ಮೇಷ: ಕೆಲಸ ಹುಡುಕುತ್ತಿರುವ ಜನಕ್ಕೆ ಬೇರೆ ಕಡೆ ನೌಕರಿ ಸಿಗುವ ಸಾಧ್ಯತೆ ಇರುತ್ತದೆ. ಬೇರೆಯವರ ಮಾತಿಗೆ ಮರುಳಾಗಿ ಯಾವುದೇ ಕಾರಣಕ್ಕೂ ಹಣವನ್ನು ನೀಡಬೇಡಿ. ಇಂದು ನೀವು ಸಂಜೆ ಸಮಯ ಚಾಮುಂಡಿ ತಾಯಿಯ ದರ್ಶನ ಪಡೆದುಕೊಂಡರೆ ನಿಮಗೆ ವಿಶೇಷ ಫಲ ಸಿಗಲಿದೆ.
ವೃಷಭ: ಸ್ನೇಹಿತರು ಮಾಡುವ ತಪ್ಪಿನಿಂದ ನಿಮಗೆ ಕೈಗೆ ಬರುವ ತುತ್ತು ಬಾಯಿಗೆ ಸಿಗದೇ ತಪ್ಪುವ ಸಂಭವ ಹೆಚ್ಚಿದೆ. ನೀವು ಹೆಚ್ಚಿನ ಶ್ರಮ ಪಟ್ಟು ಕೆಲಸ ಮಾಡಿದರೆ ಅಧಿಕ ಲಾಭ ನಿಮಗೆ ದೊರೆಯಲಿದೆ. ಸಂಜೆ ಏಳು ಗಂಟೆ ನಂತರ ದುರ್ಗಾ ದೇವಿ ಮಂತ್ರ ಪಾರಾಯಣ ಮಾಡಿಕೊಳ್ಳಿ.
ಮಿಥುನ: ನಿಮ್ಮ ಪರಿಚಯದ ಜನರೇ ನಿಮ್ಮ ಮೇಲೆ ವಿನಾಕಾರಣ ಆರೋಪ ಮಾಡುವರು. ಭಗವಂತನ ಅನುಗ್ರಹ ನಿಮ್ಮ ಮೇಲೆ ಇರುವುದರಿಂದ ಯಾವ ವ್ಯಕ್ತಿಗಳು ನಿಮಗೆ ಕೆಡಕು ಮಾಡಲು ಪ್ರಯತ್ನ ಪಟ್ಟರು ಅದು ಪ್ರಯೋಜನವಾಗದು. ಹೆಚ್ಚಿನ ಧನ ಲಾಭ ಆಗಲಿದೆ ಚಿಂತಿಸುವ ಅಗತ್ಯ ಇಲ್ಲವೇ ಇಲ್ಲ.
ಕರ್ಕಾಟಕ: ನಿಮ್ಮ ಇಂದಿನ ಆಪತ್ತಿನ ಸಮಯದಲ್ಲಿ ನಿಮ್ಮ ಸ್ನೇಹಿತರು ತಾವಾಗಿಯೇ ಬಂದು ನಿಮಗೆ ಸಹಾಯ ಮಾಡುವರು. ನಿಮ್ಮ ಉತ್ತಮ ವ್ಯಕ್ತಿಕ್ವದಿಂದ ಸಮಾಜದಲ್ಲಿ ನಿಮ್ಮ ಕೀರ್ತಿ ಮತ್ತು ಪ್ರತಿಷ್ಠೆ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಹಲವು ಸಮಸ್ಯೆಗೆ ಪರಿಹಾರವು ನಿಮಗೆ ದೊರೆಯಲಿದೆ.
ಸಿಂಹ: ಇಂದು ನೀವು ವಾಹನ ಚಲಾಯಿಸುವ ಮುಂಚೆ ದುರ್ಗಾ ದೇವರ ಸ್ತೋತ್ರ ಹೇಳಿಕೊಂಡರೆ ತುಂಬಾ ಉಪಯುಕ್ತ. ನಿಮ್ಮ ರಾಶಿಗಳಿಗೆ ಗ್ರಹಫಲ ಅಷ್ಟು ಅದೃಷ್ಟ ಇಲ್ಲದೆ ಇರುವ ಕಾರಣ ನೀವು ಇಂದು ಎಚ್ಚರಿಕೆಯಿಂದಲೇ ಇರುವುದು ತುಂಬಾ ಒಳ್ಳೇದು.
ಕನ್ಯಾ: ನಿಮ್ಮ ಗಮನವನ್ನು ಬೇರೆಡೆಗೆ ಸೆಳೆದು ನಿಮ್ಮನು ಮೋಸ ಮಾಡುವ ಸಾಧ್ಯತೆ ಹೆಚ್ಚಿದೆ. ಹೆಣ್ಣುಮಕ್ಕಳು ಸಂಜೆ ಸಮಯದಲ್ಲಿ ದೇವಿಯ ದರ್ಶನ ಪಡೆದು ನಿಂಬೆ ಹಣ್ಣಿನಲ್ಲಿ ಮಾಡಿದ ದೀಪ ಹಚ್ಚಿದರೆ ತಂದೆ ತಾಯಿಗೆ ಹೆಚ್ಚಿನ ಶುಭ ಉಂಟು ಮಾಡಲಿದೆ.
ತುಲಾ: ನಿಮ್ಮ ಆತುರದ ನಿರ್ಣಯ ಮತ್ತು ನಿಮ್ಮ ವೇಗಕ್ಕೆ ನೀವಾಗಿಯೇ ಸಾಕಷ್ಟು ಕಷ್ಟಗಳನ್ನು ತಂದುಕೊಳ್ಳಬಹುದು. ಮಾಡುವ ಕೆಲ್ಸಕ್ಕೆ ಹಿರಿಯರ ಮಾರ್ಗದರ್ಶನ ಸಲಹೆ ಪಡೆಯುವುದು ಉತ್ತಮವಾಗಿದೆ. ಸಂಜೆ ಸಮಯದಲ್ಲಿ ಹಸುವಿಗೆ ಬೆಲ್ಲವನ್ನು ನೀಡಿ ಶುಭ ಸೂಚನೆ ಸಿಗಲಿದೆ.
ವೃಶ್ಚಿಕ: ಹಣವನ್ನು ಮಿತವಾಗಿ ಬಳಕೆ ಮಾಡಿ. ನಿಮಗೆ ನೀವು ಮಿತಿ ಹಾಕುವುದಿಲ್ಲ ಅಂದರೆ ನಿಮ್ಮ ಆರ್ಥಿಕ ಸಮಸ್ಯೆಗಳಿಗೂ ನೀವೇ ಕಾರಣ ಆಗುತ್ತೀರಿ. ಉಷ್ಣ ಹೆಚ್ಚಾಗಿ ಜ್ವರ ಮತ್ತು ಶೀತ ಬರುವ ಸಾಧ್ಯತೆ ಇರುತ್ತದೆ. ದುರ್ಗಾ ಸ್ತೋತ್ರ ಪಾರಾಯಣ ಮಾಡಿಕೊಳ್ಳಿ.
ಧನು: ನಿಮ್ಮವರೇ ನಿಮಗೆ ಸಮಯಕ್ಕೆ ಬಾರದೆ ಇರುವುದರಿಂದ ನಿಮಗೆ ಆಫೀಸ್ ಅಥವ ಇತರೆ ಕ್ಷೇತ್ರದಲ್ಲಿ ಕೆಲಸದ ಒತ್ತಡ ನಿಮ್ಮ ಮೇಲೆ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಆರೋಗ್ಯ ಸ್ತಿತಿ ಇಂದು ಉತ್ತಮವಾಗಿದೆ. ಸಂಜೆ ನಂತರ ನಿಮಗೆ ಬರಬೇಕಾದ ಬಾಕಿ ಹಣ ಬರುವ ಸಾಧ್ಯತೆ ಇರುತ್ತದೆ.
ಮಕರ: ಪತ್ರಿಕೆಯಲ್ಲಿ ಕೆಲಸ ಮಾಡುವವರಿಗೆ ವಿಶೇಷ ಲಾಭ ದೊರೆಯಲಿದೆ. ನಿಮ್ಮ ನಿರೀಕ್ಷೆಗೂ ಮೀರಿ ಧನ ಲಾಭ ಆಗುವ ಸಾಧ್ಯತೆ ಆಗಬಹುದು. ಸಹೋದರ ಅಥವಾ ಸಹೋದರಿ ಆರೋಗ್ಯದಲ್ಲಿ ನೀವು ಹೆಚ್ಚಿನ ಕಾಳಜಿ ವಹಿಸಿಕೊಳ್ಳಿ.
ಕುಂಭ: ನಿಮ್ಮನು ಸಿಲುಕಿಸುವ ಮತ್ತು ನಿಮ್ಮನು ಯಾವಾಗಲು ಗೇಲಿ ಮಾಡುವ ಜನರಿಂದ ಅಥವ ಸ್ನೇಹಿತರಿಂದ ಇಂದು ಹೆಚ್ಚಿನ ಅಂತರ ಕಾಯ್ದುಕೊಳ್ಳಿ. ನಿಮ್ಮ ಗುರು ಹಿರಿಯರ ಆಶಿರ್ವಾದ ತಪ್ಪದೇ ಪಡೆದುಕೊಳ್ಳಿ.
ಮೀನ: ಸಕಾಲಕ್ಕೆ ಸ್ನೇಹಿತರ ಸಹಾಯ ದೊರೆಯದೆ ಪೀಕಲಾಟ ಅನುಭವಿಸುವ ಸಾಧ್ಯತೆ ಇರುವುದರಿಂದ ಇಂದು ಸ್ನೇಹಿತರನ್ನು ನಂಬಿ ಯಾವುದೇ ಕೆಲಸಕ್ಕೆ ಕೈ ಹಾಕಬೇಡಿ. ತಂದೆಯ ಆರೋಗ್ಯ ಕ್ಷೀನಿಸಲಿದೆ. ನಿಮ್ಮ ಕುಟುಂಬದ ಜನರು ದೂರದ ಊರಿನಿಂದ ಬರುವ ಸಾಧ್ಯತೆ ಇರುತ್ತದೆ.