ಸ್ತನ ಕ್ಯಾನ್ಸರ್ ಬರಲು ಇವುಗಳೇ ಕಾರಣ ತಿಳಿಯಿರಿ

0
1119

ಸ್ತನ ಕ್ಯಾನ್ಸರ್ ಬಗ್ಗೆ ಪ್ರತಿಯೊಬ್ಬರಲ್ಲೂ ಅರಿವು ಇರಬೇಕು .

ಸ್ತನ ಕ್ಯಾನ್ಸರ್ ಎಂದರೆ ಎದೆಯ ಭಾಗದಲ್ಲಿ ಆಗುವ ಒಂದು ಚಿಕ್ಕ ಗೆಡ್ಡೆ ಎಂದು ಹೇಳಬಹುದು ಮಹಿಳೆಯರಿಗೆ ಕಾಡುವ ಎರಡನೇ ಕ್ಯಾನ್ಸರ್ ಇದು ,
ಕ್ಯಾನ್ಸರ್ ಎಂದರೆ ಯಾರಿಗೆ ತಾನೇ ಭಯವಿಲ ಹೇಳಿ ಅಲ್ಲವೇ ಆದರೆ ಕ್ಯಾನ್ಸರ್ ಎಂಬುದಕ್ಕೆ ಭಯ ಪಡುವ ಅವಶ್ಯಕತೆ ಇಲ್ಲ ಅದರ ಬಗ್ಗೆ ಮೊದಲೇ ತಿಳಿದುಕೊಂಡರೆ ಸಾಕು ಅದರಿಂದ ನಾವು ದೂರವಾಗಬಹುದು ಕ್ಯಾನ್ಸರ್ ನ ಮೊದಲ ಹಂತದಲ್ಲಿ ಯಾವುದೇ ಕ್ಯಾನ್ಸರ್ ಆದರೂ ಗುಣಪಡಿಸಬಹುದು ಆದರೆ ಇದು ಕೊನೆಯ ಹಂತಕೆ ಹೋದರೆ ಸಾಕು ಅದನ್ನು ಗುಣಪಡಿಸಿಕೊಳ್ಳುವುದು ತುಂಬ ಕಷ್ಟ ಹಾಗಾಗಿ ಯಾವುದೇ ಕ್ಯಾನ್ಸರ್ ಆದರೂ ಮೊದಲ ಹಂತದಲ್ಲೇ ಜ್ಞಾಪಡಿಸಿಕೊಳ್ಳಬೇಕು

ಸ್ತನ ಕ್ಯಾನ್ಸರ್ ಗೆ ಕಾರಣವಾಗುವ ಅಂಶಗಳು ಏನೆಂದು ನೋಡೋಣ ಬನಿ. ಅತಿ ಹೆಚ್ಚು ತೂಕ ವನ್ನು ಹೊಂದಿದ್ದು ಅತಿಯಾದ ಬೊಜ್ಜು ಹೊಂದಿದ್ದರು ಸಹ ಕಾನ್ಸರ್ ಎಂಬುದು ಬರುತ್ತದೆ. ಸರಿಯಾದ ಸಮಯದಲ್ಲಿ ವಯಸ್ಸಿನಲ್ಲಿ ಮಕ್ಕಳಾಗದೇ ಇರುವುದು ಸಹ ಕ್ಯಾನ್ಸರ್ ಗೆ ಕಾರಣವಾಗುತ್ತದೆ. ಅತಿಯಾದ ಚಿಕ್ಕ ವಯಸ್ಸಿನಲ್ಲೇ ಮುಟ್ಟು ಆಗುವುದು ಹಾಗು ಬೇಗ ಮುತ್ತು ನಿಲ್ಲುವದು ಸಹ ಕ್ಯಾನ್ಸರ್ಗೆ ಕಾರಣವಾಗುತ್ತದೆ. ಮಕ್ಕಳಾದ ನಂತರ ಮಕ್ಕಳಿಗೆ ಹಾಲುಣಿಸದೆ ಇರುವುದು ಸಹ ಕಾರಣವಾಗುತ್ತದೆ. ಸರಿಯಾದ ಸಮಯಕ್ಕೆ ಮುಟ್ಟು ಆಗದೆ ಇರುವುದು. ಅತಿ ಹೆಚ್ಚು ಮದ್ಯಪಾನ ಹಾಗು ಧೂಮಪಾನ ಸೇವನೆ ಮಾಡುವುದು.
ಋತುಬಂಧದ ಸಮಯದಲ್ಲಿ ಹಾರ್ಮೋನ್ಗಳ ಬದಲಾವಣೆ. ಮತ್ತು ಕಿರಣ ಚಿಕಿತ್ಸೆ.

ಸ್ತನ ಕ್ಯಾನ್ಸರ್ ನ ಲಕ್ಷಣಗಳು ಯಾವುವು ಎಂದು ನೋಡೋಣ ಬನ್ನಿ. ಸ್ತನಗಳು ದಪ್ಪವಾಗುತ್ತದೆ. ಸ್ತನಗಳ ತೊಟ್ಟಿನಲ್ಲಿ ಸಿಪ್ಪೆಯ ರೀತಿ ಏಳುತ್ತದೆ. ಸ್ತನಗಳ ತೊಟ್ಟಿನಲ್ಲಿ ರಕ್ತ ಸ್ರಾವ ಉಂಟಾಗತ್ತದೆ. ಸ್ತನಗಳ ಮೇಲೆ ಕಲೆ ಹಾಗು ಕೆಂಪು ಗುಳ್ಳೆಗಳು ಆಗುತ್ತವೆ. ಸ್ತನಗಳ ತೊಟ್ಟಿನಲ್ಲಿ ಕೆಂಪು ಗುಳ್ಳೆಗಳು ತುರಿಕೆಗಳು ಆಗುತ್ತವೆ. ಸ್ತನಗಳು ಗಟ್ಟಿಯಾಗುತ್ತವೆ. ತುಂಬ ನೋವು ಕಾಣಿಸುತ್ತದೆ. ಬೆನ್ನು ನೋವು ಕಂಡು ಬರುತ್ತದೆ .

ಸ್ತನ ಕ್ಯಾನ್ಸರ್ ಅನ್ನು ತಡೆಗಟ್ಟುವುದು ಹೇಗೆಂದು ನೋಡೋಣ ಬನ್ನಿ ಸ್ತನ ಕ್ಯಾನ್ಸರ್ ಅನ್ನು ತಡೆಯಲು ರೆಡ್ ವೈನ್ ಒಂದು ಒಳ್ಳೆಯ ಔಷದಿ ಹೌದು ರೆಡ್ ವೈನ್ ಅಲ್ಲಿ ಕ್ಯಾನ್ಸರ್ ನಿರೋಧಕ ಶಕ್ತಿ ಇದೆ ಇದನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಸ್ತನ ಕ್ಯಾನ್ಸರ್ ಅನ್ನು ತಡೆಯಬಹುದು. ಅತಿ ಹೆಚ್ಚು ನೀರು ಸೇವನೆ ಮಾಡಬೇಕು ದಿನಕ್ಕೆ ನಾಲ್ಕರಿಂದ ಐದು ಲೀಟರ್ ನೀರು ಕುಡಿಯುವುದರಿದ ಸ್ತನ ಕ್ಯಾನ್ಸರ್ ಅನ್ನು ತಡೆಯಬಹುದು. ವಿಟಮಿನ್ ಡಿ ಹೊಂದಿರುವ ಆಹಾರಗಳ ಸೇವನೆಯಿಂದ ಸಹ ಸ್ತನ ಕ್ಯಾನ್ಸರ್ ಅನ್ನು ತಡೆಯಬಹುದು. ನಿತ್ಯ ಗ್ರೀನ್ ಟಿ ಸೇವನೆ ಕುಡಿಯುವುದರಿಂದ ಸಹ ಸ್ತನ ಕ್ಯಾನ್ಸರ್ ತಡೆಯಬಹುದು .

ಹೆಚ್ಚು ಪೋಷಕಾಂಶಗಳನ್ನು ಹೊಂದಿರುವ ಆಹಾರಗಳ ಸೇವನೆಯಿಂದ ಸಹ ಸ್ತನ ಕ್ಯಾನ್ಸರ್ ಅನ್ನು ತಡೆಯಬಹುದು. ಚಿಕ್ಕ ವಯಸ್ಸಿನಿಂದ ಸಹ ಹೆಚ್ಚು ನಾರಿನಂಶ ಹೊಂದಿರುವ ತರಕಾರಿಗಳ ಸೇವನೆಯನ್ನು ಮಾಡಬೇಕು. ಹೆಚ್ಚು ವ್ಯಾಯಾಮ ಮಾಡಬೇಕು. ದಿನಿತ್ಯದ ಆಹಾರದಲ್ಲಿ ಫೈಬರ್ ಹೊಂದಿರುವ ಪದಾರ್ಥಗಳ ಹೆಚ್ಚಿನ ಸೇವನೆಯಿಂದ ಭವಿಷ್ಯದಲ್ಲಿ ಸ್ತನ ಕ್ಯಾನ್ಸರ್‌ನ ಅಪಾಯದಿಂದ ದೂರವಿರಬಹುದು. ಸ್ತನ ಕ್ಯಾನ್ಸರ್ ಗಳನ್ನು ಪ್ರಾಥಮಿಕ ಹಂತದಂತೆ ಕಂಡುಹಿಡಿಯಬಹುದು. ಬ್ರೆಸ್ಟ್ ಸೆಲ್ಫ್ ಎಕ್ಸಾಮಿನೇಶನ್ ಹಾಗು ಮ್ಯಾಮೋಗ್ರ್ಯಾಫಿ ಪರೀಕ್ಷೆಗಳು ಸ್ತನ ಕ್ಯಾನ್ಸರ್ ಅನ್ನು ಪ್ರಾಥಮಿಕ ಹಂತಗಳಲ್ಲಿಯೇ ಪತ್ತೆ ಹಚ್ಚುವಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸುತ್ತವೆ.

ಬ್ರೆಸ್ಟ್ ಸೆಲ್ಫ್ ಎಕ್ಸಾಮಿನೇಶನ್ ಮೂಲಕ 18 ವರ್ಷ ತುಂಬಿದ ಪ್ರತಿಯೊಬ್ಬ ಮಹಿಳೆಯೂ ಸ್ವತಃ ತನ್ನ ಎರಡು ಸ್ತನಗಳನ್ನು ತಿಂಗಳಿಗೊಮ್ಮೆ ಪರೀಕ್ಷಿಸಿಕೊಳ್ಳಬಹುದು. ಇದನ್ನು ಪ್ರತಿ ತಿಂಗಳ ಋತುಸ್ರಾವದ ನಂತರ ಮಾಡಿಕೊಳ್ಳುವುದು ಸೂಕ್ತ. ಸ್ತನ ಕ್ಯಾನ್ಸರ್ ಗಳನ್ನು ಪ್ರಾಥಮಿಕ ಹಂತದಂತೆ ಕಂಡುಹಿಡಿಯಬಹುದು. ಬ್ರೆಸ್ಟ್ ಸೆಲ್ಫ್ ಎಕ್ಸಾಮಿನೇಶನ್ ಹಾಗು ಮ್ಯಾಮೋಗ್ರ್ಯಾಫಿ ಪರೀಕ್ಷೆಗಳು ಸ್ತನ ಕ್ಯಾನ್ಸರ್ ಅನ್ನು ಪ್ರಾಥಮಿಕ ಹಂತಗಳಲ್ಲಿಯೇ ಪತ್ತೆ ಹಚ್ಚುವಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸುತ್ತವೆ. ಬ್ರೆಸ್ಟ್ ಸೆಲ್ಫ್ ಎಕ್ಸಾಮಿನೇಶನ್ ಮೂಲಕ 18 ವರ್ಷ ತುಂಬಿದ ಪ್ರತಿಯೊಬ್ಬ ಮಹಿಳೆಯೂ ಸ್ವತಃ ತನ್ನ ಎರಡು ಸ್ತನಗಳನ್ನು ತಿಂಗಳಿಗೊಮ್ಮೆ ಪರೀಕ್ಷಿಸಿಕೊಳ್ಳಬಹುದು. ಇದನ್ನು ಪ್ರತಿ ತಿಂಗಳ ಋತುಸ್ರಾವದ ನಂತರ ಮಾಡಿಕೊಳ್ಳುವುದು ಸೂಕ್ತ.

ಸ್ತನ ಕ್ಯಾನ್ಸರ್ ಹೆಚ್ಚ್ಚಾಗುತ್ತಿರುದಕ್ಕೆ ಕಾರಣವೇನು ನೋಡೋಣ ಬನ್ನಿ ಸ್ತನ ಕ್ಯಾನ್ಸರನ್ನು ಸ್ವಯಂ ಪರೀಕ್ಷಿಸಿಕೊಳ್ಳುವಲ್ಲಿ ಮಹಿಳೆಯರಲ್ಲಿನ ತಿಳುವಳಿಕೆಯ ಕೊರತೆ ಮತ್ತು ಸಂಕೋಚವೇ ಕಾಯಿಲೆ ಉಲ್ಬಣಗೊಳ್ಳಲು ಪ್ರಮುಖ ಕಾರಣವಾಗಿದೆ. ಮಹಿಳೆಯರು ಕೌಟುಂಬಿಕ ಸಮಸ್ಯೆಗಳಿಂದಾಗಿ ಕಾಯಿಲೆ ಕಾಣಿಸಿಕೊಂಡ ಆರಂಭದಲ್ಲಿ ನಿರ್ಲಕ್ಷ್ಯ ವಹಿಸುತ್ತಾರೆ. ಹಲವು ಮಹಿಳೆಯರು ಪುರುಷ ವೈದ್ಯರಲ್ಲಿ ಪರೀಕ್ಷಿಸಿಕೊಳ್ಳಲು ಸಂಕೋಚ ಹೊಂದಿರುತ್ತಾರೆ. ಹೀಗಾಗಿ ಕಾಯಿಲೆ ಹೆಚ್ಚುತ್ತಿದೆ. ವಿವಾಹಿತ ಮಹಿಳೆಯರು ಪತಿಯ ಬಳಿ ಖಾಸಗಿ ವಿಚಾರಗಳನ್ನೂ ಹೇಳಿಕೊಳ್ಳಲು ಹಿಂಜರಿಕೆ ತೋರಬಾರದು, ಈ ವಿಚಾರದಲ್ಲಿ ನಿರ್ಲಕ್ಷ್ಯ ಸಲ್ಲದು. ಸೂಕ್ತ ಕಾಲದಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿ ಶಂಕೆ ಪರಿಹರಿಸಿಕೊಳ್ಳಬೇಕು

ಮಹಿಳೆಯರು ತಡವಾಗಿ ಗರ್ಭ ದಿರಿಸುವುದು, ಮಕ್ಕಳಿಗೆ ಸ್ತನ್ಯ ಪಾನ ನೀಡುವ ಅವಧಿ ಕಡಿಮೆಗೊಳಿಸುವುದು, ಬಾಣಂತಿಯಾಗಿರುವ ವೇಳೆ ಪಾಶ್ಚಾತ್ಯ ಆಹಾರ ಪದ್ಧತಿ, ಸ್ಥೂಲಕಾಯ, ವೇಗದ ಆರ್ಥಿಕ ಅಭಿವೃದ್ಧಿ ಮತ್ತು ಹೆಚ್ಚಾಗಿ ಆಗುತ್ತಿರುವ ನಗರೀಕಣವೂ ಸ್ತನ ಕ್ಯಾನ್ಸರ್‌ಗೆ ಕಾರಣವಾಗಿದೆ. ಸ್ತನ ಕ್ಯಾನ್ಸರ್‌ನ ಬಗ್ಗೆ ಅರಿವು ಮೂಡಿಸುವಲ್ಲಿ ಸಮುದಾಯ ಆರೋಗ್ಯ ಕೇಂದ್ರಗಳ ದಾದಿಯರು ಹೆಚ್ಚಿನ ಕೆಲಸ ಮಾಡಬೇಕಾಗಿದೆ.ಅಂತೆಯೇ, ಸಾಮಾಜಿಕ ತಾಣಗಳು, ಶಾಲಾ ಕಾಲೇಜ್‌ಗಳು ಮತ್ತು ಮಾಧ್ಯಮಗಳು ಪರಿಣಾಮಕಾರಿಯಾಗಿ ಅರಿವು ಮೂಡಿಸ ಬೇಕು

LEAVE A REPLY

Please enter your comment!
Please enter your name here