ನಿಮ್ಮ ಮನೆಯಲ್ಲಿರುವ ಈ ಎಣ್ಣೆಯಿಂದ ನಿಮಗೆ ಸಿಗುತ್ತೆ ನಲವತ್ತು ಲಾಭಗಳು

0
1133

ಎಲ್ಲರೂ ಕೇಳಿರಬಹುದು ಹರೆಳೆಣ್ಣೆಯನ್ನು. ಇದನ್ನು ಹರಳು ಎಂಬ ಸಣ್ಣ ಸಣ್ಣ ಬೀಜಗಳನ್ನು ಬೇಯಿಸಿ ಮಾಡುವಂತಹ ನೈಸರ್ಗಿಕ ಹಾಗೂ ಆರೋಗ್ಯದಾಯಕ ಎಣ್ಣೆಯಾಗಿದೆ. ವೈಜ್ಞಾನಿಕವಾಗಿ ರಿಷಿನಸ್ ಕಂಮ್ಯುನಿಸ್ ಎನ್ನುವ ಹೆಸರಿನಿಂದ ವಾಸಿಯಾಗಿರುವ ಹರಳೆಣ್ಣೆ ಬಹುಉಪಯೋಗಗಳನ್ನು ಹೊಂದಿರುವ ಹಳದಿ ಬಣ್ಣದ ತರಕಾರಿ ತೈಲ. ಇಂದಿನ ಕಾಲದಲ್ಲಿ ಕೇವಲ ಹರಳೆಣ್ಣೆಯ ಬಳಕೆ ಮಾತ್ರ ಇದ್ದಿದ್ದು. ಈ ಎಣ್ಣೆಯಿಂದ ಎಷ್ಟು ಉಪಯೋಗ ಪಡೆದುಕೊಳ್ಳುತ್ತಿದ್ದರು ಎಂದರೆ ಅವರ ಆರೋಗ್ಯವೇ ಅದನ್ನು ಹೇಳುತ್ತಿತ್ತು. ಇಂದಿನ ಕಾಲದಲ್ಲಿ ಹೆಚ್ಚಾಗಿ ಚಿಕ್ಕ ಮಕ್ಕಳಿಂದಲು ಕಣ್ಣಿನ ಸಮಸ್ಯೆ ಕಾಡುತ್ತದೆ ಚಿಕ್ಕ ವಯಸ್ಸಿಗೆ ಕನ್ನಡಕ ಹಾಕಿಕೊಳ್ಳುತ್ತಾರೆ .ಆದರೆ ಹಿಂದಿನ ಕಾಲದ ಜನರು ಕನ್ನಡಕವನ್ನೇ ನೋಡಿಲ್ಲ ಅಷ್ಟು ಆರೋಗ್ಯವಾಗಿ ಇರುತ್ತಿದ್ದವು ಅವರ ಕಣ್ಣುಗಳು.ಅದಕ್ಕೆ ಕಾರಣ ಅವರು ಹರೆಳೆಣ್ಣೆಯನ್ನು ಹೆಚ್ಚು ಉಪಯೋಗಿಸುತ್ತಿದ್ದರು.

ಇಂದಿನ ಕೆಲವು ಜನರು ಹರಳೆಣ್ಣೆ ಎಂದರೆ ದೂರ ಸರಿಯುತ್ತಾರೆ ಏಕೆಂದರೆ ಅದು ತುಂಬಾ ಅಂಟು ಅಂಟು ತೊಳೆಯಲು ತುಂಬಾ ಕಷ್ಟ ಎಂದು ಹಿಂಜರಿಯುತ್ತಾರೆ. ಆದರೆ ಈ ಹರಳೆಣ್ಣೆಯನ್ನು ಉಪಯೋಗಿಸುವುದರಿಂದ ಆಗುವ ಲಾಭಗಳನ್ನು ಜೊತೆಗೆ ಈ ಹರಳೆಣ್ಣೆ ಹೇಗೆ ಉಪಯೋಗವಾಗುತ್ತದೆ ಎಂದು ನೋಡೋಣ ಬನ್ನಿ. ಎಣ್ಣೆಯಲ್ಲಿ ತಿರುಳಿನ ಎಣ್ಣೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಓಲಿಯಕ್ ಮತ್ತು ಲಿನೋಲಿಯಿಕ್ ಆಮ್ಲಗಳೂ ಸ್ವಲ್ಪ ಪ್ರಮಾಣದಲ್ಲಿ ರಿಸಿನೋಲಿಯಿಕ್ ಆಮ್ಲವೂ ಇವೆ. ಔಷಧೀಯ ಗುಣ ಹೊಂದಿರುವ ಹರಳೆಣ್ಣೆ ಮಲಬದ್ಧತೆ ಅಥವಾ ಡಯೆರಿಯಾ ಕಾಯಿಲೆಗೆ ಪ್ರಯೋಜನಕಾರಿ. ಇದರಲ್ಲಿರುವ ರಿಸಿನೋಲಿಕ್ ಆಸಿಡ್ ಮುಟ್ಟು ತಡವಾಗಿ ಆಗುವುದು ಅಥವಾ ಅಧಿಕ ದಿನಗಳ ರಕ್ತಸ್ರಾವದ ಸಮಸ್ಯೆಗಳನ್ನು ಹೋಗಲಾಡಿಸುತ್ತದೆ.

ಗಾಯಗಳಾದಾಗ, ಸೂರ್ಯನ ಕಿರಣಗಳಿಂದ ಮುಖ ಕಪ್ಪಾದಾಗ, ಮೊಡವೆ ಮುಂತಾದ ಸಮಸ್ಯೆಗಳನ್ನು ಹೋಗಲಾಡಿಸಲು ಪ್ರಯೋಜನಕಾರಿ. ಮಲಗುವ ಮುನ್ನ ಹರಳೆಣ್ಣೆಯನ್ನು ಮುಖಕ್ಕೆ ಹಚ್ಚುವುದರಿಂದ ಕಣ್ಣಿನ ಸುತ್ತ ಇರುವ ಕಪ್ಪು ವರ್ತುಲವನ್ನು ಹೋಗಲಾಡಿಸುತ್ತದೆ. ಕಣ್ಣಿನ ರೆಪ್ಪೆ ತುಂಬಾ ತೆಳುವಾಗಿದ್ದರೆ ನಿರಂತರವಾಗಿ ಹರಳೆಣ್ಣೆ ಹಚ್ಚುವುದರಿಂದ ರೆಪ್ಪೆಯ ಕೂದಲೂ ದಟ್ಟವಾಗಿ ಬೆಳೆದು ಆಕರ್ಷಕವಾಗಿ ಕಾಣುತ್ತವೆ.

ಹರಳೆಣ್ಣೆ ರೋಗ ನಿರೋಧಕ ಶಕ್ತಿಯನ್ನೂ ನೀಡುತ್ತದೆ. ಹರಳೆಣ್ಣೆಯಲ್ಲಿ ಸೂಕ್ಷ್ಮಜೀವಿಗಳ ವಿರುದ್ಧ ಹೋರಾಡುವ ಶಕ್ತಿ ಇದ್ದು, ಉರಿಯೂತದ ವಿರೋಧಿಯೂ ಆಗಿದೆ. ಹರಳೆಣ್ಣೆಯನ್ನು ಹಾಲಿಗೆ ಅಥವಾ ಬೆಚ್ಚಗಿನ ನೀರಿಗೆ ಸೇರಿಸಿಕೊಂಡು ಕುಡಿದರೆ ಮಲಬದ್ಧತೆ ನಿವಾರಣೆ, ಶಾಸ್ತ್ರಚಿಕಿತ್ಸೆಗೂ ಮುನ್ನ ಕರುಳುಗಳನ್ನು ಸ್ವಚ್ಛಗೊಳಿಸುವುದು, ಪ್ರಸವ ವೇದನೆ ಶುರುವಾಗುವಂತೆ ಮಾಡುವುದು.
ಹುಬ್ಬು ಸರಿಯಿಲ್ಲದಿದ್ದವರು ಹರಳೆಣ್ಣೆಯಿಂದ ಮಸಾಜ್ ಮಾಡಿಕೊಂಡರೆ ರಕ್ತ ಸಂಚಲನ ಸರಿಯಾಗಿ ಕೂದಲು ಬೆಳೆಯುತ್ತದೆ. ಹರಳೆಣ್ಣೆಯಲ್ಲಿ ಆ೦ಟಿ ಆಕ್ಸಿಡೆ೦ಟ್. ಜೀವಸತ್ವ E ಹಾಗೂ ಖನಿಜಗಳ೦ತಹ ಪೋಷಕಾ೦ಶಗಳಿ೦ದ ಈ ತೈಲವು ಸಮೃದ್ಧವಾಗಿದೆ. ಈ ತೈಲವನ್ನು ನಿಯಮಿತವಾಗಿ ಬಳಸುತ್ತ ಬಂದರೆ ತ್ವಚೆಯು ಆರೋಗ್ಯಕರವಾಗಿರುತ್ತದೆ.

ಹರಳೆಣ್ಣೆಯ ಕಾಂಡದಿಂದ ಕಾಗದ ತಯಾರಿಕೆಗೆ ಬೇಕಾದ ಮೂಲ ವಸ್ತುವನ್ನು ತಯಾರಿಸಬಹುದು. ಎಲೆಗಳನ್ನು ಎರಿ ರೇಷ್ಮೆ ಹುಳುಗಳಿಗೆ ಆಹಾರವಾಗಿ ಹಾಕುತ್ತಾರೆ. ಹಿಮ್ಮಡಿಗಳು ಬಿರುಕುಬಿಟ್ಟಿರುವ ತ್ವಚೆಯ ಮೇಲೆ ಹರಳೆಣ್ಣೆಯನ್ನು ಹಚ್ಚಿಕೊಂಡು ಬೆಚ್ಚಗಿನ ನೀರಿನಲ್ಲಿ ನಿಮ್ಮ ಪಾದಗಳನ್ನು ಕೆಲಕಾಲ ನೆನೆಯ ಬಿಟ್ಟರೆ ಹಿಮ್ಮಡಿಯ ತ್ವಚೆಯು ಕೋಮಲವಾಗತೊಡಗುತ್ತದೆ.

ಹರಳೆಣ್ಣೆಯನ್ನು ಕೊಂಚ ಬಿಸಿ ಮಾಡಿ ಸೊಂಟಕ್ಕೆ ಹಚ್ಚುತ್ತಾ ಬಂದರೆ ನೋವು ಕಡಿಮೆಯಾಗುತ್ತದೆ. ಹರಳೆಣ್ಣೆಯನ್ನು ಕಾಯಿಸಿ, ವಿಭಜಿಸಿ, ಕ್ಷಾರಗಳಿಗೆ ಒಡ್ಡಿ ಸುಗಂಧದ್ರವ್ಯಗಳಿಗೆ ಬೇಕಾಗುವ ವಸ್ತುಗಳನ್ನೂ ಕೃತಕ ಗೋಂದಿನ ತಯಾರಿಕೆಗೆ ಬೇಕಾಗುವ ಡೈಬೇಸಿಕ್ ಆಮ್ಲವನ್ನೂ ಪಡೆಯಬಹುದು. ಆಗಾಗ ಹರಳೆಣ್ಣೆಯ ಒಂದೆರಡು ಹನಿಗಳನ್ನು ಕಿವಿಗೆ ಬಿಟ್ಟುಕೊಳ್ಳುತ್ತಾ ಇದ್ದರೆ ಶ್ರವಣ ಶಕ್ತಿ ಕುಂದುವ ಸಾಧ್ಯತೆ ಕಡಿಮೆಯಾಗುತ್ತದೆ. ಗರ್ಭಿಣಿಯರು ತಮ್ಮ ಗರ್ಭಾವಸ್ಥೆಯ ಕಡೆಯ ಎರಡು ತಿಂಗಳಲ್ಲಿ ಕೊಂಚ ಹರಳೆಣ್ಣೆಯನ್ನು ಉಬ್ಬಿದ ಹೊಟ್ಟೆಯ ಭಾಗಕ್ಕೆ ಸವರಿಕೊಳ್ಳುತ್ತಾ ಇದ್ದರೆ ಹೆರಿಗೆಯ ಬಳಿಕ ಹೊಟ್ಟೆಯಲ್ಲಿ ಸೆಳೆತದ ಗುರುತುಗಳು ಅತ್ಯಂತ ಕಡಿಮೆಯಾಗುತ್ತವೆ.

ಮಕ್ಕಳಿಗೆ ಹೊಟ್ಟೆಯ ಸಮಸ್ಯೆಗಳು ಇದ್ದರೆ ಹರಳೆಣ್ಣೆಯನ್ನು ಬಿಸಿ ಮಾಡಿ ವಿಲ್ಲೆದೆಲೆಗೆ ಹಚ್ಚಿ ಮಕ್ಕಳ ಹೊಟ್ಟೆಯ ಮೇಲೆ ಇಟ್ಟರೆ ಹೊಟ್ಟೆಯ ಸಮಸ್ಯೆ ದೂರವಾಗುತ್ತದೆ. ಮಲಬದ್ಧತೆ ಸಮಸ್ಯೆಗೆ ಹರಳೆಣ್ಣೆ ಉತ್ತಮ ಔಷಧಿ. ಹೊಟ್ಟೆ ಗಟ್ಟಿಯಿರುವ ಸಂದರ್ಭದಲ್ಲಿ ಸ್ವಲ್ಪ ಹರಳೆಣ್ಣೆಯನ್ನು ಸೇವಿಸಿದರೆ ಹೊಟ್ಟೆಯ ಗಟ್ಟಿ ಕಡಿಮೆಯಾಗುತ್ತದೆ. ಚರ್ಮದಲ್ಲಿ ತುರಿಕೆಗಳು ಇದ್ದರೆ ಹರಳೆಣ್ಣೆಯನ್ನು ಹಚ್ಚಬೇಕು. ದ್ವನಿ ಗಡುಸಾಗಿದ್ದರೆ ಗಂಟಲಿಗೆ ಪ್ರತಿದಿನ ಹರಳೆಣ್ಣೆಯನ್ನು ಸವರಿಕೊಂಡರೆ ದ್ವನಿಯ ಗಡಸುತನ ಕಡಿಮೆಯಾಗುತ್ತದೆ. ಹರಳೆಣ್ಣೆಯ ಕೆಲವು ಹನಿಗಳನ್ನು ಕಿವಿಗೆ ಬಿಟ್ಟುಕೊಂಡರೆ ಕಿವಿಯ ಸಮಸ್ಯೆ ಕಡಿಮೆಯಾಗುತ್ತದೆ. ಹರಳಣ್ಣೆಯಲ್ಲಿರುವ ರಿಸಿನೋಲಿಕ್ ಆಸಿಡ್ ಮುಟ್ಟು ತಡವಾಗಿ ಆಗುವುದು ಅಥವಾ ಅಧಿಕ ದಿನಗಳ ರಕ್ತಸ್ರಾವ ಮುಂತಾದ ಸಮಸ್ಯೆಗಳನ್ನು ಹೋಗಲಾಡಿಸುತ್ತದೆ.

ಹರಳೆಣ್ಣೆಯು ಹೆರಿಗೆ ನೋವನ್ನು ಕಡಿಮೆ ಮಾಡಲು ಸಹ ಬಳಸಬಹುದು. ಹೆರಿಗೆಯ ನಂತರ ಎದೆ ಹಾಲನ್ನು ಹೆಚ್ಚಿಸಲು ಈ ಎಣ್ಣೆಯನ್ನು 1/4 ಚಮಚದಷ್ಟು ಹರಳೆಣ್ಣೆಯನ್ನು ಕುಡಿಯುವುದು ಒಳ್ಳೆಯದು. ಹರಳೆಣ್ಣೆಯನ್ನು ಕೂದಲಿಗೆ ಹಚ್ಚುವುದರಿಂದ ಕೂದಲು ಉದುರುವ ಸಮಸ್ಯೆ ಬರುವುದಿಲ್ಲ, ಕೂದಲು ಸಹ ದಪ್ಪವಾಗಿ ಬೆಳೆಯುತ್ತದೆ. ಇದರಲ್ಲಿರುವ ಕೊಬ್ಬಿನಂಶ ಕೂದಲಿನ ಬುಡವನ್ನು ತೇವವಾಗಿ ಇಟ್ಟುಕೊಳ್ಳಲು ಸಹಾಯಮಾಡುತ್ತದೆ. ನೋಡಿದರಲ್ಲ ಅಂಟು. ವಾಸನೆ ಎಂದು ಹಿಂಜರಿಯುವ ಹರಳೆಣ್ಣೆಯು ಎಷ್ಟೆಲ್ಲ ಆರೋಗ್ಯದಾಯಕ ಅಂಶಗಳನ್ನು ಹೊಂದಿದೆ ಅದಕ್ಕಾಗಿ ಮಾರುಕಟ್ಟೆಯಲ್ಲಿ ಸಿಗುವ ವಿಧವಿಧದ ಎಣ್ಣೆಗಳನ್ನು ಬಳಸುವ ಬದಲು ಹರಳೆಣ್ಣೆಯನ್ನು ಬಳಸಿ ಅದರ ಉಪಯೋಗ ಪಡೆದುಕೊಳ್ಳಿ ಆರೋಗ್ಯವನ್ನು ಕಾಪಾಡಿಕೊಳ್ಳಿ

LEAVE A REPLY

Please enter your comment!
Please enter your name here