ಬೆಳ್ಳಗೆ ಸಮಯ ತಿಂಡಿ ಬಿಟ್ಟರೆ ನಿಮಗೆ ಈ ಸಮಸ್ಯೆ ಬರುವುದು ಖಚಿತ

0
746

ಇಂದಿನ ಕಾಲದ ಜನರು ಎಲ್ಲ ಕೆಲಸಗಳಲ್ಲಿ ಅವಸರ ಮಾಡುತ್ತಾರೆ. ಜೊತೆಗೆ ಕಾಲೇಜಿಗೆ ಹೋಗುವ. ಆಫೀಸಿಗೆ ಹೋಗುವ ಜನಗಳೇ ಹೆಚ್ಚು ಅವರು ಕಾಯಕವೇ ಕೈಲಾಸ ಎಂದು ತಿಳಿದಿರುವವರು ಇದ್ದರೆ. ಇನ್ನು ಕೆಲವರು ಬೆಳಿಗ್ಗೆ ಬೇಗ ಹೇಳದೆ ಇರುವ ಸೋಂಬೇರಿಗಳು ಇರುತ್ತಾರೆ. ಇವರು ಸರಿಯಾದ ಸಮಯಕ್ಕೆ ಕೆಲಸಕ್ಕೆ ಹೋಗಬೇಕು ಎಂದು ತಮ್ಮ ಆರೋಗ್ಯವನ್ನೇ ಮರೆತು ಬಿಡುತ್ತಾರೆ.ಆದ್ದರಿಂದ ಬೆಳಗ್ಗಿನ ತಿಂಡಿಯನ್ನು ಮಾಡದೆ ಹೊರಟು ಬಿಡುತ್ತಾರೆ.

ಆದರೆ ಹೀಗೆ ಬೆಳಗ್ಗಿನ ಉಪಹಾರ ಸೇವಸದೆ ಇರುವವರ ಆರೋಗ್ಯ ತುಂಬಾ ಕೆಡುತ್ತದೆ. ನಮಗೆ ಎಷ್ಟು ಕೆಲಸವಿದ್ದರು. ಕೆಲಸವಿಲ್ಲದ್ದಿದ್ದರು.ಹಸಿವು ಇದ್ದರು. ಹಸಿವು ಇಲ್ಲದ್ದಿದ್ದರು ಬೆಳಗಿನ ತಿಂಡಿ ತಪ್ಪಿಸಬಾರದು.ಬೆಳಗಿನ ತಿಂಡಿ ನಮ್ಮ ದೇಹದ ಆರಂಭಕ್ಕೆ ಶಕ್ತಿ ನೀಡುತ್ತದೆ. ನಮ್ಮ ಈ ದಿನದ ಕೆಲಸಗಳು ಉತ್ತಮವಾಗಿ ಸಾಗಬೇಕು ಎಂದರೆ ಮುಖ್ಯವಾಗಿ ಉಪಹಾರ ಬೇಕು. ನಾವು ಸೇವಿಸುವ ಆರೋಗ್ಯಕರ ಉಪಾಹಾರದಲ್ಲಿ ಧಾನ್ಯಗಳಾದ ಬಿಸಿ ಮತ್ತು ಹಸಿ ಕಾಳು-ಧಾನ್ಯಗಳು ಇಡಿ-ಗೋಧಿ ನೆಲಗಡಲೆ ಬೆಣ್ಣೆ, ತೆಳು ಮಾಂಸ, ಪೌಲಿó, ಮೀನು ಮತ್ತು ಬೇಯಿಸಿದ ಮೊಟ್ಟೆಗಳ ರೂಪದ ಕಡಿಮೆ ಕೊಬ್ಬಿನ ಪ್ರೊಟೀನ್‌ಗಳು, ಕಡಿಮೆ ಕೊಬ್ಬಿನ ಹಾಲಿನ ಉತ್ಪನ್ನಗಳಾದ-ಕೆನೆರಹಿತ ಹಾಲು, ಕಡಿಮೆ ಕೊಬ್ಬಿನ ಮೊಸರು ಮತ್ತು ಕಡಿಮೆ ಕೊಬ್ಬಿನ ಬೆಣ್ಣೆ ಜೊತೆಗೆ ಹಣ್ಣು ಮತ್ತು ತರಕಾರಿಗಳು ಇರಬೇಕು.

ಉಪಾಹಾರವನ್ನು ತಯಾರು ಮಾಡುವುದಕ್ಕಾಗಿ ಆಹಾರದ ಪ್ರತೀ ವರ್ಗದಿಂದಲೂ ಒಂದೆರಡು ಆಯ್ಕೆಗಳು ಇರುವಂತೆ ನೋಡಿಕೊಳ್ಳಿ. ಉಪಾಹಾರ ಸೇವನೆಯ ಸಮಯ ಅನ್ನುವುದು ಕುಟುಂಬದ ಸದಸ್ಯರೆಲ್ಲರೂ ಒಂದೆಡೆ ಸೇರಿ ಆಹಾರ ಸೇವಿಸಲು ಇರುವ ಒಂದು ಉತ್ತಮ ಅವಕಾಶ. ಬಾಲ್ಯದಿಂದಲೇ ಉತ್ತಮ ಉಪಾಹಾರ ಅಭ್ಯಾಸವನ್ನು ರೂಢಿಸಿಕೊಳ್ಳುವುದು ಮತ್ತು ಪ್ರೌಢ ವಯಸ್ಸಿನಲ್ಲಿ ಅದನ್ನು ಮುಂದುವರಿಸಿಕೊಂಡು ಹೋಗುವುದು, ಬೆಳಗ್ಗಿನ ಉಪಾಹಾರವನ್ನು ತಪ್ಪಿಸಿಕೊಳ್ಳುವುದನ್ನು ತಡೆಯುವ ನಿಟ್ಟಿನಲ್ಲಿ ಮಾಡಬಹುದಾದ ಅತ್ಯಂತ ಒಳ್ಳೆಯ ಅಭ್ಯಾಸ ಎನಿಸಬಹುದು.

ಆದರೆ ಸಾಮಾನ್ಯವಾಗಿ ನಾವು ಬೆಳಗ್ಗಿನ ಉಪಹಾರದಲ್ಲಿ ಕೆಲವು ತಪ್ಪುಗಳನ್ನು ಮಾಡುತ್ತೇವೆ ಅವುಗಳು ಏನು ನೋಡೋಣ. ಬೆಳಗ್ಗೆ ಎದ್ದು ಹೆಚ್ಚು ಎಣ್ಣೆಯುಕ್ತ ಪದಾರ್ಥಗಳನ್ನು ಸೇವಿಸುವುದು. ಹಾಗೂ ರಾತ್ರಿ ಮಾಡಿದ ಆಹಾರಗಳನ್ನು ಸೇವಿಸುವುದರಿಂದ ನಮ್ಮ ದೇಹದಲ್ಲಿ ಕ್ಯಾಲೋರಿ ಹೆಚ್ಚಾಗುತ್ತದೆ. ಇತ್ತೀಚೆಗೆ ಬೆಳ್ಳಗಿನ ತಿಂಡಿಗೆ ಎಲ್ಲರೂ ಮಫ್ಪಿನ್.ಡೋನಾಟ್. ತಿನ್ನುತ್ತಾರೆ.ಆದರೆ ಇದರ ಸೇವನೆಯು ನಮ್ಮ ಆರೋಗ್ಯಕ್ಕೆ ತುಂಬಾ ಹಾನಿಕಾರಕವಾಗಿರುತ್ತದೆ. ಬೆಳಗ್ಗೆ ಎದ್ದ ತಕ್ಷಣ ಎಲ್ಲರೂ ಟೀ. ಕಾಫಿಯನ್ನು ಕುಡಿಯದೆ ಕೆಲಸವನ್ನು ಮುಂದುವರಿಸಲು ತುಂಬಾ ಕಷ್ಟ ಪಡುತ್ತಾರೆ. ಆದ್ದರಿಂದ ತಮ್ಮ ನಿದ್ರೆಯ ಮಂಪು ಹೋಗಿಸಿ. ಮೈಂಡ್ ರಿಲೀಫ್ ಗಾಗಿ ಟೀ. ಕಾಫಿ ಸೇವನೆ ಮಾಡುತ್ತಾರೆ ಆದರೆ ಇದು ನಮ್ಮ ದೇಹದ ಕ್ಯಾಲೋರಿಯನ್ನು ಹೆಚ್ಚಿಸುತ್ತದೆ.

ಬೆಳಗ್ಗಿನ ತಿಂಡಿ ಸೇವನೆಗೆ ಹಣ್ಣುಗಳು. ತರಕಾರಿಗಳ ಸೇವನೆಯನ್ನು ಮಾಡಿ.ಅದು ಬಿಟ್ಟು ಕೇಕ್. ಜಾಮ್.ಬರ್ಗರ್.ಪಿಜ್ಜಾ. ಗಳ ಸೇವನೆ ಮಾಡಿದರೆ ಕ್ಯಾಲೋರಿ ಹೆಚ್ಚಿ. ನಿಮ್ಮ ದೇಹದ ಕೊಬ್ಬು ಅಧಿಕವಾಗುತ್ತದೆ. ರಾತ್ರಿ ಊಟ ಹೆಚ್ಚಾಗಿದೇ ಎಂದು ಇಲ್ಲವೇ ಬೆಳಗ್ಗೆ ತಿಂಡಿ ತಿನ್ನಲು ಹಸಿವು ಇಲ್ಲ ಎಂದು. ಬೆಳ್ಳಗಿನ ಉಪಹಾರವನ್ನು ತಪ್ಪಿಸಬಾರದು.ಇದು ನಮ್ಮ ಚಯಾಪಚಯ ಕ್ರಿಯೆಗೆ ತೊಂದರೆ ಉಂಟುಮಾಡುತ್ತದೆ. ಜೊತೆಗೆ ತೂಕವನ್ನು ಹೆಚ್ಚಿಸುತ್ತದೆ.

ಬೆಳಗ್ಗೆ ತಿಂಡಿಯು ತಪ್ಪಿಸಬಾರದು ಆದರೆ ಅಗೆಂದು ಹೊಟ್ಟೆ ತುಂಬಿ ತುಳುಕುವಷ್ಟು ತಿನ್ನಬಾರದು. ಬೆಳಗ್ಗೆ ಎದ್ದ ತಕ್ಷಣ ಬಿಸಿನೀರನ್ನು ಹಾಗೂ ಬಿಸಿನೀರಿಗೆ ಸ್ವಲ್ಪ ನಿಂಬೆರಸ. ಅಥವಾ ಜೇನುತುಪ್ಪ ಸೇರಿಸಿ ಕುಡಿಯಲು ಅಭ್ಯಾಸ ಮಾಡಿಕೊಳ್ಳಿ ಇದು ನಿಮ್ಮ ಆರೋಗ್ಯವನ್ನು ಕಾಪಾಡುತ್ತದೆ. ಜೊತೆಗೆ ನಿಮ್ಮ ಮನಸ್ಸು ಕೂಡ ರಿಲೀಫ್ ಆಗಿರುತ್ತದೆ.ಜೀರ್ಣಕ್ರಿಯೆ ಕೂಡ ಸುಲಭವಾಗುತ್ತದೆ. ಬೆಳಗಿನ ಉಪಹಾರಕ್ಕೆ ಗ್ರೀನ್ ಟೀ. ಲೆಮನ್ ವೆಡ್ಜ್. ಓಟ್ಸ್ ಜೊತೆಗೆ ಬಾಳೆಹಣ್ಣು. ಮೊಟ್ಟೆ. ಇವುಗಳನ್ನು ತಿನ್ನುವುದರಿಂದ ನಿಮ್ಮ ಆರೋಗ್ಯವೂ ಉತ್ತಮವಾಗಿರುತ್ತದೆ.

ಆದ್ದರಿಂದ ಬೆಳಗ್ಗಿನ ಉಪಹಾರದಿಂದ ನಮ್ಮ ಹೃದಯದ ಆರೋಗ್ಯ ಕಾಪಾಡಿಕೊಳ್ಳಲು. ಜೀವಿತಾವಧಿಯನ್ನು ಹೆಚ್ಚಿಸಿಕೊಳ್ಳಲು. ಶರೀರದ ತೂಕವನ್ನು ಕಡಿಮೆಮಾಡಲು. ಶರೀರಕ್ಕೆ ಶಕ್ತಿ ತುಂಬಲು. ಮಧುಮೇಹ ಸಮಸ್ಯೆಯಿಂದ ದೂರವಿರಲು. ರಕ್ತದ ಒತ್ತಡ ನಿಯಂತ್ರಣದಲ್ಲಿ ಇಡಲು.ಹೃದಯ ಸಂಬಂಧಿ ಸಮಸ್ಯೆಗಳಿಂದ ದೂರವಿರಲು. ನಮ್ಮ ಜ್ಞಾಪಕ ಶಕ್ತಿಯನ್ನು ಹೆಚ್ಚಿಸಲು.ತುಂಬಾ ಸಹಾಯಕ ವಾಗುತ್ತದೆ. ಆದ್ದರಿಂದ ಬೆಳಗಿನ ತಿಂಡಿಯೂ ಯಾವ ರೀತಿ ಇರಬೇಕು ಹಾಗು ಬೆಳಗಿನ ತಿಂಡಿಯನ್ನು ತಪ್ಪದೆ ಸೇವಿಸಿ ಯಾವುದೇ ಕೆಲಸವಿದ್ದರು. ಹಸಿವು ಇಲ್ಲದ್ದಿದ್ದರು ಬೆಳ್ಳಗ್ಗೆ ಸ್ವಲ್ಪ ಆಹಾರವನ್ನು ತಿಂದು ಆರೋಗ್ಯವನ್ನು ಕಾಪಾಡಿಕೊಳ್ಳಿ.

LEAVE A REPLY

Please enter your comment!
Please enter your name here