ನಿಮ್ಮ ಈ ವಾರ ಹೇಗಿದೆ ತಿಳಿದುಕೊಳ್ಳಿ

0
699

ಈ ವಾರ ನಿಮ್ಮ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ ಸೋಮವಾರದಿಂದ ಮುಂದಿನ ಭಾನುವಾರದವರೆಗೂ

ಮೇಷ : ಈ ವಾರ ನೀವು ತೆಗೆದುಕೊಳ್ಳುವ ಸೂಕ್ತ ನಿರ್ಧಾರಗಳಿಂದ ನಿಮಗೆ ಹಣದ ಲಾಭ ಮತ್ತು ಕೀರ್ತಿ ಹೆಚ್ಚಾಗಲಿದೆ. ಎಲ್ಲಾ ಕೆಲಸಗಳು ಸರಾಗವಾಗಿ ನೀವು ಅಂದುಕೊಂಡಂತೆ ನಡೆಯುತ್ತದೆ. ಕೆಲಸ ಕಾರ್ಯಗಳು ಕೈಗೊಳ್ಳುವ ಮುನ್ನ ತಂದೆ ತಾಯಿಯ ಆಶೀರ್ವಾದ ತಪ್ಪದೇ ಪಡೆದುಕೊಳ್ಳಿ. ನಿರುದ್ಯೋಗಿಗಳಿಗೆ ಉದ್ಯೋಗ ಸಿಗುವ ಸಾಧ್ಯತೆ ಇದೆ.
ವೃಷಭ : ಈ ವಾರ ನಿರ್ಧಾರ ತೆಗೆದುಕೊಳ್ಳುವುದು ನಿಮ್ಮದೇ ಆಗಿರಲಿ ಸ್ನೇಹಿತರ ಸಲಹೆಗಳನ್ನು ಪಡೆದುಕೊಂಡು ಸಮಸ್ಯೆಗೆ ಒಳಗಾಗಬೇಡಿ, ಈ ವಾರ ನಿಮ್ಮ ಲಾಭಕ್ಕಿಂತ ಸ್ವಲ್ಪ ಖರ್ಚು ಹೆಚ್ಚಾಗುತ್ತದೆ. ದೂರದ ಸಂಬಂಧಿಕರು ಮನೆಗೆ ಬರುವ ಸೂಚನೆ ಇದೆ.

ಮಿಥುನ : ಈ ವಾರ ಮಿಥುನ ರಾಶಿಯವರಿಗೆ ಆರ್ಥಿಕ ವಿಷಯದಲ್ಲಿ ಕೊಂಚ ನಿರಾಳವಾಗಿ ಎಂದರೆ ತಪ್ಪಾಗಲಾರದು. ಹೊಸ ಉದ್ಯೋಗಾವಕಾಶ ನಿಮ್ಮನ್ನು ಹುಡುಕಿಕೊಂಡು ಬರುವ ಸಾಧ್ಯತೆ ಇರುತ್ತದೆ. ನೀವು ನಿಮ್ಮ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ನೀಡಿದರೆ, ಬೇರೆ ಎಲ್ಲಾ ವಿಷಯದಲ್ಲಿ ನಿಮಗೆ ಯಾವುದೇ ರೀತಿಯ ಸಮಸ್ಯೆ ಇರುವುದಿಲ್ಲ.
ಕಟಕ : ಈ ವಾರ ಕಟಕ ರಾಶಿಯವರು ಮಾತನಾಡುವ ಮುನ್ನ ಸ್ವಲ್ಪ ಯೋಚಿಸಿ ಮಾತನಾಡುವುದು ಸೂಕ್ತ, ಏಕೆಂದರೆ ನೀವು ಮಾತಿನ ಮೇಲೆ ಹಿಡಿತವನ್ನು ತಪ್ಪಿದರೆ ಅದರ ಸಮಸ್ಯೆಗಳಿಗೆ ನೀವೇ ಸಿಲುಕುತ್ತೀರಿ. ಅರೋಗ್ಯದಲ್ಲಿ ಸ್ಥಿರತೆ ಕಾಣಲಿದೆ, ಸಾಧ್ಯವಾದರೆ ಈ ವಾರದಲ್ಲಿ ಒಮ್ಮೆ ನಿಮ್ಮ ಕುಲ ದೇವರ ದರ್ಶನ ಮಾಡಿಕೊಂಡು ಬಂದರೆ ನಿಮಗೆ ವಿಶೇಷ ಲಾಭ ದೊರೆಯುತ್ತದೆ.
ಸಿಂಹ : ಹಲವು ಕಾರಣಗಳಿಂದ ದೂರ ಇರುವ ಬಂಧು ಮಿತ್ರರು ನಿಮ್ಮನ್ನು ಭೇಟಿ ಆಗಬಹುದು. ವಯಸ್ಸಾದ ಹಿರಿಯರು ನಿಮ್ಮ ಜೊತೆಗೆ ಇದ್ದಲ್ಲಿ ನೀವು ಅವರ ಆರೋಗ್ಯದ ಕಡೆ ಸ್ವಲ್ಪ ಜಾಗ್ರತೆ ವಹಿಸಿ. ಸ್ನೇಹಿತರಿಗೆ ಹಣವನ್ನು ಕೊಟ್ಟು ನೀವೇ ಮನಸ್ತಾಪ ಮಾಡಿಕೊಳ್ಳಬೇಡಿ. ನೀವು ಪ್ರತಿನಿತ್ಯ ಹನುಮಾನ್ ಚಾಲೀಸ ಪಠಣೆ ಮಾಡಿದರೆ ಮತ್ತಷ್ಟು ವಿಶೇಷ ಲಾಭ ಪಡೆಯುತ್ತೀರಿ.

ಕನ್ಯಾ :ಈ ವಾರ ಅಣ್ಣ ಅಥವಾ ತಮ್ಮನೊಂದಿಗೆ ಅಥವಾ ಅಕ್ಕ ತಂಗಿಯೊಂದಿಗೆ ಹಣದ ವಿಷಯಕ್ಕೆ ಸಂಬಂಧಿಸಿದಂತೆ ಮನಸ್ಸಿಗೆ ಭಿನ್ನಾಭಿಪ್ರಾಯ ಮೂಡಲಿದೆ. ಈ ವಾರ ನಿಮಗೆ ಸಿಗುವ ಉತ್ತಮ ಅವಕಾಶಗಳನ್ನು ನೀವು ಸದುಪಯೋಗ ಪಡಿಸಿಕೊಂಡರೆ ಅತ್ಯುತ್ತಮ ವಾರ ನಿಮ್ಮದಾಗಲಿದೆ. ಈ ವಾರ ಒಮ್ಮೆಯಾದರೂ ಸಂಜೆ ಸಮಯದಲ್ಲಿ ಪಾರಿವಾಳಗಳಿಗೆ ಧಾನ್ಯ ಹಾಕಿದ್ರೆ ವಿಶೇಷ ಲಾಭ ನಿಮಗೆ ಸಿಗುತ್ತದೆ.
ತುಲಾ :ಈ ವಾರ ನಿಮ್ಮ ನಿಮ್ಮ ಸಾಲುಗಾರರಿಂದ ಸ್ವಲ್ಪ ದೂರ ಇದ್ದರೆ ನಿಮಗೆ ಕ್ಷೇಮ. ಈ ವಾರ ನೀವು ಯಾವುದೇ ರೀತಿಯ ಹೊಸ ಹೊಸ ಸಾಲಗಳನ್ನು ಪಡೆಯಬೇಡಿ. ನಿಮ್ಮ ತಂದೆಯ ಮಾರ್ಗದರ್ಶನ ಪಡೆದುಕೊಂಡರೆ ನಿಮಗೆ ವಿಶೇಷ ಲಾಭ ಸಿಗಲಿದೆ. ದಿನಸಿ ವ್ಯಾಪಾರ ಮಾಡುವ ಜನಕ್ಕೆ ಲಾಭ ದೊರೆಯಲಿದೆ. ನಿಮ್ಮ ಎಲ್ಲಾ ಸಮಸ್ಯೆಗಳು ದೂರ ಆಗಲು ಸಂಜೆ ಸಮಯದಲ್ಲಿ ಅಂದರೆ 5 ಗಂಟೆಯಿಂದ 7 ಗಂಟೆಯ ಸಮಯದಲ್ಲಿ ನಿಮ್ಮ ಕಣ್ಣಿಗೆ ಕಾಣುವ ಪ್ರಾಣಿಗೆ ಆಹಾರ ನೀಡಿ. ನಿಮಗೆ ವಿಶೇಷ ಲಾಭ ದೊರೆಯುತ್ತದೆ.
ವೃಶ್ಚಿಕ :ಸಣ್ಣ ಮಕ್ಕಳ ಅರೋಗ್ಯದಲ್ಲಿ ಏರುಪೇರಾಗಲಿದೆ. ನೀವು ಹಿಡಿದ ಎಲ್ಲಾ ಕೆಲಸಗಳನ್ನು ನಿಮ್ಮ ಹೆಚ್ಚಿನ ಆತ್ಮವಿಶ್ವಾಸದಿಂದ ಸಾಧಿಸುವಿರಿ. ಈ ವಾರ ಸಣ್ಣ ಪುಟ್ಟ ವ್ಯಾಪಾರ ಮಾಡುವವರಿಗೆ ಅಧಿಕ ಲಾಭ. ಆದರೆ ರಿಯಲ್ ಎಸ್ಟೇಟ್ ವ್ಯವಹಾರ ಏನಾದ್ರೂ ನೀವು ನಡೆಸುತ್ತಾ ಇದ್ದರೆ ನಿಮಗೆ ಸ್ವಲ್ಪ ನಷ್ಟ ಸಾಧ್ಯತೆ ಹೆಚ್ಚು. ನೀವು ನಿಮ್ಮ ಎಲ್ಲಾ ಕೆಲಸಗಳಿಂದ ದೂರ ಆಗಲು ಈ ಬರುವ ಶನಿವಾರದಂದು ಶನಿ ಮಹಾತ್ಮ ದೇವನ ದರ್ಶನ ಪಡೆದು ಕಪ್ಪು ಎಳ್ಳಿನ ಬತ್ತಿ ಹಚ್ಚಿ.

ಧನುಸ್ಸು :ಆದಷ್ಟು ಒಳ್ಳೆಯ ವಿಚಾರಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿ. ನಿಮ್ಮ ಜೊತೆಯಲ್ಲಿರುವ ಕೆಲವು ಗೆಳೆಯರು ನಿಮಗೆ ದ್ರೋಹ ಮಾಡಬಹುದು. ಗೃಹಿಣಿಯರು ಹಣ ಕೊಟ್ಟು ಮೋಸ ಹೋಗಬೇಡಿ. ದಾಂಪತ್ಯ ಜೀವನದಲ್ಲಿ ಸುಧಾರಣೆ ಕಾಣಲಿದೆ. ವಿದೇಶಿ ಪ್ರವಾಸ ಮಾಡುವ ಇಚ್ಛೆ ಹೊಂದಿರುವವರಿಗೆ ತಮ್ಮ ಆಸೆ ನೆರವೇರಲಿದೆ.
ಮಕರ :ಕಳೆದ ವಾರಕ್ಕೆ ಹೋಲಿಸಿದರೆ ಈ ವಾರ ನಿಮ್ಮ ಆರ್ಥಿಕ ಸಮಸ್ಯೆಗಳು ಸ್ವಲ್ಪ ಕಡಿಮೆ ಆಗಲಿದೆ. ಆರೋಗ್ಯವು ಹದಗೆಟ್ಟಿದ್ದರೆ ಅಭಿವೃದ್ಧಿ ಆಗುವುದು. ವಾಹನ ಚಲಾಯಿಸುವಾಗ ನೀವು ಅವಶ್ಯಕವಾಗಿ ಮುಂಜಾಗ್ರತೆ ತೆಗೆದುಕೊಂಡರೆ ಯಾವುದೇ ಸಮಸ್ಯೆ ಬರುವುದಿಲ್ಲ. ನಿಮ್ಮ ಜೀವನದಲ್ಲಿ ಈ ವಾರ ಮತ್ತಷ್ಟು ಲಾಭ ಪಡೆಯಲು ದುರ್ಗಾ ಸ್ತೋತ್ರ ಪಠಣೆ ಮಾಡಿ, ಶುಭವಾಗಲಿದೆ.

ಕುಂಭ :ಈ ವಾರ ನೀವು ನಿಮ್ಮ ಮನೆ ದೇವರಿಗೆ ಪೂಜೆ ಸಲ್ಲಿಸಿ ದರ್ಶನ ಪಡೆದರೆ ವಿಶೇಷ ಲಾಭ ಪಡೆಯುತ್ತೀರಿ. ಸಣ್ಣ ಪುಟ್ಟ ವಿಚಾರಗಳಿಗೆ ನಿಮ್ಮ ಮಡದಿ ಅಥವಾ ಮಕ್ಕಳೊಂದಿಗೆ ಮನಸ್ತಾಪವಾಗಬಹುದು. ನಿಮ್ಮ ಸ್ವಂತ ಬುದ್ಧಿಶಕ್ತಿಯಿಂದ ಎಲ್ಲಾ ನಿರ್ಧಾರ ತೆಗೆದುಕೊಂಡರೆ ಮಾತ್ರ ಈ ವಾರ ನೀವು ಅಭಿವೃದ್ಧಿ ಆಗಲು ಸಾಧ್ಯವಾಗಲಿದೆ.
ಮೀನ :ಈ ವಾರ ನಿಮ್ಮ ನಿಯತ್ತು ನಿಮ್ಮನ್ನು ಕಾಪಾಡಲಿದೆ. ನಿಮಗೆ ನಿಮ್ಮ ಜನರೇ ಸಮಸ್ಯೆ ಮಾಡಲು ಬಂದರೆ ಅದಕ್ಕೆ ಯಾವುದೇ ರೀತಿಯ ಪ್ರಕ್ರಿಯೆ ನೀವು ನೀಡಲಿರುವುದು ಒಳಿತು. ನಿಮಗೆ ಸಮಸ್ಯೆ ಮಾಡಿದವರಿಗೆ ತಕ್ಕ ಪಾಠ ಅವರೇ ಕಲಿಯುತ್ತಾರೆ. ನೂತನ ದಂಪತಿಗಳಿಗೆ ಶುಭವಾರ್ತೆ ಸಿಗಲಿದೆ. ಸಣ್ಣ ವ್ಯವಹಾರ ನಡೆಸುವವರಿಗೆ ಲಾಭದಲ್ಲಿ ವಿಶ್ರಾಂತಿ ದೊರೆಯಲಿದೆ. ಹೊಸ ಮನೆ ಖರೀದಿ ಏನಾದರೂ ಯೋಜನೆ ಇದ್ದರೆ ಅದನ್ನು ಮುಂದೂಡುವುದು ಒಳ್ಳೆಯದು.

LEAVE A REPLY

Please enter your comment!
Please enter your name here