ಎಲ್ಲರ ಹಿತ್ತಲುಗಳಲ್ಲಿ ಹಾಗೂ ಹೊಲ ಗದ್ದೆಗಳ ಅಕ್ಕ ಪಕ್ಕದಲ್ಲಿ ಬೀದಿಯ ಅಕ್ಕ ಪಕ್ಕದಲ್ಲಿ ಹೆಚ್ಚಾಗಿ ಕಂಡು ಬರುವ ಕೆಂಪು ಹೂವನ್ನು ಹೊಂದಿರುವ ತುಂಬಾ ಹಗಲವಾಗಿ ಹರಡಿಕೊಂಡಿರುವ ಗಿಡವೇ ಮುಟ್ಟಿದರೆ ಮುನಿ ಗಿಡ. ಈ ಗಿಡದ ಹೆಸರನ್ನು ಎಲ್ಲರೂ ಕೇಳಿರಬಹುದು. ಜೊತೆಗೆ ಹಳ್ಳಿಗಳಲ್ಲಿ ಈ ಗಿಡಕ್ಕೆ ನಾಚಿಗೆ ಮುಳ್ಳು,ಮುಟ್ಟಿದರೆ ಮುಚಕ,ಮುಚ್ಗನ್ ಮುಳ್ಳು,ಪತಿವ್ರತೆ,ಮುಟ್ಟಿದರೆ ಮುನಿ,ಲಜ್ಜಾವತಿ ಎಂದೆಲ್ಲ ಕರೆಯುತ್ತಾರೆ. ಈ ಗಿಡವನ್ನು ಮಕ್ಕಳಿಗೆ ತುಂಬಾ ಇಷ್ಟ ಯಾಕೆಂದರೆ ಈ ಗಿಡದ ಎಲೆಗಳನ್ನು ಮುಟ್ಟಿದ ತಕ್ಷಣ ಎಲ್ಲ ಎಲೆಗಳು ಮಾಡಚಿಕೊಳ್ಳುತ್ತವೆ. ಮಕ್ಕಳಿಗೆ ಆಟ ಆಡಲು ಇಷ್ಟವಾದರೆ ಈ ಸಸ್ಯವು ಹಸಿರು ಹುಲ್ಲು ಮೇಯುವ ಪ್ರಾಣಿಗಳಿಗೆ ಉತ್ತಮ ಆಹಾರವಾಗಿದೆ. ಹಸಿರಿನಿಂದ ಕಂಗೊಳಿಸುವ ಈ ಸಸ್ಯವನ್ನು ನೋಡಿದಾಕ್ಷಣ ಮೇಯಲು ಪ್ರಾಣಿಗಳು ಧಾವಿಸುತ್ತವೆ.
ಜೊತೆಗೆ ಈ ಸಸ್ಯ ಕೇವಲ ಮಕ್ಕಳಿಗೆ ಹಾಗೂ ಪ್ರಾಣಿಗಳಿಗೆ ಅಲ್ಲಾದೆ ಮನುಷ್ಯರಿಗೂ ಸಹ ಈ ಗಿಡದಿಂದ ಹಲವಾರು ರೀತಿಯ ಪ್ರಯೋಜನಗಳು ಇವೆ ಆದರೆ ಇದರ ಬಗ್ಗೆ ತಿಳಿಯದೆ ಇದನ್ನು ಉಪಯೋಗ ಮಾಡಿಕೊಳ್ಳುವುದಿಲ್ಲ ಹಾಗಾದರೆ ಈ ಗಿಡದಿಂದ ಏನು ಪ್ರಯೋಜನ ಎಂದು ನೋಡೋಣವೇ. ಮುಟ್ಟಿದರೆ ಮುನಿ ಗಿಡದ ಎಲೆಗಳು ಹಾಗೂ ಬೇರನ್ನು ಚೆನ್ನಾಗಿ ಅರೆದು ಇದರ ರಸವನ್ನು ಕುಡಿದರೆ ಮಲಬದ್ಧತೆ. ಮಂಡಿನೋವು. ಮಂಡಿ ಉದಿಕೊಳ್ಳುವುದು. ಮೂತ್ರಪಿಂಡದ ಸಮಸ್ಯೆಗಳು ಹೋಗುತ್ತದೆ. ಮಹಿಳೆಯರಲ್ಲಿ ಕಾಣಿಸುವ ಅತಿ ಹೆಚ್ಚಿನ ರಕ್ತಸ್ರಾವವಾಗುವ ಸಮಸ್ಯೆ ಇದ್ದರೆ ಮುಟ್ಟಿದರೆ ಮುನಿ ಗಿಡದ ಎಲೆಗಳ ಕಷಾಯವನ್ನು ಸೇವಿಸಬೇಕು.
ಗಾಯಗಳು ಆಗಿ ರಕ್ತ ಸೋರುತ್ತಿದ್ದರೆ ಆ ಜಾಗಕ್ಕೆ ಮುಟ್ಟಿದರೆ ಮುನಿ ಗಿಡದ ಎಲೆಗಳ ರಸವನ್ನು ಹಚ್ಚಿದರೆ ರಕ್ತ ಸೋರುವುದು ನಿಲ್ಲುತ್ತದೆ. ಚರ್ಮದಲ್ಲಿ ಆಗುವ ಮೊಡವೆ. ತುರಿಕೆ. ಗುಳ್ಳೆಗಳಿಗೆ ಮುಟ್ಟಿದರೆ ಮುನಿ ಗಿಡದ ರಸವನ್ನು ಹಚ್ಚಿದರೆ ಕಡಿಮೆ ಆಗುತ್ತದೆ. ಕಾಲರಾ. ವಾಂತಿ. ಭೇದಿ. ಯ ಸಮಸ್ಯೆ ಇದ್ದರೆ ಮುಟ್ಟಿದರೆ ಮುನಿ ಗಿಡದ ರಸವನ್ನು ಸೇವಿಸಬೇಕು. ಮೂತ್ರ ವಿಸರ್ಜನೆ ಸಮಸ್ಯೆಗಳಿಗೂ ಸಹ ಮುಟ್ಟಿದರೆ ಮುನಿ ಗಿಡ ಸಹಾಯವಾಗಿದೆ. ಮಹಿಳೆಯರಲ್ಲಿ ಗರ್ಭಾಶಯದ ಸಮಸ್ಯೆ ನಿರ್ವಹಣೆಗೂ ಇದು ಉತ್ತಮ ಔಷಧವಾಗಿದೆ. ಮುಟ್ಟಿದರೆ ಮುನಿ ಎಲೆಗಳ ರಸವನ್ನು ಎಳನೀರಿನೊಂದಿಗೆ ಸೇರಿಸಿ ಕುಡಿದರೆ ಕೆಮ್ಮು ಮತ್ತು ಶ್ವಾಸಕೋಶಗಳ ತೊಂದರೆ ನಿವಾರಣೆಯಾಗುತ್ತದೆ. ಮುಟ್ಟಿದರೆ ಮುನಿ ಗಿಡದ ಎಲೆಗಳು ಬೇರುಗಳು ಕಾಂಡಗಳನ್ನು ಅರೆದು ಇದನ್ನು ಹಚ್ಚುವುದರಿಂದ ಉಡಿಕೊಂಡಿಕೊಂಡು ಯಾವುದೇ ಭಾಗವು ಕಡಿಮೆ ಆಗುತ್ತದೆ.
ಮುಟ್ಟಿದರೆ ಮುನಿ ಗಿಡದ ಎಲೆಗಳನ್ನು ಅರೆದು ಹೊಟ್ಟೆಗೆ ಹಚ್ಚುವುದರಿಂದ ಬಾಣಂತಿಯ ಹೊಟ್ಟೆಯನ್ನು ಕರಗಿಸ ಬಹುದು. ನೋಡಿದರಲ್ಲ ಈ ಮುಟ್ಟಿದರೆ ಮುನಿ ಗಿಡವನ್ನು ನೋಡಿದ ತಕ್ಷಣ ಅದನ್ನು ಮುಟ್ಟಿ ಅದು ಮಾಡಚಿಕೊಳ್ಳುವುದನ್ನು ನೋಡಿ ಸಂತೋಷ ಪಡುತ್ತಿದ್ದೋ ಆದರೆ ಇಷ್ಟೆಲ್ಲ ಉಪಯೋಗವನ್ನು ಹೊಂದಿರುವ ಈ ಗಿಡದ ಬಳಕೆಯನ್ನು ಇನ್ನು ಮುಂದಾದರು ಮಾಡಿಕೊಳ್ಳಬೇಕು.ಆದರೆ ಒಂದು ಎಚ್ಚರಿಕೆ ಏನೆಂದರೆ ಈ ಮುಟ್ಟಿದರೆ ಮುನಿ ಗಿಡದಲ್ಲಿ ಇರುವ ಮುಳ್ಳುಗಳು ಚುಚ್ಚದ ಹಾಗೆ ನೋಡಿಕೊಳ್ಳಬೇಕು ಆ ಮುಳ್ಳುಗಳು ಚುಚ್ಚಿಕೊಂಡರೆ ತುಂಬಾ ಸಮಸ್ಯೆ ಆಗುತ್ತದೆ. ಅದಕ್ಕಾಗಿ ತುಂಬಾ ಹೂಷಾರಾಗಿ ಈ ಗಿಡದ ಬಳಕೆಯನ್ನು ಮಾಡಿಕೊಳ್ಳಿ.