ಮೇಷ: ಕುಟುಂಬ ದಲ್ಲಿರುವ ಎಲ್ಲ ಆರ್ಥಿಕ ಸಂಕಷ್ಟಗಳು ಕಡಿಮೆ ಆಗುವ ಸಂಭವ ಇದೆ. ಇಂದು ನಿಮ್ಮ ಕೆಲವು ಆಸೆಗಳಿಗೆ ದೂರ ಇರುವುದು ಸೂಕ್ತ. ನಿಮ್ಮ ಆರ್ಥಿಕ ಸಂಕಷ್ಟಗಳು ನಿವಾರಣೆ ಆಗಲು ಚಾಮುಂಡಿ ದೇವಿ ದರ್ಶನ ಪಡೆದು ಪೂಜೆ ಸಲ್ಲಿಸಿ ಶುಭವಾಗಲಿದೆ.
ವೃಷಭ: ಕೆಲಸದಲ್ಲಿ ಹೆಚ್ಚಿನ ಒತ್ತಡ ತರುವ ಸಾಧ್ಯತೆ. ಸ್ನೇಹಿತರಿಂದ ವಂಚನೆ ಆಗಬಹುದು. ಬೇಡದ ಕೆಲ್ಸಕ್ಕೆ ನೀವು ಮೂಗು ತೂರಿಸಿ ಸಿಕ್ಕಿ ಬೀಳಬೇಡಿ. ಇಂದು ನಿಮಗೆ ಒಂದಿಷ್ಟು ಕೆಮ್ಮಿನ ಸಮಸ್ಯೆಗಳು ಬರುವ ಸಾಧ್ಯತೆ ಹೆಚ್ಚಾಗಿದೆ. ನಿಮ್ಮ ಸಮಸ್ಯೆ ದೂರ ಆಗಲು ಗಾಯತ್ರಿ ಮಂತ್ರ 108 ಬಾರಿ ಜಪಿಸಿ ಶುಭವಾಗಲಿದೆ.
ಮಿಥುನ: ಬಾಕಿ ಇರುವ ಹಣ ವಾಪಸ್ಸಾಗುವ ಸಾಧ್ಯತೆ ಹೆಚ್ಚಾಗಿದೆ. ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಿದರೆ ನಿಮಗೆ ಒಳ್ಳೇದು. ಉದ್ಯೋಗ ಹುಡುಕುವವರಿಗೆ ಉತ್ತಮ ಫಲಿತಾಂಶ ಸಿಗುವ ಸಾಧ್ಯತೆ. ನಿಮ್ಮ ರಾಶಿ ಫಲ ಮತ್ತಷ್ಟು ಹೆಚ್ಚು ಆಗಲು ನೀವು ತಾಯಿ ದುರ್ಗೆ ದರ್ಶನ ಪಡೆಯಿರಿ.
ಕಟಕ: ದೂರದ ಊರಿಗೆ ಪ್ರಯಾಣ ಬೆಳೆಸುವ ಸಾಧ್ಯತೆ. ಉದ್ಯೋಗದಲ್ಲಿ ಒಂದಿಷ್ಟು ಕಿರಿ ಕಿರಿ. ಒಂದಿಷ್ಟು ಆರ್ಥಿಕ ಸಮಸ್ಯೆ ಇಂದು ನಿಮ್ಮನು ಕಾಡಲಿದೆ ನಿಮ್ಮ ಸಮಸ್ಯೆಗಳು ದೂರ ಆಗಲು ಹನುಮಾನ್ ಚಾಲೀಸ ಓದಿ ಸಂಜೆ ಸಮಯದಲ್ಲಿ ಹಸುವಿಗೆ ಬೆಲ್ಲವನ್ನು ತಿನ್ನಿಸಿ ನಿಮಗೆ ಶುಭವಾಗಲಿದೆ.
ಸಿಂಹ: ಗೃಹ ಬದಲಾವಣೆಯಲ್ಲಿ ಚಿಂತೆ ಬರುವ ಸಾಧ್ಯತೆ. ಪ್ರೇಮಿಗಳಿಗೆ ವೈಮನಸ್ಯ ಉಂಟಾಗುವುದು. ಆರ್ಥಿಕ ಸಮಸ್ಯೆ ಅಷ್ಟಾಗಿ ಇಲ್ಲದಿದ್ದರೂ ಸಮಯಕ್ಕೆ ಸರಿಯಾಗಿ ಹಣದ ತೊಂದ್ರೆ ಅನುಭವಿಸುವ ಸಮಸ್ಯೆ ಬರಬಹುದು. ನಿಮ್ಮ ರಾಶಿಗೆ ಮತ್ತಷ್ಟು ಉತ್ತಮ ಫಲ ಸಿಗಲು ಇಂದು ನೀವು ಲಕ್ಷಿ ದೇವಿಗೆ ನಿಂಬೆ ಹಣ್ಣಿನಲ್ಲಿ ದೀಪವನ್ನು ಹಚ್ಚಿ ವಿಶೇಷ ಲಾಭ ನಿಮಗೆ ಸಿಗಲಿದೆ.
ಕನ್ಯಾ: ಪಾಲುದಾರಿಕೆ ವ್ಯವಹಾರ ಮಾಡಿ ಕೈ ಸುಟ್ಟು ಕೊಳ್ಳುವ ಬದಲು ನಿಮ್ಮ ಸ್ವಂತ ಬಂಡವಾಳ ಹೊಡಿಕೆ ಮಾಡಿ ಲಾಭ ಪಡೆಯಿರಿ. ದೇಹದಲ್ಲಿ ಆಯಾಸ ಕಂಡು ಬರುವ ಸಾಧ್ಯತೆ. ಕೆಲಸ ಮಾಡುವ ಮೊದಲು ಹಿರಿಯರ ಆಶಿರ್ವಾದ ಪಡೆದುಕೊಂಡು ಮನೆಯಿಂದ ಹೊರಡಿ.
ತುಲಾ: ಸಣ್ಣ ಸಣ್ಣ ವಿಚಾರಗಳಿಗೆ ತಂದೆಯೊಂದಿಗೆ ವೈಮನಸ್ಯ. ಹಳೆ ಸ್ನೇಹಿತರನ್ನು ಭೇಟಿ ಆಗುವ ಅವಕಾಶ. ವಿದೇಶಕ್ಕೆ ಹೋಗುವವರಿಗೆ ಪ್ರಯಾಣ ಶುಭವಾಗಲಿದೆ. ಇಂದಿನ ದಿನ ಮತ್ತಷ್ಟು ಅದೃಷ್ಟ ತರಲು ನೀವು ದೇವಿ ದೇಗುಲಕ್ಕೆ ತೆರಳಿ ದೀಪವನ್ನು ಹಚ್ಚಿ.
ವೃಶ್ಚಿಕ: ನಿಮ್ಮ ಶತ್ರುಗಳು ನಿಮ್ಮನು ಸಮಸ್ಯೆಗಳಿಗೆ ಸಿಲುಕಿಸುವ ಸಾಧ್ಯತೆ ಇರುವುದರಿಂದ ಮಾಡುವ ಎಲ್ಲ ಕೆಲಸದಲ್ಲಿ ನೀವು ಜಾಗ್ರತೆ ತೆಗೆದುಕೊಳ್ಳುವುದು ನಿಮಗೆ ಕ್ಷೇಮ. ದಾಂಪತ್ಯ ಜೀವನದಲ್ಲಿ ಸುಖ ನೆಮ್ಮದಿ ಸಿಗಲಿದೆ. ಸಣ್ಣ ಮಕ್ಕಳಿಗೆ ಸೋಂಕಿನ ಸಮಸ್ಯೆ ಬರುವ ಸಾಧ್ಯತೆ ಇರುತ್ತದೆ.
ಧನಸ್ಸು: ಶುಭ ಸುದ್ದಿ ಬರುವ ಸಾಧ್ಯತೆ. ಆರ್ಥಿಕವಾಗಿ ಹೆಚ್ಚು ಬಲಶಾಲಿ ಆಗುವಿರಿ ಇಂದು ಅಧಿಕವಾಗಿ ಧನ ಲಾಭವಾಗಲಿದೆ. ಉದ್ಯೋಗ ಹುಡುಕುತ್ತಿರುವವರಿಗೆ ಶುಭ ಸುದ್ದಿ ಸಿಗಲಿದೆ. ನಿಮ್ಮ ರಾಶಿಗೆ ಮತ್ತಷ್ಟು ಅದೃಷ್ಟ ತರಲು ಚಾಮುಂಡಿ ತಾಯಿಯ ದರ್ಶನ ಪಡೆಯಿರಿ.
ಮಕರ: ನಿಮ್ಮ ಚಿಂತೆಯೇ ನಿಮ್ಮನು ಸಮಸ್ಯೆಗಳಿಗೆ ದೂಡುತ್ತದೆ. ನೀವು ನಿಮ್ಮ ಆತ್ಮ ವಿಶ್ವಾಸದಿಂದ ಮುನ್ನುಗಿ ನಡೆದರೆ ಮಾತ್ರ ನೀವು ಅಂದುಕೊಂಡಿದ್ದು ಸಾಧನೆ ಮಾಡುವಿರಿ. ಆರೋಗ್ಯದ ಕಡೆ ಹೆಚ್ಚಿನ ಜಾಗ್ರತೆ ವಹಿಸಿಕೊಳ್ಳಿ ಸಂಜೆ ನಂತರ ಶುಭ ವಾರ್ತೆ ಸಿಗಲಿದೆ.
ಕುಂಭ: ಕಷ್ಟದ ಸಮಯದಲ್ಲಿ ಸ್ನೇಹಿತನಿಂದ ಆರ್ಥಿಕ ಸಹಾಯ ಸಿಗಲಿದೆ. ಕೋರ್ಟು ಕಚೇರಿ ವ್ಯಾಜ್ಯಗಳಲ್ಲಿ ಹಿನ್ನಡೆ ಆಗಲಿದೆ. ಚಿಂತೆಗಳನ್ನು ಬಿಟ್ಟು ಶ್ರೀ ನರಸಿಂಹ ದೇವರ ಪ್ರಾರ್ಥನೆ ಮಾಡಿದ್ರೆ ನಿಮ್ಮ ಸಕಲ ಸಮಸ್ಯೆಗಳಿಗೂ ಪರಿಹಾರ ದೊರೆಯಲಿದೆ.
ಮೀನ: ಮಾನಸಿಕ ನೆಮ್ಮದಿ ಸಿಗಲಿದೆ. ಸಣ್ಣ ಪುಟ್ಟ ಸೋಂಕು ಬರುವ ಸಾಧ್ಯತೆ ಇರುವುದರಿಂದ ನಿಮ್ಮ ಆರೋಗ್ಯದ ಮೇಲೆ ಹೆಚ್ಚಿನ ಜಾಗ್ರತೆ ತೆಗೆದುಕೊಳ್ಳಿ. ಶಕ್ತಿ ದೇವತೆ ದರ್ಶನ ಪಡೆದುಕೊಂಡರೆ ನಿಮಗೆ ಇಂದು ವಿಶೇಷ ಲಾಭ ದೊರೆಯಲಿದೆ.