ಈ ವಾರ ನಿಮ್ಮ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
ಮೇಷ: ಈ ವಾರ ನಿಮ್ಮ ಸ್ನೇಹಿತರಿಂದ ನೀವು ಬಹಳಷ್ಟು ಸಹಾಯವನ್ನು ನಿರೀಕ್ಷೆ ಮಾಡುವ ಸನ್ನಿವೇಶ ಬರಬಹುದು. ಪರರ ಕಷ್ಟಗಳಿಗೆ ಮರುಗಿ ನಿಮ್ಮ ಕಷ್ಟದ ಸಮಯ ಇದ್ದರು ನೀವೇ ಅವರಿಗೆ ಸಹಾಯ ಮಾಡುವಿರಿ. ನಿಮ್ಮ ಕುಟುಂಬದ ಜನರು ಮತ್ತು ನಿಮ್ಮ ಗೆಳೆಯರು ಈ ವಾರ ನಿಮ್ಮ ಮೇಲೆ ಹೆಚ್ಚಿನ ವಿಶ್ವಾಸ ಇಟ್ಟುಕೊಳ್ಳುವ ಸಾಧ್ಯತೆ ಇರುತ್ತದೆ. ನಿಮ್ಮನು ಗೌರವ ನೀಡುವ ವ್ಯಕ್ತಿಗಳ ಜೊತೆಗೆ ಹೆಚ್ಚಿನ ಸೌಜನ್ಯದಿಂದ ಮಾತನಾಡಿ. ಆರೋಗ್ಯ ಚೇತರಿಕೆ ಆಗಲಿದೆ ಆರ್ಥಿಕವಾಗಿ ಸಮಾಧಾನಕರ. ಮಂಗಳವಾರ ಹನುಮಂತ ದೇವರ ದರ್ಶನ ಪಡೆಯುವುದು ಮರೆಯಬೇಡಿ.
ವೃಷಭ: ನಿಮ್ಮ ಗೆಳೆಯರು ಮತ್ತು ನಿಮ್ಮ ಕುಟುಂಬ ಸ್ನೇಹಿತರ ಜೊತೆಗೆ ಮತ್ತು ಹೊರಗಿನ ಯಾವುದೇ ವ್ಯಕ್ತಿಯೊಂದಿಗೆ ವ್ಯವಹಾರ ನಡೆಸುವಾಗ ಮಾತನಾಡುವಾಗ ಹೆಚ್ಚಿನ ಅಹಂಕಾರ ತೂರಿಸಬೇಡಿ. ಹೆಚ್ಚಿನ ಅಹಂಕಾರ ನಿಮಗೆ ಸಮಸ್ಯೆ ತಂದು ಒಡ್ಡುವ ಸಾಧ್ಯತೆ ಬಹಳ ಇದೆ. ವ್ಯವಹಾರದಲ್ಲಿ ಉತ್ತಮವಾದ ಲಾಭ ನಿಮಗೆ ಈ ವಾರ ದೊರೆಯಲಿದೆ. ಸಣ್ಣ ಪುಟ್ಟ ಆರೋಗ್ಯ ಸಮಸ್ಯೆ ಬಿಟ್ಟರೆ ಎಲ್ಲವು ನಿಮಗೆ ಶುಭವಾಗಲಿದೆ. ಸೋಮವಾರ ಶಿವನಿಗೆ ಬಿಲ್ವ ಪತ್ರೆ ಸಮರ್ಪಣೆ ಮಾಡುವುದು ಮರೆಯಬೇಡಿ.
ಮಿಥುನ: ಕೆಲವು ವ್ಯಕ್ತಿಗಳು ನಿಮ್ಮ ಒಳ್ಳೆಯ ನಡತೆ ಉಪಯೋಗ ಮಾಡಿಕೊಂಡು ನಿಮ್ಮನು ಮೂರ್ಖರನ್ನಾಗಿ ಮಾಡುವ ಸಾಧ್ಯತೆ ಇರುತ್ತದೆ ಈ ವಾರ ನೀವು ಹಣದ ವ್ಯವಹಾರದಲ್ಲಿ ಹೆಚ್ಚಿನ ಜಾಗ್ರತೆ ತೆಗೆದುಕೊಳ್ಳಿ. ನಿಮ್ಮನು ನಂಬಿಸಿ ಮೋಸ ಮಾಡುವ ಸಾಧ್ಯತೆ ಇರುವುದರಿಂದ. ಎಲ್ಲವನು ಪರಿಶೀಲಿಸಿ ನಂತರ ಮುನ್ನಡೆಯುವುದು ನಿಮಗೆ ಸೂಕ್ತ. ಆರೋಗ್ಯ ಚೇತರಿಕೆ ಕಾಣಲಿದ್ದು. ವ್ಯವಹಾರದಲ್ಲಿ ಸಮಾಧಾನಕರ ಪ್ರತಿಕ್ರಿಯೆ ಸಿಗಲಿದ. ಗುರುವಾರ ರಾಯರ ದರ್ಶನ ಪಡೆಯಿರಿ ನಿಮಗೆ ಶುಭವಾಗಲಿದೆ.
ಕರ್ಕಾಟಕ: ಮನೆಯ ಹೆಚ್ಚಿನ ಜವಾಬ್ದಾರಿ ನಿಮ್ಮ ಮೇಲೆ ಬೀಳುವ ಸಾಧ್ಯತೆ ಇರುತ್ತದೆ. ಮನೆಯ ಜನ ಕುಳಿತು ಎಲ್ಲ ನಿರ್ಧಾರ ತೆಗೆದುಕೊಂಡರೆ ನಿಮಗೂ ಯಾವುದೇ ರೇತಿ ಸಮಸ್ಯೆ ಬರುವುದಿಲ್ಲ. ತಾಯಿಯ ಆರೋಗ್ಯದ ಕಡೆಗೆ ನೀವು ಹೆಚ್ಚಿನ ಜಾಗ್ರತೆ ವಹಿಸಿಕೊಳ್ಳಬೇಕು. ಸಹೋದರನೊಂದಿಗೆ ಮನಸ್ತಾಪ ಉಂಟಾಗುವ ಸಾಧ್ಯತೆ ಇರುವುದರಿಂದ ಮಾತಿನ ಮೇಲೆ ಹೆಚ್ಚಿನ ಹಿಡಿತ ಇಟ್ಟುಕೊಳ್ಳಿ. ವಾರದ ಅಂತ್ಯಕ್ಕೆ ಶುಭ ಸೂಚನೆ ನಿಮಗೆ ಸಿಗಲಿದೆ. ಮಂಗಳವಾರ ಸಂಜೆ ಮೂರು ಜನ ಬಡವರಿಗೆ ತಲಾ ಎರಡರಂತೆ ಬಾಳೆ ಹಣ್ಣು ದಾನ ಮಾಡಿ ನಿಮಗೆ ಶುಭಆಗಲಿದೆ.
ಸಿಂಹ: ಮನೆ ಅಥವ ಆಫೀಸಿನ ನಾಲ್ಕು ಗೋಡೆಯ ಮಧ್ಯೆಯೇ ಹೆಚ್ಚಿನ ಸಮಯ ಕಳೆಯುವ ಸಂದರ್ಭ ಬಂದರು ಬರಬಹುದು. ಹಿರಿಯರ ಮಾತು ತಿರಸ್ಕರಿಸಿ ಅವರ ಕೋಪಕ್ಕೆ ತುತ್ತಾಗಬೇಡಿ. ಈ ವಾರದಲ್ಲಿ ಸಮಯ ಕಳೆಯುವುದು ನಿಮಗೆ ಹೆಚ್ಚಿನ ಸಮಸ್ಯೆ ಆಗಬಹುದು. ಆದ್ದರಿಂದ ಧಾರ್ಮಿಕ ಕಾರ್ಯಗಳ ಬಗ್ಗೆ ನೀವು ಹೆಚ್ಚಿನ ರೀತಿಯಲ್ಲಿ ತೊಡಗಿಕೊಂಡರೆ ನಿಮಗೆ ಶುಭವಾಗಲಿದೆ. ವಾರದ ಅಂತ್ಯಕ್ಕೆ ಆರೋಗ್ಯ ಒಂದಿಷ್ಟು ಹದಗೆಡುವ ಸಮಸ್ಯೆ ನಿಮಗೆ ಬಂದರು ಬರಬಹುದು. ಶುಕ್ರವಾರ ಸಂಜೆ ಸಮಯದಲ್ಲಿ ಶಕ್ತಿ ದೇವಿಯ ದರ್ಶನ ಪಡೆದುಕೊಳ್ಳಿ.
ಕನ್ಯಾ: ಈ ವಾರದಲ್ಲಿ ಒಂದು ದಿನ ಆದರು ಗುರು ಸ್ತೋತ್ರ ಪಾರಾಯಣ ಮಾಡಿ ನಿಮಗೆ ಹೆಚ್ಚಿನ ಫಲ ದೊರೆಯಲಿದೆ. ನಿಮ್ಮ ಮೇಲಿನ ಅಧಿಕಾರಿಯಿಂದ ನಿಮಗೆ ಕೆಲಸದ ಒತ್ತಡ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಆರೋಗ್ಯದ ವಿಷಯದಲ್ಲಿ ಕೀಲು ನೋವು ಬರುವ ಸಾಧ್ಯತೆ ಹೆಚ್ಚಿರುತ್ತದೆ. ಸಣ್ಣ ವ್ಯವಹಾರ ಮಾಡುವವರಿಗೆ ನಿರೀಕ್ಷೆಗಿಂತ ಒಂದಿಷ್ಟು ಉತ್ತಮ ಲಾಭ ದೊರೆಯುವ ಸಾಧ್ಯತೆ ಇರುತ್ತದೆ. ಸ್ನೇಹಿತರ ಜೊತೆಗೆ ದೂರದ ಪ್ರಯಾಣ, ಪುಣ್ಯ ಕ್ಷೇತ್ರಗಳ ದರ್ಶನ ಭಾಗ್ಯ ಬರಬಹುದು. ವಾರದ ಅಂತ್ಯದಲ್ಲಿ ಒಂದು ದಿನ ಹಸುವಿಗೆ ಬೆಲ್ಲವನ್ನು ನೀಡಿ.
ತುಲಾ: ನಿಮ್ಮ ವೃತ್ತಿಯಲ್ಲಿರುವ ಜನರೇ ನಿಮ್ಮನು ಕೊಂಡಾಡುವ ಸಾಧ್ಯತೆಗಳು ಹೆಚ್ಚಾಗಿದೆ. ಈ ವಾರದ ಅಂತ್ಯದಲ್ಲಿ ಯಾರೊಂದಿಗೂ ನಿಷ್ಠೂರ ಮತ್ತು ಹಣದ ವ್ಯವಹಾರ ಮಾಡಲು ಹೋಗಬೇಡಿ. ನಿಮ್ಮ ಲೆಕ್ಕಾಚಾರ ನಿಮ್ಮ ವಿರುದ್ದ ಸಾಗಲಿದೆ. ವಾರದ ಮಧ್ಯೆ ದಿನದಲ್ಲಿ ಹಣದ ಅಭಾವ ಉಂಟಾಗಿ ನಿಮ್ಮ ಕೋರಿಕೆ ಈಡೇರದೆ ಇರುವ ಸಾಧ್ಯತೆ ಇರುತ್ತದೆ. ಆರೋಗ್ಯ ಕಳೆದ ವಾರಕ್ಕಿಂತ ಹೆಚ್ಚಿನ ರೀತಿಯಲ್ಲಿ ಚೇತರಿಕೆ ಕಾಣಲಿದೆ. ಮಂಗಳವಾರ ಸಂಜೆ ಸಮಯದಲ್ಲಿ ಒಂದಿಷ್ಟು ಕಲ್ಲು ಉಪ್ಪನ್ನು ದೃಷ್ಟಿ ತೆಗೆಸಿಕೊಂಡು ಉತ್ತರಾಭಿಮುಖವಾಗಿ ನಿಂತು ಎಸೆಯಿರಿ ನಿಮ್ಮ ಸಮಸ್ಯೆ ದೂರ ಆಗಲಿದೆ.
ವೃಶ್ಚಿಕ: ಈ ವಾರ ಹಣ ಕಾಸಿನ ವಿಚಾರದಲ್ಲಿ ನಿಮಗೆ ಉತ್ತಮ ಪ್ರಗತಿ ಕಾಣಲಿದೆ. ಆದಾಯ ತರುವ ಹೆಚ್ಚಿನ ಮೂಲಗಳಿಗೆ ಹೊಡಿಕೆ ಮಾಡಲು ನಿಮಗೆ ಉತ್ತಮ ಸಮಯ ಇದಾಗಿದೆ. ಆದರೆ ಕಳೆದ ವಾರಕ್ಕಿಂತ ಈ ವಾರದ ಕೊನೆಯ ದಿನಗಳಲ್ಲಿ ಆರೋಗ್ಯ ಕ್ಷೀಣಿಸುವ ಸಂಭವ ಹೆಚ್ಚಿದೆ. ಗಂಟಲಿಗೆ ಸಂಬಂಧಪಟ್ಟಂತೆ ಸಮಸ್ಯೆ ಉದ್ಬವ ಆಗಬಹುದು. ಸಾಧ್ಯ ಆದರೆ ನಿಮ್ಮ ಕುಲ ದೇವರ ದರ್ಶನ ಪಡೆದುಕೊಳ್ಳಿ. ಸೋಮವಾರ ಮತ್ತು ಗುರುವಾರ ಸಮಯ ಸಂಜೆ ಆರು ಗಂಟೆ ನಂತರ ಬಡವರಿಗೆ ನಾಲ್ಕು ಹಿಡಿ ಅಕ್ಕಿ ದಾನ ಮಾಡಿದ್ರೆ ವಿಶೇಷ ಫಲ ನಿಮಗೆ ಸಿಗಲಿದೆ.
ಧನು: ಈ ವಾರ ಯಾವುದೇ ಕೆಲಸ ಶುರು ಮಾಡುವ ಮುಂಚೆ ನಾಲ್ಕು ಬಾರಿ ಯೋಚಿಸಿ ಮುಂದೆ ನಡೆಯಿರಿ. ನಿಮ್ಮ ಕೋಪಕ್ಕೆ ಒಂದಿಷ್ಟು ಮಿತಿಯನ್ನು ಹಾಕಿಕೊಂಡರೆ ಉತ್ತಮ. ಪಾಲುದಾರಿಕೆ ವ್ಯವಹಾರ ನಡೆಸುವ ಜನಕ್ಕೆ ಅಷ್ಟೇನೂ ಲಾಭ ತರುವ ಸಂಭವ ಇರುವುದಿಲ್ಲ. ವಾರದ ಮೊದಲ ಎರಡು ದಿನ ವಾಹನ ಚಲಾಯಿಸುವಾಗ ಹೆಚ್ಚಿನ ಜಾಗ್ರತೆ ತೆಗೆದುಕೊಳ್ಳಿ. ತಂದೆ ಆರೋಗ್ಯದ ಜವಾಬ್ದಾರಿ ನಿಮ್ಮ ಮೇಲೆ ಬರುವ ಸಾಧ್ಯತೆ ಇರುತ್ತದೆ. ವಾರದ ಮೊದಲ ಮೂರು ದೀನ ವಿಷ್ಣು ಸಹಸ್ರನಾಮ ಪಾರಾಯಣ ಮಾಡಿ ಅಥವ ಕೇಳಿ ನಿಮಗೆ ಶುಭವಾಗಲಿದೆ.
ಮಕರ: ನಿಮ್ಮ ಜೊತೆಯಲ್ಲಿರುವ ಜನರೇ ನಿಮ್ಮನು ದುರ್ಬಲರನ್ನಾಗಿ ಮಾಡುವ ಸಂಭವ ಹೆಚ್ಚಿದೆ. ನಕಾರಾತ್ಮಕ ಆಲೋಚನೆಗಳಿಗೆ ಕಿವಿಗೊಡದೆ ನೀವು ನಂಬಿರುವ ದೈವವನು ನಂಬಿ ವಾರವನ್ನು ಪ್ರಾರಂಭಿಸಿ ನಿಮಗೆ ಯಾವುದೇ ರೀತಿಯ ಸಮಸ್ಯೆ ಬರುವುದಿಲ್ಲ. ವಾರದ ಕೊನೆ ದಿನದಲ್ಲಿ ಆರೋಗ್ಯದಲ್ಲಿ ಚೇತರಿಕೆ ಕಾಣಲಿದೆ. ವಿದೇಶಿ ಪ್ರಯಾಣದ ಕನಸು ಇರುವವರಿಗೆ ಸಿಹಿ ಸುದ್ದಿ ಬರಲಿದೆ. ಕಂಕಣ ಭಾಗ್ಯ ಬರುವ ಸಾಧ್ಯತೆ ಗೃಹಿಣಿಯರಿಗೆ ಗಂಡನೊಂದಿಗೆ ಉತ್ತಮ ಬಂದವ್ಯ ಯಾವುದೇ ಅಡುಕಿಲ್ಲದೆ ಸಾಗಲಿದೆ. ಶುಕ್ರವಾರ ಸಂಜೆ ಸಮಯದಲ್ಲಿ ತಾಯಿ ಚಾಮುಂಡಿ ದರ್ಶನ ಪಡೆಯಿರಿ.
ಕುಂಭ: ಈ ವಾರದಲ್ಲಿ ದೊಡ್ಡ ದೊಡ್ಡ ನಿರ್ಧಾರ ತೆಗೆದುಕೊಳ್ಳುವ ಮುನ್ನ ನಿಮ್ಮ ಹಿರಿಯರ ಮಾರ್ಗದರ್ಶನ ಪಡೆಯಿರಿ. ಈ ವಾರದ ಎರಡನೇ ದಿನ ಹನುಮಂತನ ದರ್ಶನ ಪಡೆದುಕೊಳ್ಳಿ. ಹನುಮಾನ್ ಚಾಲೀಸ ಹನ್ನೊಂದು ಬಾರಿ ಪಾರಾಯಣ ಮಾಡಿ. ಆರೋಗ್ಯ ಸ್ಥತಿ ಸ್ಥಿರವಾಗಿದೆ. ಹಣ ಕಾಸಿನ ವಿಷಯದಲ್ಲಿ ನಿಮಗೆ ಸಣ್ಣ ಪುಟ್ಟ ಅಡ್ಡಿ ಆತಂಕ ಬರುವ ಸಂಭವ ಇರುತ್ತದೆ. ವಾರದ ಕೊನೆಯ ದಿನ ಗಳಲ್ಲಿ ಕುಟುಂಬದ ಜೊತೆಗೆ ಅಥವ ಸ್ನೇಹಿತರ ಜೊತೆಗೆ ಪ್ರವಾಸ ಹೋಗುವ ಸಾಧ್ಯತೆ ಇರುತ್ತದೆ.
ಮೀನ: ಈ ವಾರ ನಿಮಗೆ ಆರೋಗ್ಯದಲ್ಲಿ ಚೇತರಿಕೆ ಕಾಣುವಿರಿ. ಮನೆಗೆ ಒಂದಿಷ್ಟು ಹೊಸ ಹೊಸ ವಸ್ತುಗಳನ್ನು ಖರೀದಿ ಮಾಡುವ ಸಂಭವ ಇರುತ್ತದೆ. ವಾಹನ ಚಾಲನೆ ಮಾಡುವ ಮುನ್ನ ಗಣೇಶನ ನೆನೆದು ಮುಂದೆ ಸಾಗಿರಿ. ನಿಮ್ಮ ಕೆಲಸ ಕಾರ್ಯದಲ್ಲಿ ಯಾವುದೇ ಸಮಸ್ಯೆ ಇಲ್ಲದೆ ಸುಸೂತ್ರವಾಗಿ ಜರುಗಲಿದೆ. ಮನೆಯಲ್ಲಿರುವ ಹಿರಿಯರ ಆಶಿರ್ವಾದ ಪಡೆದುಕೊಳ್ಳಿ ನಿಮಗೆ ವಿಶೇಷ ಲಾಭ ದೊರೆಯಲಿದೆ. ವಾರದ ಅಂತ್ಯದಲ್ಲಿ ಮನೆಯಲ್ಲಿ ಸಡಗರದ ಸಂಭ್ರಮ ನಿಮ್ಮದಾಗಲಿದೆ. ಶಿವ ಸ್ತುತಿ ಪಾರಾಯಣ ಮಾಡುವುದರಿಂದ ನಿಮಗೆ ವಿಶೇಷ ಲಾಭ ದೊರೆಯಲಿದೆ.