ಜೀವನದಲ್ಲಿ ಸಕ್ಕರೆ ಬರಲೇ ಬಾರದು ಅಂದ್ರೆ ಹೀಗೆ ಮಾಡಿ

0
1067

ಮಧುಮೇಹ ದೇಹದಲ್ಲಿ ಗ್ಲೂಕೋಸ್ ಪದಾರ್ಥದ ನಿಯಂತ್ರಣ ವ್ಯವಸ್ಥೆಯ ದೋಷಗಳಿಂದ ಉಂಟಾಗುವ ಒಂದು ಕಾಯಿಲೆ. ಇದು ವಂಶ ಪಾರಂಪರ್ಯದಿಂದ ಬರಬಹುದಾದ ಕಾಯಿಲೆಯಿದು. ಗ್ಲೂಕೋಸ್ ಒಂದು ರೀತಿಯ ಸಕ್ಕರೆಯಾಗಿದ್ದು,ಇದನ್ನುಪ್ರಮುಖವಾಗಿ ಪ್ಯಾಂಕ್ರಿಯಾಸ್ ಅಂಗವು ಉತ್ಪತ್ತಿ ಮಾಡುವ ಇನ್ಸುಲಿನ್ ಎಂಬ ಹಾರ್ಮೋನ್ ನಿಯಂತ್ರಿಸುತ್ತದೆ. ಸದ್ಯಕ್ಕೆ ಇದನ್ನು ಪೂರ್ಣ ಪ್ರಮಾಣದಲ್ಲಿ ನಿವಾರಿಸಲು ಸಾಧ್ಯವಾಗಿಲ್ಲ. ರಕ್ತದಲ್ಲಿನ ಸಕ್ಕರೆ ಪ್ರಮಾಣದ ಏರಿಳಿತದ ಮೇಲೆ ಈ ಕಾಯಿಲೆನಿರ್ಧರಿತವಾಗುತ್ತದೆ. ದಿನನಿತ್ಯ ಸುಮಾರು ಇಪ್ಪತ್ತು ನಿಮಿಷದವ್ಯಾಯಾಮ ಅಥವಾ ನಡಿಗೆಯಿಂದ ಮಧುಮೇಹವನ್ನುದೂರವಿಡಬಹುದೆಂದು ವೈದ್ಯರು ಹೇಳುತ್ತಾರೆ.

ಮೊದಲೆಲ್ಲಾ ಅರುವತ್ತಕ್ಕೇ ಅರಳು ಮರಳು ಅನ್ನುವಂತಹಾ ಪರಿಸ್ಥಿತಿಯೂ, ಅರುವತ್ತು ವರ್ಷ ದಾಟಿದರೆ ಒಂದಿಲ್ಲೊಂದು ವೃದ್ಧಾಪ್ಯದ ಕಾಯಿಲೆ ಅಂಟಿಕೊಳ್ಳಲು ಶುರು ಹಚ್ಚಿಕೊಳ್ಳುತ್ತದೆ ಎಂಬ ಪರಿಸ್ಥಿತಿ ಇತ್ತು. ಆದರೆ ಈಗ ಹಾಗಿಲ್ಲ. ಕಾಲ ಬದಲಾಗಿದೆ. ವರುಷ ಮೂವತ್ತು ದಾಟಿತೋ, ಬೀಪಿ, ಶುಗರ್, ಬೊಜ್ಜು, ಹಾರ್ಟ್ ಪ್ರಾಬ್ಲಂ ಒಂದಿಲ್ಲೊಂದು ಮುತ್ತಿಕ್ಕಿಕೊಂಡು ಬಿಡಲಾರಂಭಿಸಿದೆ. ಪ್ರಕೃತಿಯನ್ನು, ವಾತಾವರಣವನ್ನು ನಾವು ಅಷ್ಟರ ಮಟ್ಟಿಗೆ ಹಾಳು ಮಾಡಿಕೊಂಡಿದ್ದೇವೆ. ಹೀಗಾಗಿ ಇದ್ದುದರಲ್ಲೇ ಬದುಕಬೇಕಾದ ಅನಿವಾರ್ಯತೆಯಾಗಿದೆ. ಅಂತಾರಾಷ್ಟ್ರೀಯ ಮಧುಮೇಹ ಒಕ್ಕೂಟ ಐಡಿಎಫ್ ದ ವರದಿ ಪ್ರಕಾರ, ಭಾರತದಲ್ಲಿ ಮಧುಮೇಹ, ಸಕ್ಕರೆ ಕಾಯಿಲೆ, ಸಿಹಿಮೂತ್ರ ರೋಗ ಎಂದೆಲ್ಲಾ ಕರೆಯಲ್ಪಡುವ ಡಯಾಬಿಟೀಸ್‌ನಿಂದ ಬಳಲುತ್ತಿರುವವರ ಸಂಖ್ಯೆ 4.09 ಕೋಟಿ. ಇದು ಹೀಗೆಯೇ ಮುಂದುವರಿದರೆ, 2030ರ ವೇಳೆಗೆ ಜಗತ್ತಿನ ಐವರು ಮಧುಮೇಹಿಗಳಲ್ಲಿ ಒಬ್ಬ ಭಾರತೀಯ ಇರುವಷ್ಟರ ಮಟ್ಟಕ್ಕೆ ಮುಟ್ಟುತ್ತದೆಯಂತೆ.

ಮಧುಮೇಹಕ್ಕೆ ಮುಖ್ಯ ಕಾರಣ ಆಹಾರ ಮತ್ತು ನಮ್ಮ ಜೀವನಶೈಲಿ. ಮಧುಮೇಹವನ್ನು ನಿಯಂತ್ರಿಸಲು ಅಥವಾ ತಡೆಯಲು ಆಹಾರ ಮತ್ತು ಜೀವನಶೈಲಿ ಪ್ರಮುಖ ಪಾತ್ರ ವಹಿಸುತ್ತವೆ. ನಾವು ಒಂದು ದಿನದಲ್ಲಿ ತಿನ್ನುವ ಆಹಾರ ನೇರವಾಗಿ ರಕ್ತದಲ್ಲಿನ ಸಕ್ಕರೆ ಪ್ರಮಾಣದ ಮೇಲೆ ಪರಿಣಾಮ ಬೀರುತ್ತದೆ. ಹಾಗಾದರೆ ಈ ಮಧುಮೇಹ ಸಮಸ್ಯೆ ಬರದ ಹಾಗೆ ನೋಡಿಕೊಳ್ಳಲು ನಾವು ಕೆಲವು ರೀತಿಯ ಆಹಾರಗಳ ಸೇವನೆಯನ್ನು ಮಾಡಬೇಕು. ಹಾಗಾದರೆ ಆ ಆಹಾರಗಳು ಯಾವುವು ನೋಡೋಣ..

ಮಧುಮೇಹವು ಇನ್ಸುಲಿನ್ ಅಸಮರ್ಥತೆಯಿಂದಾಗಿ, ಮೇದೋಜೀರಕ ಗ್ರಂಥಿಯಿಂದ ಸ್ರವಿಸುವ ಹಾರ್ಮೋನ್. ನೈಸರ್ಗಿಕವಾಗಿ ನಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವ ಆಹಾರಗಳು. ಪ್ರೋಟೀನ್ ಸಮೃದ್ಧ ಆಹಾರಗಳಾದ ಮೊಟ್ಟೆ, ಮೀನು ಮತ್ತು ಪ್ರೋಟೀನ್’ ಗಳಾದ ದಾಲ್’ಗಳು, ಪನೀರ್ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಒಣ ಹಣ್ಣುಗಳು ಪ್ರೋಟೀನ್, ಜೀವಸತ್ವಗಳು, ಖನಿಜಾಂಶ, ಕಡಿಮೆ ಪ್ರಮಾಣದ ಕೊಲೆಸ್ಟರಾಲ್, ಮತ್ತು ಇನ್ಸುಲಿನ್ ಪ್ರತಿರೋಧವನ್ನು ಹೊಂದಿರುತ್ತವೆ. ಇವುಗಳ ಸೇವನೆಯು ಅಧಿಕ ರಕ್ತದ ಕೊಬ್ಬನ್ನು ಮತ್ತು ಸಕ್ಕರೆ ಅಂಶವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಅಮ್ಲಾ ಕಾಯಿ ಅಥವಾ ಬೆಟ್ಟದ ನೆಲ್ಲಿಕಾಯಿ ಅಧಿಕ ರಕ್ತದ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಲು ತುಂಬಾ ಪರಿಣಾಮಕಾರಿಯಾಗಿದೆ. ಇದು ಕಾರ್ಬೊಹೈಡ್ರೇಟ್ಗಳ ಚಯಾಪಚಯ ಕ್ರಿಯೆಯನ್ನು ನಿಯಂತ್ರಿಸುತ್ತದೆ. ಕ್ರೋಮಿಯಂ ಎಂಬ ಖನಿಜವನ್ನು ಹೊಂದಿದೆ. ಕ್ರೋಮಿಯಂ ಎಂಬ ಖನಿಜ ಇನ್ಸುಲಿನ್ಗೆ ದೇಹವನ್ನು ಹೆಚ್ಚು ಸ್ಪಂದಿಸುವಂತೆ ಮಾಡುತ್ತದೆ.

ಹಾಗಲಕಾಯಿ ಮತ್ತು ಅದರ ಸೊಪ್ಪು ಕಹಿಯಾಗಿದ್ದು ಅದು ಪಾಲಿಪೆಪ್ಟೈಡ್ ಅಥವಾ ಇನ್ಸುಲಿನ್ ಎಂಬ ಸಂಯುಕ್ತವನ್ನು ಹೊಂದಿರುತ್ತದೆ, ಇದು ನೈಸರ್ಗಿಕವಾಗಿ ಮಧುಮೇಹವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಬಾರ್ಲಿಯಲ್ಲಿರುವ ಫೈಬರ್ಗಳ ಅಂಶ ಹಸಿವು ಮತ್ತು ಅಧಿಕ ರಕ್ತದ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಓಟ್ಸ್ ನಂತಹ ಧಾನ್ಯಗಳು, ಕಂದು ಅಕ್ಕಿ ಮತ್ತು ರಾಗಿ ಮುಂತಾದ ಧಾನ್ಯಗಳು ಸಕ್ಕರೆ ಪ್ರಮಾಣವನ್ನು ನಿಯಂತ್ರಿಸಲು ಸಹಾಯ ಮಾಡುತ್ತವೆ. ಇವುಗಳು ಕರಗುವ ಮತ್ತು ಕರಗದ ಫೈಬರ್ ಎರಡನ್ನೂ ಒಳಗೊಂಡಿರುತ್ತವೆ.

ಬಾಳೆಹಣ್ಣುಗಳು, ಆಲೂಗಡ್ಡೆ, ಧಾನ್ಯಗಳು ಮತ್ತು ಕಾಳುಗಳಂತಹ ಆಹಾರಗಳಲ್ಲಿ ಕಂಡುಬರುವ ನಿರೋಧಕ ಪಿಷ್ಟವು ರಕ್ತದ ಸಕ್ಕರೆ ನಿಯಂತ್ರಣಕ್ಕೆ ಸಹಾಯ ಮಾಡುತ್ತವೆ. ಈ ಆಹಾರಗಳನ್ನು ಹೊರತುಪಡಿಸಿ ದೈಹಿಕ ಚಟುವಟಿಕೆಯು ಇನ್ಸುಲಿನ್ ಸಂವೇದನೆಯನ್ನು ಹೆಚ್ಚಿಸುತ್ತದೆ. ಆದ್ದರಿಂದ ಪ್ರತಿದಿನ ವ್ಯಾಯಾಮ ಯೋಗ ಮಾಡುವುದು ತುಂಬಾ ಮುಖ್ಯ. ನಿಯಮಿತವಾಗಿ ವ್ಯಾಯಾಮ ಮಾಡುವುದರಿಂದ ನಿಮ್ಮ ರಕ್ತದ ಸ್ಟ್ರೀಮ್ನಲ್ಲಿ ಇರುವ ಸಕ್ಕರೆಯನ್ನು ಬಳಸಿಕೊಂಡು ನಿಮ್ಮ ದೇಹದಲ್ಲಿ ಸಕ್ಕರೆ ಪ್ರಮಾಣವನ್ನು ಸರಿದುಗಿಸಿಕೊಂಡು ಹೋಗಲು ಸಹಾಯಕವಾಗುತ್ತದೆ.

LEAVE A REPLY

Please enter your comment!
Please enter your name here