡಿ, ಸೀತಾರಣ್ಯ ಕ್ಷೇತ್ರ,ವೆಂಕಟೇಶ್ವರ ಗುಡಿ, ಪರಕಾಲ ಮಠ, ಅಹೋಬಲ ನರಸಿಂಹ ಸ್ವಾಮಿ ಸನ್ನಿಧಿ, ಆದಿಶೇಷ ಸನ್ನಿಧಿ.ಪೇಯಾಳ್ವಾರ್ ಸನ್ನಿಧಿ, ವರಾಹ ದೇವಾಲಯ, ಹನುಮಾನ್ ದೇವಾಲಯ, ಹಯಗ್ರೀವ ಸನ್ನಿಧಿ, ಲಕ್ಷ್ಮಿ ನಾರಾಯಣ ಸನ್ನಿಧಿ, ದತ್ತ ನಾರಾಯಣ ಗುಡಿ, ವರಸಿದ್ದಿ ವಿನಾಯಕ. ಕೇಶವ. ಶನೇಶ್ವರ ಗುಡಿ, ಕವಿಗಲ್ ಆಂಜನೇಯ ಗುಡಿ, ಕರಮೆಟ್ಟಿಲು ಆಂಜನೇಯ ಗುಡಿ, ಮೂಡ ಬಾಗಿಲು ಆಂಜನೇಯ ಗುಡಿ, ರಾಯರಗೋಪುರ ಆಂಜನೇಯ ಗುಡಿ, ಚೋಳರ ಬಂಡೆ, ಶ್ರೀನಿವಾಸ ದೇವಾಲಯ, ಸುಗ್ರೀವನ ಗುಡಿ, ಕಾಳಮ್ಮನ ಗುಡಿ, ಗರುಡ ದೇವರ ಗುಡಿ, ಆಂಜನೇಯ ಗುಡಿ. ಹೊರತಮ್ಮನ ದೇವಾಲಯ, ಶಿವನ ಗುಡಿ.
ಕಲ್ಯಾಣಿ, ತೆಪ್ಪಕೊಳ, ಅಕ್ಕತಂಗಿಕೊಳ.ನಿಂಗಣ್ಣನ ಕಟ್ಟೆ, ನಕ್ಷತ್ರಕೊಳ, ವೃತ್ತಕೊಳ, ಬಸವರಾಜನಕೊಳ, ವೇದಪುಷ್ಕರಣಿ, ಚಿಕ್ಕಯ್ಯನಕೊಳ, ಮೈತ್ರೇಯ ತೀರ್ಥ, ಪದ್ಮತೀರ್ಥ, ನಾರಾಯಣ ತೀರ್ಥ, ತೊಟ್ಟಿಲಮಡು, ಹಾಲುಕೊಲ, ಭಟ್ಟರಕೊಳ, ನರಸಿಂಹಮಡು ಅಜ್ಜನಕಟ್ಟೆ, ಅಕ್ಕತಂಗಿಕೊಳ. ಒಂಭತ್ತು ಕಲ್ಲು ಬಾವಿ, ಹೊಸಬಾವಿ, ಛತ್ರಿಕೊಳ, ಸಂತೆಮಡು, ಗಣಪತಿ ಕಟ್ಟೆ, ಪುಟ್ಟನರಸೀಕೊಳ, ಸಿಹಿನೀರುಕೊಳ, ಅಹೋಬಲ ಮಠ, ಆಂಡವನ್ ಆಶ್ರಮಂ, ಕಂಚಿವಾದ ಕೇಸರಿ ಆಳಹಿಯ ಮಣವಾದ ಮಠ, ತ್ರಿದಂಡಿ ಚಿನ್ನಜೀಯಾರ್ ಮಠ, ತಿರುಪತಿ ಪೆರಿಯ ಜೀಯಾರ್ ಮಠ, ಬೈರಾಗಿ ಮಠಗಳಿವೆ. ಇವುಗಳು ಮೇಲುಕೋಟೆಯಲ್ಲಿ ಪ್ರೇಕ್ಷಣೀಯ ತಾಣಗಳಾಗಿ ಪ್ರವಾಸಿಗರನ್ನು ಸೆಳೆಯುತ್ತಿವೆ.
ಶ್ರೀ ಚಲುವನಾರಾಯಣಸ್ವಾಮಿಯ ದೇವಸ್ಥಾನದಲ್ಲಿ ಪ್ರಮುಖವಾಗಿ ನೆಡೆಯುವ ವಿಶೇಷ ಉತ್ಸವಗಳೆಂದರೆ ಶ್ರೀ ವೈರಮುಡಿ ಬ್ರಹ್ಮೋತ್ಸವ ಶ್ರೀ ಕೃಷ್ಣರಾಜಮುಡಿ ಉತ್ಸವ ಶ್ರೀ ರಾಜಮುಡಿ ಉತ್ಸವಶ್ರೀ ರಾಮಾನುಜಾಚಾರ್ಯರ ತಿರುನಕ್ಷತ್ರ ಈ ನಾಲ್ಕು ಉತ್ಸಹಗಳಲ್ಲಿ ತುಂಬ ವಿಶೇಷವಾಗಿ ಆಗು ತುಂಬ ಅದ್ದೂರಿಯಾಗಿ ಮಾಡುವ ಉತ್ಸವ ಎಂದರೆ ಶ್ರೀ ವೈರಮುಡಿ ಬ್ರಹ್ಮೋತ್ಸವ.
ಮೇಲುಕೋಟೆಯಲ್ಲಿ ಪ್ರತಿವರ್ಷವೂ ಹಲವಾರು ಪೂಜೆ .ವಿವಿಧ ಕಾರ್ಯಕ್ರಮಗಳು .ವಿವಿಧ ಉತ್ಸಹಗಳು. ನೆಡೆಯುತ್ತವೆ ಆದರೆ ಇವುಗಳಿಗೆಲ್ಲ ಅತ್ಯಂತ ಪ್ರಸಿದ್ದಿ ಪಡೆದಿರುವ ಕಾರ್ಯಕ್ರಮ ಎಂದರೆ ಶ್ರೀ ವೈರಮುಡಿ ಬ್ರಹ್ಮೋತ್ಸವ. ಇದು ಬರೋಬ್ಬರಿ ಹತ್ತು ದಿನಗಳ ಕಾಲ ನೆಡೆಯುತ್ತದೆ . ಈ ಬ್ರಹ್ಮೋತ್ಸವ. ಪ್ರತಿ ವರ್ಷ ಮಾರ್ಚ್ ಅಥವಾ ಏಪ್ರಲ್ ತಿಂಗಳಿನಲ್ಲಿ ನೆಡೆಯುತ್ತದೆ.
ವೈರಮುಡಿ ಎಂದರೆ ವಜ್ರಗಳಿಂದ ಕೂಡಿರುವ ಕಿರೀಟ. ಇದು ಶ್ರೀಮಾನ್ ನಾರಾಯಣನ ಕಿರೀಟವೆಂದು ದ್ವಾಪರಯುಗದಲ್ಲಿ ಕೃಷ್ಣನ ಮೂಲಕ ಚೆಲುವರಾಯನಿಗೆ ಗರುಡನಿಂದ ತೊಡಿಸಿದನೆಂಬುವುದು ನಂಬಿಕೆ .ಇನ್ನೊಂದು ಕಥೆಯಲ್ಲಿ ನೋಡುವುದಾದರೆ ವೈಕುಂಠದಿಂದ ರಾಕ್ಷಸ ವಿರೋಚನ ಕದ್ದಿದ್ದ ನಾರಾಯಣನ ಕಿರೀಟವನ್ನು ಗರುಡ ರಾಕ್ಷಸನೊಂದಿಗೆ ಹೋರಾಡಿ ಮರಳಿ ತಂದು ಚಲುವರಾಯನಿಗೆ ಅರ್ಪಿಸಿದನೆಂಬುದು ಇನ್ನೊಂದು ನಂಬಿಕೆಯಾಗಿದೆ .
ಈ ವೈರಮುಡಿ ಬ್ರಹ್ಮೋತ್ಸವ ಆಚರಣೆಗೆ ಬರಲು ಕಾರಣವೇನೆಂದರೆ
ಶ್ರೀರಾಮಚಂದ್ರನಿಗೆ ಅಯೋಧ್ಯೆಯಲ್ಲಿ ದಶರಥ ಮಹಾರಾಜ ಪಟ್ಟಾಭಿಷೇಕ ಮಾಡಲು ತೀರ್ಮಾನ ತೆಗೆದುಕೊಳ್ಳುತ್ತಾನೆ ಪಾಲ್ಗುಣ ಮಾಸದ ಪುಷ್ಯ ನಕ್ಷತ್ರದ ಶುಭದಿನವನ್ನು ಗೊತ್ತು ಮಾಡಿ ಅರಮನೆಯಲ್ಲಿ ಪಟ್ಟಾಭಿಷೇಕಕ್ಕೆ ಬೇಕಾದ ಎಲ್ಲಾ ರೀತಿಯ ಸೌಕರ್ಯಗಳನ್ನು ಮಾಡಿಕೊಂಡರು .ನಂತರ ಪಟ್ಟಾಭಿಷೇಕ ನಡೆಯಬೇಕೆನ್ನುವಷ್ಟರಲ್ಲಿ ಕೈಕೇಯಿಯ ಕುತಂತ್ರದಿಂದಾಗಿ ಶ್ರೀರಾಮ ವನವಾಸಕ್ಕೆ ತೆರಳಬೇಕಾಯಿತು. ಆದರೆ ತನ್ನ ಅಣ್ಣ ಶ್ರೀರಾಮನ ಪಟ್ಟಾಭಿಷೇಕವನ್ನು ಕಣ್ಣಾರೆ ನೋಡಬೇಕೆನ್ನುವ ಬಯಕೆಯಲ್ಲಿದ್ದ ತಮ್ಮ ಲಕ್ಷಣನಿಗೆ ತನ್ನ ಆಸೆ ಈಡೇರಲಿಲ್ಲವಲ್ಲ ಎಂಬ ಕೊರಗು ಸದಾ ಕಾಡುತ್ತಿತ್ತು.
ಆದರೆ ತನ್ನ ಬಯಕೆಯನ್ನು ಈಡೇರಿಸಿಕೊಳ್ಳುವ ಸಲುವಾಗಿ ಆದಿಶೇಷನ ಅವತಾರವಾಗಿದ್ದ ಲಕ್ಷ್ಮಣ ಮುಂದೆ ಕಲಿಯುಗದಲ್ಲಿ ರಾಮಾನುಜರಾಗಿ ಜನಿಸಿ, ಶ್ರೀರಾಮನ ಆರಾಧ್ಯದೈವ ಚೆಲುವರಾಯಸ್ವಾಮಿ ನೆಲೆಸಿದ ಮೇಲುಕೋಟೆಯಲ್ಲಿ ಶ್ರೀರಾಮನ ಪಟ್ಟಾಭಿಷೇಕಕ್ಕೆ ನಿಗದಿಪಡಿಸಿದ ಫಾಲ್ಗುಣ ಮಾಸದ ಪುಷ್ಯ ನಕ್ಷತ್ರದ ಶುಭದಿನದಂದೇ ಚೆಲುವರಾಯಸ್ವಾಮಿ ಯನ್ನು ತನ್ನ ಹೆಗಲ ಮೇಲೆ ಹೊತ್ತು ಉತ್ಶವನ್ನು ಮಾಡಿದರು ಇದರ ಸಲುವಾಗಿ ಈ ಉತ್ಸವ ವನ್ನು ವೈರಮುಡಿ ಅಂದರೆ ವೈರ ಎಂದರೆ ವಜ್ರ . ಮುಡಿ ಎಂದರೆ ಕಿರೀಟ ಎಂದು ಪ್ರಸಿದ್ದಿ ಆಯಿತು . ಈ ಮೂಲಕ ತನ್ನ ಮನದ ಇಚ್ಛೆಯನ್ನು ನೆರವೇರಿಸಿಕೊಂಡನಂತೆ ಈ ಸುದಿನವನ್ನು ಪ್ರತಿವರ್ಷವೂ ವೈರಮುಡಿ ಬ್ರಹ್ಮೋತ್ಸವವಾಗಿ ಆಚರಿಸಿಕೊಂಡು ಬರಲಾಗುತ್ತಿದೆ.
ಮೈಸೂರು ಅರಸರ ಅರಮನೆಯಲ್ಲಿದ್ದ ಈ ಕಿರೀಟವನ್ನು ಸಕಲ ರಾಜ ಮರ್ಯಾದೆಯೊಂದಿಗೆ ಮೇಲುಕೋಟೆಗೆತರಲಾಗುತ್ತಿತ್ತು. ಈ ವೈರಮುಡಿ ಕಿರೀಟದ ಭದ್ರತೆಯ ದೃಷ್ಠಿಯಿಂದ ವೈರಮುಡಿ, ರಾಜಮುಡಿ, ಕೃಷ್ಣರಾಜಮುಡಿ ಕಿರೀಟಗಳನ್ನು ಮಂಡ್ಯ ಜಿಲ್ಲಾ ಖಜಾನೆಯಲ್ಲಿಇಡಲಾಗಿದೆ. ವೈರಮುಡಿ ದಿವಸ ಬೆಳ್ಳಿಗ್ಗೆ ಮಂಡ್ಯ ಜಿಲ್ಲಾ ಖಜಾನೆಯಿಂದ ವೈರಮುಡಿ ಮತ್ತು ರಾಜಮುಡಿ ತಿರುವಾಭರಣಗಳನ್ನು ಮೇಲುಕೋಟೆಗೆ ತರುವ ದಾರಿಯುದ್ಧಕ್ಕೂ ಭಕ್ತಾಧಿಗಳಿಂದ ಪೂಜಿಸಲ್ಪಡುತ್ತದೆ. ಇವರೆಡು ತಿರುವಾಭರಣಗಳನ್ನು ಮರ್ಯಾದೆಯೊಂದಿಗೆ ಚಿನ್ನದ ಪಲ್ಲಕ್ಕಿಯಲ್ಲಿರಿಸಿ ಊರಿನಲ್ಲಿ ಮೆರವಣಿಗೆ ಮಾಡಿ ದೇವಸ್ಥಾನಕ್ಕೆ ಬರಮಾಡಿಕೊಳ್ಳುವ ಸಂಪ್ರದಾಯ ಇಂದಿಗೂ ನಡೆದು ಬಂದಿರುತ್ತದೆ. ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿಗೆ ಸೇರಿರುವ ಮೇಲುಕೋಟೆಯು ಮಂಡ್ಯದಿಂದ 28 ಕಿ.ಮೀ. ದೂರದಲ್ಲಿದೆ. ಒಮ್ಮೆ ಯಾದರು ಈ ವಿಶಿಷ್ಟ ವೈರಮುಡಿ ಉತ್ಸವವನ್ನು ನೋಡಿ ಕಣ್ಣು ತುಂಬಿಕೊಳ್ಳಿ.