ರಾತ್ರಿ ಸಮಯದಲ್ಲಿ ಬ್ರಕೊಲಿ ತಿನ್ನಿ

0
679

ನಾವು ನಮ್ಮ ಜೀವನದಲ್ಲಿ ಆರೋಗ್ಯವಾಗಿ ಇರಬೇಕು ಎಂದರೆ ಅದಕ್ಕೆ ಮುಖ್ಯ ಕಾರಣ ನಮ್ಮ ದಿನನಿತ್ಯದ ಆಹಾರ. ನಾವು ಸೇವಿಸುವ ಆಹಾರ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.  ಆದರೆ ಇತ್ತೀಚಿನ ಜನರಿಗೆ ಇದು ಗೊತ್ತಿದ್ದರು ಅವರ ಕೆಲಸ. ಒತ್ತಡ. ಸಮಯದ ಅಭಾವಗಳಿಗೆ ಅವರು ಆಹಾರದ ಮೇಲೆ ಹೆಚ್ಚಿಗಿ ಆಶಕ್ತಿ ತೋರುವುದಿಲ್ಲ. ಬೆಳಿಗ್ಗೆ ಕೆಲಸಕ್ಕೆ ಲೇಟ್ ಎಂದು ಸರಿಯಾಗಿ ತಿಂಡಿ ತಿನ್ನುವುದಿಲ್ಲ. ಮದ್ಯಾಹ್ನ ಕೆಲಸಕ್ಕೆ ಸಮಯ ಸಾಲುವುದಿಲ್ಲ ಇಲ್ಲ ಸಮಯ ಸಿಗಲಿಲ್ಲ ಎಂದು ಸರಿಯಾಗಿ ಊಟ ಮಾಡುವುದಿಲ್ಲ. ಇನ್ನು ಎಲ್ಲ ಕೆಲಸಗಳನ್ನು ಮುಗಿಸಿ ಸಮಯ ಸಿಗುವುದು ರಾತ್ರಿ.  ಅದಕ್ಕಾಗಿ ರಾತ್ರಿ ಸಮಯದಲ್ಲದರು ಸರಿಯಾದ ಆಹಾರ ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಬೇಕು. ಜೊತೆಗೆ ರಾತ್ರಿಯ ಊಟವು ಸಹ ಹೆಚ್ಚಿರುತ್ತದೆ. ಆದರೆ ರಾತ್ರಿಯ ಸಮಯದಲ್ಲಿ ಚಯಾಪಚಯ ಕ್ರಿಯೆ ಕಡಿಮೆ. ಆದ್ದರಿಂದ ರಾತ್ರಿಯ ಸಮಯದಲ್ಲಿ ಸೇವಿಸುವ ಆಹಾರವು ಆರೋಗ್ಯದಾಯಕವಾಗಿರಬೇಕು. ಅಗದರೇ ಯಾವ ರೀತಿಯ ಆಹಾರವನ್ನು ಸೇವಿಸಬೇಕು ನೋಡೋಣ ಬನ್ನಿ.

ರಾತ್ರಿಯ ಊಟವು ಸುಲಭವಾಗಿ ಜೀರ್ಣಿಸಲು. ಪ್ರೋಟೀನ್ ಮತ್ತು ಸಸ್ಯಾಹಾರಿ ಅಂಶಗಳನ್ನು ಹೊಂದಿರುವ. ತೂಕವನ್ನು ಕಡಿಮೆ ಮಾಡುವ ಕೆಲವು ಆಹಾರಗಳನ್ನು ಸೇವಿಸಿ ನಮ್ಮ ಆರೋಗ್ಯದಾಯಕ ಜೀವನ ನೆಡೆಸೋಣ. ಹಸಿರು ಎಲೆಗಳನ್ನು ಹೊಂದಿರುವಂತಹ ಲೆಟ್ಯೂಸ್ ಇದು ನಮ್ಮ ರಾತ್ರಿಯೂಟವನ್ನು ಭರ್ತಿಗೊಳಿಸುವಂತೆ ಮಾಡುತ್ತದೆ. ಇದರಲ್ಲಿ ಸಲಾಡ್ ಮಾಡಿ ತಿನ್ನುವುದರಿಂದ ನಮ್ಮ ಆರೋಗ್ಯವೂ ಉತ್ತಮವಾಗಿರುತ್ತದೆ. ಸಣ್ಣ ಪ್ರಮಾಣದ ಮಾಂಸ, ಮೀನು ಹಾಗೂ ತರಕಾರಿಗಳನ್ನೊಳಗೊಂಡ ತೆಳುವಾದ ಸೂಪ್ ಗಳನ್ನು ರಾತ್ರಿಯ ಸಲ ಸೇವಿಸಿದರೆ ಇದು ನಮ್ಮ ಹೊಟ್ಟೆಯನ್ನು ತುಂಬಿಸುತ್ತದೆ. ಜೊತೆಗೆ ಎಲ್ಲ ಸಮಸ್ಯೆಗಳನ್ನು ದೂರವಿಡುತ್ತದೆ. ಕೆಂಪು ಮಾಂಸಕ್ಕಿಂತ ಬಿಳಿ ಮಾಂಸವನ್ನು ರಾತ್ರಿ ಹೆಚ್ಚು ಸೇವಿಸಿ. ದಿನದ ಕೊನೆಯಲ್ಲಿ ಪ್ರೊಟೀನ್ ಭರಿತ ಮಾಂಸ ನಿಮ್ಮ ಆಹಾರವಾಗಿದ್ದಾರೆ ಒಳ್ಳೆಯದು.

ನಮ್ಮ ಆಹಾರದಲ್ಲಿ ಕೆಲವೊಂದು ಉತ್ಕರ್ಷಣ ನಿರೋಧಿ ಅಂಶವನ್ನು ಸೇರಿಸುವುದು ಆರೋಗ್ಯದ ದೃಷ್ಟಿಯಲ್ಲಿ ತುಂಬಾ ಉತ್ತಮ.ಅಗಾಗಿ ಬೆಲ್ ಪೆಪ್ಪರ್‌ಗಳು ಕ್ಯಾಲೋರಿ ಕಡಿಮೆ ಹೊಂದಿದೆ ಆದ್ದರಿಂದ ರಾತ್ರಿಯ ಅಡುಗೆಗೆ ಹೆಚ್ಚು ಬಳಸುವುದು ಉತ್ತಮ. ಹಸಿರು ಬೀನ್ಸ್‌ಗಳಲ್ಲಿ ಸಲಾಡ್ ಮಾಡಿ ಅಥವಾ ನಿಮ್ಮ ಆಹಾರಗಳ ಜೊತೆ ಇದನ್ನು ಬಳಸುವುದು.ಉತ್ತಮ. ಇದು ನಮಗೆ ರಫ್‌ನೆಸ್ ಅನ್ನು ನೀಡಿ ಕ್ಯಾಲೋರಿ ಕಡಿಮೆಯಾಗುವಂತೆ ಮಾಡುತ್ತದೆ.

ಸಸ್ಯಾಹಾರಿಗಳಿಗಾಗಿ ತೋಫು ಒಂದು ಉತ್ತಮ ಆಹಾರವಾಗಿದೆ. ನಮ್ಮ ರಾತ್ರಿಯೂಟಕ್ಕೆ ಅಗತ್ಯವಾದ ಪ್ರೊಟೀನ್ ಅನ್ನು ನೀಡುತ್ತದೆ ಜೊತೆಗೆ ಇದರಲ್ಲಿ ಕೊಬ್ಬಿನಂಶ ಇರುವುದಿಲ್ಲ. ರಾತ್ರಿಯೂಟದಲ್ಲಿ ಸಾಕಷ್ಟು ಪ್ರಮಾಣದ ಹಸಿರು ತರಕಾರಿಗಳನ್ನು ಬಳಸುವುದು ಉತ್ತಮ. ರಾತ್ರಿಯ ವೇಳೆಯಲ್ಲಿ ಚಯಾಪಚಯ ಕ್ರಿಯೆ ಕಡಿಮೆಯಾಗುವುದರಿಂದ ಕಡಿಮೆ ಕ್ಯಾಲೋರಿ ಇರುವ ಆಹಾರವನ್ನು ಸೇವಿಸುವುದು ಒಳಿತು. ಬ್ರಕೋಲಿ ಕಡಿಮೆ ಕ್ಯಾಲೋರಿ ಉಳ್ಳ ತರಕಾರಿಯಾಗಿದ್ದು ನಮ್ಮ ರಾತ್ರಿಯೂಟಕ್ಕೆ ಅತೀ ಉತ್ತಮವಾದುದು. ರಾತ್ರಿಯೂಟದಲ್ಲಿ ದಾಲ್‌ಗಳನ್ನು ಬಳಸಲೇಬೇಕು. ಡ್ರೈ ಬೀನ್ಸ್ ಮತ್ತು ಗ್ರಾಂ ಗಳಂತೆ ಪಲ್ಸಸ್‌ಗಳು ನಮಗೆ ಅಗತ್ಯವಾದ ಪ್ರೊಟೀನ್ ಅನ್ನು ಒದಗಿಸುತ್ತದೆ.

ಕಡಿಮೆ ಕೊಬ್ಬಿನ ಚೀಸ್‌ಗಳು ಕಡಿಮೆ ಕೊಬ್ಬನ್ನು ನಮಗೆ ನೀಡಿ ನಮ್ಮ ಮೂಳೆಗಳಿಗೆ ಅಗತ್ಯವಾಗಿರುವ ಬಲವನ್ನು ನೀಡುತ್ತದೆ. ಜೊತೆಗೆ ನಮ್ಮ ಊಟವನ್ನು ರುಚಿಕರವನ್ನಾಗಿಸುತ್ತದೆ. ಈರುಳ್ಳಿ ಕೇವಲ ರುಚಿಯನ್ನು ಹೆಚ್ಚಿಸುವುದಕ್ಕೆ ಮಾತ್ರವಲ್ಲ. ಈರುಳ್ಳಿಯಲ್ಲಿರುವ ಸೆಲೇನಿಯಂ ನಮಗೆ ರಾತ್ರಿ ಚೆನ್ನಾಗಿ ನಿದ್ದೆ ಬರಲು ಸಹಕಾರಿಯಾಗಿದೆ. ಹಾಗಾಗಿ ರಾತ್ರಿ ಊಟಕ್ಕೆ ಈರುಳ್ಳಿ ಬಳಸಿ. ಪೂರ್ಣ ಧಾನ್ಯಗಳಾದಂತಹ ಮಿಲ್ಲೆಟ್, ಜೊವಾರ್ ಮತ್ತು ಕೋರ್ನ್ ನಮ್ಮ ಊಟದಲ್ಲಿ ಫೈಬರ್ ಪ್ರಮಾಣವನ್ನು ಸೇರಿಸುತ್ತವೆ. ಹಾಗೂ ನಮ್ಮ ರಾತ್ರಿಯ ಊಟದಲ್ಲಿ ಕಾರ್ಬೊಹೈಡ್ರೇಟ್ಸ್ ಅನ್ನು ಸಹ ಕೊಡುತ್ತದೆ.

ಒಮೆಗಾ 3 ಫ್ಯಾಟ್ ಏಸಿಡ್ ರೂಪದಲ್ಲಿ ಮೀನುಗಳು ಉತ್ತಮ ಕೊಬ್ಬಿನಂಶವನ್ನು ಪ್ರೊಟೀನ್‌ಗಳನ್ನು ಹೊಂದಿದೆ ಆದ್ದರಿಂದ ಬೇಯಿಸಿದ, ಬ್ರೈಸ್ ಮಾಡಿದ ಇಲ್ಲವೇ ಗ್ರಿಲ್ ಮಾಡಿದ ಮೀನನ್ನು ರಾತ್ರಿಯೂಟದಲ್ಲಿ ಸೇವಿಸಿ. ಗೋಧಿಯ ತುಂಡಿನಿಂದ ದಾಲಿಯಾವನ್ನು ತಯಾರಿಸಲಾಗುತ್ತದೆ. ಇದು ತೂಕವನ್ನು ಇಳಿಸಲು ಸಹಾಯ ಮಾಡುವುದಲ್ಲದೆ ಡಿಶ್‌ನಿಂದ ಹೆಚ್ಚು ಫೈಬರ್ ಅನ್ನು ಪಡೆಯಲು ಸಾಧ್ಯ. ಮೊಸರಿನಲ್ಲಿರುವ ಪ್ರೊಬಿಯೋಟಿಕ್ ಬ್ಯಾಕ್ಟಿರಿಯಾ ನಮ್ಮ ಆಹಾರವನ್ನು ಜೀರ್ಣವಾಗಿಸಲು ಸಹಕಾರಿಯಾಗಿದೆ.ಹಾಗಾಗಿ ಮೊಸರು ನಮ್ಮ ರಾತ್ರಿಯೂಟದ ಜೊತೆಯಾಗಿರಬೇಕು.

ರಾತ್ರಿಯೂಟಕ್ಕೆ ಅಣಬೆ ಉತ್ತಮ ಆಹಾರವಾಗಿದೆ. ಪ್ರೊಟೀನ್‌ಗಳು, ವಿಟಮಿನ್ ಡಿ, ಹಾಗೂ ಕಾಮೋತ್ತೇಜಕ ಅಂಶಗಳನ್ನು ಅಣಬೆ ಹೊಂದಿದೆ. ಅಣಬೆಯನ್ನು ಸೂಪ್, ಗ್ರಿಲ್ ಮತ್ತು ಬೇಯಿಸಿ ತೆಗೆದುಕೊಳ್ಳಬಹುದು. ಫ್ರೋನ್‌ನಲ್ಲಿ ನಿದ್ರೆಯನ್ನು ಅಧಿಕಗೊಳಿಸುವ ಟ್ರೈಪ್ಟೋಫನ್ ಅಂಶಗಳಿದ್ದು ಹೆಚ್ಚು ಕ್ಯಾಲೋರಿಗಳನ್ನು ಹೊಂದಿಲ್ಲದ ಆಹಾರವಾಗಿದೆ. ನಿಮ್ಮ ರಾತ್ರಿಯೂಟದಲ್ಲಿ ಪೈಬರ್ಸ್ ಕಾರ್ಬೊಹೈಡ್ರೇಟ್ಸ್ ಅನ್ನು ಪಡೆದುಕೊಳ್ಳುವ ಉತ್ತಮ ಮಾರ್ಗ ಬ್ರೌನ್ ರೈಸ್ ಸೇವನೆಯಾಗಿದೆ. ಇದು ನಿಮ್ಮ ಹೊಟ್ಟೆಯನ್ನು ಭರ್ತಿ ಮಾಡುವುದರಿಂದ ಸುಲಭವಾಗಿ ನಿಮಗೆ ನಿದ್ರೆ ಬರುತ್ತದೆ. ಬ್ರೌನ್ ರೈಸ್ ಅನ್ನು ರಾತ್ರಿ ಸಮಯದಲ್ಲಿ ಸೇವಿಸುವುದು ಅತೀ ಉತ್ತಮ.

ಹಸಿರು ಎಲೆಯ ತರಕಾರಿಯಾದ ಕಾಲೇ ಹೆಚ್ಚುವರಿ ಕ್ಯಾಲ್ಶಿಯಂ ಅನ್ನು ಒಳಗೊಂಡಿರುವುದರಿಂದ ಚೆನ್ನಾಗಿ ನಿದ್ರೆ ಬರಲು ಅನುವು ಮಾಡಿಕೊಡುತ್ತದೆ. ಬೇಯಿಸಿದ ಚಿಕನ್ ಅನ್ನು ನಿಮ್ಮ ಸಲಾಡ್ ಮತ್ತು ಸೂಪ್‌ಗಳಲ್ಲಿ ಬಳಸಬಹುದು. ಗ್ರಿಲ್ ಮಾಡಿದ ಚಿಕನ್ ಪ್ರೊಟೀನ್ ಭರಿತವಾಗಿದ್ದು ರುಚಿಕರವಾಗಿರುತ್ತದೆ. ಗಾಢ ಮತ್ತು ಸಿಹಿಯಿಲ್ಲದ ಕೋಕಾ ಒಂದು ಉತ್ತಮ ಉತ್ಕರ್ಷಣ ನಿರೋಧಿ ಆಹಾರವಾಗಿದೆ. ನೀರಿನೊಂದಿಗೆ ಬೆರೆತ ಮುಖ್ಯ ಕೋಕಾವನ್ನು ಅಥವಾ ಬಿಸಿಯಾದ ಚಾಕ್‌ಲೇಟ್ ಅನ್ನು ಹಾಲಿನೊಂದಿಗೆ ಸೇವಿಸಬಹುದು. ಇವುಗಳನ್ನು ನಿಮ್ಮ ರಾತ್ರಿಯ ಸಮದ ಊಟದಲ್ಲಿ ಬಳಸಿ ನಿಮ್ಮ ಆರೋಗ್ಯವು ಉತ್ತಮವಾಗುತ್ತದೆ. ಜೊತೆಗೆ ನಿಮಗೆ ಒಳ್ಳೆಯ ನಿದ್ರೆ ಸಹ ಬರುತ್ತದೆ.

LEAVE A REPLY

Please enter your comment!
Please enter your name here