ಇದು ಮನುಷ್ಯನ ದೇಹಕ್ಕೆ ತುಂಬಾ ಮುಖ್ಯ ಸ್ವಲ್ಪ ಕಡಿಮೆ ಆದರು ಆರೋಗ್ಯ ಸಮಸ್ಯೆ ಬರುತ್ತೆ

0
986

ಮನುಷ್ಯನ ಆರೋಗ್ಯ ಉತ್ತಮವಾಗಿರಬೇಕು ಹಾಗೂ ಮನುಷ್ಯ ಆರೋಗ್ಯವಾಗಿ ಇರಬೇಕು ಎಂದರೆ ಮನುಷ್ಯನ ದೇಹಕ್ಕೆ ಅವಶ್ಯಕವಾದ ಎಲ್ಲ ಪೋಷಕಾಂಶಗಳು ಇರಬೇಕು. ಅದರಲ್ಲಿ ಮುಖ್ಯವಾಗಿ ಇರಬೇಕಾದದ್ದು ಎಂದರೆ ಕಬ್ಬಿಣಾಂಶ. ಈ ಕಬ್ಬಿಣಾಂಶದ ಕೆಲಸ ಎಂದರೆ ಇದು ಮನುಷ್ಯನ ದೇಹದ ಎಲ್ಲ ಭಾಗಗಳಿಗೆ ಆಮ್ಲಜನಕವನ್ನು ಸರಬರಾಜು ಮಾಡುವ ಕೆಲಸವನ್ನು ಮಾಡುತ್ತದೆ. ಈ ಕಬ್ಬಿಣಾಂಶ ಎಂಬುದು ಮನುಷ್ಯನ ದೇಹದಲ್ಲಿ ಕಡಿಮೆ ಆದರೆ ಅವನ ದೇಹದಲ್ಲಿ ರಕ್ತಹೀನತೆ ಉಂಟಾಗುತ್ತದೆ.

ಕಬ್ಬಿಣಾಂಶದ ಕೊರತೆ ಎಂಬುದು ಹೆಚ್ಚಾಗಿ ಯಾರಲ್ಲಿ ಕಂಡು ಬರುತ್ತದೆ ಎಂದು ನೋಡೋಣ ಬನ್ನಿ. ಈ ರಕ್ತ ಹೀನತೆ ಉಂಟಾದರೆ ಅಂಗವೈಫಲ್ಯವೆಂಬುದು ಕಾಣಿಸಿಕೊಳ್ಳುತ್ತದೆ ಈ ರಕ್ತ ಹೀನತೆ ಎಂಬುದು ಹೆಚ್ಚಾಗಿ ಮಹಿಳೆಯರಲ್ಲಿ ಕಾಣಿಸುತ್ತದೆ ಅದು ಹೇಗೆ ಗೊತ್ತಾಗುತ್ತದೆ ಎಂದರೆ ಮಹಿಳೆರಲ್ಲಿ ಪ್ರತಿ ತಿಂಗಳು ಆಗುವ ಋತುಸ್ರಾವದಲ್ಲಿ ಹೆಚ್ಚು ರಕ್ತ ಸ್ರಾವ ಆದರೆ ಅವರಲ್ಲಿ ಕಬ್ಬಿಣಾಂಶದ ಕೊರತೆ ಇದೆ ಎಂದು ಗೊತ್ತಾಗುತ್ತದೆ. ದಯಾಲಿಸಿಸ್ ಸಮಸ್ಯೆ ಇಂದ ಹೊದ್ದಾಡುತಿರುವ ವ್ಯಕ್ತಿಗಳಲ್ಲೂ ಸಹ ಕಬ್ಬಿಣಾಂಶದ ಕೊರತೆ ಇದೆ ಎಂದು ಗೊತ್ತಾಗುತ್ತದೆ. ಮಹಿಳೆಯರು ಗರ್ಭಿಣಿರಾದಗ ಅವರ ಗರ್ಭದಲ್ಲಿ ಇರುವ ಮಕ್ಕಳಿಗೆ ತುಂಬಾ ಅವಶ್ಯಕವಾಗಿ ಬೇಕಾಗಿರುವ ಅಂಶ ಎಂದರೆ ಕಬ್ಬಿಣಾಂಶ. ಹಾಗೂ ಮಗುವಿಗೆ ಎದೆ ಹಾಲನ್ನು ಕೊಡುತ್ತಿರುವ ತಾಯಿಯರಿಗೂ ಸಹ ಕಬ್ಬಿಣಾಂಶ ಎಂಬುದು ತುಂಬಾ ಮುಖ್ಯ ಚಿಕ್ಕ ಮಕ್ಕಳಿಗೆ ತಾಯಿಯ ಎದೆ ಹಾಲಿನ ಮೂಲಕ ಹೆಚ್ಚು ಕಬ್ಬಿಣಾಂಶ ಎಂಬುದು ಮಕ್ಕಳಿಗೆ ಸೇರುವುದರಿಂದ ತಾಯಿಯರಿಗೆ ಕಬ್ಬಿಣಾಂಶದ ಕೊರತೆ ಇರುತ್ತದೆ.

ಹೆಚ್ಚು ಭೇದಿ. ಕರುಳು ಹುಣ್ಣು. ಜಠರ ಕರುಳಿನ ಅಸ್ವಸ್ಥತೆ ಸಮಸ್ಯೆ ಇರುವವರಿಗೂ ಸಹ ಕಬ್ಬಿಣಾಂಶದ ಕೊರತೆ ಇರುತ್ತದೆ. ಕಬ್ಬಿಣಾಂಶದ ಕೊರತೆ ಇರುವವರಲ್ಲಿ ಕಂಡು ಬರುವ ಲಕ್ಷಣಗಳು ಯಾವುವು ಎಂದರೆ. ಹೆಚ್ಚಾಗಿ ಸುಸ್ತು. ಸಂಕಟವಾಗುತ್ತದೆ. ಹೆಚ್ಚಾಗಿ ತಲೆನೋವು ಕಾಣಿಸಿಕೊಳ್ಳುತ್ತದೆ.ತಲೆ ತಿರುಗುತ್ತದೆ. ಚಳಿ ಚಳಿ ಹಾಗಿ ಜ್ವರ ಬರುವ ಹಾಗೆ ಅನ್ನಿಸುತ್ತದೆ. ದಿನದಿಂದ ದಿನಕ್ಕೆ ದೇಹದ ತೂಕ ಇಳಿಕೆಯಾಗುತ್ತದೆ. ಸುಲಭವಾಗಿ ಉಸಿರಾಡಲು ಆಗುವುದಿಲ್ಲ ಉಸಿರು ಕಟ್ಟಿದಗೆ ಆಗುತ್ತದೆ. ಸರಿಯಾಗಿ ಯಾವುದೇ ಆಹಾರವನ್ನು ಸೇವನೆ ಮಾಡಲು ಆಗುವುದಿಲ್ಲ.

ಮನುಷ್ಯನ ದೇಹಕ್ಕೆ ಕಬ್ಬಿಣಾಂಶ ಎಂಬುದು ಹೆಚ್ಚಾಗಲು ಅನುಸರಿಸಬೇಕಾದ ಆಹಾರ ಕ್ರಮಗಳು ಏನು ಎಂದು ನೋಡೋಣ ಬನ್ನಿ.. ಹೆಚ್ಚು ತರಕಾರಿಗಳು. ಸೊಪ್ಪುಗಳ ಸೇವನೆ ಮಾಡಬೇಕು. ಕಾಲುಗಳಲ್ಲೂ ಸಹ ಅತಿ ಹೆಚ್ಚಿನ ಕಬ್ಬಿಣಾಂಶ ಇರುವುದರಿಂದ ಕಾಲುಗಳ ಸೇವನೆ ಮಾಡುವುದರಿಂದ ಕಬ್ಬಿಣಾಂಶ ಎಂಬುದು ಹೆಚ್ಚುತ್ತದೆ. ಜೀರಿಗೆ. ಕರಿಬೇವು. ಒಣಕೊಬ್ಬರಿ. ಅರಶಿನ ಇವುಗಳಲ್ಲಿ ಹೆಚ್ಚಿನ ಕಬ್ಬಿಣಾಂಶ ಇರುವುದರಿಂದ ಇವುಗಳನ್ನು ಸೇವನೆ ಮಾಡಬೇಕು. ಸಿಟ್ರಸ್ ಜ್ಯೂಸ್ ಗಳನ್ನು ಕುಡಿಯುವ ಮೂಲಕ ದೇಹದಲ್ಲಿ ಕಬ್ಬಿಣಾಂಶ ಹೆಚ್ಚುತ್ತದೆ. ಮೊಳಕೆ ಬರಿಸಿದ ಕಾಲುಗಳನ್ನು ಹಸಿಯಾಗಿ ಸೇವನೆ ಮಾಡುವುದರಿಂದ ಕಬ್ಬಿಣಾಂಶ ಎಂಬುದು ಹೆಚ್ಚುತ್ತದೆ. ಕಲ್ಲಂಗಡಿ. ಸೇಬು. ಹಣ್ಣುಗಳಲ್ಲಿ ಹೆಚ್ಚಿನ ಕಬ್ಬಿಣಾಂಶ ಇರುತ್ತದೆ. ಅಲುಗೆಡ್ಡೆಯಲ್ಲಿ ಹೆಚ್ಚಿನ ಕಾರ್ಬೋಹೈಡ್ರೇಟ್‌. ವಿಟಮಿನ್ ಸಿ ಮತ್ತು ಬಿ ಕಾಂಪ್ಲೆಕ್ಸ್‌ನಂತಹ ಹಲವಾರು ವಿಟಮಿನ್‌ಗಳು ಸಹ ಇರುತ್ತವೆ. ಹಾಗೂ ಇದರಲ್ಲಿ ಕಬ್ಬಿಣಾಂಶ ಮತ್ತು ಮೆಗ್ನಿಷಿಯಂ ಸಹ ಹೆಚ್ಚಾಗಿ ಇರುತ್ತದೆ.

ಜೀವಸತ್ವ ಹೆಚ್ಚಿಸುವ ಆಹಾರಗಳಲ್ಲಿ ಒಂದಾಗಿರುವ ಕೊತ್ತಂಬರಿ ಸೊಪ್ಪನ್ನು ಪ್ರತಿದಿನ ಬಳಸುವುದರಿಂದ ದೇಹಕ್ಕೆ ಬೇಕಾದ ಕಬ್ಬಿಣಾಂಶ ಸಿಗುತ್ತದೆ. ಅಗಸೆ ಸೊಪ್ಪಿನಲ್ಲಿ ಕ್ಯಾಲ್ಷಿಯಂ, ಕಬ್ಬಿಣದ ಅಂಶ. ರಂಜಕದ ಅಂಶ ಹೆಚ್ಚಾಗಿ ಇರುವುದರಿಂದ ಇದು ದೇಹಕ್ಕೆ ತುಂಬಾ ಒಳ್ಳೆಯದು. ಬಾಳೆಹಣ್ಣಿನಲ್ಲಿ ಕಬ್ಬಿಣಾಂಶ ಮತ್ತು ಗಂಧಕದ ಸತ್ವ ಹೆಚ್ಚಾಗಿ ಇರುವುದರಿಂದ ನಿತ್ಯವೂ ಇದನ್ನು ಸೇವನೆ ಮಾಡಬೇಕು.
ಒಣಹಣ್ಣುಗಳದ ಖರ್ಜೂರ. ಅಂಜೂರ. ಒಣದ್ರಾಕ್ಷಿ. ಗಳಲ್ಲಿ ಹೆಚ್ಚಿನ ಕಬ್ಬಿಣಾಂಶ ಇರುತ್ತದೆ. ಗೋಡಂಬಿ. ನೆಲಗಡಲೆ. ಪಿಸ್ತಾ. ಬಾದಾಮಿ.ಬೀಜಗಳಲ್ಲೂ ಸಹ ಹೆಚ್ಚಿನ ಕಬ್ಬಿನಾಶ ಎಂಬುದು ಸಿಗುತ್ತದೆ.

ಹಾಗೆಯೇ ಮನುಷ್ಯನ ದೇಹದಲ್ಲಿ ಕಬ್ಬಿಣಾಂಶವನ್ನು ಕಡಿಮೆ ಮಾಡುವ ಆಹಾರಗಳು ಎಂದರೆ. ಕಾಫಿ. ಟೀ. ಕೂಲ್ ಡ್ರಿಂಕ್ಸ್ ಗಳು. ಹಾಗೂ ಕಬ್ಬಿಣಾಂಶ ಹಾಗೂ ಕ್ಯಾಲ್ಸಿಯಂ ಇರುವ ಆಹಾರಗಳನ್ನು ಒಟ್ಟಿಗೆ ಸೇವನೆ ಮಾಡಬಾರದು.ಎಣ್ಣೆ ಪದಾರ್ಥಗಳು.ಹೆಚ್ಚು ಕೊಬ್ಬು ಇರುವ ಆಹಾರಗಳು. ನೋಡಿದರಲ್ಲ ಕಬ್ಬಿಣಾಂಶ ಎಂಬುದು ನಮ್ಮ ದೇಹದಲ್ಲಿ ಇಲ್ಲ ಎಂದರೆ ಎಷ್ಟೆಲ್ಲ ರೀತಿಯ ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ. ಹಾಗಾಗಿ ಮನುಷ್ಯನ ದೇಹಕ್ಕೆ ಕಬ್ಬಿಣಾಂಶ. ನಾರಿನ ಅಂಶ. ಕ್ಯಾಲ್ಸಿಯಂ. ಪ್ರೊಟೀನ್. ಇವೆಲ್ಲ ಅಂಶಗಳು ಮನುಷ್ಯನ ದೇಹಕ್ಕೆ ತುಂಬಾ ಮುಖ್ಯವಾಗಿ ಬೇಕು.ಇವುಗಳೆಲ್ಲ ಇದ್ದರೆ ಮಾತ್ರ ಮನುಷ್ಯ. ಆರೋಗ್ಯವಾಗಿ ಇರಲು ಸಾಧ್ಯ

 

LEAVE A REPLY

Please enter your comment!
Please enter your name here