ಈ ದಿನ ನಿಮ್ಮ ರಾಶಿ ಭವಿಷ್ಯ ಹೇಳಿದೆ ತಿಳಿಯಿರಿ

0
581

ಮೇಷ: ಇಂದಿನ ಎಲ್ಲ ಕಾರ್ಯಗಳು ನಿಮಗೆ ಸಿದ್ದಿ ಆಗಲಿದೆ. ಸಾಧ್ಯ ಆದ್ರೆ ಆಫೀಸ್ಗೆ ತೆರಳುವ ಮುಂಚೆ ಅಥವ ಕೆಲಸ ಶುರು ಮಾಡುವ ಮುಂಚೆ ಶಿವನ ದರ್ಶನ ಪಡೆದು ಬಿಲ್ವ ಅರ್ಪಿಸಿ ನಡೆಯಿರಿ ನಿಮ್ಮ ಈ ದಿನ ಶುಭಆಗಲಿದೆ.
ವೃಷಭ : ಊರಿಗೆ ಉಪಕಾರಿ ಮನೆಗೆ ಮಾರಿ ಎಂಬಂತೆ ಹೊರ ಜಗತ್ತಿನ ಕೆಲಸಗಳ ಜೊತೆಗೆ ಮನೆಯಲ್ಲಿರುವ ಮಕ್ಕಳು ಮಡದಿ ಬಗ್ಗೆ ಒಂದಿಷ್ಟು ಆಲೋಚನೆ ಮಾಡಿ. ನಿಮ್ಮ ಇಂದಿನ ಜೇವನದಲ್ಲಿ ಆರ್ಥಿಕವಾಗಿ ಸ್ಥಿರವಾಗಿ ಇರಲಿದೆ. ಆರೋಗ್ಯದ ಕಡೆಗೆ ಒಂದಿಷ್ಟು ಹೆಚ್ಚಿನ ಜಾಗ್ರತೆ ಇರಲಿ.

ಮಿಥುನ: ಹಲವು ದಿನಗಳಿಂದ ಕಾಯುತ್ತಿರುವ ನಿಮ್ಮ ಆಸ್ಯೆಗಳು ಇಂದು ಈಡೇರುವ ಶುಭ ಸಮಯ ಬಂದಿದೆ. ಮಕ್ಕಳು ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಶುಭ ತೋರುವರು. ಆಫೀಸ್ನಲ್ಲಿ ಉನ್ನತ ಅಧಿಕಾರಿಗಳಿಂದ ಉತ್ತಮ ಸ್ಪಂದನೆ ಸಿಗಲಿದೆ. ಸಾಧ್ಯ ಆದ್ರೆ ಶಿವನ ದರ್ಶನ ಪಡೆದುಕೊಳ್ಳಿ ಇಂದು.
ಕಟಕ: ಸಣ್ಣ ವ್ಯವಹಾರ ಮಾಡುವವರಿಗೆ ಮತ್ತು ಗೃಹಿಣಿಯರಿಗೆ ಧನ ಲಾಭ ಪ್ರಾಪ್ತಿ. ಕುಟುಂಬದ ಸದಸ್ಯರಿಂದಲೇ ಮಾನಸಿಕ ಕಿರಿ ಕಿರಿ. ನಿಮ್ಮ ವಿರುದ್ದ ನಿಮ್ಮ ಕುಟುಂಬದ ಸದಸ್ಯರೇ ಇಲ್ಲ ಸಲ್ಲದ ಆರೋಪ ಹೊರಿಸುವ ಸಾಧ್ಯತೆ ಹೆಚ್ಚಾಗಿದೆ.

ಸಿಂಹ: ಯಾವುದೇ ಕೆಲಸ ಮಾಡುವ ಮೊದಲು ಗಣೇಶನನ್ನು ಪ್ರಾರ್ಥನೆ ಮಾಡುವುದು ಮರೆಯಬೇಡಿ. ದಿನದ ಅಂತ್ಯದ ಸಮಯದಲ್ಲಿ ಶುಭ ಸಮಾಚಾರ ಜೊತೆಗೆ ಧನ ಲಾಭ ಆಗಲಿದೆ. ಇಂದು ನೀವು ಶಿವನ ಸಹಸ್ರನಾಮ ಪಾರಾಯಣ ಮಾಡಿದರೆ ವಿಶೇಷ ಲಾಭ ಪಡೆಯುತ್ತೀರಿ.
ಕನ್ಯಾ: ನಿಮ್ಮ ಉತ್ತಮ ಗುಣಗಳಿಂದಲೇ ದಿನ ದಿನಕ್ಕೂ ನಿಮ್ಮ ಕೀರ್ತಿ ಎಲ್ಲೆಡೆ ಹೆಚ್ಚಾಗುತ್ತಾ ಹೋಗುತ್ತದೆ. ನಿಮ್ಮನು ಸಹಿಸಲಾಗದ ಶತ್ರುಗಳು ಮಾನಸಿಕ ಕಿರಿ ಕಿರಿ ಮಾಡುವ ಸಾಧ್ಯತೆ ಇರುತ್ತದೆ. ಇಂದು ನೀವು ಸಂಜೆ ಆರು ಗಂಟೆ ನಂತರ ಶಿವನ ದರ್ಶನ ಪಡೆಯಿರಿ

ತುಲಾ: ಕೆಲಸದ ಒತ್ತಡ ನಿಮ್ಮ ಮೇಲೆ ಇದ್ದರು ನಿಮ್ಮ ಆತ್ಮ ಸ್ಥೈರ್ಯದಿಂದಲೇ ಎಲ್ಲವನು ಗೆಲ್ಲುತ್ತೀರಿ. ನಿಮ್ಮ ಮಕ್ಕಳ ಓದಿನ ಕಡೆಗೆ ನೀವು ಸ್ವಲ್ಪ ನಿಗಾ ವಹಿಸಿಕೊಳ್ಳಿ. ಸಾಧಾರಣ ಕೆಮ್ಮಿನ ಸಮಸ್ಯೆ ಬರುವ ಸಾಧ್ಯತೆ ಇರುತ್ತದೆ. ಸಂಜೆ ಆರು ಗಂಟೆ ನಂತರ ಶಿವನ ದೇಗುಲಕ್ಕೆ ತೆರಳಿ ದೀಪ ಹಚ್ಚಿ ಶುಭ ಫಲ ಸಿಗಲಿದೆ.
ವೃಶ್ಚಿಕ: ನೀವು ಇಂದು ಉಹಿಸದೆ ಇದ್ದರು ಹಲವು ರೀತಿಯ ಲಾಭಗಳು ನಿಮಗೆ ಸಿಗಲಿದೆ. ಅನ್ಯರ ಮಾತುಗಳು ಕೇಳಿ ಯಾವುದೇ ಹೊಡಿಕೆ ಮಾಡಬೇಡಿ. ನಿಮ್ಮ ದಾಂಪತ್ಯ ಜೀವನದಲ್ಲಿ ಹೆಚ್ಚಿನ ಸುಖ ಶಾಂತಿ ನಿಮಗೆ ದೊರೆಯಲಿದೆ. ಅವಿವಾಹಿತರಿಗೆ ಉತ್ತಮ ಕಂಕಣ ಭಾಗ್ಯ ಪ್ರಾಪ್ತಿ.

ಧನಸ್ಸು: ಜನ್ಮ ಸ್ಥಾನದಲ್ಲಿ ಇರುವ ಶನಿಯು ನಿಮಗೆ ಆಲಸ್ಯ ಉಂಟು ಮಾಡುವರು. ಆದರಿಂದ ಶನಿ ದೇವರ ಧ್ಯಾನ ಇರುವ ಸ್ಥಳದಲ್ಲೇ ಮಾಡಿಕೊಳ್ಳಿ. ಮಹತ್ತರ ಕೆಲಸಗಳು ಮುಂದೂಡಿಕೆ ಮಾಡುವುದೇ ನಿಮಗೆ ಶ್ರೇಷ್ಠ. ಕೆಲಸ ಶುರು ಮಾಡುವ ಮೊದಲು ಹಿರಿಯರ ಆಶಿರ್ವಾದ ಪಡೆಯಿರಿ.
ಮಕರ: ನಿಮ್ಮ ಕುಟುಂಬದ ಜನರೊಂದಿಗೆ ಹಣಕಾಸಿನ ವೈಷಮ್ಯ ಬರಲಿದೆ. ಇಂದು ನೀವು ತಾಯಿಯ ಆರೋಗ್ಯದ ಬಗ್ಗೆ ಹೆಚ್ಚಿನ ಜಾಗ್ರತೆ ತೆಗೆದುಕೊಳ್ಳಿ. ದಿನದ ಅಂತ್ಯದ ವೇಳೆಗೆ ಸಹೋದರ ಅಥವ ಸಹೋದರಿಯಿಂದ ನಿಮಗೆ ಶುಭವಾರ್ತೆ ಬರುವ ಸಾಧ್ಯತೆ ಹೆಚ್ಚಿದೆ.

ಕುಂಭ: ನಿಮ್ಮ ಜೊತೆಗೆ ಇರುವ ಜನರೇ ನಿಮ್ಮನು ಕಾಲು ಎಳೆದು ಅಪಹಾಸ್ಯ ಮಾಡುವುದು ಉಂಟು. ಸಂಜೆ ಐದು ಗಂಟೆ ನಂತರ ನೀವು ಶಿವನ ದರ್ಶನ ಪಡೆದುಕೊಂಡು ಸಾಧ್ಯ ಆದ್ರೆ ಶಿವನಿಗೆ ಬಿಲ್ವ ಪತ್ರೆ ಅರ್ಪಣೆ ಮಾಡಿ. ಈ ದಿನ ಆರ್ಥಿಕವಾಗಿ ಯಾವುದೇ ಸಮಸ್ಯೆ ಇರುವುದಿಲ್ಲ ಉತ್ತಮವಾಗಿದೆ.
ಮೀನ: ಆಫೀಸಿನಲ್ಲಿ ಅಥವ ವಿದ್ಯಾರ್ಥಿಗಳು ಕಾಲೇಜಿನಲ್ಲಿ ಹಿರಿಯ ವ್ಯಕ್ತಿಗಳಿಂದ ಪ್ರಶಂಶೆಗೆ ಪಾತ್ರರಾಗುವಿರಿ. ನಿಮ್ಮನು ನಂಬಿರುವ ಕೆಲವು ಸ್ನೇಹಿತರಿಗೆ ನಿಮ್ಮಿಂದ ಸಹಾಯ ಆಗಲಿದೆ. ಕೆಲಸ ಶುರು ಮಾಡುವ ಮೊದಲು ಶಿವನ ದರ್ಶನ ಪಡೆಯಿರಿ ಇಂದು ಉತ್ತಮ ದಿನ ನಿಮ್ಮದಾಗಲಿದೆ.

LEAVE A REPLY

Please enter your comment!
Please enter your name here