ಮೊಬೈಲ್ ಬಳಸುವ ಎಲ್ಲರು ತಿಳಿದುಕೊಳ್ಳಬೇಕು ಈ ಮಾಹಿತಿ

0
928

ಇತ್ತೀಚಿನ ದಿನಗಳಲ್ಲಿ ಜನ ಒಂದು ಒತ್ತಿನ ಊಟವನ್ನು ಬಿಡುತ್ತಾರೆ ಆದರೆ ಮೊಬೈಲ್ ಬಳಸುವುದನ್ನು ಮಾತ್ರ ಎಂದು ಬಿಡುವುದಿಲ್ಲ. ಇಂದಿನ ದಿನಗಳಲ್ಲಿ ಯಾರ ಬಳಿ ಮೊಬೈಲ್ ಇರುವುದಿಲ್ಲ ಹೇಳಿ ಯಾರನ್ನು ನೋಡಿದರು ಸಹ ಎಲ್ಲರ ಹತ್ತಿರ ಮೊಬೈಲ್ ಫೋನ್ ಗಳದ್ದೇ ಹಾವಳಿ. ಮೊಬೈಲ್ ಇಲ್ಲದೆ ಜಗತ್ತು ಇಲ್ಲವೇನೋ ಅಷ್ಟರ ಮಟ್ಟಿಗೆ ಜನರು ಮೊಬೈಲ್ ಗೆ ಅಡಿಟ್ ಆಗಿದ್ದಾರೆ ಎಂದರೆ ತಪ್ಪಾಗಲಾರದು. ನಿತ್ಯ ಬೆಳಿಗ್ಗೆ ಎದ್ದ ತಕ್ಷಣ ದೇವರನ್ನು ನೋಡುವ ಬದಲು ನಮ್ಮ ಜನರು ಮೊಬೈಲ್ ಅನ್ನು ನೋಡುತ್ತಾರೆ ಯಾವಾಗಲೂ ಮೊಬೈಲ್ ಅನ್ನು ಪಕ್ಕದಲ್ಲೇ ಇಟ್ಟುಕೊಂಡಿರುತ್ತಾರೆ ಮೊಬೈಲ್ ಮತ್ತು ಜನರ ಮದ್ಯ ಇರುವ ಬಂಧನ ಅವರ ಮನೆಯವರ ಜೊತೆಯಲ್ಲಿ ಇರುವುದಿಲ್ಲ ಮತ್ತು ಕುಟುಂಬದಲ್ಲಿ ಇರುವುದಿಲ್ಲ.

ಆದರೆ ಮೊಬೈಲ್ ಅನ್ನು ಇಷ್ಟರ ಮಟ್ಟಿಗೆ ಬಳಸುವುದು ಸರಿಯೇ ಮೊಬೈಲ್ ಅನ್ನು ಬಳಸುವುದರಿಂದ ತುಂಬಾ ಅನುಕೂಲ ಇದೆ ಆದರೆ ಅಷ್ಟೇ ಅನಾನುಕೂಲ ಸಹ ಇದೆ ಎಂದು ತಿಳಿದರು ಸಹ ಮೊಬೈಲ್ ಬಳಸುವುದನ್ನು ಮಾತ್ರ ಹೆಚ್ಚಿಸುತ್ತಲೇ ಇರುತ್ತಾರೆ ಆದರೆ ಮೊಬೈಲ್ ಹೆಚ್ಚು ಬಳಕೆ ಮಾಡುವುದು ನಮ್ಮ ಪ್ರಾಣಕ್ಕೆ ಕುತ್ತು ಆಗಬಹುದು ಅದರಿಂದ ಅವಶ್ಯಕತೆ ಇದ್ದಾಗ ಮಾತ್ರ ಬಳಸುವುದು ಒಳ್ಳೆಯದು.

ಮೊಬೈಲ್ ಬಳಕೆ ಮಾಡುವಾಗ ಗಮನದಲ್ಲಿ ಇಟ್ಟುಕೊಳ್ಳಬೇಕಾದ ಮುಖ್ಯ ಅಂಶಗಳು ಯಾವುವು ಎಂದರೆ. ರಾತ್ರಿ ಸಮಯದಲ್ಲಿ ಮಲಗುವಾಗ ಮೊಬೈಲ್ ಪೋನ್ ಅನ್ನು ಪಕ್ಕದಲ್ಲಿ ಅಥವಾ ತಲೆಯ ದಿಂಬಿನ ಕೆಳಗೆ ಇಟ್ಟುಕೊಳ್ಳಬಾರದು ಆದಷ್ಟು ಮೊಬೈಲ್ ಅನ್ನು ತುಂಬಾ ದೂರ ಇಟ್ಟು ಮಲಗಿದರೆ ನಿಮ್ಮ ಆರೋಗ್ಯವು ಉತ್ತಮವಾಗಿರುತ್ತದೆ ಜೊತೆಗೆ ಯಾವುದೇ ರೀತಿಯ ಸಮಸ್ಯೆಗಳು ಬರುವುದಿಲ್ಲ. ಆದಷ್ಟು ಹತ್ತು ಮೀಟರ್ ದೊರದಲ್ಲೇ ಇಡಿ. ಹೆಚ್ಚು ಸಮಯ ಫೋನ್ ಅಲ್ಲಿ ಮಾತನಾಡಬಾರದು ಫೋನ್ ಇರುವುದು ಮಾತನಾಡಲು ಎಂದು ಯಾವಾಗಲೂ ಕಿವಿಯ ಬಳಿ ಇಟ್ಟುಕೊಂಡರೆ ಅಪಾಯ ಎಂಬುದನ್ನು ನೀವೇ ನಿಮ್ಮ ಹತ್ತಿರ ತಂದುಕೊಂಡಂತೆ ಆಗುತ್ತದೆ. ಹೆಚ್ಚು ಫೋನ್ ಬಳಕೆ ಮಾಡಿದರೆ ಆದಷ್ಟು ಎಡ ಕಿವಿಗೆ ಇಟ್ಟುಕೊಳ್ಳಿ. ಮೊಬೈಲ್ ಅನ್ನು ಚಾರ್ಜ್ ಹಾಕಿದ ಮೇಲೆ ಮೊಬೈಲ್ ಪೂರ್ಣ ಚಾರ್ಜ್ ಅದ ತಕ್ಷಣ ಇಲ್ಲವೇ ಇನ್ನುಹತ್ತು ಪರ್ಸೆಂಟ್ ಚಾರ್ಜ್ ಆಗಬೇಕು ಎನ್ನುವ ಮುಂಚೆ ತೆಗೆದುಬಿಡುವುದು ತುಂಬಾ ಒಳ್ಳೆಯದು ರಾತ್ರಿ ಮಲಗುವಾಗ ಹಾಕಿ ಬೆಳಿಗ್ಗೆ ಅದ ನಂತರ ತೆಗೆಯಬಾರದು. ಹೀಗೆ ಮಾಡಿದ್ರೆ ಮೊಬೈಲ್ ಬ್ಯಾಟರಿ ಹಾಳಾಗುವುದರ ಜೊತೆಗೆ ಸ್ಪೋಟ ಆಗುವ ಸಾಧ್ಯತೆಯೂ ಹೆಚ್ಚಿದೆ.

ನಿಮ್ಮ ಮೊಬೈಲೆಗಳನ್ನು ಶರ್ಟ್ ಜೇಬಿನಲ್ಲಿ ಇಟ್ಟುಕೊಳ್ಳುವುದನ್ನು ತಪ್ಪಿಸಬೇಕು ಏಕೆಂದರೆ ಮೊಬೈಲ್ ಫೋನ್ಗಳಿಂದ ಹೊರ ಬರುವ ತರಂಗಗಳು ದೇಹದ ಮೇಲೆ ಪರಿಣಾಮ ಬೀರುವ ಜೊತೆಗೆ ಹೆಚ್ಚಾಗಿ ನಿಮ್ಮ ಹೃದಯಕ್ಕೆ ತೊಂದರೆಯನ್ನು ಉಂಟುಮಾಡುತ್ತದೆ. ಹಾರ್ಟ್ ಅಟ್ಯಾಕ್ ಸಮಸ್ಯೆ ಬರುವ ಸಂಭವ ಇರುತ್ತದೆ. ಚರ್ಜಿಂಗ್ ಹಾಕಿ ಮೊಬೈಲ್ ಅಲ್ಲಿ ಮಾತನಾಡುವುದು ಅಥವಾ ಹೆಡ್ ಫೋನೆಗಳನ್ನು ಬಳಸಬಾರದು ಜೊತೆಗೆ ಜಾರ್ಜಿನ್ಗ್ ವೇಳೆ ನಿಮ್ಮ ಮೊಬೈಲ್ ನ ಡೇಟಾವನ್ನು ಸಹ ಆಫ್ ಮಾಡಿ ಚಾರ್ಜ್ ಹಾಕಬೇಕು. ಮೊಬೈಲ್ ಅನ್ನು ಚರ್ಜಿಂಗ್ ಹಾಕುವಾಗ ಆದಷ್ಟು ಸೂರ್ಯನ ಬೆಳಕು ಅಂದರೆ ಕಿಟಕಿಯ ಹತ್ತಿರ ಹಾಕುವುದನ್ನು ತಪ್ಪಿಸಿಕೊಳ್ಳಿ. ನೀವು ಯಾವ ಕಂಪನಿಯ ಮೊಬೈಲ್ ಅನ್ನು ಬಳಸುತ್ತಿದ್ದೀರೋ ಅದೇ ಕಂಪನಿಯ ಚಾರ್ಜರ್ಗಳನ್ನು ಬಳಸಿ ಕಳಪೆ ಮಟ್ಟದ ಚಾರ್ಜರ್ಗಳನ್ನು ಬಳಸಬಾರದು.

ಕಳಪೆ ಮಟ್ಟದ ಪವರ್ ಬ್ಯಾಂಕ್ ಗಳಲ್ಲೂ ಮೊಬೈಲ್ ಅನ್ನು ಚಾರ್ಜ್ ಮಾಡಬೇಡಿ. ನಿಮ್ಮ ಮೊಬೈಲ್ ಫೋನ್ ಗಳಿಗೆ ಮೇಲೆ ಕವಚಗಳನ್ನು ಹಾಕಿದ್ದಾರೆ ನೀವು ಚಾರ್ಜ್ ಮಾಡುವ ಸಮಯದಲ್ಲಿ ಆ ಕವಚವನ್ನು ತೆಗೆದು ಚಾರ್ಜ್ ಮಾಡುವುದು ಉತ್ತಮ. ಮೊಬೈಲ್ ಫೋನ್ ಗಳಿಗೆ ಆನ್ ಲಾಕ್ ಗಳನ್ನು ಬಳಸಬೇಡಿ. ನೀರಿಗೆ ಬಿದ್ದ ತಕ್ಷಣ ಅದನ್ನು ತೆಗೆದುಕೊಂಡು ಓಪನ್ ಮಾಡಬೇಡಿ ಒಂದು ಕಾಟನ್ ಬಟ್ಟೆಯಲ್ಲಿ ಸುತ್ತಿ ಸ್ವಲ್ಪ ಸಮಯ ಹಾಗೆ ಬಿಡಿ. ಆದಷ್ಟು ಆಪ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳುವುದನ್ನು ಕಡಿಮೆ ಮಾಡಬೇಕು. ಪ್ಯಾಂಟ್ ಜೋಬಿನಲ್ಲೂ ಸಹ ಮೊಬೈಲ್ ಇಟ್ಟುಕೊಳ್ಳಬಾರದು ಇದು ನಿಮ್ಮ ಆರೋಗ್ಯಕ್ಕೆ ತುಂಬಾ ತೊಂದರೆಯನ್ನು ತರುತ್ತದೆ. ಮೊಬೈಲ್ ಬಿಸಿ ಆಗಿದ್ದಾಗ ಮೊಬೈಲ್ ಅನ್ನು ಸ್ವಿಚ್ ಆಫ್ ಮಾಡಿ ಸ್ವಲ್ಪ ಸಮಯ ಇಟ್ಟುಬಿಡಿ. ನೀವು ಮೊಬೈಲ್ ಬಳಕೆ ಮಾಡುವ ಮೊದಲು ಈ ಎಲ್ಲ ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡು ಮೊಬೈಲ್ ಬಳಕೆ ಮಾಡುವುದು ಒಳ್ಳೆಯದು.

LEAVE A REPLY

Please enter your comment!
Please enter your name here