ಇಂದಿನ ನಿಮ್ಮ ರಾಶಿ ಭವಿಷ್ಯ

0
770

ಮೇಷ: ಕೆಲವು ಸ್ನೇಹಿತರಿಂದ ಮಾನಸಿಕ ಕಿರಿ ಕಿರಿ ತಪ್ಪಿದಲ್ಲ. ಪಾಲುದಾರಿಕೆ ವ್ಯವಹಾರಕ್ಕೆ ಮುಂದೆ ಹೋಗಬೇಡಿ. ಸಂಜೆ ಆರು ಗಂಟೆ ನಂತರ ಹನುಮಂತನ ದರ್ಶನ ಪಡೆದುಕೊಳ್ಳಿ ನಿಮಗೆ ಶುಭಆಗಲಿದೆ.
ವೃಷಭ: ಖಚೇರಿ ಕೆಲಸದಲ್ಲಿ ವಿಳಂಭ ಸಾಧ್ಯತೆ ದೇಹದ ಆರೋಗ್ಯದ ಬಗ್ಗೆ ಒಂದಿಷ್ಟು ಕಾಳಜಿ ಕುಲ ದೇವರ ದರ್ಶನ ಪಡೆದುಕೊಳ್ಳಿ. ಸಂಜೆ ಸಾಧ್ಯ ಆದ್ರೆ ಹನುಮಾನ್ ಚಾಲೀಸ ಪಾರಾಯಣ ಮಾಡಿ.

ಮಿಥುನ: ಸಂಜೆ ಸಮಯದಲ್ಲಿ ಹೆಣ್ಣುಮಕ್ಕಳು ಹನುಮಾನ್ ಚಾಲೀಸ ಪಾರಾಯಣ ಮಾಡಿದ್ರೆ ವಿಶೇಷ ಲಾಭ ಮನೆಯಲ್ಲಿರುವ ಯಜಮಾನನಿಗೆ ಮಕ್ಕಳಿಗೆ ಶುಭ ತರಲಿದೆ. ಕೋರ್ಟು ವ್ಯಾಜ್ಯದ ಕೆಲಸಗಳು ನಿಮಗೆ ಹಿನ್ನಡೆಯಾಗಲಿದೆ. ದಿನದ ಅಂತ್ಯಕ್ಕೆ ಧನ ಲಾಭ ಪ್ರಾಪ್ತಿ.
ಕಟಕ: ಮಾಡುವ ಕೆಲಸದಲ್ಲಿ ಉದಾಸೀನತೆ ತೋರಿಸಿದರೆ ಆಪತ್ತು ತಪ್ಪಿದ್ದಲ್ಲ. ನಿಮ್ಮ ನಿಷ್ಠೆ ನಿಮ್ಮ ಪ್ರಾಮಾಣಿಕತೆ ನಿಮಗೆ ಸಹಾಯ ಮಾಡಲಿದೆ. ಆರೋಗ್ಯದ ಬಗ್ಗೆ ಸಣ್ಣ ಕಾಳಜಿ ಇರಲಿ. ಸಂಜೆ ಸಮಯದಲ್ಲಿ ಹನುಮಂತನ ದರ್ಶನ ಪಡೆಯಿರಿ.

ಸಿಂಹ: ಉದ್ಯೋಗ ಸಿಗದವರಿಗೆ ಒಳ್ಳೆಯ ಉದ್ಯೋಗ ದೊರೆಯಲಿದೆ, ನಿಮ್ಮ ಸ್ವಂತ ಬಲದಿಂದ ಮಾತ್ರ ನಿಮ್ಮ ಏಳಿಗೆ ಸಾಧ್ಯ. ಅನ್ಯರ ಮಾತು ಕೇಳಿ ನಿಮ್ಮ ಸಮಯ ವ್ಯರ್ಥ ಮಾಡಿಕೊಳ್ಳಬೇಡಿ. ಸಹೋದರನೊಂದಿಗೆ ಉತ್ತಮ ಬಂದವ್ಯ ಮೂಡಲಿದೆ.
ಕನ್ಯಾ: ದೂರದ ಊರಿನಿಂದ ಮನೆಗೆ ಅತಿಥಿಗಳು ಬರುವ ಸಾಧ್ಯತೆ ಇರುತ್ತದ. ಸಮಸ್ಯೆಗಳು ಬಂದಾಗ ತಾಳ್ಮೆಯಿಂದಲೇ ಕುಳಿತು ಪರಿಹಾರ ಕಂಡು ಹಿಡಿಯಿರಿ. ಸ್ನೇಹಿತರ ಮಾತು ಕೇಳಿ ಮೋಸ ಹೋಗಬೇಡಿ. ಸಂಜೆ ಸಮಯದಲ್ಲಿ ಹನುಮಂತ ದೇವರ ಬಳಿ ಎಳ್ಳಿನ ದೀಪ ಹಚ್ಚಿ.

ತುಲಾ: ತಂದೆ ತಾಯಿಯ ಆರೋಗ್ಯದ ಜವಾಬ್ದಾರಿ ನಿಮ್ಮ ಮೇಲೆ ಬರಲಿದೆ. ಸಣ್ಣ ವ್ಯವಹಾರ ಮಾಡುವ ಜನಕ್ಕೆ ಅಧಿಕ ಲಾಭ. ವಿದೇಶಕ್ಕೆ ತೆರಳುವ ಚಿಂತನೆ ಇದ್ದರೆ ನಿಮ್ಮ ಕಾರ್ಯ ಶುಭ ಆಗಲಿದೆ. ಬೆಳ್ಳಗೆ ಆಫೀಸಿಗೆ ಹೋಗುವ ಮುನ್ನ ಹನುಮಂತ ದೇವರ ದರ್ಶನ ಪಡೆಯಿರಿ.
ವೃಶ್ಚಿಕ: ನೀವು ಎಂದೋ ಮಾಡಿರುವ ತಪ್ಪಿಗೆ ಇಂದು ನಿಮಗೆ ಶಿಕ್ಷೆ ಅನುಭವಿಸುವ ಸಾಧ್ಯತೆ ಇರುವುದರಿಂದ ನೀವು ಇಂದು ಹೆಚ್ಚಿನ ಜಾಗ್ರೆತೆ ಇರುವುದೇ ಸೂಕ್ತ. ನಿಮ್ಮ ಸಮಸ್ಯೆಗಳಿಂದ ಪಾರಾಗಲು ಹನುಮಂತ ದೇವರ ದರ್ಶನ ಪಡೆದು ಎಳ್ಳಿನ ಬತ್ತಿ ಹಚ್ಚಬೇಕು.

ಧನು: ಪ್ರೇಮಿಗಳ ಮಧ್ಯೆ ಮತ್ತು ದಾಂಪತ್ಯದ ಜೀವನ ಇಂದು ಅಷ್ಟಾಗಿ ಚೆನ್ನಾಗಿ ಇರುವುದಿಲ್ಲ. ಸಣ್ಣ ಸಣ್ಣ ವಿಷಯಗಳಿಗೂ ಕೋಪ ಬರುವ ಸಾಧ್ಯತೆ ನಿಮಗೆ ಇರುತ್ತದೆ. ಮಾತಿನ ಮೇಲೆ ಹೆಚ್ಚು ಹಿಡಿತ ಇಟ್ಟುಕೊಳ್ಳಿ. ಸಂಜೆ ನಂತರ ಶುಭ ಆಗಲಿದೆ.
ಮಕರ: ಹಿರಿಯರ ಬೈಗುಳಗಿಂದ ಬೇಸರ ಆಗಬೇಡಿ ನಿಮಗೆ ಒಳ್ಳೆ ದಿನ ಒಳ್ಳೆ ಸಮಯ ಹತ್ತಿರದಲ್ಲೇ ಬರಲಿದೆ. ನಿಮ್ಮ ಮನಸ್ಸು ತಳಮಳ ಪಡಿಸುವ ಯಾವುದೇ ವಿಷಯದ ಬಗ್ಗೆ ಆಲೋಚನೆ ಬಿಟ್ಟು ನಿಮ್ಮ ಕಾರ್ಯದಲ್ಲಿ ತೊಡಗಿದರೆ ಸಾಕಷ್ಟು ಸಮಸ್ಯೆ ಕಡಿಮೆ ಮಾಡಬಹುದು.

ಕುಂಭ: ಹೆಚ್ಚಾಗಿ ಏಕಾಗ್ರತೆ ಸಾಧಿಸಿದರೆ ಮಾತ್ರ ಇಂದಿನ ಎಲ್ಲ ಕೆಲಸಗಳನ್ನು ಸುಲಭವಾಗಿ ನಡೆಯುವುದು. ಸಂಜೆ ನಂತರ ಹಸಿದ ನಾಲ್ಕು ಪ್ರಾಣಿಗಳಿಗೆ ಗೋದಿಯಲ್ಲಿ ಆಹಾರವನ್ನು ನೀಡುವ ಮೂಲಕ ನಿಮ್ಮ ಸಮಸ್ಯೆಗಳಿಂದ ದೂರ ಮಾಡಿಕೊಳ್ಳಬಹುದು.
ಮೀನ: ಮನೆಯಿಂದ ಹೊರಡುವ ಮುನ್ನ ತಪ್ಪದೇ ಗಣಪತಿಗೆ ಪ್ರಾರ್ಥನೆ ಮಾಡಿಕೊಳ್ಳಿ. ಸಂಜೆ ನಂತರ ನಿಮ್ಮ ಉದ್ಯಮದಲ್ಲಿ ಹೆಚ್ಚಿನ ರೀತಿಯ ಧನ ಲಾಭ ಆಗಲಿದೆ. ಮನೆಗೆ ಹಿರಿಯರು ಬರುವ ಸಾಧ್ಯತೆ ಇದೆ . ವಿದೇಶಿ ಪಯಣ ಮಾಡುವ ಆಲೋಚನೆ ಇದ್ದರೆ ಶುಭತರಲಿದೆ.

LEAVE A REPLY

Please enter your comment!
Please enter your name here