ನೀವು ಬರೀಗೈಯಲ್ಲಿ ಉಟ ಮಾಡ್ತೀರ ಹಾಗಾದ್ರೆ ಈ ಮಾಹಿತಿ ನಿಮಗಾಗಿ

0
879

ಕಾಲ ಕಳೆದಂತೆ ಎಲ್ಲವು ಬದಲಾಗಿದೆ ಈಗಿನ ಆದುನಿಕ ಜೀವನದಲ್ಲಿ ಎಲ್ಲರಿಗು ಫಾಸ್ಟ್ ಫುಡ್ ಬೇಕೇ ಬೇಕು ಇಲ್ಲವೆಂದರೆ ಜೀವನ ಮುಂದೆ ಸಾಗುವುದಿಲ್ಲ ಅಷ್ಟರ ಮಟ್ಟಿಗೆ ನಾವು ಬದಲಾಗಿದ್ದೇವೆ ಆದ್ರೆ ಆಧುನಿಕ ಜಗತ್ತು ಎಷ್ಟೇ ಮುಂದುವರೆದರು ಕೆಲವು ಪ್ರಾಂತ್ಯಗಳಲ್ಲಿ ಮಾತ್ರ ಆಚರ ವಿಚಾರ ಆಹಾರ ಶೈಲಿ ಸ್ವಲ್ಪವು ಬದಲಾಗಿಲ್ಲ ಅಂತಹ ಕಡೆ ಆರೋಗ್ಯ ಸಮಸ್ಯೆ ಆಗೋದು ತುಂಬಾ ವಿರಳ.

ಜಪಾನಿನ ಒಂದು ಸಣ್ಣ ಪ್ರಾಂತ್ಯ ಅದರ ಹೆಸರು ನಿಕೊಸೋ ಚೋ ಎಂದು ಜಪಾನ್ ದೇಶ ಎಷ್ಟು ಆಧುನಿಕವಾಗಿ ಮುಂದುವರೆದಿದ್ದರು ಇಲ್ಲಿನ ಜನ ಮಾತ್ರ ಬದಲಾಗಿಲ್ಲ ನೂರಾರು ವರ್ಷಗಳ ಕಾಲ ಹಿಂದೆ ಇದ್ದ ಆಹಾರದ ಕ್ರಮ ಈಗಲೂ ಹಾಗೇ ಮುಂದುವರೆದುಕೊಂಡು ಸಾಗಿದೆ. ಅಲ್ಲಿನ ಜನಕ್ಕೆ ಪಾಸ್ಟ್ ಫುಡ್ ಜಂಕ್ ಫುಡ್ ಇದರ ಸಾಹಸವೇ ಬೇಡ ಎನ್ನುತ್ತಾರೆ. ಈ ಪ್ರಾಂತ್ಯದಲ್ಲಿರುವ ಶೇಕಡ ಎಪ್ಪತ್ತು ರಷ್ಟು ಜನಕ್ಕೆ ತೊಂಬತ್ತು ವರ್ಷ ವಯಸ್ಸಾಗಿದೆ. ವೃದ್ದರು ಅಲ್ಲಿ ಮನೆ ಮನೆ ಯಲ್ಲಿ ಕಾಣುತ್ತಾರೆ ಆದ್ರೆ ಅವರನ್ನು ನೋಡಿ ನಾವೇ ಆಶ್ಚರ್ಯ ಪಡ್ತೇವೆ ಅಚ್ಚರಿ ಪಡ್ತೇವೆ ಏಕೆ ಅಂದ್ರೆ ಅಲ್ಲಿನ ಜನ ಶ್ರಮ ಜೀವಿಗಳು ಅವರು ತಿನ್ನುವ ಆಹಾರ ಕ್ರಮ ತುಂಬಾ ಅದ್ಬುತವಾಗಿದೆ.

ಆ ಜಪಾನಿನ ನಿಕೊಸೋ ಚೋ ಪ್ರಾಂತ್ಯದ ಜನರ ಮತ್ತೊಂದು ವಿಶೇಷ ಏನು ಅಂದ್ರೆ ಅಲ್ಲಿನ ಜನ ಎಂದು ಸಹ ಆಹಾರವನ್ನು ಸೇವನೆ ಮಾಡುವಾಗ ಸ್ಪೂನ್ ಉಪಯೋಗ ಮಾಡೋದಿಲ್ಲ.  ನಮ್ಮ ಆಯುರ್ವೇದದಲ್ಲೂ ಇದನ್ನೇ ಹೇಳಿದ್ದರೆ ಆದ್ರೆ ನಮ್ಮ ದೇಶದಲ್ಲೇ ಇದನ್ನ ಅಳವಡಿಕೆ ಮಾಡಿಕೊಂಡಿಲ್ಲ. ಆಯುರ್ವೇದದಲ್ಲಿ ಹೇಳುವ ಪ್ರಕಾರ ನಮ್ಮ ಕೈ ಬೆರಳುಗಳ ತುದಿಗಳಲ್ಲಿ ಇರುವ ನರಗಳು ಜೀರ್ಣ ಶಕ್ತಿಯನ್ನು ದ್ವಿಗುಣಗೊಳಿಸಿ ಜೀರ್ಣ ಕ್ರಿಯೆ ಸರಿಯಾಗಿ ಆಗುವಂತೆ ಮಾಡುತ್ತದೆ. ವೇದ ಪುರಾಣದಲ್ಲಿ ಹೇಳಿರುವ ಪ್ರಕಾರ ಕೈ ಬೆರಳುಗಳಿಂದ ಉಟ ಮಾಡುವುದರಿಂದ ಆಹಾರದ ರುಚಿ ಹೆಚ್ಚಾಗಿ ಸಿಗುತ್ತದೆ. ರಕ್ತ ಸಂಚಾರಕ್ಕೆ ಸುಗಮವಾಗುತ್ತದೆ. ರಕ್ತ ಸಂಚಾರ ಸುಗಮವಾಗಿ ಆದ್ರೆ ಹಾರ್ಟ್ ಅಟಾಕ್ ನಂತಹ ಸಮಸ್ಯೆಗಳು ನಮಗೆ ಎಂದು ಸಹ ಬರುವುದಿಲ್ಲ. ಇಷ್ಟೇ ಅಲ್ಲದೆ ಬರೀಗೈಯಲ್ಲಿ ಉಟ ಮಾಡುವುದರಿಂದ ನಮಗೆ ಇನ್ನು ಹತ್ತಾರು ಲಾಭಗಳು ಸಿಗುತ್ತವೆ.

ಓದಿದರಲ್ಲ ಸ್ನೇಹಿತರೇ ಬರೀಗೈಯಲ್ಲಿ ಉಟ ಮಾಡಿದ್ರೆ ಎಷ್ಟೆಲ್ಲಾ ಲಾಭಗಳು ಇದೆ ಎಂದು. ಇದೀಗ ವಿದೇಶದಲ್ಲೂ ಹೆಚ್ಚಿನ ಜನ ಬರೀಗೈಯಲ್ಲಿ ಉಟ ಮಾಡುತ್ತಾ ಇದ್ದಾರೆ ಅವರಿಗೆ ನಮ್ಮ ಭಾರತದ ಆಯುರ್ವೇದ ಬಗ್ಗೆ ತಿಳಿಯುತ್ತ ಇದೆ. ಇನ್ನಾದ್ರು ನಿಮ್ಮ ಮನೆಯಲ್ಲಿ ಮಕ್ಕಳಿಗೆ ಸ್ಪೂನ್ ಕೊಡುವ ಬದಲು ಬರೀಗೈಯಲ್ಲಿ ಆಹಾರ ಸೇವನೆ ಮಾಡಿ ನಿಮ್ಮ ಆರೋಗ್ಯ ನಿಮ್ಮ ಕೈ ನಲ್ಲೆ ಇದೆ ಅದನ್ನ ಜಾಗ್ರತೆಯಿಂದ ನೋಡಿಕೊಳ್ಳಿ.

ನಮ್ಮ ಉಪಯುಕ್ತ ಮಾಹಿತಿಯಲ್ಲಿರುವ ಎಲ್ಲ ಬರಹಗಳು ವಿಶೇಷ ಕಾಪಿ ರೈಟ್ಸ್ ಒಳಗೊಂಡಿದ್ದು ನಮ್ಮ ಅನುಮತಿ ಇಲ್ಲದೆ ಚಿತ್ರಗಳು ಬರವಣಿಗೆ ನಕಲು ಮಾಡಿದ್ರೆ ಅಥವ ಬೇರೆ ಕಡೆ ಪ್ರಕಟಣೆ ಮಾಡಿದ್ರೆ ಅಂತಹ ಜನರ ವಿರುದ್ದ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು.

LEAVE A REPLY

Please enter your comment!
Please enter your name here