ನಿಮ್ಮ ದಿನ ದೈನಂದಿನ ರಾಶಿ ಫಲ ಹೇಗಿದೆ ತಿಳಿಯಿರಿ

0
729

ಮೇಷ : ಆನೆ ನಡೆದದ್ದೇ ದಾರಿ ಎಂದು ನೀವು ನಿಮ್ಮ ಅಹಂಕಾರ ಎಲ್ಲೆಡೆ ತೋರಿಸಿದರೆ ನಿಮಗೆ ಈ ದಿನ ಹಲವು ಸಮಸ್ಯೆಗಳು ಬರುವುದು ನಿಶ್ಚಿತ ಆದ್ದರಿಂದ ನೀವು ಈ ದಿನ ಸ್ವಲ್ಪ ಹೆಚ್ಚಿನ ಜಾಗ್ರತೆಯಿಂದ ಇರುವುದು ಒಳ್ಳೇದು. ಹಣದ ಹೂಡಿಕೆ ಮಾಡುವ ಮೊದಲು ನಿಮ್ಮ ಹಿರಿಯರ ಮಾರ್ಗದರ್ಶನ ಪಡೆದುಕೊಳ್ಳುವುದು ಉತ್ತಮ.

ವೃಷಭ: ನಿಮ್ಮ ಮನೆಯಲ್ಲಿ ಮಕ್ಕಳು ಇದ್ದರೆ ಅವರ ಪ್ರತಿಭೆಗೆ ನೀವು ಹೆಚ್ಚಿನ ಪ್ರೋತ್ಸಾಹ ನೀಡಿ. ನಿಮ್ಮ ತಂದೆ ತಾಯಿಯ ಆರೋಗ್ಯದ ಕಡೆಗೆ ಸ್ವಲ್ಪ ಹೆಚ್ಚಿನ ಗಮನ ಕೊಡಿ ನೀವು ಇಂದು ಸಂಜೆ ಸಮಯದಲ್ಲಿ ದೇವಿಯ ದರ್ಶನ ಪಡೆದರೆ ನಿಮ್ಮ ಎಲ್ಲ ಸಮಸ್ಯೆ ದೂರ ಆಗುತ್ತದೆ. ಜೊತೆಗೆ ಸಂಜೆ ಸಮಯ ಐದು ಗಂಟೆ ನಂತರ ಕನಿಷ್ಠ ಒಬ್ಬ ಬಡವನಿಗೆ ಆದರು ನೀವು ಅವನ ಹಸಿವು ನೀಗಿಸಿದರೆ ನಿಮಗೆ ವಿಶೇಷ ಫಲ ದೊರೆಯುತ್ತದೆ.

ಮಿಥುನ: ಇಂದು ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಒತ್ತಡ ಅಥವ ಕಿರಿ ಕಿರಿ ಸಮಸ್ಯೆ ಬಂದರು ನಿಮ್ಮ ದೃಡವಾದ ಆತ್ಮವಿಶ್ವಾಸದಿಂದ ಅದನ್ನು ಸಾಧಿಸುವಿರಿ. ನೀವು ಉತ್ತಮ ಮಾರ್ಗದಲ್ಲಿ ನಡೆದರೆ ಮಾತ್ರ ನಿಮಗೆ ಹಲವು ರೀತಿಯ ಲಾಭಗಳು ದೊರೆಯುತ್ತದೆ.

ಕಟಕ: ಇಂದು ನಿಮ್ಮ ಆಪ್ತ ಸ್ನೇಹಿತ ಅಥವ ಆಪ್ತವಾದ ಕುಟುಂಬದ ಜನರಿಂದಲೇ ನಿಮಗೆ ಮಾನಸಿಕವಾಗಿ ತೊಂದ್ರೆ ಆಗುವ ಸಾಧ್ಯತೆ ಇದೆ. ಯಾರು ಎಷ್ಟೇ ನಿಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡಿಕೊಂಡರು ನಿಮ್ಮ ಕೆಲಸದಲ್ಲಿ ಮಾತ್ರ ಗಮನ ನೀಡಿ. ಇಂದಿನ ಎಲ್ಲ ಸಮಸ್ಯೆ ದೂರ ಆಗಲು ಸಾಧ್ಯ ಆದ್ರೆ ವಿಷ್ಣು ಸಹಸ್ರನಾಮ ಪಾರಾಯಣ ಮಾಡಿ.

ಸಿಂಹ: ಹೊಸ ಜನರ ಸಹವಾಸ ನಿಮಗೆ ತೊಂದರೆ ಬರುವ ಸಾಧ್ಯತೆ ಇದೆ. ಹಣಕಾಸಿನ ವಿಷಯದಲ್ಲಿ ಕುಟುಂಬದ ಜನರೇ ನಿಮಗೆ ಮೋಸ ಮಾಡುವರು ಆದಷ್ಟು ಹಣದ ವಿಷಯದಲ್ಲಿ ನೀವು ಹೆಚ್ಚಿನ ಜಾಗ್ರತೆ ತೆಗೆದುಕೊಳ್ಳುವುದೇ ಉತ್ತಮ. ಇಂದಿನ ನಿಮ್ಮ ಎಲ್ಲ ಸಮಸ್ಯೆಗಳು ದೂರ ಆಗಲು ನೀವು ರಾಹು ಮಂತ್ರ ಪಾರಾಯಣ ಮಾಡಿ.

ಕನ್ಯಾ: ಸಲಗಾರರಿಂದ ನಿಮಗೆ ಮಾನಸಿಕ ಕಿರಿ ಕಿರಿ ಆಗುವ ಸಾಧ್ಯತೆ ಇದೆ. ಮನೆಯಲ್ಲಿ ಸಣ್ಣ ಮಕ್ಕಳು ಇದ್ದರೆ ಅವರ ಆರೋಗ್ಯದ ಬಗ್ಗೆ ಇಂದು ವಿಶೇಷ ಜಾಗ್ರತೆ ವಹಿಸಿಕೊಳ್ಳಿ. ಹಣದ ಸಮಸ್ಯೆ ಎದುರು ಆಗಿದ್ದರು ನೀವು ಮತ್ತೆ ಮತ್ತೆ ಸಾಲ ಮಾಡಿಕೊಂಡು ಸಮಸ್ಯೆಗೆ ಸಿಲುಕಿಕೊಳ್ಳುವ ಸಾಧ್ಯತೆ ಇರುವುದರಿಂದ ನಿಮ್ಮ ಎಲ್ಲ ತೊಂದರೆಗಳಿಂದ ಹೊರ ಬರಲು ಗಣೇಶನ ದರ್ಶನ್ ಮಾಡಿ.

ತುಲಾ:ಯಾವುದೇ ಬಂಡವಾಳ ಹೊಡಿಕೆ ಮಾಡುವ ಮೊದಲು ನಿಮ್ಮ ಗುರು ಹಿರಿಯರ ಮಾರ್ಗದರ್ಶನ ಪಡೆಯಿರಿ ನಿಮ್ಮ ವೈವಾಹಿಕ ಜೀವನದಲ್ಲಿ ಸಾಕಷ್ಟು ಸಮಸ್ಯೆ ಏನಾದ್ರು ಇದ್ದರೆ ಅದೆಲ್ಲವೂ ಸರಿ ಹೋಗುವ ಸಮಯ ಬಂದಿದೆ. ನೀವು ಈ ದಿನ ಹೆಚ್ಚು ಫಲ ಪಡೆಯಲು ಮನೆ ಹತ್ತಿರ ಇರುವ ದೇವಿಗೆ ದೇಗುಲಕ್ಕೆ ಒಂದು ಹಿಡಿಯಷ್ಟು ಅಕ್ಕಿಯನ್ನು ದಾನ ಮಾಡಿ.

ವೃಶ್ಚಿಕ: ಸಧ್ಯದ ಪರಿಸ್ತಿತಿ ನಿಮಗೆ ಅಷ್ಟು ಒಳ್ಳೇದು ಅಲ್ಲವಾದರು ನಿಮ್ಮ ಆತ್ಮ ವಿಶ್ವಾಸದಿಂದಲೇ ನಿಮ್ಮ ಕೆಲಸದಲ್ಲಿ ಮುನ್ನುಗುವಿರಿ, ಆದ್ರೆ ನೀವು ಈ ಸಮಯದಲ್ಲಿ ಯಾವುದೇ ಹೊಸ ಯೋಜನೆ ಶುರು ಮಾಡುವುದು ಶುಭ ಸಮಯ ಅಲ್ಲ ನಿಮ್ಮ ಎಲ್ಲ ಸಮಸ್ಯೆ ದೂರ ಆಗಲು ಸಂಜೆ ಸಮಯ ದೇವಿಯ ದೇಗುಲಕ್ಕೆ ಭೇಟಿ ನೀಡಿ ನಿಂಬೆ ಹಣ್ಣಿನಲ್ಲಿ ದೀಪ ಮಾಡಿ ಹಚ್ಚಿ ಭಕ್ತಿಯಿಂದ ತಾಯಿ ಚಾಮುಂಡಿಯನ್ನು ಪ್ರಾರ್ಥನೆ ಮಾಡಿ.

ಧನಸ್ಸು: ನೀವು ಇಂದು ಸಾಧ್ಯ ಆದಷ್ಟು ಬಡವರಿಗೆ ಆಹಾರ ನೀಡಿದರೆ ವಿಶೇಷ ಲಾಭ ಪಡೆಯುತ್ತೀರಿ. ನೀವು ಏನಾದರು ಮನೆ ಕಟ್ಟುವ ಯೋಜನೆ ಅಥವ ಸೈಟ್ ಖರೀದಿ ಮಾಡುವ ಯೋಚನೆ ಇದ್ದರೆ ಅದನ್ನ ಮುಂದೂಡುವುದು ಒಳ್ಳೇದು. ದೇವಿ ರಾಜ ರಾಜೇಶ್ವರಿ ದರ್ಶನ ಪಡೆಯಿರಿ ಎಲ್ಲವು ಶುಭಾವಗಲಿದೆ

ಮಕರ: ಒಂದು ನಿಮ್ಮ ರಾಶಿಗೆ ತುಂಬಾ ಉತ್ತಮ ದಿನ ಎಂದು ಹೇಳಿದರೆ ತಪ್ಪಾಗಲಾರದು ಏಕೆ ಅಂದ್ರೆ ಇಷ್ಟು ದಿನ ನೀವು ಹಲವು ರೀತಿಯ ಕಷ್ಟಗಳಿಂದ ಅನುಭವಿಸುತ್ತ ಬಂದಿದ್ದರು ಮುಂದೆ ನಿಮ್ಮ ಎಲ್ಲ ಯೋಜನೆಗಳು ಶುಭಾವಾಗಲಿದೆ ನಿಮ್ಮ ಕಷ್ಟದ ಸಮಸ್ಯೆ ದೂರ ಆಗಿ ಎಲ್ಲವು ಶುಭವಾಗುವ ಸಂಭವ ಹೆಚ್ಚಿದೆ. ನೀವು ಇಂದು ಶಕ್ತಿ ದೇವತೆ ದರ್ಶನ ಪಡೆಯಿರಿ ಶುಭಾವಗಲಿದೆ.

ಕುಂಭ: ಕೆಲವು ಪರಿಚಯದ ಜನರಿಂದಲೇ ನಿಮಗೆ ತಲೆ ನೋವು ಬರಿಸುವಂತ ಕೆಲಸಗಳು ಆಗುತ್ತದೆ. ನಿಮ್ಮ ಜೊತೆಗೆ ಇದ್ದು ನಿಮಗೆ ಮೋಸ ಮಾಡುವ ಜನರು ನಿಮ್ಮ ಮದ್ಯೆ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ನೀವು ನಿರ್ಧಾರ ತೆಗೆದುಕೊಳ್ಳುವ ಮುಂಚೆ ಸಾಕಷ್ಟು ತಿಳಿದುಕೊಂಡು ಮುಂದೆ ಹೆಜ್ಜೆ ಇಡುವುದು ಉತ್ತಮ.

ಮೀನ: ನೀವು ಇಂದು ಮಾಡುವ ಎಲ್ಲ ಕೆಲಸಗಳು ಮತ್ತು ಕಾರ್ಯಗಳು ನಿಮ್ಮ ಮೇಲಿನ ಅಧಿಕಾರಿಗಳಿಂದ ಉತ್ತಮ ಪ್ರಶಂಶೆ ವ್ಯಕ್ತವಾಗಲಿದೆ. ನಿಮ್ಮ ಸಹೋದ್ಯೋಗಳಿಗೆ ನಿಮ್ಮ ಮೇಲೆ ಹೊಟ್ಟೆ ಕಿಚ್ಚು ಹೆಚ್ಚಾಗುವ ಸಾಧ್ಯೆತೆ ಇದ್ದರು ನಿಮಗೆ ದೈವ ಬಲ ಹೆಚ್ಚು ಇರುವುದರಿಂದ ಯಾರು ಏನೇ ಮಾಡಿದ್ರು ಅದು ನಿಮಗೆ ಸಮಸ್ಯೆ ಆಗುವುದಿಲ್ಲ. ನಿಮ್ಮ ಇಂದಿನ ದಿನ ಮತ್ತಷ್ಟು ಫಲ ಸಿಗಲು ನೀವು ಶಕ್ತಿ ದೇವಿ ದರ್ಶನ ಪಡೆಯಿರಿ ಎಲ್ಲವು ಶುಭಾವಗಲಿದೆ.

LEAVE A REPLY

Please enter your comment!
Please enter your name here