ನಿಮ್ಮ ರಾಶಿಯ ವಾರ ಭವಿಷ್ಯ ಸೋಮವಾರದಿಂದ ಭಾನುವಾರದ ವರೆಗೂ ಹೇಗಿದೆ ತಿಳಿದುಕೊಳ್ಳಿ

0
748

ದಿನಾಂಕ 15.10.2018 ರಿಂದ ದಿನಾಂಕ 21.10.2018 ನಿಮ್ಮ ರಾಶಿ ಭವಿಷ್ಯ ತಿಳಿದುಕೊಳ್ಳಿ.

ಮೇಷ: ಈ ವಾರ ಗ್ರಹದ ಎಲ್ಲ ಸ್ಥಿತಿಗಳು ಉತ್ತಮವಾಗಿದ. ನಿಮ್ಮ ಮನೆಯಲ್ಲಿದ್ದ ಭಿನ್ನಾಭಿಪ್ರಾಯ ಎಲ್ಲವು ಕಡಿಮೆ ಆಗಿ ಈ ವಾರ ಶಾಂತಿ ನೆಮ್ಮದಿ ನೆಲೆಸುತ್ತೆ. ನಿಮ್ಮ ಗೆಳೆಯನಿಂದ ನಿಮಗೆ ಸಾಕಷ್ಟು ಲಾಭಗಳು ದೊರೆಯುವ ಅವಕಾಶ ಇದೆ. ಆದರೆ ಆಹಾರ ಸೇವನೆ ವಿಷಯದಲ್ಲಿ ಹೆಚ್ಚಿನ ಜಾಗ್ರತೆವಹಿಸಿಕೊಳ್ಳಿ ಸಿಕ್ಕ ಸಿಕ್ಕ ಕಡೆ ಆಹಾರ ತಿನ್ನುವುದು ಈ ವಾರ ಸ್ವಲ್ಪ ಕಡಿಮೆ ಮಾಡಿಕೊಳ್ಳಿ. ಉದ್ಯೋಗ್ಯ ಸಮಸ್ಯೆ ಇದ್ದವರಿಗೆ ಒಳ್ಳೆ ಉದ್ಯೋಗ ಪ್ರಾಪ್ತಿಯಗಲಿದೆ. ಗೃಹಿಣಿಯರಿಗೆ ಗಂಡ ಜೊತೆಗೆ ಯಾವುದೇ ಮನಸ್ತಾಪ ಇಲ್ಲದೆ ಉತ್ತಮ ವಾರ ಆಗಲಿದೆ. ಆದಷ್ಟು ಗಣೇಶನ ಮಂತ್ರ ಪಾರಾಯಣ ಮಾಡಿ.

ವೃಷಭ: ಗೃಹಿಣಿಯರಿಗೆ ಮನೆಯ ಕೆಲಸದಲ್ಲಿ ಅಥವ ಗಂಡಸರಿಗೆ ಆಫೀಸ್ ವಿಷಯದಲ್ಲಿ ಹೆಚ್ಚಿನ ಜವಾಬ್ದಾರಿ ಆಗಲಿದೆ. ಹಣಕಾಸು ಸ್ವಲ್ಪ ಹೆಚ್ಚು ಖರ್ಚು ಆಗಲಿದೆ . ಕರ್ತವ್ಯವನ್ನು ನಿಷ್ಠೆಯಿಂದ ಮಾಡುವ ನಿಮಗೆ ನಿಮ್ಮ ಮೇಲಿನ ಅಧಿಕಾರಿಗಳಿಂದ ಸಮಸ್ಯೆಗಳೇ ಹೆಚ್ಚು ಆಗುವ ಸಂಭವ ಇದೆ. ಈ ವಾರ ಯಾವುದೇ ಕೆಲಸ ಮಾಡುವ ಮುಂಚೆ ತಪ್ಪದೇ ಗುರು ಹಿರಿಯರ ಸಲಹೆ ಮತ್ತು ಆಶಿರ್ವಾದ ಪಡೆದೆ ಕೆಲಸ ಶುರು ಮಾಡುವುದು ನಿಮಗೆ ಉತ್ತಮ ಬೆಳವಣಿಗೆ. ನಿಮ್ಮ ಎಲ್ಲ ಸಮಸ್ಯೆಗಳು ದೂರ ಆಗಲು ನೀವು ದುರ್ಗಾ ಸ್ತೋತ್ರ ಪ್ರತಿ ನಿತ್ಯ ಹನ್ನೊಂದು ಬಾರಿ ಪಾರಾಯಣ ಮಾಡಿ.

ಮಿಥುನ: ಈ ವಾರ ನಿಮ್ಮ ಕುಲ ದೇವತೆ ಪ್ರಾರ್ಥನೆ ಮಾಡುವುದರಿಂದ ನಿಮಗೆ ಬರುವ ಎಲ್ಲ ಕಷ್ಟಗಳು ಸುಲಭವಾಗಿ ಮಾಯವಾಗುತ್ತದೆ. ಕೆಲವು ದಿನಗಳಿಂದ ನಿಮಗೆ ಹಣಕಾಸಿನ ಸಮಸ್ಯೆ ಏನಾದ್ರು ಇದ್ದಾರೆ ಈ ವಾರ ನಿಮಗೆ ಯಾವುದೇ ಆರ್ಥಿಕ ಸಮಸ್ಯೆ ಬರುವುದಿಲ್ಲ. ವಿದ್ಯಭಾಸ್ಯ ಮಾಡುವ ಹೆಣ್ಣು ಮಕ್ಕಳಿಗೆ ಒತ್ತಡ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಹೂಡಿಕೆ ಮಾಡುವುದಕ್ಕೂ ಈ ವಾರ ನಿಮಗೆ ಹೆಚ್ಚಿನ ಸೂಕ್ತ ಆದ್ರೆ ಶೇರು ಮಾರುಕಟ್ಟೆ ವ್ಯವಹಾರ ನಡೆಸುವವರಿಗೆ ಹಣಕಾಸಿನ ವಿಷಯದಲ್ಲಿ ಲಾಭಕ್ಕಿಂತ ನಷ್ಟ ಹೆಚ್ಚು. ನಿಮ್ಮ ಎಲ್ಲ ಸಮಸ್ಯೆಗಳು ದೂರ ಆಗಲು ಪ್ರತಿ ನಿತ್ಯ ಸಂಜೆ ಅಥವ ಬೆಳ್ಳಗೆ ಗಾಯತ್ರಿ ಮಂತ್ರ ಪಾರಾಯಣ ಮಾಡಿ.

ಕಟಕ: ವಿದೇಶದಲ್ಲಿ ವಿಧ್ಯಾಭ್ಯಾಸ ಮಾಡುವ ಕನಸು ಇರುವವರಿಗೆ ಹಿನ್ನಡೆಯಾಗಲಿದೆ. ಈ ವಾರ ನಿಮ್ಮ ಕೆಲಸದಲ್ಲಿ ನಿಮಗೆ ಪ್ರತಿಷ್ಠೆ ಹೆಚ್ಚಾಗಿದೆ ನಿಮ್ಮ ಕೆಲಸದಲ್ಲಿ ನಿಮಗೆ ಹೆಚ್ಚಿನ ಗೌರವ ಕೂಡ ಸಿಗಲಿದೆ. ವಿದ್ಯಾರ್ಥಿಗಳು ಈ ವಾರ ಶಾಲೆ ಅಥವ ಕಾಲೇಜಿಗೆ ತೆರಳುವ ಮುನ್ನ ತಂದೆ ತಾಯಿಯ ಆಶಿರ್ವಾದ ಪಡೆದು ಮನೆಯಿಂದ ಹೊರಡುವುದೇ ಸೂಕ್ತವಾಗಿದೆ. ಈ ವಾರ ಗ್ರಹಗತಿಗಳು ಎಲ್ಲವು ಉತ್ತಮವಾಗಿದೆ. ನೀವು ಹೆಚ್ಚಿನ ಬೆಳವಣಿಗೆ ಕಾಣುವಿರಿ. ದೇವಿಯ ದುರ್ಗಾ ಸ್ತೋತ್ರ ಮಂತ್ರ ಪಠನೇ ಮಾಡಿದ್ರೆ ನಿಮಗೆ ಮತ್ತಷ್ಟು ಲಾಭ ಸಿಗುತ್ತದೆ.

ಸಿಂಹ: ನಿಮ್ಮ ಸಹೋದ್ಯೋಗಿಗಳಿಂದ ಅವರು ಮಾಡುವ ತಪ್ಪಿಗೆ ನಿಮಗೆ ನಿಂದನೆ ಆಗಲಿದೆ ಆದ್ದರಿಂದ ನೀವು ಈ ವಾರ ಕೆಲಸದ ವಿಷಯದಲ್ಲಿ ಹೆಚ್ಚಿನ ಒತ್ತು ನೀಡಿ. ನಿಮ್ಮ ಸಹೋದರಿ ಅಥವ ಸಹೋದರನಿಗೆ ಆರೋಗ್ಯ ಸಮಸ್ಯೆ ಕಾಡುವ ಸಂಭವ ಹೆಚ್ಚಾಗಿದೆ. ನಿಮ್ಮ ಸ್ನೇಹಿತರು ನಿಮಗೆ ಕಷ್ಟ ಬಂದಾಗ ನಿಮ್ಮ ಸಹಾಯಕ್ಕೆ ನಿಲ್ಲುವರು.ಮದ್ವೆ ಆಗದ ಹೆಣ್ಣುಮಕ್ಕಳಿಗೆ ಶುಭ ಸುದ್ದಿ ಬರಲಿದೆ. ಬಹಳ ದಿನಗಳಿಂದ ಆರ್ಥಿಕ ಸಮಸ್ಯೆ ಇದ್ದಲ್ಲಿ ಈ ವಾರ ನಿಮಗೆ ಉತ್ತಮವಾಗಲಿದೆ. ನಿಮ್ಮ ಎಲ್ಲ ಸಮಸ್ಯೆ ದೂರ ಆಗಲು ನೀವು ಪ್ರತಿ ನಿತ್ಯ ಸಂಜೆ ಗುರು ಸ್ತೋತ್ರ ಹೇಳಿಕೊಳ್ಳಿ ನಿಮ್ಮ ಎಲ್ಲ ಸಮಸ್ಯೆ ದೂರ ಆಗುತ್ತದೆ.

ಕನ್ಯಾ: ಈ ವಾರ ನಿಮಗೆ ಹಣದ ಸಮಸ್ಯೆ ಬರುವುದಿಲ್ಲ. ನೀವು ಸಾಲಗಳನ್ನು ನೀಡಿದ್ದರೆ ಈ ವರ ನಿಶ್ಚಿತ ಸಮಯದಲ್ಲಿ ಅದು ವಾಪಾಸ್ ಆಗುವ ಸಾಧ್ಯತೆ ಇರುತ್ತದೆ. ಹೆಣ್ಣುಮಕ್ಕಳು ಕಣ್ಣಿಗೆ ಸಂಭಂದಪಟ್ಟ ಖಾಯಿಲೆಗಳಿಂದ ಸ್ವಲ್ಪ ಜಾಗ್ರತೆ ಇರಬೇಕು. ಕಬ್ಬಿಣದ ವ್ಯಾಪಾರ ಮಾಡುವವರಿಗೆ ಆರ್ಥಿಕವಾಗಿ ಸಂಕಷ್ಟ ಎದುರು ಆಗಲಿದೆ. ನಿಶ್ಚಿತ ಸಮಯದಲ್ಲಿ ನಿಮ್ಮ ನೆಂಟರು ನಿಮಗೆ ಸಹಾಯ ಮಾಡುವ ಅವಕಾಶ ಇರುತ್ತದೆ. ನೀವು ಪ್ರತಿ ನಿತ್ಯ ಸಂಜೆ ನಾಯಿಗೆ ರೊಟ್ಟಿಯನ್ನು ಆಹಾರ ನೀಡುವುದರಿಂದ ನಿಮ್ಮ ಎಲ್ಲ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ.

ತುಲಾ: ಈ ವಾರ ಮನೆಯಲ್ಲಿ ಸಣ್ಣ ಸಣ್ಣ ವಿಚಾರಗಳಿಗೂ ಭಿನ್ನಾಭಿಪ್ರಾಯ ಮತ್ತು ಜಗಳ ಆಗುವ ಸಾಧ್ಯತೆ ಇರುತ್ತದೆ ನೀವು ಏನೇ ನಿರ್ಧಾರ ತೆಗೆದುಕೊಳ್ಳುವ ಮುನ್ನ ಮನೆಯಲ್ಲಿರುವ ಹಿರಿಯರ ಮಾರ್ಗದರ್ಶನ ಪಡೆದುಕೊಂಡೆ ಕೆಲಸ ಮಾಡಿ. ಆರ್ಥಿಕ ಸಮಸ್ಯೆ ಸ್ಥಿರವಾಗಿದೆ. ಗೃಹಿಣಿಯರಿಗೆ ಅಪರಿಚಿತರಿಂದ ಹಣಕಾಸಿನ ವಿಷಯದಲ್ಲಿ ಮೋಸ ಹೋಗುವ ಸಾಧ್ಯತೆ ದಟ್ಟವಾಗಿದೆ. ನೀವು ನಿಮ್ಮ ಗಂಡನ ಸಲಹೆ ಪಡೆದು ಹಣಕಾಸಿನ ಹೂಡಿಕೆ ಮಾಡುವುದೇ ಉತ್ತಮ. ನಿಮ್ಮ ಈ ವಾರದ ಎಲ್ಲ ಸಮಸ್ಯೆಗಳಿಂದ ಹೊರ ಬರಲು ನೀವು ಸಂಜೆ ಸಮಯ ಮನೆ ಹತ್ತಿರ ಇರುವ ದೇವಿ ದರ್ಶನ ಪಡೆದುಕೊಳ್ಳಿ ಸಾಧ್ಯ ಆದ್ರೆ ನಿಂಬೆ ಹಣ್ಣಿನಲ್ಲಿ ದೀಪ ಹಚ್ಚಿ ನಿಮ್ಮ ಎಲ್ಲ ಕಷ್ಟಗಳು ದೂರ ಆಗುತ್ತೆ.

ವೃಶ್ಚಿಕ: ನೀವು ಎಷ್ಟು ಶಾಂತವಾಗಿ ಇರುತ್ತೀರಿ ಅಷ್ಟು ಲಾಭ ಈ ವಾರ ನಿಮ್ಮದಾಗಲಿದೆ. ಈ ವಾರ ನೀವು ಆದಷ್ಟು ಕೋಪವನ್ನು ನಿಮ್ಮ ಹತೋಟಿಯಲ್ಲಿ ಇಟ್ಟುಕೊಂಡು ಮಾತಿನ ಮೇಲೆ ಹೆಚ್ಚಿನ ಹಿಡಿತ ಸಾಧಿಸಿದರೆ ಮಾತ್ರ ನಿಮ್ಮ ಎಲ್ಲ ಕೆಲಸದಲ್ಲಿ ಉತ್ತಮ ಬೆಳವಣಿಗೆ ಕಾಣುವಿರಿ. ಹೊಡಿಕೆ ಮಾಡುವವರಿಗೆ ಈ ವಾರ ಹೆಚ್ಚು ಸೂಕ್ತ ಅಲ್ಲವೇ ಅಲ್ಲ. ನಿಮ್ಮ ಮೆನೆಯಲ್ಲಿ ಮಕ್ಕಳು ಇದ್ದರೆ ಅವರಿಂದ ಈ ವಾರ ಹೆಚ್ಚಿನ ಸಂತಸ ಬರುವುದು. ಕೆಲಸದ ವಿಷಯದಲ್ಲೂ ಯಾವುದೇ ಗಂಭೀರ ಸಮಸ್ಯೆ ಬರುವುದಿಲ್ಲ. ವಾಹನ ಓಡಿಸುವಾಗ ಸ್ವಲ್ಪ ಎಚ್ಚರಿಕೆ ಇರಲಿ. ನೀವು ಸಂಜೆ ಸಮಯ ಆದಷ್ಟು ಹನುಮಾನ್ ಚಾಲೀಸ ಓದುವ ಅಭ್ಯಾಸ ಮಾಡಿಕೊಂಡರೆ ನಿಮ್ಮ ಎಲ್ಲ ಕಷ್ಟಗಳು ದೂರ ಆಗುತ್ತೆ.

ಧನಸ್ಸು: ಈ ವಾರ ರೈತರಿಗೆ ಉತ್ತಮ ಲಾಭವಾಗಲಿದೆ. ನಿಮ್ಮ ಕೆಲಸದ ವಿಷಯದಲ್ಲಿ ನೀವು ಎಷ್ಟೇ ಕಷ್ಟ ಪಟ್ಟರು ನಿಮ್ಮ ಪ್ರತಿಫಲಕ್ಕೆ ಯಾವುದೇ ಮನ್ನಣೆ ಸಿಗುವುದಿಲ್ಲ. ದಿನಸಿ ಅಂಗಡಿ ವ್ಯಾಪಾರಿಗಳಿಗೆ ಲಾಭವು ಹೆಚ್ಚಾಗಲಿದೆ. ವಿದ್ಯಾರ್ಥಿಗಳು ಕೋಪವನ್ನು ಹತೋಟಿಯಲ್ಲಿ ಇಟ್ಟುಕೊಂಡು ತಂದೆ ತಾಯಿಯ ಮಾರ್ಗ ದರ್ಶನ ಪಡೆಯುವುದು ಉತ್ತಮ. ಮನೆಯಲ್ಲಿರುವ ವಯಸ್ಸಾದ ಹಿರಿ ಜೀವಿಗಳಿಗೆ ನಿಮ್ಮ ಪ್ರೀತಿ ಮಮತೆ ಹೆಚ್ಚು ನೀಡಿ. ನಿಮ್ಮ ಎಲ್ಲ ಸಮಸ್ಯೆಗಳಿಂದ ದೂರ ಆಗಲು ನೀವು ಗಣಪತಿಯ ದರ್ಶನ ಪಡೆದುಕೊಳ್ಳಿ.

ಮಕರ: ಈ ವಾರ ನೀವು ಅಕ್ಕಪಕ್ಕದ ಮನೆ ಜನರ ಬಳಿ ಸೌಹಾರ್ದತೆಯಿಂದ ಕೂಡಿರುವುದು ನಿಮಗೆ ಒಳ್ಳೆಯದು ನಿಮ್ಮ ಸಣ್ಣ ಮಾತು ದೊಡ್ಡ ಜಗಳ ಆಗುವ ಸಂಭವ ಇರುವುದಿರಂದ ಮಾತಿನ ಮೇಲೆ ಹಿಡಿತ ಇಟ್ಟುಕೊಳ್ಳಿ. ಇಷ್ಟು ದಿನ ಆರೋಗ್ಯ ಸಮಸ್ಯೆಗಳಿಂದ ಬಳಳುತ್ತಿರುವವರಿಗೆ ಉತ್ತಮ ಬೆಳವಣಿಗೆ ಕಾಣಲಿದೆ. ಈ ವಾರ ಬಂಗಾರದ ಮೇಲೆ ಹೊಡಿಕೆ ಮಾಡಿದ್ರೆ ನಿಮಗೆ ಹೆಚ್ಚಿನ ಆದಾಯ ದೊರಯಲಿದೆ. ನೀವು ಸಂಜೆ ಸಮಯ ಮನೆ ಹತ್ತಿರ ಇರುವ ದೇವಿ ದರ್ಶನ ಪಡೆದುಕೊಳ್ಳಿ ಸಾಧ್ಯ ಆದರೆ ನಿಂಬೆ ಹಣ್ಣಿನಲ್ಲಿ ದೀಪ ಹಚ್ಚಿದರೆ ನಿಮಗೆ ಹೆಚ್ಚಿನ ಫಲ ಸಿಗುತ್ತದೆ.

ಕುಂಭ: ಈ ವಾರ ಮಡದಿ ಮಕ್ಕಳು ಅವರ ಕೋರಿಕೆ ಈಡೇರಿಸಲು ನಿಮ್ಮ ಮೇಲೆ ಹೆಚ್ಚು ಒತ್ತಾಯ ಮಾಡುವ ಸಾದ್ಯತೆ ಇರುತ್ತದೆ.ಸರ್ಕಾರಿ ನೌಕರರಿಗೆ ಅಥವ ಬ್ಯಾಂಕ್ ನಲ್ಲಿ ಕೆಲಸ ಮಾಡುವವರಿಗೆ ವರ್ಗಾವಣೆ ಆಗುವ ಸಂಭ ಹೆಚ್ಚಿದೆ. ವಾಹನ ಮೊದಲಾದ ಆಟೋ ಮೊಬೈಲ್ ನಲ್ಲಿ ವ್ಯವಹಾರ ಮಾಡುವವರಿಗೆ ಈ ವಾರ ಹೆಚ್ಚಿನ ಲಾಭ ದೊರೆಯಲಿದೆ. ಬಂಧುಗಳ ಮನೆಯಲ್ಲಿ ನಡೆಯುವ ಶುಭ ಸಮಾರಂಭಗಳಿಗೆ ಹೋಗುವ ಸಂಧರ್ಭ ಬರುವುದು. ನಿಮ್ಮ ಹಿರಿಯರ ಮಾತುಗಳನ್ನು ಪಾಲಿಸಿ ಈ ವಾರ ಉತ್ತಮವಾಗಲಿದೆ.

ಮೀನ: ತುಂಬಾ ದಿನಗಳಿಂದ ಇರುವ ಆರ್ಥಿಕ ಸಮಸ್ಯೆ ದೂರ ಆಗಲಿದೆ. ಹಳೆ ಬಾಕಿ ಎಲ್ಲವು ಬರುವ ಸಾಧ್ಯತೆ ಇರುತ್ತದೆ. ನಿಮ್ಮ ಸಹೋದರ ಅಥವ ಸಹೋದರಿಯೊಂದಿಗೆ ನಿಮ್ಮ ಬಾಂದವ್ಯ ಮತಷ್ಟು ಗಟ್ಟಿಯಾಗಲಿದೆ. ಮಾಡುವ ಕೆಲ್ಸಕ್ಕೆ ಹತ್ತಾರು ಬಾರಿ ಯೋಚಿಸಿ ಮುಂದೆ ನಡೆಯಿರಿ. ನೌಕರರಿಗೆ ಸಮಸ್ಯೆ ದೂರ ಆಗಲಿದೆ. ನೀವು ಈ ವಾರ ಮನೆಗೆ ಹೆಚ್ಚಿನ ಗೃಹ ಉಪಯೋಗಿ ವಸ್ತುಗಳನ್ನು ಖರೀದಿ ಮಾಡುವ ಸಂಭವ ಇದೆ. ನಿಮ್ಮ ರಾಶಿಗೆ ಮತ್ತಷ್ಟು ಶುಭ ಫಲ ಸಿಗಲು ಬೆಳ್ಳಗೆ ಅಥವ ಸಂಜೆ ಸಮಯದಲ್ಲಿ ಒಮ್ಮೆ ನವಗ್ರಹ ಸ್ತೋತ್ರ ಪಾರಾಯಣ ಮಾಡಿದ್ರೆ ನಿಮ್ಮ ಎಲ್ಲ ಸಮಸ್ಯೆ ದೂರ ಆಗುತ್ತದೆ. ಸುಖ ಶಾಂತಿ ನೆಲೆಸುತ್ತದೆ.

LEAVE A REPLY

Please enter your comment!
Please enter your name here