ರಾತ್ರಿ ಸಮಯದಲ್ಲೇ ಹೃದಯಾಘಾತ ಹೆಚ್ಚಾಗಿ ಆಗುತ್ತೆ ಏಕೆ ಅಂದ್ರೆ

0
1177

ನಿಮಗೆ ಗೊತ್ತೇ ಹೃದಯಾಘಾತ ಆಗೋದು ರಾತ್ರಿ ಎರಡು ಗಂಟೆ ನಂತರದ ಸಮಯದಲ್ಲೇ ಇದಕ್ಕೆ ಕಾರಣ ಏನು ಗೊತ್ತಿದ್ಯೇ? ನಮ್ಮ ದೇಹದಲ್ಲಿರುವ ಒಂದೊಂದು ಅಂಗಾಂಗ ಒಂದೊಂದು ಸಮಯದಲ್ಲಿ ಮಾತ್ರ ವಿಶೇಷವಾಗಿ ಹೆಚ್ಚು ಕೆಲಸ ಮಾಡುತ್ತೆ . ನಿಮಗೆ ಗೊತ್ತಿಲ್ಲದ ವಿಷ್ಯ ಅಂದ್ರೆ ಹೃದಯ ಹೆಚ್ಚಾಗಿ ಕೆಲಸ ಮಾಡೋದು ಅಂದ್ರೆ ಕ್ರೀಯಾಶೀಲತೆಯಿಂದ ಹೆಚ್ಚು ಕಾರ್ಯ ನಿರ್ವಹಣೆ ಮಾಡೋದು ಎರಡು ಗಂಟೆಯಿಂದ ಸಮಯ ಎರಡು ಮುವತ್ತರ ವರೆಗೂ ಮಾತ್ರ ಆ ಸಮಯದಲ್ಲಿ ನಮ್ಮ ಹೃದಯಕ್ಕೆ ಮಾಮೂಲಿಗಿಂತ ಸ್ವಲ್ಪ ಹೆಚ್ಚು ಆಕ್ಸಿಜನ್ ಬೇಕಾಗುತ್ತದೆ. ಆ ಸಮಯಕ್ಕೆ ಸರಿಯಾದ ರೀತಿಯಲ್ಲಿ ಆಕ್ಸಿಜೆನ್ ದೊರೆಯದೆ ಇದ್ದಲ್ಲಿ ಎದೆ ಹೆಚ್ಚಾಗಿ ನೋವು ಕಂಡುಬರುತ್ತದೆ. ಆದ್ದರಿಂದ ಅನೇಕ ಜನರಲ್ಲಿ ಹೃದಯಾಘಾತ ಆಗೋದು ರಾತ್ರಿ 2 ಗಂಟೆಯಿಂದ 02:30 ಸಮಯದಲ್ಲೆ ಮಾತ್ರ ಎಂದು ಸಂಶೋಧನೆಗಳಿಂದ ತಿಳಿದು ಬಂದಿದೆ.

ನಿಮ್ಮ ಹೃದಯ ಚೆನ್ನಾಗಿ ಕೆಲಸ ಮಾಡಬೇಕು ಇದನ್ನ ತಪ್ಪದೆ ಪಾಲಿಸಿ. ಈಗಂತೂ ಜನಕ್ಕೆ ನಡೆಯಲು ಸಹ ಸಮಯ ಇರೋದಿಲ್ಲ ವಾಕಿಂಗ್ ಮಾಡೋ ಜನರ ಸಂಖ್ಯೆ ದಿನ ದಿನಕ್ಕೂ ಕಡಿಮೆ ಆಗುತ್ತಲೇ ಇದೆ. ಆಫೀಸ್ ನಲ್ಲಿ ಲಿಫ್ಟ್ ಬದಲು ಮೆಟ್ಟಿಲು ಹತ್ತುವ ಅಭ್ಯಾಸ ಇಟ್ಟುಕೊಳ್ಳಿ. ಪ್ರತಿ ನಿತ್ಯ ಬೆಳ್ಳಗೆ ಅಥವಾ ಸಂಜೆ ಅರ್ಥ ಗಂಟೆ ವಾಕಿಂಗ್ ಮಾಡಿ. ದೇಹಕ್ಕೆ ಐಯೊಡಿನ್ ಅಂಶ ಕಡಿಮೆ ಆದರೂ ಸಮಸ್ಯೆ ಹಾಗೆಯೆ ಈ ಐಯೊಡಿನ್ ಅಂದ್ರೆ ಉಪ್ಪಿನ ಅಂಶ ಜಾಸ್ತಿ ಆದರೂ ನಿಮ್ಮ ರಕ್ತದ ಮೇಲೆ ಹೆಚ್ಚಿನ ಒತ್ತಡ ಆಗಿ ಹೃದಯಕ್ಕೆ ಸಮಸ್ಯೆ ಮಾಡುತ್ತೆ. ಉಪ್ಪನ್ನು ಆದಷ್ಟು ನಿಯಮಿತವಾಗಿಯೇ ಸೇವಿಸಿ.

ಪ್ರತಿ ನಿತ್ಯ ಸಾಧ್ಯವಾದಷ್ಟು ಮೂರೂ ರೀತಿಯ ಹಣ್ಣುಗಳನ್ನು ತಿನ್ನುವ ಅಭ್ಯಾಸ ಇಟ್ಟುಕೊಳ್ಳಿ ಅದ್ರಲ್ಲೂ ಹಸಿರು ಬಣ್ಣದಿಂದ ಕೊಡಿರುವ ತರಕಾರಿ ಅಥವಾ ಹಣ್ಣುಗಳು ನಮ್ಮಹೃದಯಕ್ಕೆ ಹೆಚ್ಚಿನ ಅವಶ್ಯಕೆತೆ ಇದೆ. ಪ್ರತಿ ನಿತ್ಯ ಹತ್ತಾರು ಸಿಗರೇಟ್ ಸೇದುವುದು, ಮದ್ಯಪಾನ ಅತೀಯಾಗಿ ಸೇವನೆ ಮಾಡುವುದು ನಿಮಗೆ ಹಲವಾರು ಖಾಯಿಲೆಗಳನ್ನು ತರುವುದರ ಜೊತೆಗೆ ಹೃದಯಾಘಾತ ತರುವ ಸಂಭವ ಹೆಚ್ಚಿದೆ. ಬೀದಿ ಬದಿಯಲ್ಲಿ ಮಾರುವ ಎಣ್ಣೆಯಲ್ಲಿ ಕರಿದ ಆಹಾರಗಳಿಂದ ಆದಷ್ಟು ಸ್ವಲ್ಪ ದೂರ ಇದ್ದರೇ ಅದು ನಿಮಗೆ ಒಳ್ಳೇದು ಏಕೆ ಅಂದ್ರೆ ಕೆಟ್ಟ ಎಣ್ಣೆಯಲ್ಲಿ ತೇಲಿಸಿದ ಆಹಾರಗಳು ನಮ್ಮ ಹೃದಯದ ಹಾನಿಕಾರಕ ಉಂಟು ಮಾಡುತ್ತೆ. ಪ್ರತಿ ತಿನಗಳಿಗೆ ಒಮ್ಮೆ ನಿಮ್ಮ ತೂಕ ಮತ್ತು ಎತ್ತರವನ್ನು ಪರೀಕ್ಷೆ ಮಾಡಿಕೊಳ್ಳಿ. ನಿಮ್ಮ ಎತ್ತರಕ್ಕೆ ತಕ್ಕಷ್ಟು ಮಾತ್ರ ತೂಕವನ್ನು ಹೊಂದುವುದು ನಿಮ್ಮ ಆರೋಗ್ಯಕ್ಕೆ ಉತ್ತಮ.

ಹಾರ್ಟ್ ಅಟ್ಯಾಕ್ ಆಗುವ ಮುಂಚೆ ನಮ್ಮ ದೇಹದಲ್ಲಿ ಕಂಡು ಬರುವ ಕೆಲವು ಲಕ್ಷಣಗಳು ಒಂದು ತಿಂಗಳಿಗೆ ಏಳು ಅಥವಾ ಎಂಟು ಬಾರಿ ನೆಗಡಿ ಆಗುವುದು ಕೆಮ್ಮಿನ ಮಾತ್ರೆ ತೆಗೆದುಕೊಂಡರು ಸಮಸ್ಯೆ ಕಡಿಮೆ ಆಗದೆ ಯಾವಾಗಲು ಪದೇ ಪದೇ ಕೆಮ್ಮು ಬರುತ್ತಲೇ ಇರುವುದು ದೇಹದ ಉಷ್ಣತೆ ಏರುಪೇರಾಗಿ ಜ್ವರ ಕಡಿಮೆ ಆಗಿ ಮತ್ತೆ ಮತ್ತೆ ಬರುವುದು ಈ ಎಲ್ಲ ಸಮಸ್ಯೆಗಳು ಸಾಮಾನ್ಯವಂತೆ ನಮಗೆ ಕಂಡರೂ ಅದು ಹೃದಯ ಮೇಲೆ ಹೆಚ್ಚಿನ ಪ್ರಭಾವ ಉಂಟು ಮಾಡುವುದು. ಇದ್ದಕಿದ್ದಂತೆ ಎದೆಯ ಮೇಲೆ ಭಾರದ ವಸ್ತು ಇಟ್ಟುಕೊಳ್ಳುವಂತೆ ಆಗುವುದು ಇದು ಹಾರ್ಟ್ ಅಟ್ಯಾಕ್ ಆಗುವ ಮುನ್ಸೂಚನೆ ಆದ್ದರಿಂದ ಆ ಸಮಯದಲ್ಲಿ ತಡ ಮಾಡದೆ ಹತ್ತಿರದ ವೈದ್ಯರ ನೆರವು ಪಡೆಯಿರಿ.

ಇದ್ದಕಿದ್ದಂತೆ ಅತೀಯಾಗಿ ಸುಸ್ತು ಆಗುವುದು ಕಣ್ಣು ಮಂಜಾಗುವುದು ಇದಕ್ಕಿದಂತೆ ಮೈಯಲ್ಲಿ ಬೆವರು ಬರುವುದು ಸಹ ಹಾರ್ಟ್ ಅಟ್ಯಾಕ್ ಸೂಚನೆ ಆಗಿರುತ್ತದೆ ಈ ಸಮಸ್ಯೆಗಳು ಹಾರ್ಟ್ ಅಟ್ಯಾಕ್ ಆಗುವ ಹದಿನೈದು ದಿನಗಳ ಮುಂಚೆ ಆಗುವ ಸಂಭವ ಹೆಚ್ಚು ಇರುತ್ತೆ. ಹೃದಯಕ್ಕೆ ಸಂಬಂಧಪಟ್ಟಂತೆ ಏನಾದ್ರು ಸಮಸ್ಯೆಗಳು ಇದ್ದರೇ ಅದು ನಮ್ಮ ದೇಹದ ಹೃದಯ ಬಡಿತದಲ್ಲೂ ವ್ಯತ್ಯಾಸ ಕಂಡು ಬರಲಿದೆ. ಪ್ರತಿ ಆರು ತಿಂಗಳಿಗೊಮ್ಮೆ ನೀವು ನಿಮ್ಮ ಹೃದಯವನ್ನು ಸೂಕ್ತ ವೈದ್ಯರ ಬಳಿ ಪರೀಕ್ಷೆ ಮಾಡಿಸುವುದು ನಿಮ್ಮ ಆರೋಗ್ಯಕ್ಕೂ ಉತ್ತಮ.

 

LEAVE A REPLY

Please enter your comment!
Please enter your name here