ಈ ದೇವಿಯ ಪವಾಡ ಗೊತ್ತಾದ್ರೆ ಒಮ್ಮೆ ಆದರು ಈ ದೇಗುಲಕ್ಕೆ ಭೇಟಿ ಕೊಡ್ತೀರ 

0
913

ತಾಯಿ ಕಬಾಳಮ್ಮ ನವರ ಶಕ್ತಿ ಅಪಾರ ವಾಗಿರುವ ಈ ದೇಗುಲಕ್ಕೆ ನಿತ್ಯ ನೂರಾರು ಜನ ಭೇಟಿ ನೀಡಿ ತಮ್ಮ ಎಲ್ಲ ರೀತಿಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುತ್ತಾರೆ. ಇದು ಸಾಮಾನ್ಯ ದೇಗುಲ ಅಂತು ಅಲ್ಲ ಇಲ್ಲಿನ ದೇವಿಯಲ್ಲಿ ಅಪಾರವಾದ ಶಕ್ತಿ ಇದೆ. ಬೇಡಿ ಬಂದ ಜನರನ್ನು ಈ ತಾಯಿ ಎಂದು ಸಹ ಬರಿ ಕೈಯಲ್ಲಿ ಕಳಿಸುವುದಿಲ್ಲ ಭಕ್ತಿ ಒಂದು ನೀಡಿದರೆ ತಾಯಿ ಅನುಗ್ರಹ ನಿಮಗೆ ಸಿಗುವುದು ನಿಶ್ಚಿತ. ಇಲ್ಲಿನ ದೇಗುಲದ ವಿಶೇಷ ಅಂದ್ರೆ ತಾಯಿಯು ಬಲ ಕಡೆ ಹಾವಿನ ಪ್ರಸಾದ ನೀಡುವುದರ ಮೂಲಕ ತಾಯಿ ಕೆಲಸದ ಬಗ್ಗೆ ಖಂಡಿತ ಆಗುತ್ತಾ ಅಥವ ಇಲ್ಲವೋ ಎಂಬ ಸೂಚನೆ ನೀಡುತ್ತಾರೆ.

ಈ ಪ್ರದೇಶದಲ್ಲಿ ಒಂದು ವಿಶೇಷ ಘಟನೆ ನಡೆದಿದ್ದು ಯಾರೋ ಮರೆಯಲು ಸಾಧ್ಯ ಇಲ್ಲ ಮೊದಲಿಗೆ ಈ ಪ್ರದೇಶದಲ್ಲಿ ಬ್ರಿಟಿಶ್ ಸರ್ಕಾರ ಆಳ್ವಿಕೆ ಇತ್ತು ಆಗ ಈ ಬೆಟ್ಟ ಶಿಕ್ಷೆ ವಿಧಿಸುವ ತಾಣವಾಗಿತ್ತು. ತಪ್ಪು ಮಾಡಿದ ಜನರನ್ನು ಬ್ರಿಟಿಶ್ ನವರು ಮೇಲಿಂದ ನೂಕಿ ಸಾಯಿಸುತ್ತಾ ಇದ್ದರಂತೆ ಹೀಗೆ ಒಂದು ದಿನ ಒಬ್ಬ ವ್ಯಕ್ತಿಯನ್ನು ಬೆಟ್ಟದಿಂದ ಎಷ್ಟು ನೂಕಿದರು ಆ ವ್ಯಕ್ತಿ ಸಾಯಲೇ ಇಲ್ಲ ಅಂತೆ ಆ ವ್ಯಕ್ತಿ ಅದೇ ಬೆಟ್ಟದಲ್ಲಿ ಇರುವ ಕಬಾಳಮ್ಮನ ಭಕ್ತನಾಗಿದ್ದ ಬ್ರಿಟಿಶ್ ಅಧಿಕಾರಿಗಳು ಅವನನ್ನು ಬೆಟ್ಟದ ಮೇಲಿನಿಂದ ನುಕಿದರು ಆ ವ್ಯಕ್ತಿ ಸಾಯಲೇ ಇಲ್ಲ. ನಂತರ ಆ ವ್ಯಕ್ತಿ ದೇವಿಗೆ ಚಿನ್ನದ ಹಾರ ಮತ್ತು ಚಿನ್ನದ ಕಿರೀಟ ಮಾಡಿಸಿ ಕೊಡುತ್ತಾರೆ.

ಆ ವ್ಯಕ್ತಿ ಅಂದು ನೀಡಿರುವ ಚಿನ್ನದ ಕಿರೀಟ ಇಂದಿಗೂ ಸಹ ನಾವು ಶಿವ ರಾತ್ರಿ ಸಮಯದಲ್ಲಿ ನಡೆಯುವ ಜಾತ್ರ ಮಹೋತ್ಸವ ಸಮಯದಲ್ಲಿ ದೇವಿಗೆ ತೊಡಿಸುತ್ತಾರೆ. ಈ ದೇಗುಲದಲ್ಲಿ ಮತ್ತೊಂದು ವಿಶೇಷ ಅದು ಏನು ಅಂದ್ರೆ ಇಲ್ಲಿರುವ ನಂದಿಗೆ ದೇವಿಯ ವಿಶೇಷ ಕೃಪೆ ಇದ್ದು ಯಾರಾದರು ನೆಲದ ಮೇಲೆ ಮಲಗಿಕೊಂಡು ತಮ್ಮ ಇಷ್ಟಾರ್ಥ ಹೇಳಿಕೊಂಡರೆ ನಂದಿಯು ಅವರ ಬೆನ್ನಿನ ಮೇಲೆ ನಡೆದುಕೊಂಡು ಹೋಗುತ್ತದೆ ಹೀಗೆ ಮಾಡುವುದರಿಂದ ನಮ್ಮ ಕೋರಿಕೆಗಳು ಬೇಗನೆ ಈಡೇರುತ್ತದೆ ಎಂದು ಹಲವು ಜನ ಹೇಳುತ್ತಾರೆ. ತಮ್ಮ ಕೆಲಸ ಆದ ನಂತರ ನಂದಿಯ ಕೊಡುಗಳಿಗೆ ಹಣ ಇಡುತ್ತಾರೆ ಈ ಹಣವನ್ನು ಜಾತ್ರೆ ಸಮಯದಲ್ಲಿ ಉಪಯೋಗ ಮಾಡಿಕೊಳ್ಳುತಾರೆ.

ಇಲ್ಲಿ ದೇವಿಗೆ ಉಡಿಸಿರುವ ಸೀರೆಯನ್ನು ವರ್ಷಕ್ಕೆ ಒಮ್ಮೆ ಮಹಿಳೆಯರಿಗೆ ನೀಡುತ್ತಾರೆ ಅದನ್ನ ಮನೆಯಲ್ಲಿ ಇಟ್ಟುಕೊಂಡು ಪೂಜೆ ಮಾಡುವ ಮಹಿಳೆಯರಿಗೆ ವಿಶೇಷ ಫಲ ಸಿಗುತ್ತಿದೆ. ನಂಬಿ ಬಂದ ಜನರಿಗೆ ಎಂದು ಸಹ ಕಬಾಳಮ್ಮ ತಾಯಿ ಮೋಸ ಮಾಡಿಲ್ಲ. ಈ ವಿಶೇಷ ದೇವಿಯ ದೇಗುಲ ಇರೋದು ಕನಕಪುರ ದಿಂದ ಸಾತನೂರು ರಸ್ತೆಯಲ್ಲಿ ಸುಮಾರು 21 ಕಿಲೋಮೀಟರ್ ತೆರಳಿದರೆ ಇಲ್ಲಿ ಕಬ್ಬಾಳಮ್ಮ ದೇವಿಯ ದೇಗುಲ ಇದೆ ಇಲ್ಲಿಗೆ ಈಗಾಗಲೇ ಲಕ್ಷಾಂತರ ಜನ ಭೇಟಿ ನೀಡಿ ತಮ್ಮ ಕೋರಿಕೆಗಳನ್ನು ಈಡೇರಿಸಿಕೊಂಡಿದ್ದಾರೆ. ತಾಯಿಯ ದರ್ಶನ ಪಡೆದು ಜೀವನ ಸಾರ್ಥಕತೆ ಪಡೆದುಕೊಂಡಿದ್ದಾರೆ ಈ ಸ್ಥಳವು ಅತ್ಯಂತ ಪವಿತ್ರ ಕ್ಷೇತ್ರವಾಗಿದೆ

LEAVE A REPLY

Please enter your comment!
Please enter your name here