ಹಾಲಿಗೆ ಬೆಲ್ಲ ಹಾಕೊಂಡು ಕುಡಿದರೆ ಐವತ್ತು ಲಾಭ ಅಂತಾರೆ ಹಿರಿಯರು

0
1160

ನಮ್ಮ ಹಿಂದಿನ ಪೂರ್ವಜರು ಎಂದು ಸಹ ಸಕ್ಕರೆ ಬಳಕೆ ಮಾಡುತಲೇ ಇರಲಿಲ್ಲ ಎಲ್ಲ ಸಿಹಿ ಖಾದ್ಯಗಲಿಗೂ ಮತ್ತು ಹಾಲಿಗೂ ಬೆಲ್ಲವನ್ನೇ ಹಾಕಿಕೊಂಡು ಕುಡಿಯುತ್ತಾ ಇದ್ದರು. ಏಕೆ ಅಂದ್ರೆ ಸಕ್ಕರೆಯಲ್ಲಿ ಎಷ್ಟರ ಮಟ್ಟಿಗೆ ವಿಷ ಇದೆ ಎಂಬುದು ಅವರಿಗೆ ತಿಳಿದಿತ್ತು. ಅವಶ್ಯಕತೆ ಇದೆ ಅಂದ್ರೆ ಮಾತ್ರ ಅವರು ಸಕ್ಕರೆ ಬಳಕೆ ಮಾಡುತ್ತಾ ಇದರು. ಆದ್ರೆ ಇಂದು ನಾವು ನೀವು ಎಲ್ಲರು ನಮ್ಮ ದಿನದ ದೈನಂದಿನ ಚಟುವಟಿಕೆಯಲ್ಲಿ ಸಕ್ಕರೆ ಇಲ್ಲದೆ ಜೀವನ ನಡೆಸುವುದೇ ಇಲ್ಲ. ಬೆಳ್ಳಗೆ ನಾವು ಕುಡಿಯುವ ಕಾಫೀ ಟೀಯಿಂದ ಹಿಡಿದು ಶುಭ ಸಮಾರಂಭಕ್ಕೆ ಹೋದಾಗ ತಿನ್ನುವ ಆಹಾರದಲ್ಲಿ ಸಕ್ಕರೆ ಅಂಶ ಇದ್ದೆ ಇರುತ್ತದೆ.

ಹಾಲು ಎಂಬುದು ಒಂದು ಪರಿಪೂರ್ಣ ಆಹಾರ ಇದ್ದಂತ್ತೆ ಇದು ನಮ್ಮ ದೇಹಕ್ಕೆ ಬೇಕಾದ ಎಲ್ಲ ರೀತಿಯ ಶಕ್ತಿ ವಿಟಮಿನ್ ನೀಡಲು ಇದು ಸಹಾಯ ಮಾಡುತ್ತೆ. ಕೆಲವರಿಗೆ ಹಾಲು ಅಂದ್ರೆ ಸಾಕು ಮೈಲಿ ದೂರ ಓಡುವವರು ನಮ್ಮಲೇ ಇದ್ದಾರೆ ಆದ್ರೆ ಮತ್ತೋ ಕೆಲವರಿಗೆ ಹಾಲು ಅಂದ್ರೆ ಪಂಚಪ್ರಾಣ. ಆದ್ರೆ ಕೆಲವರು ಬರೀ ಕಾಯಿಸಿದ ಹಾಲು ಸೇವನೆ ಮಾಡಿದ್ರೆ ಮತ್ತಷ್ಟು ಜನ ಹಾಲಿಗೆ ಸಕ್ಕರೆ ಬೆರೆಸಿಕೊಂಡು ಕುಡಿಯುವುದು ವಾಡಿಕೆ. ನಮ್ಮ ದೇಹದಲ್ಲಿ ಸಕ್ಕರೆ ಅಂಶ ಹೆಚ್ಚಾಗಿ ಇನ್ಸುಲಿನ್ ಸಕ್ಕರೆಯಲ್ಲಿ ಹೆಚ್ಚಾದರೆ ನಮಗೆ ಶುಗರ್ ಖಾಯಿಲೆ ಬರುವುದು ಗ್ಯಾರೆಂಟಿ ಬಿಡಿ.

ಸಕ್ಕರೆ ತಯಾರು ಮಾಡಬೇಕಾದರೆ ಎಷ್ಟೆಲ್ಲಾ ಕೆಮಿಕಲ್ ಬಳಕೆ ಮಾಡ್ತಾರೆ ಎಂದು ಎಲ್ಲರಿಗು ಗೊತ್ತಿದ್ರು ನಾವು ಸಕ್ಕರೆ ತಿನ್ನವುದು ಮಾತ್ರ ಎಂದೂ ಸಹ ನಿಲ್ಲಿಸಲೇ ಇಲ್ಲ. ನಾವು ತಿನ್ನುವುದಲ್ಲದೆ ನಮ್ಮ ಮಕ್ಕಳಿಗೂ ಹೆಚ್ಚು ಹೆಚ್ಚು ಸಕ್ಕರೆ ಪದಾರ್ಥಗಳು ನೀಡಿ ಅವರಿಗೆ ಆರೋಗ್ಯ ಹಾಳು ಮಾಡುತ್ತಾ ಇದ್ದೇವೆ. ಆದ್ರೆ ಪ್ರತಿ ನಿತ್ಯ ನೀವು ಸಕ್ಕರೆ ಬದಲು ಬೆಲ್ಲದ ಬಳಕೆ ಮಾಡಿದ್ರೆ ನಿಮಗೆ ಯಾವುದೇ ರೀತಿಯ ಸಮಸ್ಯೆ ಬರುವುದಿಲ್ಲ ಇದರ ಜೊತೆಗೆ ನಿಮ್ಮ ಆರೋಗ್ಯದಲ್ಲಿ ಮತ್ತಷ್ಟು ಅಭಿವೃದಿ ಕಾಣುವಿರಿ. ಹಾಲಿನೊಂದಿಗೆ ಮತ್ತು ಇತರೆ ಆಹಾರಗಳೊಂದಿಗೆ ಕೇವಲ ಒಂದು ತಿಂಗಳು ಬೆಲ್ಲ ಬಳಕೆ ಮಾಡಿ ನೋಡಿ ನಂತರ ವ್ಯತ್ಯಾಸ ನೀವೇ ತಿಳಿದುಕೊಳ್ಳಿ.

1.ಬಿಸಿ ಬಿಸಿ ಹಾಲಿಗೆ ಬೆಲ್ಲವನ್ನು ಸೇರಿಸಿ ಕುಡಿದರೆ ಸ್ಥೂಲಕಾಯ ಗುಣವಾಗುತ್ತದೆ. ಬೆಲ್ಲದಲ್ಲಿರುವ ಅನೇಕ ರೀತಿಯ ಔಷದಿ ಗುಣಗಳಿಂದ ಶರೀರದಲ್ಲಿರುವ ಕೊಬ್ಬು ದಿನ ದಿನಕ್ಕೂ ಕಡಿಮೆಯಾಗುತ್ತ ಹೋಗುತ್ತದೆ. ಹೀಗಾಗಿ ನಮ್ಮ ದೇಹದ ತೂಕವನ್ನು ಕಡಿಮೆಯಾಗುತ್ತದೆ. ನಿತ್ಯವೂ ಹೀಗೆ ಬೆಲ್ಲವನು ಸೇವನೆ ಮಾಡಿದ್ರೆ ಶರೀರದ ತೂಕ ಸಮತೋಲನದಲ್ಲಿ ಇರುತ್ತದೆ. 2.ಮಹಿಳೆಯರು ಈಗಂತೂ ಹೆಚ್ಚಾಗಿ ರಕ್ತ ಹೀನತೆ ಸಮಸ್ಯೆಗೆ ಗುರಿಯಾಗಿರುತ್ತಾರೆ. ಬಿಸಿ ಹಾಲಿಗೆ ಒಂದಿಷ್ಟು ಪ್ರಮಾಣದಲ್ಲಿ ಬೆಲ್ಲವನ್ನು ಹಾಕಿ ಕುಡಿಯುವುದರಿಂದ ಇದು ನಿಮ್ಮ ದೇಹದಲ್ಲಿ ರಕ್ತ ಸಾರವಾಗಿ ಆಗುತ್ತದೆ. ಜೊತೆಗೆ ಮಹಿಳೆಯರಿಗೆ ತಿಂಗಳಲ್ಲಿ ಕಾಡುವ ಹೊಟ್ಟೆ ನೋವಿನ ಸಮಸ್ಯೆಗೆ ಉತ್ತಮ ಮದ್ದು ಇದಾಗಿದೆ

3ತಲೆ ಕೂದಲಿನ ಸಮಸ್ಯೆ ತಲೆ ಹೊಟ್ಟು ಏಳುವುದು ಇಂತವರು ಎಷ್ಟೆಲ್ಲಾ ರಾಸಾಯನಿಕ ಮಿಶ್ರಿತ ಬಣ್ಣಗಳನ್ನು ಮತ್ತು ಶಂಪೋ ಹಚ್ಚಿದರು ನಿಮಗೆ ಗುಣ ಆಗದ ಸಮಸ್ಯೆ ನೀವು ಬಿಸಿ ಹಾಲಿಗೆ ಬೆಲ್ಲವನು ಹಾಕಿ ಕುಡಿಯುವುದರಿಂದ ನಿಮಗೆ ದೂರ ಆಗುತ್ತದೆ. 4.ಇದು ಆಂಟಿಬಯೋಟಿಕ್ ನಂತೆ ಕೆಲಸ ಮಾಡುವುದರಿಂದ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚು ಮಾಡಿ ನಮಗೆ ಬರುವ ಸಾಮಾನ್ಯ ಶೀತ ಕೆಮ್ಮು ನೆಗಡಿ ಹಲವರು ರೀತಿಯ ಅಲರ್ಜಿ ಬರದಂತೆ ನಮ್ಮ ದೇಹಕ್ಕೆ ಶಕ್ತಿ ನೀಡುತ್ತದೆ.

5. ವೃದ್ಧಾಪ್ಯದ ಸಮಯದಲ್ಲಿ ಬಹಳಷ್ಟು ಜನಕ್ಕೆ ಮಂಡಿ ನೋವಿನ ಸಮಸ್ಯೆ ಶಾಪವಾಗಿ ಕಾಡುತ್ತೆ. ನಾವು ಎಷ್ಟೇ ಉತ್ತಮ ಆಹಾರ ಸೇವನೆ ಮಾಡಿದರು ಅದು ನಮಗೆ ಕಾಡದೆ ಬಿಡುವುದಿಲ್ಲ. ಈಗಿನಿಂದಲೇ ನಾವು ಮುಂಜಾಗ್ರತೆ ತೆಗೆದುಕೊಂಡರೆ ನಮ್ಮ ವ್ರುದ್ಯಾಪ್ಯ ವಯಸ್ಸಿನಲ್ಲಿ ಬರುವ ಹಲವು ಸಮಸ್ಯೆ ದೂರ ಆಗುತ್ತದೆ. ಇಷ್ಟೆಲ್ಲಾ ಪ್ರಯೋಜನ ಇರುವ ಬಿಸಿ ಹಾಲು ಮತ್ತು ಬೆಲ್ಲ ಸೇವನೆ ಆರೋಗ್ಯಕ್ಕೆ ತುಂಬಾ ಒಳ್ಳೇದು. ಆದಷ್ಟು ಸಕ್ಕರೆ ಪ್ರಮಾಣ ಕಡಿಮೆ ಮಾಡಿ. ಬೆಲ್ಲವನ್ನು ಖರೀದಿ ಮಾಡೋ ಮುಂಚೆ ತಿಳಿಯಿರಿ ಈಗಂತೂ ಮಾರುಕಟೆಯಲ್ಲಿ ವಿವಿಧ ರೀತಿಯ ಬೆಲ್ಲ ನಮಗೆ ದೊರೆಯುತ್ತದೆ. ನಿಮಗೆ ಸಾಧ್ಯ ಆದರೆ ಆಲೆ ಮನೆ ಯಲ್ಲಿ ಸಿಗುವ ಶುದ್ದ ಬೆಲ್ಲ ಬಳಕೆ ಮಾಡಿ. ಬೆಲ್ಲವು ಹೆಚ್ಚು ಬಣ್ಣ ಬರಲು ರಾಸಾಯನಿಕ ಬಳಕೆ ಮಾಡ್ತಾರೆ. ಕೊಂಡುಕೊಳ್ಳುವ ಮುನ್ನ ಹೊಳೆಯುವ ಬೆಲ್ಲವನ್ನು ಕಡಿಮೆ ಮಾಡಿ ಮದ್ಯಮ ಬಣ್ಣದ ಬೆಲ್ಲವನ್ನು ಆಯ್ಕೆ ಮಾಡಿಕೊಳ್ಳಿ. ನಮ್ಮ ವೆಬ್ಸೈಟ್ ಬರವಣಿಗೆಗೆ ವಿಶೇಷ ಕಾಪಿರೈಟ್ಸ್ ಹೊಂದಿದ್ದು ನಕಲು ಮಾಡುವುದು ಶಿಕ್ಷಾರ್ಹ ಅಪರಾಧ. ಶೇರ್ ಮಾಡಿ ನಿಮ್ಮ ಸ್ನೇಹಿತರಿಗೂ ತಿಳಿಸಿ.

LEAVE A REPLY

Please enter your comment!
Please enter your name here