ನಿಮ್ಮ ಕಣ್ಣಿನ ದೃಷ್ಟಿ ಸರಿ ಹೋಗಲು ಈ ಮನೆ ಮದ್ದು ಮಾಡಿ ಸಾಕು

0
1325

ಈಗಂತೂ ಸಣ್ಣ ಮಕ್ಕಳಿಂದಲೇ ಕಣ್ಣಿನ ಸಮಸ್ಯೆಗಳು ಶುರು ಆಗಿರುತ್ತೆ, ಯಾರೇ ಮಕ್ಕಳು ನೋಡಿದ್ರು ಅವರು ಸಣ್ಣ ವಯಸ್ಸಿಗೆ ಕಣ್ಣಿಗೆ ಕನ್ನಡಕ ಹಾಕಿರೋದು ನೋಡುತ್ತೇವೆ ಇದಕೆಲ್ಲ ಕಾರಣ ನಾವು ತಿನ್ನುವ ಆಹಾರಾದ ಕ್ರಮ ಎಂದರೆ ತಪ್ಪಾಗುವುದಿಲ್ಲ ಬಿಡಿ. ಈ ಕಣ್ಣಿನ ಸಮಸ್ಯೆಗಳಿಗೇ ಚಿಕ್ಕವರು ದೊಡ್ಡವರು ಮದ್ಯವಯಸ್ಕರು ಎಂಬ ಬೇಧ ಇರುವುದಿಲ್ಲ ಕಣ್ಣಿನ ದೃಷ್ಟಿ ಕ್ಷೀಣಿಸುತ್ತಿದೆ. ಪ್ರತೀ ಮೂವರಲ್ಲಿ ಒಬ್ಬರಿಗೆ ಕನ್ನಡಕ ಇದ್ದೆ ಇರುತ್ತದೇ . ಅಂಕಿ ಅಂಶಗಳ ಪ್ರಕಾರ ಪ್ರತಿ ವರ್ಷವೂ ಕನ್ನಡಕ ಹಾಕಿಕೊಳ್ಳುವವರ ಸಂಖ್ಯೆ ಹೆಚ್ಚುತ್ತಾ ಸಾಗಿದೆ ಎಂದು ಹೇಳುತ್ತಾರೆ. ನಿಜಕ್ಕೂ ಇದು ಒಳ್ಳೆಯ ಬೆಳವಣಿಗೆ ಅಲ್ಲವೇ ಅಲ್ಲ ಬಿಡಿ. ಇದ್ಕಕ್ಕೆ ಮುಖ್ಯ ಕಾರಣ ಅಂದರೆ ನಾವು ಸರಿಯಾದ ಆಹಾರವನ್ನು ತೆಗೆದುಕೊಳ್ಳದಿರುವುದೇ ಇರುವುದು. ಹಿರಿಯರು ಅಷ್ಟೇ ಅಲ್ಲದೆ ಹೆಚ್ಚು ಪವರ್ ಇರುವ ಕನ್ನಡಕವನ್ನು ಸಣ್ಣ ಸಣ್ಣ ಮ್ಯಾಕ್ಕ್ಲೆ ಇಂದು ಬಳಸುತ್ತಿದ್ದಾರೆ. ಕಣ್ಣು ಮಿಟುಕಿಸದೆ ಹಾಗೆಯೇ ಲಪ್ಟ್ಯಾಪ್ ಟೀವಿ ಮೊಬೈಲ್ ಎಲ್ಲವು ಕಣ್ಣಿನ ನರಗಳ ಮೇಲೆ ಹೆಚ್ಚಿನ ಒತ್ತಡ ಉಂಟು ಮಾಡಿ ಕಣ್ಣಿನ ದೃಷ್ಟಿ ಕ್ಷೀಣಿಸುವಂತೇ ಮಾಡುತ್ತದೆ. ನಮ್ಮ ಹಿಂದಿನ ಕಾಲದ ಹಿರಿಯರಿಗೆ ಕಣ್ಣಿನ ಸಮಸ್ಯೆಗಳು ಬರುವುದು ಏನಿದ್ದರೂ ಎಪ್ಪತ್ತು ದಾಟಿದ ಮೇಲೆಯೇ ಆಗಿತ್ತು ಆದ್ರೆ ನಾವು ತಿನ್ನುವ ಆಹಾರ ಕ್ರಮ ಸಣ್ಣ ವಯಸ್ಸಿಗೆ ಕಣ್ಣಿನ ಮೂಳೆಗಳು ಬಲಹೀನ ಮಾಡಿ . ಕಣ್ಣಿನ ದೃಷ್ಟಿ ಕಡಿಮೆ ಮಾಡಿದೆ ಈಗಾಗಲೇ ಕಣ್ಣಿನ ಸಮಸ್ಯೆ ಇದ್ದವರಿಗೆ ದೃಷ್ಟಿ ಹೆಚ್ಚು ಮಾಡಲು ಒಂದು ಉತ್ತಮ ಮನೆ ಮದ್ದು ಇಲ್ಲಿದೆ ಅದನ್ನ ಮಾಡುವುದು ಹೇಗೆ ತಿಳಿಯಿರಿ.

ಬೇಕಾಗಿರುವ ಸಾಮಗ್ರಿಗಳು ಬಾದಾಮಿ ಬೀಜ ಸೋಂಪು ಕಲ್ಲುಸಕ್ಕರೆ ಈ ಮೂರೂ ಸಮ ಭಾಗದಲ್ಲಿ ತೆಗೆದುಕೊಂಡು ಬಾದಾಮಿ ಹಾಗೂ ಸೋಂಪನ್ನು ಚೆನ್ನಾಗಿ ಹುರಿದು ಮೂರನ್ನೂ ಪುಡಿ ಮಾಡಿ ಒಂದು ಗಾಜಿನ ಬಾಟಲಿಯಲ್ಲಿ ಶೇಖರಣೆ ಮಾಡಿ ಇಟ್ಟುಕೊಳ್ಳಿ. ಹೀಗೆ ನೀವು ತಯಾರು ಮಾಡಿದ ಪುಡಿಯನ್ನು ವಯಸ್ಕರು ಎರಡು ಟೀ ಸ್ಪೂನ್ ನಷ್ಟು,ಸಣ್ಣ ಮಕ್ಕಳು ಒಂದು ಟೀ ಸ್ಪೂನ್ ನಷ್ಟು ಪುಡಿಯನ್ನು ಒಂದು ಲೋಟ ಬಿಸಿ ಮಾಡಿ ಕುದಿಸಿದ ಹಾಲನ್ನು ತೆಗೆದುಕೊಂಡು ಹಾಲು ಸಂಪೂರ್ಣವಾಗಿ ಬಿಸಿ ಕಡಿಮೆಯಾದ ಮೇಲೆ ಬೆರೆಸಿಕೊಂಡು ಕುಡಿಯಬೇಕು. ಪ್ರತಿ ನಿತ್ಯ ದಿನಕ್ಕೆ ಎರಡು ಬಾರಿಯಂತೆ ನೀವು ತೆಗೆದುಕೊಂಡರೆ ಎರಡು ತಿಂಗಳಿನಲ್ಲಿ ನಿಮಗೆ ಅಚ್ಚರಿಯಾಗುವಂತೆ ಅದ್ಭುತವಾದ ಫಲಿತಾಂಶವನ್ನು ನೀವೇ ಕಾಣಬಹುದು. ಈ ಮನೆ ಮದ್ದನ್ನು ನೀವು ನಾಲ್ಕಯ್ದು ತಿಂಗಳ ಕಾಲ ಮುಂದುವರೆಸಿದರೆ ನಿಮ್ಮ ಕಣ್ಣಿನ ದೃಷ್ಟಿಯನ್ನು ಹೆಚ್ಚಿಸುವುದರ ಜೊತೆಗೆ ನಿಮ್ಮ ಕಣ್ಣಿನ ಮೂಳೆಗಳು ಸಹ ಗಟ್ಟಿಯಾಗಿ ಮತ್ತಷ್ಟು ಬಲವಾಗುತ್ತದೆ.

ನೀವು ಸೇವಿಸುವ ಬಾದಾಮಿ ನಿಮ್ಮ ಕಣ್ಣಿನ ದೃಷ್ಟಿ ಹೆಚ್ಚು ಮಾಡುತ್ತದೆ. ನಿಮ್ಮ ಕಣ್ಣಿನಲ್ಲಿರುವ ಅನೇಕ ರೀತಿಯ ಸಮಸ್ಯೆಗಳನ್ನು ದೂರ ಮಾಡುತ್ತದೇ. ಸೋಂಪು ಕಾಳುಗಳಲ್ಲಿರುವ ಅಮೈನೋ ಆಸಿಡ್ ಸಮಸ್ಯೆಗೆ ಗೆ ಒಳ್ಳಪಟ್ಟಿರುವ ಕಣ್ಣಿನ ದೃಷ್ಟಿ ಸರಿ ಮಾಡಿ ನಿಮ್ಮ ಕಣ್ಣಿನ ಇನ್ನಿತರೇ ಸಮಸ್ಯೆಗಳನ್ನು ದೂರ ಮಾಡುತ್ತದೆ. ಪ್ರತಿ ನಿತ್ಯ ನೀವು ಕಲ್ಲು ಸಕ್ಕರೆ ಸೇವನೆ ಮಾಡುವುದರಿಂದ ಅದು ನಿಮ್ಮ ದೇಹದಲ್ಲಿರುವ ಉಷ್ಣತೆ ಕಡಿಮೆ ಮಾಡಲೂ ನಿಮಗೆ ಸಹಾಯ ಮಾಡುತ್ತದೆ. ಇದು ಇಷ್ಟೇ ಅಲ್ಲದೆ ಪ್ರತಿ ನಿತ್ಯ ನೀವು ಹಸಿರು ತರಕಾರಿಗಳು ಕಾಳುಗಳು ಮೊಟ್ಟೆ ಹಸಿರು ಬಣ್ಣದಿಂದ ಕೊಡಿರುವ ತರಕಾರಿ ಹಾಗು ಮೀನಿನ ಸೇವನೆ ಅತ್ಯಂತ್ಯ ಉತ್ತಮ ಹಣ್ಣಿನಲ್ಲಿ ನಾಟಿ ಪರಂಗಿ ಸೇವನೆ ನಿಮ್ಮ ಕಣ್ಣಿನ ಆರೋಗ್ಯವನ್ನು ಮತ್ತಷ್ಟು ಅಭಿವೃದಿಗೊಳಿಸಿ ನಿಮಗೆ ದೃಷ್ಟಿ ಸರಿ ಮಾಡುತ್ತದೆ. ನಾವು ಮೇಲೆ ಹೇಳಿರುವ ಮನೆ ಮದ್ದನ್ನು ನೀವು ಕಟ್ಟು ನಿಟ್ಟಾಗಿ ಪಾಲಿಸಿದರೆ ನಿಮ್ಮ ಕಣ್ಣಿನ ದೃಷ್ಟಿ ಸಮಸ್ಯೆ ದೂರ ಆಗುವುದು. ಇದರ ಜೊತೆಗೆ ನಿಮಗೆ ಗೊತ್ತಿಲ್ಲದ ಹಾಗೆ ನಿಮ್ಮ ಕಣ್ಣಿನ ಸಮಸ್ಯೆ ಅದು ಏನೇ ಇರಲಿ ಸಂಪೂರ್ಣವಾಗಿ ಗುಣವಾಗುವುದು. ಈ ಉಪಯುಕ್ತ ಮಾಹಿತಿ ಎಲ್ಲ ಕಡೆ ಶೇರ್ ಮಾಡಿ ಮತ್ತು ನಿಮ್ಮ ಸ್ನೇಹಿತರಿಗೂ ತಪ್ಪದೇ ತಿಳಿಸಿ.

LEAVE A REPLY

Please enter your comment!
Please enter your name here