ಈ ಊರಿನಲ್ಲಿರುವ ಹನುಮಂತನ ಬಾಲಕ್ಕೆ ಬೆಣ್ಣೆ ಹಚಿದ್ರೆ ನಿಮ್ಮ ಎಲ್ಲ ಸಮಸ್ಯೆ ದೂರ ಆಗುತ್ತೆ

0
915

ರಾಮಾಯಣದಲ್ಲಿ ರಾವಣನಿಂದ ಅಪಹರಿಸಿದ್ದ ಸೀತೆಯನ್ನು ಕಂಡುಹಿಡಿಯುವುದಕ್ಕೆ ರಾಮನು ಹನುಮಂತನನ್ನು ಕಳುಹಿಸುತ್ತಾನೆ ಅಲ್ವಾ….! ಇದರ ಬಗ್ಗೆ ಎಲ್ಲರಿಗೂ ತಿಳಿದಿರುತ್ತದೆ. ರಾಮಾಯಣದ ಕಥೆ ಎಲ್ಲರಿಗು ಗೊತ್ತಿದೆ ರಾವಣ ಅಪರಹಣ ಮಾಡಿದ ಸೀತೆಯನನ್ನು ಕಂಡು ಹಿಡಿಯಲು ಹನುಮಂತನನ್ನು ಕಳಿಸಿದ್ದು. ಆಗ ಹನುಮಂತ ಸೀತೆಯನ್ನು ಹುಡುಕಿಕೊಂಡು ಲಂಕೆಗೆ ತೆರಳಿ ಆಕೆ ಇರುವ ಸ್ಥಳವನ್ನು ಕಂಡುಹಿಡಿಯುತ್ತಾರೆ. ಅಂಜನೇಯ ನನ್ನು ನೋಡಿದ ರಾಕ್ಷಸರು ಹನುಮಂತ ದೇವರ ಬಾಲಕ್ಕೆ ಬೆಂಕಿ ಹಚ್ಚುತ್ತಾರೆ. ಆದ್ರೆ ಬಲಶಾಲಿ ಹನುಮಂತ ಸುಮ್ಮನೆ ಇರುವರೇ ಆ ಬೆಂಕಿಯಿಂದ ಸಂಪೂರ್ಣ ಲಂಕೆಗೆ ಬೆಂಕಿ ಹಚ್ಚುತ್ತಾರೆ. ಆಗ ಅಗ್ನಿಯ ಕೆನ್ನಾಲಿಗೆಗೆ ಲಂಕೆಯು ಅರ್ಥ ಬಾಹವಷ್ಟು ಸುಟ್ಟು ಬಸ್ಮವಾಗುತ್ತದೆ. ಅಷ್ಟು ಸಮಯಕ್ಕೆ ಆಗಲೇ ಹನುಮಂತನ ಬಾಲ ಅರ್ಥದಷ್ಟು ಸುಟ್ಟು ಹೋಗಿರುತ್ತದೆ. ಹನುಮಂತ ಸಾಕಷ್ಟು ಶಕ್ತಿ ಹೊಂದಿದ್ದರು ಅದನ್ನು ಆತ ಅಂದೇ ಸರಿ ಮಾಡಿಕೊಂಡಿದ್ದರು ಇಂದಿಗೂ ಕೆಲವು ಭಕ್ತರು ಹನುಮಂತ ದೇವರ ಬಾಲವನ್ನು ಬೆಂಕಿಯಿಂದ ಉಪಶಮನ ಮಾಡುತ್ತಲೇ ಇದ್ದಾರೆ ಇದು ನಿಮಗೆ ವಿಚಿತ್ರ ಅನ್ಸಿದ್ರು ಇದು ಸತ್ಯ ಘಟನೆ.

ಈಗಿನ ಕನ್ಯಾಕುಮಾರಿಯ ಸುಚಿದ್ರಂ ಎಂಬ ಕ್ಷೇತ್ರ ಇದೆ ಅಲ್ಲಿಗೆ ಸಾಕ್ಷಾತ್ ತ್ರಿಮೂರ್ತಿಗಳು ಸೇರಿ ಒಂದೇ ಲಿಂಗದಲ್ಲಿ ಸೇರಿದ್ದಾರೆ ಇದು ಉದ್ಬವ ಲಿಂಗ ಎಂಬುದು ಪುರಾಣಗಗಲ್ಲಿ ಉಲ್ಲೇಖ ಇದೆ. ಈ ಕ್ಷೇತ್ರ ಪ್ರವಾಸಿ ತಾಣವು ಹೌದು ಹಾಗೆಯೇ ಪ್ರತಿ ನಿತ್ಯ ಇಲ್ಲಿಗೆ ಸಾವಿರಾರು ಜನ ಭೇಟಿ ನೀಡಿ ತಮ್ಮ ಕಷ್ಟಗಳನ್ನು ಪರಿಹಾರ ಮಾಡಿಕೊಳ್ಳುತ್ತಾರೆ. ಇದೇ ದೇವಾಲಯದಲ್ಲಿ ಸರಿ ಸುಮಾರು ಇಪ್ಪತ್ತು ಅಡಿ ಎತ್ತರದ ಆಂಜನೇಯ ಸ್ವಾಮಿ ಮೂರ್ತಿ ಸಹ ಇದೆ. ಇದು ಇಡೀ ಪ್ರಪಂಚದಲ್ಲಿ ಅತೀ ಪುರಾತನ ಮೂರ್ತಿ ಎಂದು ಹೇಳಿದರು ತಪ್ಪಾಗಲಾರದು ಏಕೆ ಅಂದ್ರೆ ಇಲ್ಲಿನ ಮೂರ್ತಿಗೆ ಹತ್ತಾರು ಸಾವಿರ ವರ್ಷಗಳ ಇತಿಹಾಸ ಇದೆ . ಇಲ್ಲಿನ ಶಕ್ತಿಶಾಲಿ ಆಂಜನೇಯನಿಗೆ ಪ್ರತಿ ನಿತ್ಯವೂ ವಿಶೇಷ ಪೂಜೆಗಳು ನಡೆಯುತ್ತಲೇ ಇರುತ್ತದೆ.

ಭಕ್ತರ ನಂಬಿಕೆ ಪ್ರಕಾರ ಇಲ್ಲಿ ಸಾಕ್ಷಾತ್ ಹನುಮಂತ ದೇವರು ನೆಲೆಸಿದ್ದಾರೆ ಎಂಬ ಭಾವನೆ ಇಲ್ಲಿನ ಜನರಲ್ಲಿದೆ. ಅಂದು ಲಂಕೆಯಲ್ಲಿ ಹನುಮಂತ ದೇವರ ಬಾಲ ಸುಟ್ಟು ಹೋಗಿರುವುದಕ್ಕೆ ಇಲ್ಲಿನ ಜನರು ಅಂಜನೇಯ ಸ್ವಾಮಿಯ ಬಾಲಕ್ಕೆ ಬೆಣ್ಣೆಯನ್ನು ಹಚ್ಚಿ ಶೀಗ್ರವಾಗಿ ಉಪಶಮನ ಅಗಲಿ ಎಂದು ಹಾರೈಸುತ್ತಾರೆ. ಹೀಗೆ ಹನುಮಂತ ದೇವರ ಬಾಲಕ್ಕೆ ಬೆಣ್ಣೆಯನ್ನು ಹಚ್ಚಿ ತಮ್ಮ ಸಮಸ್ಯೆಗಳು ಕಷ್ಟಗಳು ಪಾರು ಮಾಡುವಂತೆ ಅಂಜನೇಯ ಸ್ವಾಮಿಗೆ ಮೊರೆ ಹೋಗುತ್ತಾರೆ.

ಇದು ವಿಚಿತ್ರ ಆದರು ಅಲ್ಲಿ ನೆಲೆಸಿರುವ ಸಾಕ್ಷಾತ್ ಹನುಮಂತ ದೇವರು ಕಷ್ಟಗಳನ್ನು ಹೇಳಿಕೊಂಡವರಿಗೆ ನಿಷ್ಠೆಯಿಂದ ಪೂಜೆ ಮಾಡುವವರಿಗೆ ತಮ್ಮನು ನಂಬಿ ಬಂದವರಿಗೆ ಆರೋಗ್ಯ ಐಶ್ವರ್ಯ ಸುಖ ಶಾಂತಿ ನೀಡುತ್ತಾನೆ. ಈಗಾಗಲೇ ಲಕ್ಷಾಂತರ ಜನಕ್ಕೆ ಈ ಹನುಮಂತ ನಿಂದ ಸಹಾಯ ಆಗಿದೆ ಎಂಬುದು ಇಲ್ಲಿನ ಜನರ ಮಾತು. ಹನುಮಂತನ ಬಾಲಕ್ಕೆ ಬೆಣ್ಣೆ ಹಚ್ಚುವ ಕೆಲಸ ನಿನ್ನೆ ಮೊನ್ನೆಯಿಂದ ನಡೆದಿದ್ದು ಅಂತೂ ಅಲ್ಲ ಇದಕ್ಕೆ ಸರಿ ಸುಮಾರು 10 ಸಾವಿರ ವರ್ಷಗಳಷ್ಟು ಇತಿಹಾಸ ಇದೆ ಎಂದು ಪುರಾಣದಲ್ಲಿ ಉಲ್ಲೇಖ ಇದೆ.

LEAVE A REPLY

Please enter your comment!
Please enter your name here