ಈ ವಾರ ನಿಮ್ಮ ರಾಶಿ ಭವಿಷ್ಯ ಹೇಗಿದೆ ಮತ್ತು ಅದಕ್ಕೆ ಪರಿಹಾರ ತಿಳಿಯಿರಿ

0
722

ಮೇಷ: ಈ ವಾರ ನೀವು ಮನಸಲ್ಲಿ ಅಂದುಕೊಂಡ ಮತ್ತು ನೀವು ಯೋಜನೆ ಹಾಕಿಕೊಂಡಿರುವ ಎಲ್ಲ ಕೆಲಸ ಕಾರ್ಯಗಳು ಯಾವುದೇ ವಿಘ್ನ ಅಡೆ ತಡೆಗಳು ಇಲ್ಲದೆ ಯಶಸ್ವಿ ಆಗುವುದು. ನಿಮ್ಮ ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಜೀವನದಲ್ಲಿ ಗೆಲುವು ಸಾಧಿಸುವಿರಿ. ಆದಾಯ ಖರ್ಚು ವೆಚ್ಚಗಳು ಸ್ಥಿರವಾಗಿದೆ. ಸ್ಥಿರ ಮತ್ತು ಚರ ಆಸ್ತಿಗಳ ವಿಷದ್ಯಲ್ಲಿ ನಿಮ್ಮ ಪರಿಚಯದ ಜನರಿಂದಲೇ ನಿಮಗೆ ಮೋಸ ಆಗುವ ಸಾಧ್ಯತೆಗಳು ಹೆಚ್ಚಾಗಿದೆ. ನಿಮ್ಮ ದೇಹದ ಆರೋಗ್ಯದ ಬೆಗ್ಗೆ ಸಂಪೂರ್ಣ ಕಾಳಜಿ ತೆಗೆದುಕೊಳ್ಳಿ. ಹಣಕಾಸಿನ ವಿಷಯದಲ್ಲಿ ಹೆಚ್ಚಿನ ಜವಾಬ್ದಾರಿಯಿಂದ ನಡೆದುಕೊಂಡರೆ ಈ ವಾರ ಉತ್ತಮವಾಗಲಿದೇ. ತಾಯಿ ದುರ್ಗೆಯ ಜಪ ಮಾಡಿದ್ರೆ ಹಲವು ರೀತಿಯ ಕಷ್ಟಗಳು ದೂರ ಆಗುತ್ತದೆ.

ವೃಷಭ: ಹಣಕಾಸಿನ ವಿಷಯದಲ್ಲಿ ಸಣ್ಣ ಪುಟ್ಟ ವೈಮನಸ್ಯ ಉಂಟಾಗುವ ಸಾಧ್ಯತೆ. ಯಾವುದೇ ಆಸ್ತಿ ಖರೀದಿ ಮಾಡುವ ಮೊದಲು ಹತ್ತಾರು ಬಾರಿ ಯೋಚಿಸಿ ಮುನ್ನಡೆಯಿರಿ.ನೀವು ನಿಮ್ಮ ಮಾತಿನ ಹಿಡಿತ ಇಲ್ಲದಿದ್ದರೆ ನಿಮ್ಮೊಂದಿಗೆ ಇರುವ ಬಂಧುಗಳು ಮತ್ತು ಸ್ನೇಹಿತರನ್ನು ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಿದೆ. ಬಾಲ್ಯದ ಸ್ನೇಹಿತರನ್ನು ಭೇಟಿ ಮಾಡುವ ಅವಕಾಶ ದೊರೆಯಲಿದೆ. ಈ ವಾರ ಸಣ್ಣ ಕೈಗಾರಿಕೆ ಉದ್ಯಮ ಹೊಂದಿರುವವರಿಗೆ ಹೆಚ್ಚಿನ ಧನ ಲಾಭ ಪ್ರಾಪ್ತಿಯಾಗಲಿದೆ. ದೇಹದ ಆರೋಗ್ಯದಲ್ಲಿ ಸಣ್ಣ ಪುಟ್ಟ ಬದಲಾವಣೆ. ಮಂಗಳವಾರ ತಪ್ಪದೇ ಹನುಮಂತನ ದರ್ಶನ ಪಡೆದು ಎಳ್ಳಿನ ದೀಪ ಹಚ್ಚಿದರೆ ಈ ವಾರ ನಿಮಗೆ ಶುಭವಾಗಲಿದೆ.

ಮಿಥುನ: ದಂಪತಿಗಳಲ್ಲಿ ವೈಶಮ್ಯ ಮೂಡುವುದು. ಹಲವು ಗೊಂದಲಕಾರಿ ವಿಷಯಗಳು ನಿಮ್ಮನು ಸುತ್ತುವರೆಯುವ ಸಾಧ್ಯತೆ ಇರುವುದರಿಂದ. ಯಾರಿಗೂ ಮಾತು ಕೊಟ್ಟು ನೀವು ಸಿಲುಕ ಬೇಡಿ. ತಂದೆ ತಾಯಿಯ ಆರೋಗ್ಯದಲ್ಲಿ ವ್ಯತ್ಯಸ ಉಂಟಾಗಿ ನಿಮ್ಮ ಮೇಲೆ ಹೆಚ್ಚಿನ ಜವಾಬ್ದಾರಿ ಬೀಳಲಿದೆ. ಸಣ್ಣ ಸಣ್ಣ ವಿಷಯಗಳಿಗೆ ಮಕ್ಕಳೊಂದಿಗೆ ಜಗಳ ಮಾಡಿಕೊಳ್ಳದೆ ಎಲ್ಲರನು ಸಮನಾಗಿ ಕಾಣಿರಿ. ಶೇರು ಬಂಡವಾಳ ಹೊಡಿಕೆ ಮಾಡಲು ಹೋಗಬೇಡಿ. ಆಫೀಸಿನಲ್ಲಿ ನಿಮ್ಮ ಮೇಲಿನ ಅಧಿಕಾರಿಗಳಿಂದ ಸಣ್ಣ ಸಣ್ಣ ವಿಷಯಗಳಿಗೂ ನಿಮ್ಮ ಮೇಲೆ ನಿಂದನೆ ಆರೋಪ ಬರುವ ಸಾಧ್ಯತೆ ಹೆಚ್ಚಾಗಿದೆ. ನೀವು ಬುಧವಾರ ಗಣಪತಿಯ ದರ್ಶನ ಪಡೆದುಕೊಳ್ಳಿ ನಿಮಗೆ ಶುಭವಾಗಲಿದೆ.

ಕಟಕ: ನಿಮ್ಮ ಎಲ್ಲ ರೀತಿಯ ವ್ಯವಹಾರ ಮತ್ತು ಉದ್ಯಮದಲ್ಲಿ ಈ ವಾರ ನಿಮ್ಮ ನಿರೀಕ್ಷೆಗಿಂತ ಉತ್ತಮ ಲಾಭ ನಿಮಗೆ ಸಿಗಲಿದೆ. ಸಂಸಾರದಲ್ಲಿ ಕಳೆದ ವಾರಕ್ಕೆ ಹೋಲಿಸಿದರೆ ಈ ವಾರ ನಿಮಗೆ ಹೆಚ್ಚಿನ ಸುಖ ಶಾಂತಿ ನೆಮ್ಮದಿ ದೊರೆಯಲಿದೆ. ವಿದ್ಯಾರ್ಥಿಗಳು ಓದಿನ ಕಡೆ ಹೆಚ್ಚಿನ ಗಮನವಿಟ್ಟು ಓದಿದರೆ ಉತ್ತಮ ಭವಿಷ್ಯ ನಿಮಗೆ ಸಿಗಲಿದೆ. ಆರೋಗ್ಯದಲ್ಲಿ ನಿಮಗೆ ಹೆಚ್ಚಿನ ಸುಧಾರಣೆ ಕಂಡು ಬರಲಿದೆ. ನಿಮ್ಮಿಂದ ಸಾಲ ಪಡೆದವರು ತಾವಾಗೆಯೇ ತೀರುವಳಿ ಮಾಡಲಿದ್ದಾರೆ. ಸಹೋದರನೊಂದಿಗೆ ಉತ್ತಮ ಬಂದವ್ಯ ಉಂಟಾಗಲಿದೆ. ನಿಮ್ಮ ರಾಶಿಗೆ ಈ ವಾರ ಮತ್ತಷ್ಟು ಅದೃಷ್ಟ ಬರಲು ಸೋಮವಾರ ಬೆಳ್ಳಗೆ ಶಿವನ ದರ್ಶನ ಪಡೆದುಕೊಳ್ಳಿ.

ಸಿಂಹ: ಈ ವಾರ ಕೌಟುಂಬಿಕ ಭಿನಾಭಿಪ್ರಾಯ ಬರುವ ಸಾಧ್ಯತೆ ಇರುವುದರಿಂದ ಆರಂಭಿಕ ಹಂತದಲ್ಲೇ ಅದನ್ನು ಚಿವುಟು ಹಾಕಿರಿ. ನಿಮ್ಮ ಸ್ನೇಹಿತರರಿಂದ ನಿಮಗೆ ಹೆಚ್ಚಿನ ಸಹಾಯ ಆಗಲಿದೆ. ಆದ್ರೆ ನಿಮ್ಮ ಬಂಧುಗಳಿಂದ ಯಾವುದೇ ರೀತಿಯ ಸಹಾಯ ನಿರೀಕ್ಷೆ ಮಾಡಬೇಡಿ. ಶುಭ ಸಮಾರಂಭಗಳಿಗೆ ತೆರಳುವ ಅವಕಾಶ ನಿಮಗೆ ಸಿಗಲಿದೆ. ವ್ಯಾಪಾರದಲ್ಲಿ ಹೆಚ್ಚಿನ ಲಾಭ ಬರುವ ಸಾಧ್ಯತೆ ಇದ್ದರು ಹೆಚ್ಚಿನ ಹಣ ವ್ಯಯ ಆಗಲಿದೆ. ಆಫೀಸ್ ನೌಕರಿ ಮಾಡುವವರಿಗೆ ತಾವು ಮಾಡದ ತಪ್ಪಿಗೆ ಮೇಲಿನ ಅಧಿಕಾರಿಯಿಂದ ಬೈಗುಳ ತಪ್ಪಿದಲ್ಲ. ನಿಮ್ಮ ಎಲ್ಲ ಸಮಸ್ಯೆ ದೂರ ಆಗಲು ನೀವು ಗುರುವಾರ ಸಂಜೆ ಸಮಯದಲ್ಲಿ ಹಸುವಿಗೆ ಅಕ್ಕಿ ಆಹಾರವಾಗಿ ನೀಡಿ ನಿಮಗೆ ಶುಭವಾಗಲಿದೆ.

ಕನ್ಯಾ: ಹೆಚ್ಚಿನ ಓಡಾಟದಿಂದ ದೇಹದ ಆರೋಗ್ಯ ಕೆಡುವ ಸಾಧ್ಯತೆ ಹೆಚ್ಚಿದೆ. ಈ ವಾರ ನೀವು ಅಂದುಕೊಂಡ ಎಲ್ಲ ಕೆಲಸಗಳನ್ನು ಮಾಡಿ ಮುಗಿಸುತ್ತೀರಿ. ಆದರೆ ನಿಮ್ಮ ಆದಾಯಕ್ಕಿಂತ ನಿಮ್ಮ ಖರ್ಚು ಹೆಚ್ಚಾಗಲಿದೆ ನಿಮಗೆ. ವಾರದ ಮೂರನೇ ದಿನದಲ್ಲಿ ಸಮಾಜದಲ್ಲಿ ಒಳ್ಳೆ ಕೀರ್ತಿ ನಿಮಗೆ ಲಭಿಸುತ್ತದೆ. ದೇವರ ದರ್ಶನ ಪಡೆದುಕೊಳ್ಳುವುದು ಹೆಚ್ಚು ಹೆಚ್ಚು ಪ್ರವಾಸಕ್ಕೆ ಹೊರಡುವುದು. ಶುಭಸಮಾರಂಭಗಳಲ್ಲಿ ಬಾಗಿಆಗುವುದು ಮತ್ತಷ್ಟು ವಿಶೇಷಗಳು ಈ ವಾರದಲ್ಲಿ ನಿಮಗೆ ಆಗಲಿವೆ. ಆರೋಗ್ಯದಲ್ಲೂ ಸ್ವಲ್ಪ ಮಟ್ಟಿಗೆ ಚೇತರಿಕೆ ಕಾಣುವಿರಿ ಯಾವುದೇ ಮಂಗಳವಾರ ಹನುಮಂತನ ದರ್ಶನ ಪಡೆದುಕೊಳ್ಳಿ ನಿಮಗೆ ಶುಭವಾಗಲಿದೆ.

ತುಲಾ: ಹೊಸ ಪಾಲುದಾರಿಕೆ ವ್ಯವಹಾರ ಶುರು ಮಾಡಲು ಚಿಂತನೆ ಇದ್ದರೆ ನಿಮಗೆ ಈ ವಾರ ಶುಭವಾಗಲಿದೆ. ವಾರದ ಕೊನೆಯಲ್ಲಿ ಹೆಚ್ಚಿನ ಪ್ರಯಾಣ ಮಾಡಬೇಕಾಗುವ ಸಂಭವ ಇದೆ. ದಣಿವು ಆಯಾಸ ಸಣ್ಣ ಸಣ್ಣ ಆರೋಗ್ಯ ಸಮಸ್ಯೆ ಕಾಡಲಿದೆ. ಆದಾಯ ಹೆಚ್ಚಾಗಿ ಬಂದರು ನಿಮ್ಮ ಪ್ರಯಾಣ ಮತ್ತು ಹಲವು ಕಡೆ ಹೊಡಿಕೆ ಮಾಡುವುದರಿಂದ ಹಣದ ಖರ್ಚು ಹೆಚ್ಚಾಗಲಿದೆ. ಬಿಡುವಿನ ಸಮಯದಲ್ಲಿ ಸಾಕಷ್ಟು ವಿಶ್ರಾಂತಿ ಪಡೆದುಕೊಳ್ಳಿ ನಿಮ್ಮ ಆರೋಗ್ಯ ಸುಧಾರಿಸಲಿದೆ. ವೈದರಿಗೆ ಈ ವಾರ ವಿಶೇಷ ಲಾಭ ಸಿಗಲಿದೆ. ಈ ಬರುವ ಮಂಗಳವಾರ ನೀವು ಶಕ್ತಿ ದೇವರ ದರ್ಶನ ಪಡೆದುಕೊಳ್ಳಿ ನಿಮಗೆ ಆರೋಗ್ಯ ಐಶ್ವರ್ಯ ಅಭಿವ್ರುದಿಯಾಗಲಿದೆ.

ವೃಶ್ಚಿಕ: ಸಾಕಷ್ಟು ದಿನಗಳಿಂದ ಮಾನಸಿಕ ಕಿರಿ ಕಿರಿ ಅನುಭವಿಸುತ್ತಾ ಇದ್ದರೆ ಅದ್ದೆಲ್ಲವು ದೂರ ಆಗಲಿದೆ. ಉತ್ತಮವಾದ ಗ್ರಹಗತಿಗಳಿಂದ ದಿನ ಕಳೆದಂತೆ ಆರೋಗ್ಯದಲ್ಲಿ ಉತ್ತಮ ಬೆಳವಣಿಗೆ ಕಾಣಬಹುದು. ಇದರ ಜೊತೆಗೆ ಪಾಲುದಾರಿಕೆ ವ್ಯವಹಾರ ಮಾಡುವವರು ಹಾಗು ಸಣ್ಣ ಸಣ್ಣ ಉದ್ಯಮ ನಡೆಸುವವರಿಗೆ ಹೆಚ್ಚಿನ ಲಾಭ ಸಿಗಲಿದೆ. ಈ ವಾರ ವೈವಾಹಿಕ ಜೀವನ ಹೆಚ್ಚು ಸಂತೋಷ ದಿಂದ ಕೂಡಿರುತ್ತದೆ. ನಿಮ್ಮ ನಿಷ್ಠೆ ಮತ್ತು ಪ್ರಾಮಾಣಿಕತೆ ಮೇಲೆ ಕೆಲಸದಲ್ಲಿ ಬಡ್ತಿ ಪಡೆಯುವ ಅವಕಶ ನಿಮಗೆ ಸಿಗಲಿದೆ. ನಿಮ್ಮ ಎಲ್ಲ ಸಮಸ್ಯೆಗಳು ದೂರ ಆಗಲು ನೀವು ಸೋಮವಾರ ಸಂಜೆ ಸಮಯದಲ್ಲಿ ಶಿವನ ದರ್ಶನ ಪಡೆದುಕೊಳ್ಳಿ.

ಧನಸ್ಸು: ಮನೆಗೆ ಬೇಕಾದ ಉಪಯುಕ್ತ ಗೃಹಉಪಯೋಗ ವಸ್ತುಗಳನ್ನು ಹೆಚ್ಚು ಖರೀದಿ ಮಾಡುವ ಸಂಭವ ಇರುತ್ತದೆ. ಪ್ರೇಮಿಗಳ ಮಧ್ಯೆ ಮನಸ್ತಾಪ ಹೆಚ್ಚಾಗಲಿದೆ. ಈ ಹಿಂದಿನ ವಾರಕ್ಕೆ ಹೋಲಿಕೆ ಮಾಡಿದರೆ ಈ ವಾರ ನಿಮಗೆ ಹೆಚ್ಚಿನ ಆದಾಯ ಬರಲಿದೆ. ವಿದ್ಯಾರ್ಥಿಗಳು ಶಿಕ್ಷಣದ ಕಡೆಗೆ ಹೆಚ್ಚಿನ ಒಲವು ತೋರಿಸಿದರೆ ಮಾತ್ರ ಉತ್ತಮ ಸಾಧನೆ ಮಾಡಲು ನಿಮಗೆ ಅವಕಾಶ ದೊರೆಯುತ್ತದೆ. ನಿಮ್ಮ ಪ್ರೀತಿಪಾತ್ರರಿಂದ ವಿಶೇಷವಾದ ಉಡುಗೊರೆ ದೊರೆಯವ ಸಾಧ್ಯತೆ ಇದೆ. ವಾರದ ಕೊನೆ ದಿನದಲ್ಲಿ ಶೀತ ನೆಗಡಿ ಕೆಮ್ಮಿಗೆ ಸಂಭಂದಪಟ್ಟಂತೆ ಆರೋಗ್ಯದಲ್ಲಿ ಸಮಸ್ಯೆ ಬರಬಹುದು. ನಿಮ್ಮ ಈ ವಾರ ಮತ್ತಷ್ಟು ಉತ್ತಮವಾಗಿರಲು ಸಂಜೆ ಸಮಯ ಹಸುವಿಗೆ ಅಕ್ಕಿ ಮತ್ತು ಬೆಲ್ಲವನು ನಿಮ್ಮ ಕೈಯಿಂದಲೇ ತಿನ್ನಿಸಿ ನೀವು ವಿಶೇಷ ಲಾಭ ಪಡೆಯುತ್ತೀರಿ.

ಮಕರ: ಕೆಲವು ದಿನಗಳಿಂದ ನೀವು ಒಂದಿಷ್ಟು ಆರೋಗ್ಯ ಸಮಸ್ಯೆಗಳನ್ನು ಅನುಭವಿಸುತ್ತಾ ಬಂದಿದ್ದರೆ ಎಲ್ಲವು ಕಡಿಮೆಯಾಗಿ ಸುಖ ಶಾಂತಿ ನಿಮಗೆ ದೊರೆಯಲಿದೆ. ನಿಮಗೆ ಆರ್ಥಿಕವಾಗಿ ಸಹಾಯ ಮಾಡುವ ವ್ಯಕ್ತಿಗಳು ನಿಮ್ಮ ಬಳಿಗೆ ಹುಡುಕಿಕೊಂಡು ಬರುವರು. ಉದ್ಯೋಗ ಹುಡುಕುವ ಜನಕ್ಕೆ ಉತ್ತಮವಾದ ಕೆಲಸ ಸಿಗಲಿದೆ. ಮಾರ್ಕೆಟಿಂಗ್ ಕೆಲಸ ಮಾಡುವ ಜನಕ್ಕೆ ಮೇಲಿನ ಅಧಿಕಾರಿಗಳಿಂದ ಕಾಟ ತಪ್ಪದು. ಮನೆ ಭೂಮಿ ಖರೀದಿ ಮಾಡುವ ಮೊದಲು ನೀವು ಹೆಚ್ಚಿನ ಜಾಗ್ರತೆಯೊಂದ ಇರಬೇಕು. ನಿಮ್ಮ ಈ ವಾರ ಮತ್ತಷ್ಟು ಲಾಭ ಪಡೆಯಲು ಮಂಗಳವಾರ ಸಂಜೆ ಸಮಯದಲ್ಲಿ ನರಸಿಂಹ ದೇವರ ದರ್ಶನ ಪಡೆದುಕೊಳ್ಳಿ ನಂತರ ಒಬ್ಬ ಬಡ ವ್ಯಕ್ತಿಗೆ ಅಕ್ಕಿ ದಾನ ಮಾಡಿ.

ಕುಂಭ: ಈ ವಾರ ನಿಮಗೆ ಹೆಚ್ಚು ಉತ್ತಮ ಆಗಿರುವುದರಿಂದ ಎಲ್ಲ ಸಮಯವನ್ನು ಉತ್ತಮವಾದ ಕೆಲಸಗಳಿಗೆ ಬಳಕೆ ಮಾಡಿಕೊಳ್ಳಿ. ನಿಮ್ಮ ಹಿರಿಯರಿಂದ ನಿಮಗೆ ಒಳ್ಳೆ ಬೆಲೆಬಾಳುವ ವಸ್ತುಗಳು ದೊರೆಯುವ ಸಾಧ್ಯತೆ ಇರುತ್ತದೆ. ಹೊಸ ನಿವೇಶನ ಖರೀದಿ ಮಾಡುವ ಆಲೋಚನೆ ಇದ್ದರೆ ಅದನ್ನು ಈ ವಾರದಲ್ಲೇ ಮಾಡಿ. ನಿಮಗೆ ಆರೋಗ್ಯ ವಿಷಯದಲ್ಲಿ ಅಷ್ಟೇನೂ ಲಾಭದಾಯಕ ಇಲ್ಲ ನಿಮಗೆ ಸಣ್ಣ ಪುಟ್ಟ ಮಂಡಿ ನೋವು. ಮಾನಸಿಕ ಒತ್ತಡ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ವಾರದ ಕೊನೆ ದಿನಗಳಲ್ಲಿ ನಿಮ್ಮ ಶತ್ರುಗಳಿಂದ ಸವಾಲನ್ನು ಎದುರಿಸುವ ಪರಿಸ್ತಿತಿ ಬಂದರು ಬರಬಹುದು. ನೀವು ಶುಕ್ರವಾರ ಸಂಜೆ ತಾಯಿ ಚಾಮುಂಡಿ ದರ್ಶನ ಪಡೆದುಕೊಂಡು ಪೂರ್ವ ದಿಕ್ಕಿನಲ್ಲಿ ಕಾಣುವ ಒಬ್ಬ ಬಡವನಿಗೆ ನಿಮ್ಮ ಕೈಲಾದಷ್ಟು ಆಹಾರ ನೀಡಿದರೆ ನಿಮಗೆ ಶುಭಆಗಲಿದೆ.

ಮೀನ: ಉನ್ನತ ವ್ಯಾಸಾಂಗ ಮಾಡಲು ಇಚ್ಛೆ ಇದ್ದವರಿಗೆ ಒಳ್ಳೆ ಸಮಯ ಬಂದಿದೆ. ನೀವು ಹೆಚ್ಚಿನ ಯೋಚನೆ ಮಾಡುತ್ತಾ ನಿಮ್ಮ ಆರೋಗ್ಯವನ್ನು ಹಾಳು ಮಾಡಿಕೊಳ್ಳದೆ ಮುಂಬರುವ ದಿನಗಳ ಬಗ್ಗೆ ಹೆಚ್ಚಿನ ಒತ್ತು ನೀಡಿ.ಆರೋಗ್ಯದ ವಿಷಯದಲ್ಲಿ ಮೊದಲ ಮೂರು ದಿನ ಅಷ್ಟಾಗಿ ಶುಭ ಅಲ್ಲ. ನೀವು ವಾರದ ಎರಡು ಅಥವ ಮೂರು ದಿನ ಆರೋಗ್ಯದ ಕಡೆಗೆ ಹೆಚ್ಚಿನ ಜಾಗ್ರತೆ ತೆಗೆದುಕೊಳ್ಳಿ. ನಿಮ್ಮ ಉದ್ಯೋಗದ ಸ್ಥಳದಲ್ಲಿ ಉತ್ತಮ ವಾತಾವರಣ ನಿಮಗೆ ಸಿಗಲಿದೆ. ಈ ವಾರದ ಅಂತ್ಯದಲ್ಲಿ ನಿಮಗೆ ಧನ ಲಾಭ ಹೆಚ್ಚಿನ ಮಟ್ಟದಲ್ಲಿ ಸಿಗಲಿದೆ. ನಿಮ್ಮ ಎಲ್ಲ ಸಮಸ್ಯೆಗಳಿಂದ ಪಾರಾಗಲು ಮಂಗಳವಾರ ನರಸಿಂಹ ದೇವರ ದರ್ಶನ ಪಡೆದು ಹಿರಿಯರ ಆಶಿರ್ವಾದ ಪಡೆಯಿರಿ ನಿಮಗೆ ಶುಭವಾಗಲಿದೆ.

LEAVE A REPLY

Please enter your comment!
Please enter your name here