ಈ ಎಲೆಗಳಲ್ಲಿ ಹತ್ತಾರು ರೀತಿಯ ಔಷಧಿಯ ಗುಣಗಳು ಇದೆ

0
1106

ಮನೆಯ ಅಂಗಳದಲ್ಲೇ ಒಂದು ಚಿಕ್ಕ ಪಟ್ ಅಲ್ಲಿ ಬೆಳೆಯಬಹುದಾದ ಅಗಲ ಎಲೆಗಳನ್ನು ಹೊಂದಿರುವ ಹಚ್ಚ ಹೆಸರಿನ ಬಣ್ಣವನ್ನು ಒಂದಿರುವ ಹೆಚ್ಚು ರಸವನ್ನು ತುಂಬಿಕೊಂಡಿರುವ ಎಲೆಗಳು ಹೊಂದಿರುವ ಗಿಡವೇ ಸಾಂಬಾರ ಬಳ್ಳಿ ಇದನ್ನು ಸಾಂಬ್ರಾಣಿ ಎಲೆ. ಸಾಂಬಾರ ಬಳ್ಳಿ .ದೊಡ್ಡ ಪತ್ರೆ ಎಂದೆಲ್ಲ ಕರೆಯುತ್ತಾರೆ. ಈ ಗಿಡವು ನೋಡಲು ಸಹ ಅಷ್ಟೇ ಸುಂದರವಾಗಿದೆ ಹಾಗೆಯೆ ಅಪಾರವಾದ ಔಷದಿಯ ಗುಣಗಳನ್ನು ಹೊಂದಿದೆ .ಈ ಗಿಡದ ಒಂದು ಚಿಕ್ಕ ಕಡ್ಡಿಯನ್ನು ನೆಟ್ಟರೆ ಸಾಕು ಗಿಡವು ಬೆಳೆಯುತ್ತದೆ ಈ ಗಿಡವು ತುಂಬ ಅಗಲವಾಗಿ ಬೆಳೆಯುತ್ತದೆ. ಸಾಂಬಾರ ಎಲೆಗಳು ಔಷಧೀಯ ಗುಣಗಳನ್ನು ಮಾತ್ರ ವಲ್ಲ ಅಪಾರ ಪೋಷಕಾಂಶಗಳನ್ನು ಹೊಂದಿವೆ. ಪ್ರೋಟಿನ್‌, ದೇಹಕ್ಕೆ ಬೇಕಾಗುವ ಪ್ರಮುಖ ಜೀವಸತ್ವಗಳು, ಕಬ್ಬಿಣ, ತಾಮ್ರ ಮುಂತಾದ ಖನಿಜಗಳು, ಸೋಡಿಯಂ, ಮೆಗ್ನೇಷಿಯಂ, ನಾರು, ಸತು ಹೀಗೆ ಅನೇಕ ಪೋಷಕಾಂಶಗಳಿಂದ ಕೂಡಿದ ಕಾರಣ ನಿತ್ಯ ಆಹಾರದ ಜತೆಗೆ ಇದನ್ನು ಬಳಸುವುದು ಆರೋಗ್ಯದ ದೃಷ್ಟಿಯಿಂದ ಉತ್ತಮ.  ಬೆನ್ಫೋಯೇಟ್‌ ಬೆನಾಯಿಕ್‌ ಆಮ್ಲ ಮತ್ತು ಬೆನಲ್‌ ಡಿಹೈಡ್ರೇಟ್‌ ಇದ್ದು ಇದು ಫ‌ಂಗಸ್‌ ಮತ್ತು ಬ್ಯಾಕ್ಟ್ರೀರಿಯಾ ನಿರೋಧಕದಂತೆ ಕೆಲಸ ಮಾಡುತ್ತದೆ.

ನಾರಿನ ಅಂಶ, ಜೀವಸತ್ವ ಹಾಗೂ ಕಬ್ಬಿಣಾಂಶಗಳ ಆಗರವಾಗಿರುವ ಸಾಂಬ್ರಾಣಿ ಸೊಪ್ಪನ್ನು ಹಾಗೆಯೇ ಜಗಿದು ತಿನ್ನಬಹುದು. ಇದು ಹೆಚ್ಚಾಗಿ ಭಾರತದಲ್ಲಿ ಮುಖ್ಯವಾಗಿ ದಕ್ಷಿಣಭಾರತದಲ್ಲಿ ಇದರ ಬಳಕೆ ಹೆಚ್ವು. ಅಲಂಕಾರಕ್ಕಾಗೂ,ಮನೆಮದ್ದಿಗೂ, ಅಹಾರದಲ್ಲೂ ಇದನ್ನು ಬಳಸಲಾಗುತ್ತದೆ. ಈ ಸಾಂಬಾರ ಬಳ್ಳಿಯಿಂದ ಹಲವಾರು ರೀತಿಯ .ಸಮಸ್ಯೆಗಳನ್ನು ಗುಣಪಡಿಸಿಕೊಳ್ಳಬಹುದು. ಹಾಗಾದರೆ ಅವುಗಳು ಯಾವುದು ಎಂದು ನೋಡೋಣ ಬನ್ನಿ ಚಿಕ್ಕ ಮಕ್ಕಳಿಗೆ ಕೆಮ್ಮು ಕಫ ಜ್ವರ ನೆಗಡಿ ಬಂದರೆ ಸಾಕು ತಂದೆ ತಾಯಿಯರು ಹೆದರಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾರೆ ಆದರೆ ಸಂಬಾರ ಬಳ್ಳಿ ಇದ್ದರೆ ಸಾಕು ಅವರ ಎಲ್ಲ ಸಮಸ್ಯೆಗಳನ್ನು ಹೋಗಲಾಡಿಸಬಹುದು ಹೇಗೆ ಗೊತ್ತೇ.

ಸಂಬಾರ ಎಲೆ ಗಳನ್ನು ತೆಗೆದುಕೊಂಡು ಅದನ್ನು ಚೆನ್ನಗೂ ಜಜ್ಜಿ ಅದರ ರಸಕ್ಕೆ ಸ್ವಲ್ಪ ಜೇನು ತುಪ್ಪವನ್ನು ಬೆರೆಸಿ ಮಕ್ಕಳಿಗೆ ಕುಡಿಸುತ್ತ ಬಂದರೆ ಮಕ್ಕಳು ಸಮಸ್ಯೆಯಿಂದ ದೂರವಾಗುತ್ತಾರೆ. ಸಂಬಾರ ಎಲೆಗಳನ್ನು ಬೆಂಕಿಯಲ್ಲಿ ಹಾಕಿದಾಗ ಅದರಿಂದ ಬರುವ ಹೊಗೆಯನ್ನು ಮಕ್ಕಳಿಗೆ ಕುಡಿಸಿದರೆ ಮಕ್ಕಳ ಶೀತ ಬೇಗ ವಾಸಿಯಾಗುತ್ತದೆ. ಹಾಗೂ ಸಂಬಾರ ಎಲೆಗಳನ್ನು ಅರೆದು ಅದರ ರಸವನ್ನು ಮೂಗಿಗೆ ಹಾಕಿಕೊಂಡರೆ ನೆಗಡಿ. ಶೀತ ಹೋಗುತ್ತದೆ. ಸಂಬಾರ ಎಲೆಗಳನ್ನು ಅರೆದು ಅದರ ರಸದ ಜೊತೆಗೆ ಸ್ವಲ್ಪ ಸೊಪ್ಪು ಸೇರಿಸಿ ಹಣೆಗೆ ಹಚ್ಚಿಕೊಂಡರೆ ತಲೆನೋವು ಹೋಗುತ್ತದೆ. ಮೈ ಕೈಯಲ್ಲ ತುರಿಕೆ. ಕೆಂಪು ಗುಳ್ಳೆಗಳು.ಕಜ್ಜಿ. ಬೆವರು ಸಲೆ. ಗಾಯ ಆಗಿದ್ದರೆ ಆಗ ಸಂಬಾರ ಎಲೆಗಳ ರಸವನ್ನು ಮೈ ಕೈ ಗೆ ಹಚ್ಚಿಕೊಂಡರೆ ಎಲ್ಲ ಗುಣವಾಗುತ್ತದೆ.

ಸಂಬಾರ ಎಲೆಗಳ ರಸಕ್ಕೆ ಸ್ವಲ್ಪ ಮೊಸರು. ಹಾಗೂ ಸ್ವಲ್ಪ ಜೇನು ತುಪ್ಪ ಬೆರೆಸಿಕೊಂಡು ಚರ್ಮಕ್ಕೆ ಹಚ್ಚಿಕೊಂಡರೆ ಚರ್ಮದ ಕಾಂತಿ ಹೆಚ್ಚುತ್ತದೆ ಹಾಗೂ ಚರ್ಮದ ಕಲೆಗಳು ಹೋಗಿ ಚರ್ಮ ಮೃದು ಆಗುತ್ತದೆ. ಸಂಬಾರ ಎಲೆಗಳಿಂದ ತಯಾರಿಸಿದ ಜ್ಯೂಸ್ ಅನ್ನು ಬಾಣಂತಿಯರು ಕುಡಿಯುತ್ತ ಬಂದರೆ ಅವರ ಎದೆ ಹಾಲು ವೃದ್ಧಿಯಾಗುತ್ತದೆ. ಹೆಣ್ಣು ಮಕ್ಕಳ ಋತುಸ್ರಾವದ ಸಮಸ್ಯೆಗೂ ಸಹ ಈ ಸಂಬಾರ ಎಲೆಗಳು ಸಹಾಯ ಆಗುತ್ತವೆ. ಚೇಳು ಕಡಿದು ಹೊದ್ದಾಡುತ್ತಿದ್ದರೆ ಆಗ ಈ ಸಂಬಾರ ಎಲೆಗಳ ರಸವನ್ನು ಕಡಿತದ ಜಾಗಕ್ಕೆ ಹಾಕಿ ಆ ಎಲೆಯಿಂದನೆ ಆ ಗಾಯವನ್ನು ಕಟ್ಟಿದರೆ ಬೇಗ ಗುಣವಾಗುತ್ತದೆ.

ಕಿವಿ ನೋವು ಕಿವಿ ಸರಿಯಾಗಿ ಕೇಳಿಸುವುದಿಲ್ಲ ಎಂದು ಹೊದ್ದಾಡುವವರು ಸಂಬಾರ ಎಲೆಗಳ ರಸವನ್ನು ಕಿವಿಗೆ ಬಿಟ್ಟುಕೊಳ್ಳುವುದರಿಂದ ಕಿವಿ ನೋವು ಕಡಿಮೆಯಾಗುತ್ತದೆ. ಗ್ಯಾಸ್ಟ್ರಿಕ್ ಸಮಸ್ಯೆ ಇರುವವರು ಸಂಬಾರ ಎಲೆಗಳ ಜ್ಯೂಸ್ ಅಥವಾ ಈ ಎಲೆಗಳಿಂದ ಆಹಾರವನ್ನು ತಯಾರಿಸಿಕೊಂಡು ಸೇವಿಸುತ್ತಾ ಬಂದರೆ ಗ್ಯಾಸ್ಟ್ರಿಕ್ ಸಮಸ್ಯೆ ಹೋಗುತ್ತದೆ. ನರಗಳ. ಮೂಳೆಗಳ ಸಮಸ್ಯೆ ಇರುವವರು ಸಹ ಸಂಬಾರ ಎಲೆಗಳಿಂದ ತಯಾರಿಸಿದ ಆಹಾರವನ್ನು ಸೇವಿಸಬೇಕು. ಮಕ್ಕಳಿಗೆ ಜ್ವರ ಬಂದಾಗ ಸಂಬಾರ ಎಲೆಗಳನ್ನು ಸ್ವಲ್ಪ ಬಿಸಿ ಮಾಡಿ ನೆತ್ತಿಯ ಮೇಲೆ ಇಟ್ಟರೆ ಜ್ವರ ಬೇಗ ಹೋಗುತ್ತದೆ. ಸಂಬಾರ ಎಲೆಗಳನ್ನು ತಿಂದರೆ ಅರಿಶಿಣ ಕಾಮಾಲೆ ವಾಸಿಯಾಗುತ್ತದೆ. ಸಂಬಾರ ಎಲೆಗಳನ್ನು ಜೀರಿಗೆ, ಎಳ್ಳಿನೊಂದಿಗೆ ಹುರಿದು ಅದಕ್ಕೆ ಕಾಯಿತುರಿ ಜೊತೆ ರುಬ್ಬಿ ಅದಕ್ಕೆ ಉಪ್ಪು, ಮಜ್ಜಿಗೆ ಹಾಕಿ ತಂಬುಳಿ ಮಾಡಿ ಕುಡಿದರೆ ಪಿತ್ತದ ಸಮಸ್ಯೆಗಳು ಗುಣವಾಗುತ್ತದೆ.

ಸಂಬಾರ ಎಲೆಯ ಜೊತೆ ಸ್ವಲ್ಪ ಉಪ್ಪು ಸೇರಿಸಿ ತಿಂದರೆ ಜೀರ್ಣಶಕ್ತಿ ವೃದ್ಧಿಸುತ್ತದೆ. ಸಂಬಾರ ಎಲೆಗಳ ಮೇಲೆ ಸ್ವಲ್ಪ ಎಳ್ಳೆಣ್ಣೆ ಹಾಕಿ ಅದನ್ನು ಬಿಸಿ ಮಾಡಿ ತಲೆಗೆ ಹಚ್ಚುವುದರಿಂದ ತಲೆ ತಂಪಾಗುತ್ತದೆ. ಅಷ್ಟೇ ಅಲ್ಲ ಕಣ್ಣುರಿಯೂ ಕಡಿಮೆಯಾಗುತ್ತದೆ. ಸಂಬಾರ ಎಲೆಗಳ ರಸವನ್ನು ತೆಗೆದು ಗಂಟೆಗೊಮ್ಮೆ ಒಂದು ಚಮಚದಷ್ಟು ಕಾಯಿಸಿ ಆರಿಸಿದ ನೀರಿನಲ್ಲಿ ಹಾಕಿ ಕುಡಿದರೆ ಕಾಲರಾ ಹತೋಟಿಗೆ ಬರುವುದು. ತೆಂಗಿನ ಹಾಲಿನೊಂದಿಗೆ ಸಂಬಾರ ಎಲೆಗಳ ರಸವನ್ನು ಬೆರೆಸಿ ಕುಡಿದರೆ ಅಲ್ಸರ್ ಗುಣವಾಗುತ್ತದೆ ಈ ಎಲೆಗಳನ್ನು ಚಟ್ನಿ, ತಂಬುಳಿ ರೀತಿಯ ರುಚಿಕರ ಅಡುಗೆಗಳನ್ನು ತಯಾರಿಸಬಹುದು. ನೋಡಿ ಈ ಸಂಬಾರ ಎಲೆಗಳು ಎಷ್ಟೆಲ್ಲ ಗುಣಗಳನ್ನು ಹೊಂದಿದೆ ಹಾಗಾಗಿ ನೀವು ಸಹ ನಿಮ್ಮ ಮನೆಯಲ್ಲಿ ಈ ಒಂದು ಗಿಡವನ್ನು ನೆಟ್ಟು ಇದರ ಲಾಭಗಳನ್ನು ಪಡೆದುಕೊಳ್ಳಿ.

LEAVE A REPLY

Please enter your comment!
Please enter your name here