ನಮ್ಮ ದೇಹದಲ್ಲಿರುವ ವಿಷವನ್ನು ತೆಗೆದುಹಾಕುವ ಆಹಾರಗಳು ಇವುಗಳೇ

0
799

ಮನುಷ್ಯನ ದೇಹದಲ್ಲಿ ಇತೀಚೆಗೆ ವಿಷಯುಕ್ತ ಪದಾರ್ಥಗಳು ಸೇರಿಕೊಳ್ಳುವುದು ತುಂಬಾ ಸುಲಭ ಆದರೆ ಅದನ್ನು ನಮ್ಮ ದೇಹದಿಂದ ಹೊರ ಹಾಕಬೇಕು ಎಂದರೆ ತುಂಬಾ ಕಷ್ಟದ ಕೆಲಸಗಳನ್ನು ನಾವು ಅನುಭವಿಸಬೇಕು. ನಾವು ಸೇವಿಸುವ ಆಹಾರದಲ್ಲಿ ಇರುವ ವಿಷಯುಕ್ತ ಪದಾರ್ಥಗಳನ್ನು ಹೊರಹಾಕುವ ಕೆಲಸ ಮಾಡುವುದು ಯಕೃತ್ತು. ನಮ್ಮ ದೇಹದಲ್ಲಿ ಇರುವ ರಕ್ತದಲ್ಲಿನ ಕಲುಷಿತ ಅಂಶವನ್ನು ಹೊರಹಾಕುತ್ತದೆ. ನಮ್ಮ ದೇಹದಲ್ಲಿನ ಕಲುಷಿತ ಅಂಶವನ್ನು ತೆಗೆಯುವ ಕೆಲಸ ಮಾಡುವುದು ಮೂತ್ರ ಪಿಂಡ. ಕರುಳು. ಶ್ವಾಸಕೋಶ. ಚರ್ಮದ ಮೂಲಕವು ಸಹ ಹೊರ ತೆಗೆಯುವ ಕೆಲಸವನ್ನು ಮಾಡುತ್ತದೆ ನಾವು ಸೇವನೆ ಮಾಡಿದ ಯಾವುದೇ ಆಹಾರಗಳಲ್ಲಿ ಇರುವ ಕಲುಷಿತ ಅಂಶವನ್ನು ತೆಗೆದು ಹಾಕಿ ನಮ್ಮ ಆರೋಗ್ಯವನ್ನು ಕಾಪಾಡುವುದಕ್ಕೆ ಸಹಾಯ ಮಾಡುವ ಕೆಲವು ಆಹಾರಗಳ ಬಗ್ಗೆ ತಿಳಿಯೋಣ. ಆ ಆಹಾರಗಳನ್ನು ಸೇವಿಸದಾಗ ನಮ್ಮ ದೇಹದಲ್ಲಿ ಯಾವುದೇ ರೀತಿಯ ಕಲುಷಿತ. ವಿಷಯುಕ್ತ ಅಂಶಗಳು ಇದ್ದರು ಅದನ್ನು ಹೊರ ಹಾಕಿ ನಮ್ಮ ಆರೋಗ್ಯವನ್ನು ಕಾಪಾಡುವುದರಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ ಅಗದರೆ ಅವುಗಳು ಯಾವುವು ಎಂದು ನೋಡೋಣ ಬನ್ನಿ.

ಮೊಟ್ಟ ಮೊದಲು ಎಲ್ಲರ ಅಡುಗೆ ಮನೆಯಲ್ಲಿ ನಿತ್ಯ ಬಳಕೆ ಮಾಡುವ ಅರಶಿನ ಇದನ್ನು ಯಾರು ನೋಡಿಲ್ಲ ಹೇಳಿ. ಇದನ್ನು ಯಾರು ಉಪಯೋಗಿಸುವುದಿಲ್ಲ ಹೇಳಿ ಅಲ್ಲವೇ ಎಲ್ಲರೂ ಸಹ ಇದರ ಬಗ್ಗೆ ತಿಳಿದುಕೊಂಡಿರುತ್ತೀರಿ. ಅದು ಏನು ಎಂದು ಯೋಚಿಸುತ್ತಿದ್ದಿರ ಅದೇ ಅರಶಿನ. ಅರಶಿನದಲ್ಲಿ ಅನಾದಿ ಕಾಲದಿಂದಲೂ ಆಯುರ್ವೇದ ಅಂಶಗಳು ಅಡಗಿವೆ ಎಂದು ನಂಬಿ ಹಿಂದಿನ ಕಾಲದಿಂದಲೂ ಔಷಧಿಯ ಗುಣಗಳು ಹೊಂದಿದೆ ಎಂದು ಉಪಯೋಗಿಸುತ್ತ ಬಂದಿದ್ದಾರೆ ಆದರೆ ಅದು ಸತ್ಯ ಎಂದು ಇಂದಿನ ವಿಜ್ಞಾನಿಗಳು ಸಹ ದೃಢಪಡಿಸಿದ್ದಾರೆ. ಈ ಅರಶಿನದಲ್ಲಿ ಅಂಟಿಆಕ್ಸಿಡೆಂಟ್ ಆಗು ರೋಗ ನಿರೋಧಕ ಗುಣಗಳು ಇವೆ ಇದು ದೇಹದ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ.

ಈ ಅರಶಿನವು ದೇಹದ ಮೇಲೆ ಆಗುವ ಯಾವುದೇ ರೀತಿಯ ಸಮಸ್ಯೆಗಳನ್ನು ಸಹ ಗುಣಪಡಿಸುವ ಗುಣಗಳನ್ನು ಹೊಂದಿದೆ ಹಾಗೆಯೇ ದೇಹದ ಒಳಗಿನ ಸಮಸ್ಯೆಗಳನ್ನು ಗುಣಪಡಿಸುವ ಗುಣವನ್ನು ಹೊಂದಿದೆ. ಜೊತೆಗೆ ಈ ಅರಶಿನದಲ್ಲಿ ವಿಷವನ್ನು ಹೋಗಲಾಡಿಸುವ ಗುಣಗಳು ಸಹ ಇದೆ. ಆ ಅರಶಿನ ಯಕೃತ್ತಿನಲ್ಲಿ ಇರುವ ವಿಷಕಾರಕ ಅಂಶಗಳನ್ನು ತೆಗೆದುಹಾಕುತ್ತದೆ ಹಾಗೂ ವಿಸರ್ಜನಾಂಗಗಳನ್ನು ಬಲಬಡಿಸುತ್ತದೆ. ಜೊತೆಗೆ ಇದರಲ್ಲಿ ಇರುವ ಉಪಶಮನಕಾರಿ ಅಂಶವು ಜೀವಕೋಶಗಳಿಗೆ ಹಾನಿಯಾಗುವುದನ್ನು ತಡೆಯುತ್ತದೆ. ಅರಶಿನ ಎಂಬುದು ಮನುಷ್ಯನ ಆರೋಗ್ಯವನ್ನು ಕಾಪಾಡುವ ಒಳ್ಳೆಯ ಮನೆ ಮದ್ದು .

ಬೆಳ್ಳುಳ್ಳಿ ಒಂದು ಸಲ್ಪರ್ ಅನ್ನು ಒಳಗೊಂಡಿರುವ ಆಹಾರವಾಗಿದೆ. ಇದರಲ್ಲಿ ಗಂಧಕದ ಅಂಶ ಸೆಲ್ಪೇಶನ್ ಅನ್ನುವ ಪ್ರಕ್ರಿಯೆ ಮೂಲಕ ಯಕೃತ್ನಲ್ಲಿ ಇರುವ ವಿಷಕಾರಕ ಅಂಶಗಳನ್ನು ಹೊರಹಾಕುತ್ತದೆ. ಜೊತೆಗೆ ಈ ಬೆಳ್ಳುಳ್ಳಿಯ ಸೇವನೆಯನ್ನು ಮಾಡುವುದರಿಂದ ನಮ್ಮ ದೇಹದಲ್ಲಿ ಆಗುವ ಹಲವಾರು ರೀತಿಯ ಸಮಸ್ಯೆಗಳು ಗುಣವಾಗುತ್ತದೆ. ನಿಂಬೆಹಣ್ಣು ಇದರಲ್ಲೂ ಸಿಟ್ರಿಕ್. ಅಂಟಿಆಕ್ಸಿಡೆಂಟ್ ಗುಣಗಳು ಇದ್ದು ಇದನ್ನು ಬಿಸಿನೀರಿಗೆ ಹಾಕಿಕೊಂಡು ಸೇವನೆ ಮಾಡುವುದರಿಂದ ಶೀತ. ನೆಗಡಿ. ಜೀರ್ಣಕ್ರಿಯೆಯಂತಹ ಸಮಸ್ಯೆಗಳು ಹೋಗುತ್ತವೆ. ಹಾಗೂ ಈ ನಿಂಬೆಯಲ್ಲಿ ಹುಳಿ. ಒಗರು. ರುಚಿ ಇದ್ದು ಇದರ ಸೇವನೆಯಿಂದಾಗಿ ಜೀರ್ಣಕ್ಕೆ ಸಹಕಾರಿಯಾಗಿ ಪಿತ್ತರಸವು ಸರಾಗವಾಗಿ ಹರಿಯಲು ಸಹಾಯವಾಗುತ್ತದೆ. ಜೊತೆಗೆ ದೇಹದಲ್ಲಿ ಅಡಗಿರುವ ವಿಷಯುಕ್ತ ಅಂಶವನ್ನು ಹೊರಹಾಕಲು ಸಹಾಯ ಮಾಡುತ್ತದೆ.

ಸೇಬುಗಳು ಇದರಲ್ಲಿ ಹೆಚ್ಚಾಗಿ ನಾರಿನ ಅಂಶವಿದ್ದು ಇದರಲ್ಲಿ ಪೆಕ್ವೀನ್ ಎಂಬ ಅಂಶವು ಕೂಡ ಇದೆ.ಇದು ನಮ್ಮ ಕರುಳನ್ನು ಶುಚಿಮಾಡುತ್ತದೆ. ಹಾಗೂ ದೇಹದಲ್ಲಿ ಅಡಗಿರುವ ವಿಷಯುಕ್ತ ಅಂಶವನ್ನು ಹೊರಹಾಕುತ್ತದೆ. ಹಾಗೂ ಇದರ ಸೇವನೆಯಿಂದ ದೇಹಕ್ಕೆ ಹೆಚ್ಚು ಪೌಷ್ಟಿಕ ಅಂಶ ಸಿಕ್ಕಿ ದೇಹಕ್ಕೆ ಹೆಚ್ಚು ಶಕ್ತಿ ಸಿಗುತ್ತದೆ ಸುಸ್ತು ಕಡಿಮೆಯಾಗುತ್ತದೆ. ಕೊತ್ತಂಬರಿ ಬೀಜಗಳ ಸೇವನೆಯಿಂದ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆಮಾಡಿಕೊಳ್ಳಬಹುದು. ಹಾಗೂ ಸೇವಿಸಿದ ಆಹಾರವನ್ನು ಸುಲಭವಾಗಿ ಜೀರ್ಣಕ್ರಿಯೆ ಮಾಡಿಕೊಳ್ಳಲು ಸಹಾಯವಾಗುತ್ತದೆ. ಕೊತ್ತಂಬರಿ ಸೊಪ್ಪು ಕೊತ್ತಂಬರಿ ಬೀಜಗಳು ದೇಹದಲ್ಲಿ ಅಡಗಿರುವ ವಿಷಯುಕ್ತ ಅಂಶಗಳನ್ನು ಹೊರಹಾಕುತ್ತದೆ. ಹಾಗಾಗಿ ನಿಮ್ಮ ನಿತ್ಯದ ಆಹಾರದಲ್ಲಿ ಕೊತ್ತಂಬರಿ ಸೊಪ್ಪು. ಕೊತ್ತಂಬರಿ ಬೀಜಗಳ ಬಳಕೆಯನ್ನು ಹೆಚ್ಚಾಗಿ ಮಾಡಬೇಕು.

ಬಿಟ್ ರೂಟ್ ಇದರಲ್ಲಿ ಆಂಟಿ ಆಕ್ಸಿಡೆಂಟ್ ಅಂಶವು ಹೆಚ್ಚಿದ್ದು ಯಕೃತ್ತನ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ತುಂಬಾ ಕೆಲಸವನ್ನು ಮಾಡುವಂಥಹದು ಈ ಬಿಟರೂಟ್ ಈ ಬಿಟ್ ರೂಟ್ ಜೊತೆಗೆ ಅದರ ಹಸಿರು ಎಲೆಗಳಲ್ಲಿ ವಿಟಮಿನ್ ಮಿನರಿಲ್ ಆಂಟಿ ಆಕ್ಸಿಡೆಂಟ್ ಹೇರಳವಾಗಿವೆ ಇದನ್ನು ನಮ್ಮ ಅಡುಗೆಯಲ್ಲಿ ಸೇರಿಸಿಕೊಳ್ಳುವುದರಿಂದ ನಮ್ಮ ದೇಹದಲ್ಲಿ ಇರುವ ವಿಷಯುಕ್ತ ಅಂಶವನ್ನು ಹೊರ ಹಾಕಿ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಅಗಸೆ ಬೀಜಗಳು ಇವುಗಳಲ್ಲಿ ನಾರಿನ ಅಂಶ ಹೆಚ್ಚು ಇದ್ದು ಇವುಗಳಲ್ಲಿ ಬೇಗನೆ ಕರಗುವ ಹಾಗೂ ಬೇಗ ಕರಗದೆ ಇರುವ ನಾರಿನ ಅಂಶಗಳು ಇವೆ.ಇವುಗಳನ್ನು ಸೇವಿಸುವುದರಿಂದ ಹಲವಾರು ಕಾಯಿಲೆಗಳನ್ನು ಗುಣಪಡಿಸುತ್ತವೆ. ಅದರಲ್ಲೂ ಮೂತ್ರ ವಿಸರ್ಜನೆ ಸರಾಗವಾಗಿ ಮಾಡುವಂತೆ ಮಾಡುತ್ತದೆ.ಹಾಗೂ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ದೇಹದ ವಿಷಯುಕ್ತ ಅಂಶವನ್ನು ಹೊರಹಾಕುತ್ತದೆ. ಹಾಗಾಗಿ ಆದಷ್ಟು ನಿಮ್ಮ ಆಹಾರದ ಜೊತೆಗೆ ಅಗಸೆ ಬೀಜಗಳನ್ನು ಬಳಸಿ ಆರೋಗ್ಯವನ್ನು ಕಾಪಾಡಿಕೊಳ್ಳಿ.

ನಿತ್ಯ ಹೆಚ್ಚು ಹೆಚ್ಚು ನೀರು ಕುಡಿಯುವುದು ನಾವು ಹೆಚ್ಚು ನೀರು ಕುಡಿದಷ್ಟು ನಮ್ಮ ದೇಹವು ಆರೋಗ್ಯವಾಗಿ ಇರುತ್ತದೆ ಹಾಗೂ ಯಾವುದೇ ರೀತಿಯ ವಿಷ ಅಂಶಗಳು ದೇಹಕ್ಕೆ ಸೇರಿ ಆರೋಗ್ಯವನ್ನು ಕೆಡಿಸುವುದಿಲ್ಲ . ಹಾಗಾಗಿ ಆದಷ್ಟು ಈ ಆಹಾರಗಳನ್ನು ಹೆಚ್ಚು ಸೇವನೆ ಮಾಡಿ ಆರೋಗ್ಯವನ್ನು ಕಾಪಾಡಿಕೊಳ್ಳಿ.

LEAVE A REPLY

Please enter your comment!
Please enter your name here