ತೆಂಗಿನ ಎಣ್ಣೆಯಲ್ಲಿ ಇರುವ ಆರೋಗ್ಯದಾಯಕ ಉಪಯೋಗಗಳು.
ತೆಂಗಿನ ಎಣ್ಣೆ ಎಂದರೆ ಸಾಕು ಎಲ್ಲರು ಅಂದು ಕೊಳ್ಳುವುದು ತಲೆಗೆ ಹಚ್ಚಿಕೊಳ್ಳುವ ಎಣ್ಣೆ ಎಂದು ಈ ತೆಂಗಿನಎಣ್ಣೆಯನ್ನು ಮಾಡುವುದು ಗೊಬ್ಬರಿಯಿಂದ ಗೊಬ್ಬರಿಯನ್ನು ರುಬ್ಬಿ ತೆಗೆಯುವ ಎಣ್ಣೆ ತೆಂಗಿನ ಎಣ್ಣೆ ಇದನ್ನು ಎಲ್ಲರು ತಲೆಗೆ ಹಚ್ಚಿಕೊಳ್ಳಲು ಬಳಸುತ್ತಾರೆ. ಗೊಬ್ಬರಿಯಿಂದ ಮಾಡಿದ ಎಣ್ಣೆ ಆದರೂ ಇದನ್ನು ಅಡುಗೆಗೆ ಬಳಕೆ ಮಾಡುವುದಿಲ್ಲ ಅಡುಗೆಗೆ ಎಂದು ಹಲವಾರು ರೀತಿಯ ಎಣ್ಣೆಗಳನ್ನು ಬಳಕೆ ಮಾಡುತ್ತಾರೆ ಆದರೆ ಈ ತೆಂಗಿನ ಎಣೆಯನ್ನು ಯಾಕೆ ಬಳಸುವುದಿಲ್ಲ ಎಂದರೆ ಇದರಿಂದ ಬೊಜ್ಜು ಕೊಬ್ಬು ಹೆಚ್ಚುತ್ತದೆ ಎಂಬ ಬಾವನೆ ಎಲ್ಲರಲ್ಲೂ ಮೂಡಿಬಿಟ್ಟಿದೆ .
ಇದರ ಜೊತೆಗೆ ಚರ್ಮದ ಸೌಂದರ್ಯ ಕಾಪಾಡಿಕೊಳ್ಳಲು ಹಲವಾರು ವಿಧದ ಕ್ರೀಮ್ಗಳನ್ನು ಬಳಕೆ ಮಾಡುತ್ತಾರೆ ಇತ್ತೀಚಿನ ದಿನಗಳಲ್ಲಿ ತೆಂಗಿನ ಎಣ್ಣೆಯನ್ನ ತಲೆಗೆ ಹಚ್ಚಿಕೊಳ್ಳುವುದನ್ನು ಸಹ ಬಿಟ್ಟು ಹಲವಾರು ವಿಧದ ಎಣ್ಣೆಗಳನ್ನು ಬಳಕೆ ಮಾಡುತಿದ್ದರೆ ಆದರೆ ಈ ತೆಂಗಿನ ಎಣ್ಣೆಯಲ್ಲಿ ಎಷ್ಟೆಲ್ಲ ರೀತಿಯ ಉಪಯೋಗಗಳು ಇವೆ ಎಂದು ತಿಳಿದುಕೊಂಡರೆ ಇನ್ನು ಮುಂದೆ ತೆಂಗಿನ ಎಣ್ಣೆಯನ್ನು ಬಳಕೆ ಮಾಡುತ್ತೀರಿ ಹಾಗಾದರೆ ಅದು ಏನು ಎಂದು ನೋಡೋಣ ಬನ್ನಿ. ತೆಂಗಿನ ಎಣ್ಣೆಯು ಎಲ್ಲಾ ರೀತಿಯ ಚರ್ಮಕ್ಕೆ ಪರಿಣಾಮಕಾರಿ ಮೋಯ್ಚರೈಸರ್ ಆಗಿ ಕಾರ್ಯನಿರ್ವಹಿಸುತ್ತದೆ. ಹಾಗು ಸೋರಿಯಾಸಿಸ್ , ಡರ್ಮಟೈಟಿಸ್, ಎಸ್ಜಿಮಾ, ಮತ್ತು ಇತರ ಚರ್ಮದ ಸೋಂಕುಗಳು ಸೇರಿದಂತೆ ವಿವಿಧ ಚರ್ಮದ ಸಮಸ್ಯೆಗಳಿಗೆ ಉತ್ತಮ ಮದ್ದು.
ತೆಂಗಿನ ಎಣ್ಣೆಯನ್ನು ಚರ್ಮದ ಆರೈಕೆಗಾಗಿ ಬಳಸಲಾಗುವ ಸೋಪ್ಗಳು, ಲೋಷನ್ಗಳು ಮತ್ತು ಕ್ರೀಮ್ಗಳಂತಹ ವಿವಿಧ ದೇಹದ ಆರೈಕೆ ಉತ್ಪನ್ನಗಳ ಮೂಲ ಪದಾರ್ಥವನ್ನಾಗಿ ಬಳಸುತ್ತಾರೆ. ತೆಂಗಿನ ಎಣ್ಣೆಯಲ್ಲಿ ಉನ್ನತ ಮಟ್ಟದ ಉತ್ಕರ್ಷಣ ನಿರೋಧಕಗಳು ಇದ್ದು ಇವು ಉರಿಯೂತವನ್ನು ಕಡಿಮೆ ಮಾಡುತ್ತವೆ ಮತ್ತು ಪ್ರಮುಖ ಔಷಧಿಗಳಿಗಿಂತ ಸಂಧಿವಾತ ಚಿಕಿತ್ಸೆಗೆ ಹೆಚ್ಚು ಪರಿಣಾಮಕಾರಿಯಾಗಿದೆ ಹಾಗು ನೋವು ನಿವಾರಕವಾಗಿ ಕಾರ್ಯನಿರ್ವಹಿಸುತ್ತದೆ. ತೆಂಗಿನ ಎಣ್ಣೆಯಲ್ಲಿರುವ ಕೊಬ್ಬಿನ ಆಮ್ಲಗಳು ಬ್ಯಾಕ್ಟೀರಿಯಾ, ವೈರಸ್ಗಳು ಮತ್ತು ಶಿಲೀಂಧ್ರಗಳು ಸೇರಿದಂತೆ ಹಾನಿಕಾರಕ ರೋಗಕಾರಕಗಳನ್ನು ಕೊಲ್ಲುತ್ತವೆ ಮತ್ತು ಅದರಿಂದ ಬರುವ ಸೋಂಕುಗಳನ್ನು ತಡೆಗಟ್ಟಲು ಸಹಾಯಕಾರಿಯಾಗಿದೆ.
ತೆಂಗಿನ ಎಣ್ಣೆ ಮುಖದ ಕ್ಲೆನ್ಸರ್, ಮಾಯಿಶ್ಚರುಸರ್ ಮತ್ತು ಸೂರ್ಯನ ಪರದೆಯಂತೆ ಅದ್ಭುತವಾಗಿದೆ, ತೆಂಗಿನ ಎಣ್ಣೆಯಲ್ಲಿನ ಕೊಬ್ಬಿನಾಮ್ಲಗಳು ಆಂತರಿಕವಾಗಿ ಮತ್ತು ಬಾಹ್ಯವಾಗಿ ಮತ್ತು ಆರ್ದ್ರತೆಯನ್ನು ಉಂಟುಮಾಡುತ್ತವೆ, ಇದರಿಂದಾಗಿ ಅವು ಎಲ್ಲಾ ರೀತಿಯ ಚರ್ಮದ ಪರಿಸ್ಥಿತಿಗಳಿಗೆ ಉತ್ತಮ ಪರಿಹಾರವನ್ನು ನೀಡುತ್ತವೆ. ತೆಂಗಿನ ಎಣ್ಣೆಯು ಕೂದಲಿಗೆ ಅತ್ಯುತ್ತಮ ಕಂಡಿಷನರ್ ಮತ್ತು ಹಾನಿಗೊಳಗಾದ ಕೂದಲಿನ ಮರು-ಬೆಳವಣಿಗೆಗೆ ಸಹಾಯ ಮಾಡುವ ದಿವ್ಯ ಔಷಧ ಆಗಿದೆ . ತೆಂಗಿನ ಎಣ್ಣೆ ಹಾನಿಗೊಳಗಾದ ಕೂದಲ ಪೋಷಣೆ ಮತ್ತು ಅದಕ್ಕೆ ಬೇಕಾದ ಪ್ರೋಟೀನ್ಗಳನ್ನು ಒದಗಿಸುತ್ತದೆ ಹಾಗೂ ಕೂದಲಿಗೆ ಉತ್ತಮ ರಕ್ಷಣೆ ನೀಡುವುದರ ಜೊತೆಗೆ ಕೂದಲು ಉದುರುವಿಕೆಯ ಸಮಸ್ಯೆಯನ್ನು ತಡೆಯುತ್ತದೆ .
ತೆಂಗಿನ ಎಣ್ಣೆಯಿಂದ ತಲೆಯನ್ನು ಮಸಾಜ್ ಮಾಡಿದರೆ ಸೊಂಪಾದ ಹೊಳಪಿನ ಕೂದಲು ಬೆಳೆಯುತ್ತದೆ. ಪ್ರತಿನಿತ್ಯ ಕಣ್ಣ ಕೆಳಗಿನ ಕಪ್ಪು ವರ್ತುಲ ಇರುವ ಜಾಗಕ್ಕೆ ತೆಂಗಿನ ಎಣ್ಣೆಯನ್ನು ಹಚ್ಚುತ್ತಾ ಬಂದರೆ ಕಪ್ಪು ಕಲೆ ಹೋಗುತ್ತದೆ. ಷೇವಿಂಗ್ ಕ್ರೀಮ್ ತಯಾರಿಕೆಯಲ್ಲಿ ಸಹ ತೆಂಗಿನ ಎಣ್ಣೆಯನ್ನು ಉಪಯೋಗ ಮಾಡುತ್ತಾರೆ. ತೆಂಗಿನ ಎಣ್ಣೆಯನ್ನು ದೀಪಾರಾಧನೆಯಲ್ಲಿಯು ಉಪಯೋಗಿಸುತ್ತಾರೆ. ತುಟಿಗಳ ಬಿರುಕುಗಳನ್ನು ಹೋಗಿಸಲು ತೆಂಗಿನ ಎಣ್ಣೆ ಒಳ್ಳೆಯ ಕ್ರೀಮ್ ಆಗಿದೆ. ಪಾದದ ಬಿರುಕುಗಳಿಗೆ ಈ ತೆಂಗಿನ ಎಣ್ಣೆಯನ್ನು ಮಸಾಜ್ ಮಾಡಿದರೆ ತುಂಬಾ ಬೇಗ ಬಿರುಕುಗಳು ಮಾಯವಾಗುತ್ತದೆ. ತೆಂಗಿನ ಕಾಯಿ ಎಣ್ಣೆಯನ್ನು ಅಡುಗೆಯಲ್ಲಿ ಬಳಸುವುದರಿಂದ ತೂಕ ಕಡಿಮೆ ಮಾಡಿಕೊಳ್ಳಲು ಸಹಾಯವಾಗುತ್ತದೆ, ಜೊತೆಗೆ ದೇಹದಲ್ಲಿನ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಜೊತೆಗೆ ಜೀರ್ಣಶಕ್ತಿಯನ್ನು ವೃದ್ಧಿಸುತ್ತದೆ, ಬಾಯಿಯ ಆರೋಗ್ಯಕ್ಕೂ ಕೂಡ ಕೊಬ್ಬರಿ ಎಣ್ಣೆ ಉತ್ತಮ ಆಯುರ್ವೇದ ಔಷಧಿಯಾಗಿದೆ. ಬಾಯಿಗೆ ಎಣ್ಣೆ ಹಚ್ಚಿ ನಂತರ ಅದನ್ನು ಹೊರಹಾಕುವುದರಿಂದ ವಸಡಿನ ಸಮಸ್ಯೆ ತಪ್ಪಿಸಬಹುದು, ತೆಂಗಿನಕಾಯಿ ಎಣ್ಣೆ ಯಿಂದ ಸ್ಟ್ರೆಚ್ ಮಾರ್ಕ್ ಗಳು ಕೂಡ ಮಾಯವಾಗುತ್ತವೆ.
ಪಿತ್ತ ವಿರುದ್ಧಿ ಎಂದು ಕೊಬ್ಬರಿ ಎಣ್ಣೆ ಬಳಸಲಾಗುತ್ತದೆ.ಸ್ವಲ್ಪ ಇಂಗನ್ನು ತೆಂಗಿನೆಣ್ಣೆಯಲ್ಲಿ ಅರೆದು ಹಣೆಗೆ ಹಚ್ಚಿದರೆ ತಲೆನೋವು ಕಡಿಮೆಯಾಗುತ್ತದೆ, ಹಾಗೂ ಅದನ್ನು ಕೀಲು ನೋವಿಗೂ ಹಚ್ಚಿದರೆ ನೋವು ಕಡಿಮೆಯಾಗುವುದು. ಹರಳೆಣ್ಣೆ, ಹಾಲು, ತೆಂಗಿನೆಣ್ಣೆ ಮಿಶ್ರಣಮಾಡಿ ಚಳಿಗಾಲದಲ್ಲಿ ಮೈಗೆಹಚ್ಚಿದರೆ ಚರ್ಮ ಒಣಗುವುದಿಲ್ಲ ಹಾಗೂ ಒಡೆಯುವುದಿಲ್ಲ.
ತೆಂಗಿನ ಎಣ್ಣೆಯಲ್ಲಿ ಎಂಸಿಟಿಯು ಹೆಚ್ಚಾಗಿದ್ದು ದೇಹದಲ್ಲಿ ಕೊಬ್ಬು ಕರಗಲು ಸಹಾಯ ಮಾಡುತ್ತದೆ. ಇದರಲ್ಲಿ ಕಡಿಮೆ ಕ್ಯಾಲೋರಿ ಇದೆ. ಜಗತ್ತಿನಲ್ಲೆ ಅತೀ ಕಡಿಮೆ ಕ್ಯಾಲೋರಿ ಹೊಂದಿರುವ ಉತ್ಪನ್ನವೆಂದರೆ ತೆಂಗಿನ ಎಣ್ಣೆ. ದೇಹದಿಂದ ಕ್ಯಾಲ್ಸಿಯಂ ಹೀರಿಕೊಳ್ಳುವಿಕೆಯನ್ನು ತೆಂಗಿನ ಎಣ್ಣೆಯು ಸುಲಭಗೊಳಿಸುತ್ತದೆ. ಆದ್ದರಿಂದ, ಇದು ಬಲವಾದ ಹಲ್ಲುಗಳನ್ನು ಅಭಿವೃದ್ಧಿಪಡಿಸುವಲ್ಲಿ ಸಹಾಯ ಮಾಡುತ್ತದೆ. ಮೇಕಪ್ ಮಾಡಿಕೊಂಡಿರುವ ಚರ್ಮದ ಮೇಲೆ ಕೊಬ್ಬರಿ ಎಣ್ಣೆಯನ್ನು ಹಾಕಿ ಸ್ವಲ್ಪ ಹೊತ್ತು ಬಿಟ್ಟು ಹತ್ತಿಯ ಉಂಡೆಗಳಿಂದ ಒರೆಸುವ ಮೂಲಕ ನೈಸರ್ಗಿಕವಾಗಿ ಯಾವುದೇ ಹಾನಿ ಇಲ್ಲದೇ ಮೇಕಪ್ ಅನ್ನು ತೆಗೆದುಹಾಕಬಹುದಾಗಿದೆ. ಇಷ್ಟೆಲ್ಲಾ ಪ್ರಯೋಜನಕಾರಿ ಅಂಶಗಳನ್ನು ಹೊಂದಿರುವ ತೆಂಗಿನ ಎಣ್ಣೆಯನ್ನು ನಿಮ್ಮ ದಿನನಿತ್ಯದ ಆಹಾರ ಪದಾರ್ಥದಲ್ಲಿ ಬಳಸಿಕೊಂಡು ಬಂದರೆ ಉತ್ತಮವಾದ ಅರೋಗ್ಯವನ್ನು ಪಡೆಯುತ್ತದೆ.