ನೀವು ಈ ತಪ್ಪು ಮಾಡಿದ್ರೆ ಮೂತ್ರ ಪಿಂಡದಲ್ಲಿ ಕಲ್ಲಿನ ಸಮಸ್ಯೆ ಬರಬಹುದು

0
1294

ಇತ್ತೀಚಿನ ದಿನಗಳಲ್ಲಿ ಎಲ್ಲರನ್ನು ಕಾಡುತ್ತಿರುವ ಸಮಸ್ಯೆ ಎಂದರೆ ಮೂತ್ರ ಪಿಂಡದಲ್ಲಿ ಕಲ್ಲುಗಳು ಇರುವುದು ಹಾಗಾದರೆ ಮೂತ್ರ ಪಿಂಡಕ್ಕೆ ಕಲ್ಲುಗಳು ಹೇಗೆ ಸೇರಿಕೊಳ್ಳುತ್ತವೆ ಇದರಿಂದ ಹೇಗೆ ತಪ್ಪಿಸಿಕೊಳ್ಳುವುದು ನೋಡೋಣ ಬನ್ನಿ. ಇತ್ತೀಚಿನ ದಿನಗಳಲ್ಲಿ ಹೊಟ್ಟೆನೋವು ಬಂದರೆ ಏನೋ ತಿಂದಿರಬೇಕು ಆಹಾರ ಸರಿಯಿರಲಿಲ್ಲ ಎಂದು ಯಾವುದೋ ಮಾತ್ರೆ ತೆಗೆದುಕೊಂಡು ಸುಮನಾಗುತ್ತೇವೆ ಆದರೆ ಹಾಗೆ ಪದೇ ಪದೇ ಹೊಟ್ಟೆನೋವು ಪಕ್ಕೆ ನೋವು ಬಂದಾಗ ವೈದ್ಯರ ಬಳಿ ಹೋಗಿ ಪರೀಕ್ಷೆ ಮಾಡಿಸಿಕೊಳ್ಳುತೇವೆ ಆಗಲೇ ಗೊತ್ತಾಗುವದು ಮೂತ್ರ ಪಿಂಡದಲ್ಲಿ ಕಲ್ಲು ಸೇರಿಕೊಂಡಿಕೊಂಡಿದೆ ಎಂದು. ಇದಕ್ಕೆ ಆಸ್ಪತ್ರೆಯಲ್ಲಿ ಮೊದಲು ಕೊಡುವ ಔಷದಿ ಎಂದರೆ ಹೆಚ್ಚು ನೀರು ಕುಡಿಯಲು ಮೂತ್ರ ಪಿಂಡದಲ್ಲಿ ಸಣ್ಣ ಸಣ್ಣ ಕಲ್ಲುಗಳು ಇದ್ದಾರೆ ಅದಕ್ಕೆ ಹೆಚ್ಚು ನೀರು ಕುಡಿಯುವ ಮೂಲಕ ಈ ಸಮಸ್ಯೆ ಇಂದ ದೂರವಾಗಬಹುದು ಆದರೆ ಈ ಸಮಸ್ಯೆ ಅಷ್ಟು ಸುಲಭವಾಗಿ ಹೋಗುವುದಿಲ್ಲ ಮತ್ತೆ ಮತ್ತೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ

ಮೂತ್ರ ಪಿಂಡದಲ್ಲಿ ಕಲ್ಲುಗಳು ಉಂಟಾಗಲು ಕಾರಣಗಳು ಏನು ಅಂದ್ರೆ. ಮೂತ್ರ ಪಿಂಡದಲ್ಲಿ ಕಲ್ಲುಗಳು ಉಂಟಾಗಲು ಮುಖ್ಯ ಕಾರಣ ಮೂತ್ರದಲ್ಲಿರುವ ಖನಿಜಾಂಶಗಳು ಮತ್ತು ನೀರಿನಾಂಶ ಕಡಿಮೆಯಾಗಿ ದೇಹದಲ್ಲಿ ಕಾಣಿಸುವ ಡೀಹೈಡ್ರೇಶನ್. ನಾವು ನಿತ್ಯ ಸೇವಿಸುವ ಆಹಾರಗಳಲ್ಲಿ ಕ್ಯಾಲ್ಸಿಮ್ ಎಂಬುದು ಇರಬೇಕು ಆದರೆ ಅತಿಯಾಗಿ ಇರಬಾರದು ಹೌದು ನಾವು ಸೇವಿಸುವ ಆಹಾರದಲ್ಲಿ ಹೆಚ್ಚಿನ ಮಟ್ಟದ ಕ್ಯಾಲ್ಸಿಮ್ ಇದ್ದರು ಸಹ ಮೂತ್ರಪಿಂಡದಲ್ಲಿ ಕಲ್ಲುಗಳು ಆಗುವ ಸಾಧ್ಯತೆ ಇರುತ್ತದೆ. ನಾವು ವಾಸ ಮಾಡುವ ಸ್ಥಳ ಹೆಚ್ಚು ಉಷ್ಣಾಂಶ ದಿಂದ ಕೂಡಿದ್ದರೆ ಆಗ ನಮ್ಮ ದೇಹಕ್ಕೆ ಹೆಚ್ಚು ನೀರು ಬೇಕಾಗುತ್ತದೆ ನಾವು ಹೆಚ್ಚು ನೀರು ಕುಡಿಯದ ಸಂದರ್ಭದಲ್ಲಿ ಮೂತ್ರಪಿಂಡದಲ್ಲಿ ಕಲ್ಲು ಸೇರಿಕೊಳ್ಳುತ್ತದೆ .

ಹೆಚ್ಚು ಮಾಂಸ ಸೇವನೆ ಕೂಡ ಮೂತ್ರ ಪಿಂಡದಲ್ಲಿ ಕಲ್ಲುಗಳನ್ನು ಉತ್ಪತ್ತಿ ಮಾಡುತ್ತದೆ. ಹೆಚ್ಚು ಮೀನುಗಳ ಸೇವನೆಯನ್ನು ಮಾಡಬಾರದು ಇದು ಮೂತ್ರ ಪಿಂಡದಲ್ಲಿ ಕಾಲುಗಳನ್ನು ಉತ್ಪತ್ತಿ ಮಾಡುತ್ತದೆ. ಹೆಚ್ಚು ಟೊಮೊಟೊ ಬಸಳೆಸೊಪ್ಪು ಸೇವಿಸುವುದನ್ನು ಕಡಿಮೆ ಮಾಡಬೇಕು ಇದು ಸಹ ಮೂತ್ರ ಪಿಂಡದಲ್ಲಿ ಕಲ್ಲುಗಳನ್ನು ಉತ್ಪತ್ತಿ ಮಾಡುತ್ತದೆ. ಹೆಚ್ಚು ಮದ್ಯಪಾನ ಧೂಮಪಾನ ಸೇವನೆ ಮಾಡುವುದರಿಂದ ಸಹ ಮೂತ್ರ ಪಿಂಡದಲ್ಲಿ ಕಲ್ಲುಗಳನ್ನು ಉತ್ಪತ್ತಿ ಮಾಡುತ್ತದೆ. ಹೆಚ್ಚು ಹೆಚ್ಚು ಗಟ್ಟಿ ಪದಾರ್ಥಗಳ ಸೇವನೆಯನ್ನು ಮಾಡುವುದರಿಂದ ಸಹ ಮೂತ್ರಪಿಂಡದಲ್ಲಿ ಕಲ್ಲುಗಳನ್ನು ಉತ್ಪತ್ತಿ ಮಾಡುತ್ತದೆ. ಮೂತ್ರದಲ್ಲಿನ ನೀರಿನಾಂಶ ಕಡಿಮೆಯಾಗಿ ಖನಿಜಾಂಶ ಹೆಚ್ಚಿರುವಾಗ ಅವು ಶೇಖರಣೆಗೊಂಡು ಹರಳಿನ ರೂಪ ಪಡೆದು ಕಲ್ಲಾಗುತ್ತವೆ. ಜೊತೆಗೆ ಬೇಸಿಗೆಯಲ್ಲಿ ಬೆವರುವುದು ಹೆಚ್ಚುವುದರಿಂದ ದೇಹದಲ್ಲಿ ನೀರಿನಾಂಶದ ಕೊರತೆ ಯಾಗುತ್ತದೆ. ಮತ್ತು ಮೂತ್ರದಲ್ಲಿ ಖನಿಜಾಂಶ ಹೆಚ್ಚಿ ಮೂತ್ರ ಪಿಂಡದಲ್ಲಿ ಕಲ್ಲುಗಳು ಆಗುತ್ತದೆ

ಅತಿ ಹೆಚ್ಚು ಪ್ರೋಟೀನ್ ಸೇವನೆ ಅಂಶವನ್ನು ಹೊಂದಿರುವ ಉಪ್ಪು ಅಥವಾ ಸೋಡಿಯಂ ಹೆಚ್ಚಿರುವ ಪದಾರ್ಥಗಳು ಫ್ರಕ್ಟೋಸ್ ಹೆಚ್ಚಿರುವ ಪೇಯಗಳ ಸೇವನೆ, ಅತಿಹೆಚ್ಚು ಕಾಫಿ, ಚಹಾ ಸೇವನೆ, ಆಕ್ಸಲೇಟ್ಸ್ ಹೆಚ್ಚಿರುವ ಪಾಲಕ್ ಸೊಪ್ಪು, ರೂಬಾರ್ಬ್ ಮುಂತಾದ ಪದಾರ್ಥಗಳು, ಕೃತಕ ಸಿಹಿಕಾರಕಯುಕ್ತ ದ್ರವ್ಯಗಳು, ಪ್ಯೂರಿನ್ ಹೆಚ್ಚಿರುವ ಪದಾರ್ಥಗಳನ್ನು ಹೆಚ್ಚು ಹೆಚ್ಚು ಸೇವನೆ ಮಾಡುವದರಿಂದ ಮೂತ್ರ ಪಿಂಡದಲ್ಲಿ ಕಲ್ಲುಗಳು ಉತ್ಪತ್ತಿ ಆಗುತ್ತವೆ. ಲಿಂಬೆ, ಕಿತ್ತಲೆ ಮತ್ತು ತರಕಾರಿಗಳಲ್ಲಿ ಹೆಚ್ಚಿರುವ ಸಿಟ್ರೇಟ್ ಅಂಶ ಕಡಿಮೆಯಾದಾಗ ಮೂತ್ರ ಪಿಂಡದಲ್ಲಿ ಕಲ್ಲು ಕಾಣಿಸಿಕೊಳ್ಳುತ್ತದೆ ದೇಹದಲ್ಲಿ ಸೋಡಿಯಂ ಹೆಚ್ಚಿ, ಪೊಟಾಶಿಯಂ ಕಡಿಮೆಯಾದಾಗಲೂ ಮೂತ್ರ ಪಿಂಡದಲ್ಲಿ ಕಲ್ಲುಂಟಾಗುತ್ತದೆ.

ಮೂತ್ರ ಪಿಂಡದಲ್ಲಿ ಕಲ್ಲುಗಳು ಇದೆ ಎಂದು ಹೇಗೆ ಗೊತ್ತಗುತ್ತದೆ ಎಂದು ನೋಡೋಣ ಬನ್ನಿ. ಮೂತ್ರ ಪಿಂಡದಲ್ಲಿ ಕಲ್ಲುಗಲು ಇದ್ದಾಗ ಪಕ್ಕೆ ಅಥವಾ ಪಾರ್ಶ್ವ ಭಾಗದಲ್ಲಿ ನೋವು ಕಂಡು ಬರುತ್ತದೆ. ಕೆಲವೊಮ್ಮೆ ರಕ್ತ ಮಿಶ್ರಿತ ಕೆಂಪು ಬಣ್ಣದ ಮೂತ್ರ ಕಾಣಿಸುತ್ತದೆ. ಮೂತ್ರ ಪಿಂಡದಲ್ಲಿ ಕಲ್ಲು ಇದ್ದಾಗ ವಾಕರಿಕೆ, ವಾಂತಿ, ಮೂತ್ರಮಾಡುವಾಗ ನೋವು, ಕೀವು, ಜ್ವರ ಕೂಡಾ ಕಾಣಿಸಿಕೊಳುತ್ತಡೇ ಕಲ್ಲಿನಿಂದ ಮೂತ್ರವಹನೆಗೆ ಅಡ್ಡಿಯಾದಾಗ ಮೂತ್ರಕೋಶದ ಕಾರ್ಯಕ್ಷಮತೆ ಕಮ್ಮಿಯಾಗುತ್ತದೆ ಮತ್ತು ಊತ ಕಾಣಿಸಿಕೊಳ್ಳುತ್ತದೆ. ಹಾಗಾದರೆ ಈ ಮೂತ್ರ ಪಿಂಡದಲ್ಲಿ ಕಲ್ಲುಗಳು ಆಗದ ಆಗೇ ನೋಡಿಕೊಳ್ಳುವುದು ಹೇಗೆ ಎಂದು ನೋಡೋಣ ಬನ್ನಿ. ಮೊದಲು ದಿನಕ್ಕೆ ನಾಲ್ಕರಿಂದ ಐದು ಲೀಟರ್ ನೀರು ಕುಡಿಯಬೇಕು ಜೊತೆಗೆ ಹೆಚ್ಚು ದ್ರವಯುಕ್ತ ಪದಾರ್ತಗಳನ್ನು ಸೇವಿಸಬೇಕು

ಸಿಟ್ರಿಕ್ ಆಮ್ಲ ಇರುವ ಆಹಾರವನ್ನು ಹೆಚ್ಚಾಗಿ ಸೇವಿಸಬೇಕು. ಎಳನೀರು, ಪೈನಾಪಲ್, ಬಾಳೆಹಣ್ಣು, ಕರ್ಬೂಜ, ಕಲ್ಲಂಗಡಿ, ಒಣದ್ರಾಕ್ಷಿ ಇವುಗಳಲ್ಲಿ ಹೆಚ್ಚಿನ ಪೊಟಾಶಿಯಂ ಅಂಶ ಇರುವುದರಿಂದ ಇವುಗಳ ಬಳಕೆ ಹೆಚ್ಚಾಗಿರಬೇಕು. ಪಾಲಕ್ ದಂಟಿನ ಸೊಪ್ಪು ಹುಳಿಸೊಪ್ಪು ಇತ್ಯಾದಿಗಳ ಬಳಕೆಯನ್ನು ಕಡಿಮೆ ಮಾಡಬೇಕು. ಹೆಚ್ಚು ಮಾತ್ರೆಗಳ ಸೇವನೆಯನ್ನು ಮಾಡಬಾರದು. ಎಳನೀರನ್ನು ಹೆಚ್ಚು ಕುಡಿಯುವುದು ಒಳ್ಳೆಯದು. ಬಾಳೆದಿಂಡಿನಿಂದ ಆಹಾರವನ್ನು ತಯಾರಿಸಿಕೊಂಡು ಸೇವಿಸುವುದು ಒಳ್ಳೆಯದು. ಪ್ಯುರಿನ್ ಮತ್ತು ಯುರಿಕ್ ಆಸಿಡ್ ಹೆಚ್ಚಿರುವ ಅಣಬೆ, ಪಾಲಕ್ ಸೊಪ್ಪು, ಹೂಕೋಸು, ಬ್ರೊಕೊಲಿ, ಮೀನು, ಮಾಂಸ ಇತ್ಯಾದಿಗಳನ್ನು ಹೆಚ್ಚಾಗಿ ಸೇವಿಸುವುದು ಒಳ್ಳೆಯದಲ್ಲ. ಬಾರ್ಲಿ ಅಕ್ಕಿಯ ನೀರು, ಮತ್ತು ಹುರುಳಿ ಬೀಜವನ್ನು ಬೇಯಿಸಿದ ನೀರನ್ನು ಸೇವಿಸುವುದು ತುಂಬಾ ಒಳ್ಳೆಯದು. ಒಟ್ಟಾರೆ ನಿಮ್ಮ ಮೂತ್ರಪಿಂಡದಲ್ಲಿ ಕಲ್ಲುಗಳು ಆಗಿ ನಂತರ ನೋವು ಅನುಭವಿಸುವ ಮೊದಲು ಆ ಸಮಸ್ಯೆ ಬರದ ಹಾಗೆ ನೋಡಿಕೊಳ್ಳುವುದು ಒಳ್ಳೆಯದು

LEAVE A REPLY

Please enter your comment!
Please enter your name here