ಹನುಮಂತನ ಆಶಿರ್ವಾದ ಪಡೆಯುತ್ತಾ ಈ ದಿನದ ರಾಶಿ ಫಲ ಹೇಗಿದೆ ತಿಳಿಯಿರಿ.

0
652

ಮೇಷ: ನಿಮ್ಮಲ್ಲಿ ಎಷ್ಟು ಹಣ ಇದೆ ಅಷ್ಟಕ್ಕೇ ಮಾತ್ರ ನೀವು ವ್ಯವಹಾರ ಮಾಡಿ ಸಾಲದ ಸುಲಿಗೆ ಸಿಲುಕಿ ನಲುಗಬೇಡಿ. ಅನಿರೀಕ್ಷಿತ ಕೆಲವು ಸಮಸ್ಯೆಗಳನ್ನು ಎದುರಿಸಲು ಸನ್ನದವಾಗಿರಿ. ನಿಮ್ಮ ತಾಯಿಯ ಕೃಪೆ ನಿಮ್ಮ ಮೇಲೆ ಇರುವುದರಿಂದ ಎಲ್ಲ ಸಮಸ್ಯಗಳು ಕಠಿಣವಾಗದು. ಶನಿ ದೇವರ ದರ್ಶನ ಪಡೆಯಿರಿ.
ವೃಷಭ: ನಿಮ್ಮ ವಿರೋಧಿಗಳು ನಿಮಗೆ ಬೆಂಬಲ ನೀಡುವ ಸಾಧ್ಯತೆ ಇರುತ್ತದೆ. ಎಷ್ಟೋ ವಿಷಯಗಳಿಗೆ ಅಡ್ಡಿ ಆಂತಕ ಎದುರಾಗಿದ್ದ ಸಮಸ್ಯೆಗಳು ಖಂಡಿತ ದೂರ ಆಗುತ್ತವೆ. ತಂದೆಯ ಆಶಿರ್ವಾದ ಪಡೆಯಿರಿ ನಿಮಗೆ ಎಲ್ಲವು ಶುಭವಾಗಲಿದೆ.

ಮಿಥುನ: ಅನ್ಯರಿಗೆ ಸಹಾಯ ಮಾಡುವುದರಿಂದ ಇಂದು ನೀವು ವಿಶೇಷ ಫಲ ದೊರೆಯಲಿದೆ. ಸ್ನೇಹಿತರ ಮಾತು ಕೇಳಿ ಯಾರಿಗೂ ಹಣವನ್ನು ನೀಡಬೇಡಿ. ಸಂಜೆ ಆರು ಗಂಟೆ ನಂತರ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ ಹೆಚ್ಚಾಗಿದೆ.
ಕಟಕ: ಮಕ್ಕಳು ವಿದ್ಯಾಭ್ಯಾಸದಲ್ಲಿ ಉತ್ತಮ ಪ್ರಗತಿ ಕಾಣುವರು. ನಿಮಗೆ ಗಂಟಲಿಗೆ ಸಂಭಂದಪಟ್ಟ ಆರೋಗ್ಯದಲ್ಲಿ ವ್ಯತ್ಯಾಸ ಆಗುವ ಸಾಧ್ಯತೆ ಇರುವುದರಿಂದ ತಣ್ಣನೆಯ ಪದಾರ್ಥ ಇಂದು ನಿಮ್ಮ ಸೇವನೆಗೆ ಯೋಗ್ಯವೇ ಅಲ್ಲ.

ಸಿಂಹ: ನಿಮ್ಮ ಕುಲ ದೇವರ ನಿರ್ಲಕ್ಷ್ಯ ಮಾಡಿದರೆ ನೀವು ಸಮಸ್ಯೆಗಳಿಗೆ ಸಿಲುಕುವಿರಿ. ಮಾತನಾಡುವಾಗ ಸ್ವಲ್ಪ ಎಚ್ಚರಿಕೆಯಿಂದಲೇ ಮಾತನಾಡಿ. ತಂದೆಯ ಜೊತೆಗೆ ಮನಸ್ತಾಪ ಆಗಲಿದೆ. ನಿಮ್ಮ ಕೋಪವನ್ನು ಹತೋಟಿಯಲ್ಲಿ ಇಟ್ಟುಕೊಂಡು ಎಲ್ಲರೊಂದಿಗೆ ಸಹಕರಿಸಿ.
ಕನ್ಯಾ: ನಿಮ್ಮ ಆಫೀಸಿನಲ್ಲಿ ಮೇಲಿನ ಅಧಿಕಾರಿಗಳು ಹೆಚ್ಚಿನ ಕೆಲಸವಹಿಸಿ ನಿಮಗೆ ಮಾನಸಿಕ ಕಿರಿ ಕಿರಿ ಮಾಡುವ ಸಾಧ್ಯತೆ ಹೆಚ್ಚು ಗೃಹಿಣಿಯರಿಗೆ ಮಾನಸಿಕವಾಗಿ ಒತ್ತಡ ಬೀಳುವ ಸಾಧ್ಯತೆ ಇರುವುದರಿಂದ ಕೆಲಸಕ್ಕೆ ತೆರಳುವ ಮುನ್ನ ಹನುಮಂತನ ದರ್ಶನ ಪಡೆಯಿರಿ.

ತುಲಾ: ನಿಮ್ಮ ಒಳ್ಳೆತನಕ್ಕೆ ಮನಸೋತ್ತು ಜನರೇ ನಿಮಗೆ ಮರುಳಾಗುವರು. ಎಂದೋ ಮಾಡಿದ ತಪ್ಪಿಗೆ ಇಂದು ನಿಮಗೆ ಅವಮಾನ ಆಗುವ ಸಾಧ್ಯತೆ ಇರುತ್ತದೆ. ಸಹೋದರಿ ಜೊತೆಗೆ ಮನಸ್ತಾಪ ಹೆಚ್ಚಾಗಲಿದೆ. ಸಂಜೆ ನಂತರ ಶನಿ ದೇವರ ದರ್ಶನ ಪಡೆಯಿರಿ.
ವೃಶ್ಚಿಕ: ಸಣ್ಣ ವ್ಯವಹಾರ ಮತ್ತು ಪಾಲುದಾರಿಕೆಯಲ್ಲಿ ಕಬ್ಬಿಣ್ಣ ವ್ಯವಹಾರ ಮಾಡುವ ಜನಕ್ಕೆ ಅಧಿಕ ಲಾಭ ಬರುವ ಸಾಧ್ಯತೆ. ನಿಮ್ಮ ತಾಯಿಯ ಆರೋಗ್ಯ ಸಣ್ಣ ವ್ಯತ್ಯಾಸ ಆಗುವ ಸಂಭವ ಇರುವುದರಿಂದ. ತಾಯಿಯ ಆರೈಕೆ ಮಾಡುವುದು ತುಂಬಾ ಮುಖ್ಯವಾಗಿದೆ.

ಧನಸ್ಸು: ಪ್ರೇಯಸಿಯಿಂದ ಮಾನಸಿಕ ಕಿರಿ ಕಿರಿ ಆಗುವ ಸಾಧ್ಯತೆ. ನಿಮ್ಮ ಸ್ನೇಹಿತರು ನಿಮ್ಮ ಕಷ್ಟ ಕಾಲದಲ್ಲಿ ಸಹಾಯ ಮಾಡುವರು. ಸಂಜೆ ಶನಿ ದೇವರಿಗೆ ಕಪ್ಪು ಬಟ್ಟೆಯ ಎಳ್ಳಿನ ಬತ್ತಿ ಹಚ್ಚಿದರೆ ನಿಮಗೆ ವಿಶೇಷ ಫಲ ಸಿಗಲಿದೆ.
ಮಕರ: ನೀವು ಮಾಡುವ ಎಲ್ಲ ಕೆಲಸಗಳಿಗೆ ಸ್ಥಳೀಯ ಜನರಿಂದಲೂ ಮತ್ತು ಅದಕ್ಕೂ ಹೆಚ್ಚಾಗಿ ನಿಮ್ಮ ಮನೆ ಜನರಿಂದಲೇ ಆತಂಕ ಮತ್ತು ವಿಘ್ನಗಳು ಹೆಚ್ಚಾಗುವ ಸಾಧ್ಯತೆ ಇರುತ್ತದೆ. ದಿನ ಪ್ರಾರಂಭಿಸುವ ಮುನ್ನ ಗಣಪನ ಮಹಾ ಮಂತ್ರ ಹನ್ನೊಂದು ಬಾರಿ ಪಾರಾಯಣ ಮಾಡಿ.

ಕುಂಭ: ಅನಿರೀಕ್ಷಿತ ಕೆಲವು ಬೆಳವಣಿಗೆಗಳು ಜೀವನದಲ್ಲಿ ಆಗುವ ಸಾಧ್ಯತೆ ಇರುತ್ತದೆ. ಮನೆಯಲ್ಲಿರುವ ಹಿರಿಯರ ಮಾತುಗಳು ಎಂದು ಸಹ ನೀವು ಕಡೆಗಣಿಸಬೇಡಿ. ಎಲ್ಲರೊಂದಿಗೆ ಪ್ರೀತಿಯಿಂದ ಮತ್ತು ಗೌರವದಿಂದ ವರ್ತಿಸಿದರೆ ನಿಮಗೆ ಯಾವುದೇ ಅಡ್ಡಿ ಆತಂಕ ಇರುವುದಿಲ್ಲ.
ಮೀನ: ಹಲವು ದಿನಗಳಿಂದ ಇರುವ ಆರೋಗ್ಯ ಸಮಸ್ಯೆ ಒಂದಿಷ್ಟು ಸುಧಾರಣೆ ತರಲಿದೆ. ದೂರದ ಊರಿಗೆ ಪಯಣ ಬೆಳೆಸುವ ಸಾಧ್ಯತೆ. ಕುಟುಂಬ ಅಥವ ಸ್ನೇಹಿತರ ಜೊತೆಗೂಡಿ ದೂರದ ಊರಿಗೆ ಪ್ರವಾಸ. ಮಾತಿನ ಮೇಲೆ ಹೆಚ್ಚು ಹಿಡಿತ ಇರಲಿ. ಮನಸ್ಸು ಹೆಚ್ಚು ಚಂಚಲದಿಂದ ಕೂಡಿರುತ್ತದೆ. ಪ್ರೇಯಸಿಯೊಂದಿಗೆ ಮನಸ್ತಾಪ ಹೆಚ್ಚಾಗಲಿದೆ.

LEAVE A REPLY

Please enter your comment!
Please enter your name here