ಇಂದಿನ ನಿಮ್ಮ ದಿನ ಭವಿಷ್ಯ ತಿಳಿಯಿರಿ

0
707

ಮೇಷ: ಬೇರೆಯವರಿಂದ ಸಾಲಗಳು ಪಡೆದಿದ್ರೆ ಆದಷ್ಟು ಬೇಗನೆ ತೀರುವಳಿ ಮಾಡಿಕೊಳ್ಳಿ. ಸಾಲಗಾರರಿಂದ ಮಾನಸಿಕ ಕಿರಿ ಕಿರಿ ಬರುವ ಸಾಧ್ಯತೆ ಇರುತ್ತದೆ. ಸಂಜೆ ಆರು ಗಂಟೆ ನಂತರ ಮನೆಯಲ್ಲಿರುವ ಗಣೇಶನ ಮುಂದೆ ದೀಪ ಹಚ್ಚಿ ಪ್ರಾರ್ಥನೆ ಮಾಡಿ ವಿಶೇಷ ಲಾಭ ದೊರೆಯಲಿದೆ.
ವೃಷಭ: ನಿಶ್ಚಿತ ಸಮಯಕ್ಕೆ ಸ್ನೇಹಿತರ ಸಹಾಯ ದೊರೆಯಲಿದೆ. ಸಾಕಷ್ಟು ದಿನಗಳಿಂದ ಅನುಭವಿಶುವ ಮಾನಸಿಕ ಯಾತನೆಗಳಿಗೆ ಇಂದು ಒಂದಿಷ್ಟು ಕಡಿವಾಣ ಬೀಳಲಿದೆ. ಸಂಜೆ ನಂತರ ರಾಗಿಯನು ಪಕ್ಷಿಗಳಿಗೆ ಹಾಕುವುದರಿಂದ ವಿಶೇಷ ಲಾಭ ನಿಮಗೆ ದೊರೆಯಲಿದೆ.

ಮಿಥುನ: ಇಂದಿನ ಆರೋಗ್ಯ ವಿಚಾರದಲ್ಲಿ ಒಂದಿಷ್ಟು ಕಾಳಜಿ ಇರಲಿ. ನೀವು ಹಲವು ವಿಷಯದಲ್ಲಿ ಬುದ್ದಿವಂತರು ನಿಜ ಆದ್ರೆ ಹೆಚ್ಚಿನ ವಿನಾಕಾರಣ ಮಾತಿನ ಮೇಲೆ ಹಿಡಿತ ತಪ್ಪಿದ್ದರೆ ನಿಮಗೆ ಸಮಸ್ಯೆ ಹುಡುಕಿ ಕೊಂಡು ಬರುವುದು ನಿಶ್ಚಿತ. ಕೀರ್ತಿ ಪ್ರತಿಷ್ಠೆ ಹೆಚ್ಚಾಗಲಿದೆ.
ಕಟಕ: ಹೆಚ್ಚಿನ ವಿಷಯಗಳಲ್ಲಿ ನಿಮಗೆ ಸಂಶಯ ಮೂಡಲಿದೆ. ನೀವು ಪ್ರತಿ ನಿತ್ಯದಂತೆ ಈ ದಿನವು ನಿಮ್ಮ ತಾಯಿಯ ಆಶಿರ್ವಾದ ಪಡೆದುಕೊಂಡು ನಂತರ ಕೆಲ್ಸಕ್ಕೆ ತೆರಳಿ. ಸೋದರ ಅಥವ ಸಹೋದರಿಯರಲ್ಲಿ ಭಿನಾಭಿಪ್ರಾಯ ಬರದಂತೆ ನೋಡಿಕೊಳ್ಳಿ. ಸಂಜೆ ಸಮಯದಲ್ಲಿ ಗಣೇಶನ ದರ್ಶನ ಮಾಡಿ

ಸಿಂಹ: ಮನೆಯಲ್ಲಿ ಸಣ್ಣ ಸಣ್ಣ ವಿಚಾರಗಳಿಗೆ ಜಗಳ ಆಗುವ ಸಾಧ್ಯತೆ. ಕುಟುಂಬದ ಜನರೊಂದಿಗೆ ಅಷ್ಟು ಹೊಂದಾಣಿಕೆ ಇರದು. ಆದರೆ ದಿನದ ಅಂತ್ಯವಾಗುವ ವೇಳೆಗೆ ಹಣಕಾಸಿನ ಸ್ತಿತಿ ಸಾಕಷ್ಟು ಸುಧಾರಿಸಲಿದೆ. ಸಂಜೆ ನಂತರ ಗಣಪತಿಯ ಮಹಾ ಮಂತ್ರ ಹನ್ನೊಂದು ಬಾರಿ ಪ್ರಾರ್ಥನೆ ಮಾಡಿಕೊಳ್ಳಿ.
ಕನ್ಯಾ: ಸಣ್ಣ ಉದ್ಯಮ ಮಾಡುವವರಿಗೆ ಉತ್ತಮ ದಿನ ಇಂದು ನಿಮ್ಮ ಎಲ್ಲ ಹೂಡಿಕೆಗಳು ಹೆಚ್ಚಾಗಲಿದೆ. ಮನೆಯಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಯುವ ಸಾಧ್ಯತೆ ಇರುತ್ತದೆ. ನಿಮ್ಮ ಕೆಲಸ ಕಾರ್ಯಗಳಿಗೆ ಸ್ನೇಹಿತರು ಮತ್ತು ಕುಟುಂಬದ ಸದಸ್ಯರಿಂದಲೇ ಹೊಗಳಿಕೆ ಬರುವ ಸಾಧ್ಯತೆ.

ತುಲಾ: ನೀವು ಅಂದು ಕೊಂಡ ಎಲ್ಲ ಕಾರ್ಯಗಳು ಇಂದು ಯಾವುದೇ ಅಡ್ಡಿ ಆತಂಕ ಇಲ್ಲದೆ ಪೂರ್ಣವಾಗುವುದು. ಪಾಲುದಾರಿಕೆ ವ್ಯವಹಾರ ಮಾಡುತ್ತಿದ್ದಾರೆ ನೀವು ಹೆಚ್ಚಿನ ಜಾಗ್ರತೆಯಿಂದ ಹಣದ ಹೊಡಿಕೆ ಮಾಡಿ, ನಿಮ್ಮ ಪಾಲುದಾರನೊಂದಿಗೆ ನಿಮ್ಮ ಬಾಂದವ್ಯ ಹಾಳಾಗಲಿದೆ. ಸಣ್ಣ ವ್ಯವಹಾರ ಮಾಡುವವರಿಗೆ ಅಧಿಕ ಲಾಭ ದೊರೆಯಲಿದೆ.

ವೃಶ್ಚಿಕ: ಇಂದು ನೀವು ಹಿರಿಯರ ಮಾರ್ಗದರ್ಶನ ಮತ್ತು ಎಲ್ಲ ರೀತಿಯ ಸಲಹೆ ಪಡೆದುಕೊಂಡರೆ ಮಾತ್ರ ನಿಮ್ಮ ಎಲ್ಲ ಕೆಲಸಗಳು ಅಡ್ಡಿ ಇಲ್ಲದೆ ಪೂರ್ಣವಾಗಲಿದೆ. ನೌಕರರಿಗೆ ವೇತನ ಹೆಚ್ಚಳ ಸಿಗುವ ಸಾಧ್ಯತೆ ಇರುತ್ತದೆ. ಸಂಜೆ ಸಮಯ ಗಣಪತಿಯ ದರ್ಶನ ಪಡೆಯಿರಿ

ಧನಸ್ಸು: ನಿಮ್ಮ ಅಹಂಕಾರ ಬೇರೆ ಅವರಿಗೆ ತೊಂದ್ರೆ ಉಂಟು ಮಾಡುತ್ತದೆ. ನಿಮ್ಮ ಗೌರವಕ್ಕೆ ಧಕ್ಕೆ ಬರುವ ಸಾಧ್ಯತೆ ಇರುತ್ತದೆ. ಜನ್ಮದ ಶನಿ ಹೆಚ್ಚಿನ ರೀತಿಯಲ್ಲಿ ಅವಮಾನ ಉಂಟು ಮಾಡುತ್ತಾನೆ. ಎಲ್ಲೇ ಶುಭ ಸಮಾರಂಭಕ್ಕೆ ಹೋದರು ನಿಮ್ಮ ಪಾಡಿಗೆ ನೀವು ಇರುವುದೇ ಸೂಕ್ತ.
ಮಕರ: ಮನೆಯ ಖರ್ಚು ಸ್ವಲ್ಪ ಹೆಚ್ಚಾಗಬಹುದು. ನಿಮ್ಮ ಸ್ನೇಹದಲ್ಲಿ ಹುಳಿ ಹಿಂಡಲು ಕೆಲವು ಜನರು ಕಾಯುತ್ತಾ ಇರುವರು. ಮನೆಯಲ್ಲಿ ಸಡಗರ ವಾತಾವರಣ ಉಂಟಾಗಲಿದೆ. ಸಂಜೆ ನಂತರ ಗಣಪನ ಮಹಾ ಮಂತ್ರ ಪಾರಾಯಣ ಮಾಡಿ.

ಕುಂಭ: ಆರ್ಧಿಕ ಸಮಸ್ಯೆಗಳು ಸ್ವಲ್ಪ ದೂರ ಆಗಲಿದೆ, ಸಂಜೆ ನೀವು ಗಣಪತಿಯ ದರ್ಶನ ಮಾಡುವುದು ಮರೆಯಲೇ ಬೇಡಿ. ಆರೋಗ್ಯದ ವಿಷಯದಲ್ಲಿ ಉದಾಸೀನ ಬೇಡವೇ ಬೇಡ. ನಿಮ್ಮನು ಅನುಮಾನಿಸುವ ಜನರಿಂದ ನೀವು ಅಂತರ ಕಾಯ್ದುಕೊಳ್ಳುವುದೇ ಒಳ್ಳೆಯದು.
ಮೀನ: ಸಹ ಉದ್ಯೋಗಿಗಳಿಂದ ಪ್ರಶಂಶೆಗೆ ಗುರಿ ಆಗುವಿರಿ. ಸಣ್ಣದಾಗಿ ಆರೋಗ್ಯದಲ್ಲಿ ಎಚ್ಚರ ತಪ್ಪಲಿದೆ, ಸ್ಥಿರ ಮತ್ತು ಚರ ಆಸ್ತಿ ವ್ಯವಹಾರಕ್ಕೆ ಇಂದು ಹೋಗಲೇ ಬೇಡಿ. ಕೋರ್ಟು ವ್ಯಾಜ್ಯ ಇದ್ದರೆ ತೀರ್ಪು ನಿಮ್ಮ ಕಡೆ ಬರಲಿದೆ, ಸಂಜೆ ಸಮಯದಲ್ಲಿ ಗಣಪತಿ ದರ್ಶನ ಪಡೆದು ದೇವರಿಗೆ ಕರ್ಪೂರ ಹಚ್ಚಿ ಶುಭ ಆಗಲಿದೆ.

LEAVE A REPLY

Please enter your comment!
Please enter your name here