ನಿಮ್ಮ ಇಂದಿನ ರಾಶಿ ಭವಿಷ್ಯ ಹೇಗಿದೆ ತಿಳಿದುಕೊಳ್ಳಿ

0
729

ಮೇಷ: ನಿಮ್ಮ ಯಶಸ್ಸನು ಕಂಡು ನಿಮಗೆ ತೊಂದರೆ ಕೊಡುವವರೇ ಹೆಚ್ಚಾಗಿದ್ದಾರೆ, ದಿನದ ಅಂತ್ಯದ ವೇಳೆಗೆ ಧನ ಲಾಭ ಆಗಲಿದೆ ನೀವು ನಿಮ್ಮ ರಾಶಿಗೆ ಮತ್ತಷ್ಟು ಅದೃಷ್ಟ ತರಲು ಶನಿ ದೇವರಿಗೆ ಕಪ್ಪು ಬಣ್ಣದ ಎಳ್ಳಿನ ಬತ್ತಿ ಹಚ್ಚಿ ಬನ್ನಿ ನಿಮಗೆ ಶುಭ ವಾಗಲಿದೆ.
ವೃಷಭ: ತಾಯಿಯ ಆರೋಗ್ಯದ ಕಡೆಗೆ ನಿಮ್ಮ ಹೆಚ್ಚಿನ ಗಮನ ಇರಲಿ. ನಿಮ್ಮ ನೆರವಿನಿಂದ ಸಹೋದರ ಅಥವ ಸಹೋದರಿಗೆ ಹೆಚ್ಚಿನ ಅನುಕೂಲ. ಮನೆಯಲ್ಲಿ ಶಾಂತಿ ನೆಮ್ಮದಿ ದೊರೆಯಲಿದೆ. ಸಾಧ್ಯ ಆದರೆ ಹನುಮಾನ್ ಚಾಲೀಸ ಓದಿ ಶುಭ ಆಗುತ್ತದೆ ನಿಮಗೆ.

ಮಿಥುನ: ಸಾಲ ಪಡೆದುಕೊಂಡಿದ್ದಾರೆ ಸಾಲಗಾರರ ಕಾಟ ನಿಮಗೆ ಎದುರಾಗಲಿದೆ, ಕೆಲವು ದಿನಗಳಿಂದ ಆರ್ಥಿಕ ಸಂಕಷ್ಟದ ಸಮಸ್ಯೆಗೆ ಸಿಲುಕಿ ಹಾಕಿಕೊಂಡಿದ್ದೀರಿ, ಮುನ್ನೆಚರಿಕೆ ಕ್ರಮ ಇಲ್ಲದೆ ಯಾವುದೇ ರೀತಿಯ ಹಣದ ವ್ಯವಹಾರ ಮಾಡಬೇಡಿ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗಲು ಹನುಮಂತನ ದರ್ಶನ ಪಡೆದು ಎಳ್ಳಿನ ದೀಪ ಹಚ್ಚಿ ಬನ್ನಿ ಶುಭ ಸುದ್ದಿ ಸಿಗಲಿದೆ ನಿಮಗೆ.
ಕಟಕ: ಅನ್ಯರು ಮಾಡಿದ ತಪ್ಪುಗಳಿಗೆ ನೀವು ಶಿಕ್ಷೆ ಅನುಭವಿಸುವುದು ಈ ರೀತಿ ನಿಮಗೆ ಹಲವು ಬಾರಿ ಆಗಿದ್ದರು ಇಂದು ನೀವು ಹೆಚ್ಚಿನ ಜಾಗ್ರತೆಯಿಂದ ಇರುವುದು ಸೂಕ್ತ ಆಗಿದೆ, ಆಪಾದನೆ ನಿಮ್ಮ ಮೇಲೆ ಹೊರಿಸುವ ಸಾಧ್ಯತೆ ಇರುವುದರಿಂದ ಯಾವುದೇ ವಿಷಯಕ್ಕೂ ಮುನ್ನುಗಬೇಡಿ. ನಿಮಗೆ ಶುಭ ಆಗಲು ನೀವು ಹನುಮಂತ ದೇವರ ದರ್ಶನ ಪಡೆದು ಕರ್ಪೂರ ದೀಪ ಹಚ್ಚಿ ಒಳ್ಳೇದು ಆಗಲಿದೆ.

ಸಿಂಹ: ಹೊಸ ಉದ್ಯೋಗ ಸಿಗುವ ಸಾಧ್ಯತೆ. ಮದ್ವೆ ಆಗದ ಜನಕ್ಕೆ ಕಂಕಣ ಕೊಡಿ ಬರುವ ಸಾಧ್ಯತೆ ಹೆಚ್ಚಿದೆ. ಗೃಹಿಣಿಯರಿಗೆ ಆರೋಗ್ಯದಲ್ಲಿ ಹೆಚ್ಚಿನ ಅಭಿವೃದಿಆಗಲಿದೆ. ಈ ದಿನ ನಿಮಗೆ ಉತ್ತಮವಾಗಿದೆ. ನಿಮ್ಮ ರಾಶಿಗೆ ಮತ್ತಷ್ಟು ಶುಭ ಕಾಲ ಬರಲು ಸಂಜೆ ಸಮಯ ಸಾಧ್ಯ ಆದರೆ ಒಮ್ಮೆ ಹನುಮಾನ್ ಚಾಲೀಸ ಓದಿ ವಿಶೇಷ ಫಲ ಸಿಗಲಿದೆ.
ಕನ್ಯಾ: ಪತ್ನಿಯ ಆರೋಗ್ಯದ ವಿಷಯದಲ್ಲಿ ಸ್ವಲ್ಪ ಏರು ಪೇರು ಆಗಬಹುದು. ಬರಹಗಾರರಿಗೆ ಒಂದು ವಿಶೇಷ ದಿನ ಆಗಲಿದೆ. ಯಾವುದೇ ಕೆಲಸ ಶುರು ಮಾಡುವ ಮೊದಲು ನಿಮ್ಮ ಕುಲ ದೇವರ ಪ್ರಾರ್ಥನೆ ಮಾಡಿ ಶುರು ಮಾಡಿದ್ರೆ ನಿಮಗೆ ಯಾವುದೇ ಸಮಸ್ಯೆ ಬರುವುದಿಲ.

ತುಲಾ: ಹಿರಿಯ ಅಧಿಕಾರಿಗಳಿಗೆ ಉತ್ತರ ಕೊಡುವಾಗ ಮಾತಿನ ಮೇಲೆ ಹಿಡಿತ ಇಟ್ಟುಕೊಂಡೆ ಮಾತನಾಡಿ ಇಲ್ಲವಾದಲ್ಲಿ ಕೆಲವು ನಿಂದನೆ ಆಪಾದನೆ ನಿಮ್ಮ ಮೇಲೆ ಬರುವ ಸಾಧ್ಯತೆ ಹೆಚ್ಚಿದೆ. ವಿದ್ಯಾರ್ಥಿಗಳು ಕಾಲೇಜು ಅಥವ ಶಾಲೆಗೆ ಹೊರಡುವ ಮೊದಲು ಗಣಪತಿಯ ದರ್ಶನ ಪಡೆಯಿರಿ ವಿಶೇಷ ಲಾಭ ಸಿಗಲಿದೆ.
ವೃಶ್ಚಿಕ: ಪ್ರಭಾವಿ ವ್ಯಕ್ತಿಗಳು ನಿಮ್ಮ ಮೇಲೆ ಮಾನಸಿಕವಾಗಿ ಕಿರಿ ಕಿರಿ ಉಂಟು ಮಾಡಬಹುದು. ನಿಮ್ಮ ಆರೋಗ್ಯದ ಕಡೆ ಹೆಚ್ಚಿನ ನಿಗಾ ಇಟ್ಟುಕೊಳ್ಳಿ. ನೀವು ಒಂದು ಶನಿ ದೇವರ ದರ್ಶನ ಪಡೆದುಕೊಂಡು ಎಳ್ಳಿನ ಬತ್ತಿ ಹಚ್ಚಿದರೆ ವಿಶೇಷ ಫಲ ನಿಮಗೆ ದೊರೆಯಲಿದೆ.

ಧನು: ಹೊಸ ವಿಷಯಗಳು ಹೊಸ ಜನರು ನಿಮ್ಮ ಸಂಪರ್ಕಕ್ಕೆ ಬರುವ ಸಾಧ್ಯತೆ ಹೆಚ್ಚಿದೆ. ಸ್ನೇಹಿತರೊಂದಿಗೆ ಪ್ರವಾಸ ಹೊರಡುವ ಸಂಭವ ಇದೆ. ಉದ್ಯೋಗ ಹುಡುಕುವ ಜನಕ್ಕೆ ಸಿಹಿ ಸುದ್ದಿ ಸಿಗಲಿದೆ. ಮನೆಯಿಂದ ಹೊರಡುವ ಮುಂಚೆ ಹಿರಿಯರ ಆಶಿರ್ವಾದ ಪಡೆದುಕೊಳ್ಳಿ ಶುಭವಾಗಲಿದೆ.
ಮಕರ: ಹಿರಿಯ ವ್ಯಕ್ತಿಗಳಿಂದ ನಿಮಗೆ ಪ್ರಶಂಶೆ ದೊರೆಯಲಿದೆ. ನೀವು ಮಾಡುವ ಸಣ್ಣ ಸಣ್ಣ ತಪ್ಪುಗಳನ್ನು ನಿಮ್ಮ ಶತ್ರುಗಳು ಗಮನಿಸುತ್ತಾ ನಿಮಗೆ ತೊಂದರೆ ಮಾಡಲು ತುದಿಕಾಲಲ್ಲಿ ನಿಂತಿರುತ್ತಾರೆ. ನಿಮ್ಮ ಎಲ್ಲ ಸಮಸ್ಯೆಗಳಿಗೆ ಪರಿಹಾರ ಸಿಗಲು ಹನುಮಂತನ ದರ್ಶನ ಪಡೆದು ಎಳ್ಳಿನ ಬತ್ತಿ ಹಚ್ಚಿದರೆ ಶುಭಆಗಲಿದೆ.

ಕುಂಭ: ಕೆಲವು ಸ್ನೇಹಿತರೇ ನಿಮ್ಮ ಹೆಸರು ದುರುಪಯೋಗ ಪಡಿಸಿಕೊಳ್ಳುವ ಸಾಧ್ಯತೆ ಇದೆ. ಸ್ನೇಹಿತರ ಮಾತು ಕೇಳಿ ಯಾವುದೇ ಬಂಡವಾಳ ಹೊಡಿಕೆ ಮಾಡಬೇಡಿ. ಸಂಜೆ ಸಮಯದಲ್ಲಿ ಶನಿ ದೇವರ ದರ್ಶನ ಪಡೆದುಕೊಂಡು ದೇವರಿಗೆ ಎಳ್ಳಿನ ಬತ್ತಿ ಹಚ್ಚಿದರೆ ನಿಮಗೆ ಶುಭಆಗಲಿದೆ.
ಮೀನ: ನಿಮ್ಮ ಶುಭ ಸ್ಥಾನ ಚೆನ್ನಾಗಿ ಇರುವುದರಿಂದ ನಿಮಗೆ ಅಧಿಕವಾಗಿ ಧನ ಲಾಭ ಆಗುವ ಸಾಧ್ಯತೆ ಇರುತ್ತದೆ. ನೀವು ಅತೀ ಹೆಚ್ಚು ಉಷ್ಣ ಸ್ವಭಾವದವರು ಆದರಿಂದ ನಿಮಗೆ ಸಣ್ಣ ಪುಟ್ಟ ಅಲರ್ಜಿ ಸಂಭಂದ ಪಟ್ಟ ಆರೋಗ್ಯ ಸಮಸ್ಯೆ ಬರುತ್ತಲೇ ಇರುತ್ತದೆ. ನೀವು ಇಂದು ಆಂಜನೇಯ ಸ್ವಾಮಿ ದರ್ಶನ ಪಡೆದು ಕರ್ಪೂರ ದೀಪ ಹಚ್ಚಿ ನಿಮಗೆ ಶುಭಆಗಲಿದೆ.

LEAVE A REPLY

Please enter your comment!
Please enter your name here