ಕೇಳಿದ್ದನ್ನು ಕರುಣಿಸುವ ಹನುಮಂತ

0
1108

ಒಮ್ಮೆ ವ್ಯಾಸರಾಜರು ಚಕ್ರತೀರ್ಥದ ಬಳಿಯ ಬೆಟ್ಟವೊಂದರಲ್ಲಿ ತಮ್ಮ ಆಹಿಕ, ಜಪ ತಪಗಳನ್ನು ಆಚರಿಸುತ್ತಿರುವಾಗ ಬೆಟ್ಟದ ದೊಡ್ಡ ಬಂಡೆಮೇಲೆ ಅಂಗಾರ ದಿಂದ ಆಂಜನೇಯನ ಚಿತ್ರ ಬಿಡಿಸಿದರಂತೆ. ಅದರ ಫ‌ಲವಾಗಿ ಸುಂದರ ಆಂಜನೇಯನ ಮೂರುತಿ ಆ ಬಂಡೆಯಲ್ಲಿ ರೂಪುಗೊಂಡಿತು.ಹಂಪೆಯು ಪುರಾಣ ಪ್ರಸಿದ್ಧ ಕ್ಷೇತ್ರ ಈ ಸ್ಥಳದ ಹಿಂದಿನ ಹೆಸರು ಪಂಪ ಎಂದು ಕರೆಯಲಾಗಿತ್ತು. ಈ ಸ್ಥಳ ಮಾಮೂಲಿ ಅಂತೂ ಅಲ್ಲ ಇದಕ್ಕೆ ರಾಮಾಯಣ ಕಾಲದ ಇತಿಹಾಸ ಹೊಂದಿದೆ. ಇದು ಅತ್ಯಂತ್ಯ ಪ್ರವಿತ್ರ ಸ್ಥಳ. ಇಲ್ಲಿನ ಪುಣ್ಯ ಕ್ಷೇತ್ರದಲ್ಲಿ ಸಾಕ್ಷಾತ್ ಹನುಮಂತ ದೇವರೇ ನೆಲೆಸಿದ್ದಾರೆ ಇವರನ್ನು ಯಂತ್ರದಿಂದ ಬಂಧಿಸಲಾಗಿದೆ ಎಂದು ಉಲ್ಲೇಖ ಇದೆ. ಒಮ್ಮೆ ವ್ಯಾಸರಾಜು ಈಗಿನ ಚಕ್ರ ತೀರ್ಥ ಇರುವ ಒಂದು ಬೆಟ್ಟದಲ್ಲಿ ತಮ್ಮ ದೈನಂದಿನ ಜಪ ಧ್ಯಾನ ಆಚರಣೆ ಮಾಡುತ್ತಿದ್ದಾಗ ಅಲ್ಲಿನ ಬೆಟ್ಟದ ಬೃಹತ್ ಬಂಡೆಯ ಮೇಲೆ ತಮ್ಮ ಅಂಗಾರದಿಂದ ಹನುಮಂತ ದೇವರ ಚಿತ್ರ ಬರೆದರು. ಬರೆದ ಕೊಡಲೇ ಅದು ಸುಂದರ ಮೂರ್ತಿಯಾಗಿ ಬಂಡೆಯಲ್ಲಿ ಹೊರಹೊಮ್ಮಿತು.

ಮಧ್ವಮತದ ಮಹಾ ಗುರುಗಳು, ಶ್ರೀ ವ್ಯಾಸರಾಜರು. ವಿಜಯನಗರ ಸಾಮ್ರಾಜ್ಯದ ರಾಜಗುರುಗಳಾಗಿ, ಶ್ರೀ ಕೃಷ್ಣ ದೇವರಾಯನಿಗೆ ಸಮರ್ಥವಾಗಿ ರಾಜ್ಯಭಾರಮಾಡುವಂತೆ ಕಾಲ ಕಾಲಕ್ಕೂ ಉಪದೇಶಿಸಿ, ವಿಜಯನಗರ ಸಾಮ್ರಾಜ್ಯವನ್ನು ಸರ್ವಾಂಗೀಣವಾಗಿ ಅಭಿವೃದ್ಧಿಪಡಿಸಿದ ಕೀರ್ತಿ ಶ್ರೀ ವ್ಯಾಸರಾಜರದು. ಈ ಕ್ಷೇತ್ರದ ಚಕ್ರತೀರ್ಥದ ಬಳಿ ನೆಲೆ ನಿಂತಿರುವ ವ್ಯಾಸರಾಜರಿಂದ ಪ್ರತಿಷ್ಠಿತ ಯಂತ್ರಗಳಿಂದ ಬಂಧಿತನಾದ ಹನುಮಂತದೇವರಿಗೆ ಅದ್ಭುತ ಇತಿಹಾಸವಿದೆ.ಇಲ್ಲಿದೆ ವ್ಯಾಸರಾಜರು

ಇಲ್ಲಿದ್ದ ವ್ಯಾಸರಾಜರು ವಿಜಯ ನಗರದ ಸಾಮ್ರಾಜ್ಯದ ಅರಸರಿಗೆ ಕಾಲ ಕಾಲಕ್ಕೆ ಉತ್ತಮ ಆಡಳಿತ ನೀಡಲು ಅವರು ಉಪದೇಶ ಮಾಡುತ್ತಿದ್ದರು. ವಿಜಯನಗರದ ಅಭಿವೃದ್ಧಿ ಗೋಸ್ಕರ ಜನರ ಸರ್ವತೋ ಅಭಿವೃದ್ದಿಗಾಗಿ ಯಂತ್ರಗಳಿಂದ ಬಂಧಿಸಿರುವ ಹನುಮಂತ ದೇವರಿಗೆ ಇಲ್ಲಿ ವಿಶೇಷ ಶಕ್ತಿ ಇದೆ ವ್ಯಾಸರಾಜರು ತಮ್ಮ ಜೀವನದ ಉದ್ದಕ್ಕೂ ಸರಿ ಸುಮಾರು ಏಳು ನೂರಕ್ಕೂ ಹೆಚ್ಚು ಮುಖ್ಯ ಪ್ರಾಣ ದೇವರ ಪ್ರತಿಷ್ಠಾಪನೆ ಮಾಡಿದ್ದಾರೆ. ಅದರಲ್ಲಿ ಹಂಪೆಯ ಹನುಮಂತ ದೇವರು ಒಂದು. ಇಲ್ಲಿನ ಹನುಮಂತನು ಅತ್ಯಂತ್ಯ ಶಕ್ತಿಶಾಲಿ ಜನರ ಕಷ್ಟಗಳನ್ನು ನಿವಾರಣೆ ಮಾಡುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಬೇಡಿ ಬಂಡ ಜನಕ್ಕೆ ಎಂದು ಸಹ ನಿರಾಸೆ ಆಗುವುದಿಲ್ಲ. ಇಲ್ಲಿಗೆ ಬರೀ ಕರ್ನಾಟಕ ಮಾತ್ರ ಅಲ್ಲದೆ ಹಲವು ರಾಜ್ಯಗಳಿಂದ ಜನರು ಬಂದು ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುತ್ತಾರೆ.

ಈ ಪುಣ್ಯ ಕ್ಷೇತ್ರದಲ್ಲಿ ವ್ಯಾಸರಾಜರು ಬಂಡೆಯ ಮೇಲೆ ಇಜ್ಜಲಿನಿಂದ ಹನುಮಂತ ದೇವರ ಚಿತ್ರ ಬಿಡಿಸಿದಾಗ ಅದು ಸುಂದರ ರೂಪ ಪಡೆದುಕೊಂಡು ಮೂರ್ತಿ ಆಗುತ್ತಿತ್ತು ನಂತರ ಕೆಲವೇ ಕ್ಷಣದಲ್ಲಿ ಕಪಿ ರೂಪ ತಾಳಿ ಬಂಡೆಯಿಂದ ಜಿಗಿದು ಓಡಿ ಹೋಗುತ್ತಾ ಹೀಗೆ ತಾವು ಹತ್ತಾರು ಬರಿ ಬರೆದರು ಹೀಗೆ ಆಗುತ್ತಾ ಇದನ್ನು ಅರಿತುಕೊಂಡ ವ್ಯಾಸರಾಜರು ತಮ್ಮ ದಿವ್ಯ ಮಂತ್ರ ಶಕ್ತಿಗಳಿಂದ ಷಟ್ಕೋನ ಶ್ರೀ ಚಕ್ರ ಬರೆದು ಸುತ್ತಲೂ ಬೀಜಾಕ್ಷರಿ ಮಂತ್ರ ದಿಗ್ಬಂಧನ ಮಾಡಿದರು ನಂತರ ಅದರ ಮಧ್ಯದಲ್ಲಿ ಹನುಮಂತ ದೇವರ ಚಿತ್ರ ಬರೆದರು ಅದು ಸುಂದರ ಮೂರ್ತಿ ಪಡೆದುಕೊಂಡು ಆದ್ರೆ ಯಾವುದೇ ರೀತಿ ಕಪಿ ರೂಪದಿಂದ ಹನುಮಂತ ದೇವರು ಹೊರ ಹೋಗಲೇ ಇಲ್ಲ. ಹನುಮ ದೇವರು ಅಂದಿನಿಂದ ಇಂದಿಗೆ ಅಲ್ಲೇ ನೆಲೆಸಿದ್ದಾರೆ ತಮ್ಮನು ನಂಬಿ ಬಂದ ಜನಕ್ಕೆ ಸಾಕಷ್ಟು ಒಳಿತನ್ನು ಮಾಡಿದ್ದಾರೆ. ನೀವು ಸಹ ಜೀವನದಲ್ಲಿ ಒಮ್ಮೆ ಈ ಹನುಮನ ದೇವರ ದರ್ಶನ ಪಡೆಯಲೇ ಬೇಕು. ನಿಮ್ಮ ಸರ್ವ ಸಮಸ್ಯೆಗಳಿಗೂ ಈ ಹನುಮ ದೇವರು ಖಂಡಿತ ಪರಿಹಾರ ನೀಡುತ್ತಾರೆ. ಮಾಹಿತಿ ಶೇರ್ ಮಾಡುವು ಒಂದು ಪುಣ್ಯದ ಕೆಲಸ ದಯವಿಟ್ಟು ಓದಿದ ಕೊಡಲೇ ಶೇರ್ ಮಾಡಿ ಕ್ಷೇತ್ರದ ಪುಣ್ಯ ಫಲ ನಿಮಗೂ ಸಿಗುತ್ತದೇ.

LEAVE A REPLY

Please enter your comment!
Please enter your name here