ಯಾವ ಹಣ್ಣು ಯಾವ ಸಮಯದಲ್ಲಿ ತಿಳಿದುಕೊಳ್ಳಬೇಕು ತಿಳಿದುಕೊಳ್ಳಿ

0
888

ಎಲ್ಲ ರೀತಿಯ ಪೋಷಕಾಂಶಗಳನ್ನು ಒಳಗೊಂಡಿರುವ ವಸ್ತು ಎಂದರೆ ಹಣ್ಣುಗಳು ಈ ಹಣ್ಣುಗಳನ್ನು ನಿಸರ್ಗವು ನಮಗೆ ಕೊಟ್ಟಿರುವ ಅತ್ಯಮೂಲ್ಯವಾದ ವಸ್ತು ಇದು ಜೊತೆಗೆ ದೇವರು ನಮಗೆ ಕೊಟ್ಟಿರುವ ಉತ್ತಮ ಕೊಡುಗೆ ಇದು ನಿಸರ್ಗವು ನಮಗೆ ಎಷ್ಟೆಲ್ಲ ರೀತಿಯ ವಿಧವಿಧದ ಹಣ್ಣುಗಳನ್ನು ಕೊಟ್ಟಿದೆ ಅದರಲ್ಲಿ ಒಂದಲ್ಲ ಂದು ರೀತಿಯ ಪೌಷ್ಟಿಕ ಅಂಶಗಳ ಸಾರವಿದೆ ಈ ಹಣ್ಣುಗಳನ್ನು ಯಾರು ಇಷ್ಟ ಪಡುವುದಿಲ್ಲ ಹೇಳಿ ಎಲ್ಲರಿಗು ಒಂದಲ್ಲ ಒಂದು ರೀತಿಯ ಹಣ್ಣುಗಳನ್ನು ಇಷ್ಟ ಪಟ್ಟು ತಿನ್ನುತ್ತಾರೆ . ಆದರೆ ನಮಗೆ ಹಣ್ಣುಗಳು ಇಷ್ಟ ಎಂದು ಬೆಳಿಗ್ಗೆ ಎದ್ದಾಗಿಂದ ಮಲಗುವವರೆಗೂ ಹಣ್ಣುಗಳನ್ನು ಸೇವಿಸುತ್ತಿದ್ದರೆ ಅರೋಗ್ಯ ಸರಿಯೋಗುವ ಬದಲು ಅರೋಗ್ಯ ಕೆಡುತ್ತದೆ ಹಾಗಾಗಿ ಈ ಹಣ್ಣುಗಳನ್ನು ಸೇವಿಸುವುದಕ್ಕೂ ಸಹ ಅದರದೇ ಅದಾ ಕೆಲವು ನಿಯಮಗಳು ಇವೆ ಅವುಗಳನ್ನು ತಿಳಿದುಕೊಂಡು ಹಣ್ಣುಗಳನ್ನು ಸೇವಿಸಿದರೆ ನಮ್ಮ ಆರೋಗ್ಯವು ಉತ್ತಮವಾಗಿ ಇರುತ್ತದೆ ಜೊತೆಗೆ ಯಾವುದೇ ರೀತಿಯ ಔಷಧಿಗಳ ಅವಶ್ಯಕತೆ ಇರುವುದಿಲ್ಲ

ಹಣ್ಣುಗಳನ್ನು ತಿನ್ನುವ ಮೊದಲು ಸ್ವಲ್ಪ ಉಪ್ಪು ಹಾಕಿ ಸಾರಾಗವಾಗಿ ಅರಿಯುವ ನೀರಿನಲ್ಲಿ ಚೆನ್ನಾಗಿ ತೊಳೆಯಬೇಕು ಅದರ ಮೇಲೆ ಇರುವ ಸೂಕ್ಷ್ಮ ಕಣಗಳು ಹೋಗಬೇಕು ನಂತರ ಸೇವಿಸಬೇಕು. ಹಣ್ಣುಗಳನ್ನು ಮಾರುಕಟ್ಟೆ ಇಂದ ತಂದು ಸುಮ್ಮನೆ ತೊಳೆದುಕೊಂಡು ಸೇವಿಸುವುದಲ್ಲ ಹಣ್ಣಗಳನ್ನು ಸೇವಿಸುವಾಗ ಅದರದೇ ಅದಾ ಕೆಲವು ನಿಯಮಗಳು ಇವೆ ಅವುಗಳನ್ನು ಗಮನದಲ್ಲಿ ಇಟ್ಟುಕೊಂಡು ಸೇವಿಸಬೇಕು. ಎಲ್ಲರೂ ಸಾಮಾನ್ಯವಾಗಿ ಹಣ್ಣುಗಳನ್ನು ಊಟ ಅದ ನಂತರ ಸೇವನೆ ಮಾಡುತ್ತಾರೆ ಆದರೆ ಹಣ್ಣುಗಳ ಸೇವನೆಗೆ ಅದು ಸರಿಯಾದ ಸಮಯವೇ

ಹಣ್ಣುಗಳನ್ನು ತಿನ್ನಲು ಬೆಳಗ್ಗಿನ ಸಮಯ ಅತಿ ಸೂಕ್ತವಾಗಿದೆ. ಆದರೆ ಬೆಳಿಗ್ಗೆ ಸಮಯದಲ್ಲಿ ಹಣ್ಣು ತಿನ್ನುವ ಮೊದಲು ಒಂದು ಲೋಟ ಬಿಸಿ ನೀರು ಕುಡಿದು ನಂತರ ಹಣ್ಣನ್ನು ಸೇವಿಸದರೆ ತುಂಬ ಒಳ್ಳೆಯದು ಜೊತೆಗೆ ಬೆಳಿಗ್ಗೆ ಸಮಯದಲ್ಲಿ ಖಾಲಿಹೊಟ್ಟೆಯಲ್ಲಿ ಹಣ್ಣುಗಳನ್ನು ತಿಂದರೆ ಹೊಟ್ಟೆಯಲ್ಲಿನ ಕಲ್ಮಶಗಳು ಸುಲಭವಾಗಿ ವಿಸರ್ಜನೆಯಾಗಲು ನೆರವಾಗುತ್ತದೆ. ಹಣ್ಣುಗಳನ್ನು ಮಧ್ಯಾಹ್ನದ ಊಟದ ಮುಂಚೆ ಅಂದರೆ ಸುಮಾರು ಒಂದು ಗಂಟೆಗೂ ಮುಂಚೆ ಸೇವಿಸುವುದು ಒಳ್ಳೆಯದು. ನೀವು ನಿತ್ಯವೂ ವ್ಯಾಯಮ ಮಾಡುವವರಾಗಿದ್ದರೆ ವ್ಯಾಯಮಕ್ಕೂ ಅರ್ಧ ಗಂಟೆ ಮುನ್ನ ಹಣ್ಣುಗಳನ್ನು ಸೇವಿಸಿದರೆ ನಿಮ್ಮವ್ಯಾಯಮಕ್ಕೆ ಅಗತ್ಯವಾದ ಶಕ್ತಿ ಮತ್ತು ನೀರು ದೊರಕುತ್ತದೆ

ಬೆಳಿಗ್ಗೆ ತಿಂಡಿಯಾದ ನಂತರ ಮದ್ಯಾನ ಊಟ ಮಾಡುವ ಮಧ್ಯೆ ಹಣ್ಣುಗಳನ್ನು ಸೇವಿಸಲು ನಿಮ್ಮ ಹೊಟ್ಟೆಯಲ್ಲಿ ಜಾಗ ಇರುವಂತೆ ನೋಡಿಕೊಳ್ಳಿ. ಊಟಕ್ಕೆ ಒಂದು ಗಂಟೆ ಮೊದಲು ಅಥವಾ ಊಟವಾದ ಎರಡು ಗಂಟೆಯ ನಂತರ ಸೇವಿಸುವುದು ಒಳ್ಳೆಯದು. ಒಂದು ವೇಳೆ ನೀವು ಪಾಸ್ತಾ, ಬರ್ಗರ್‌ ರೀತಿಯ ಭಾರೀ ಊಟವನ್ನು ನೀವು ಸೇವಿಸಿದ್ದರೆ, ಅಂತಹ ಆಹಾರ ಜೀರ್ಣವಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಆಗ ನೀವು 3-4 ಗಂಟೆ ಬಿಟ್ಟು ನಂತರ ಹಣ್ಣು ಸೇವಿಸಬೇಕು. ಹಣ್ಣುಗಳನ್ನು ಊಟಗಳ ಮಧ್ಯೆ ಅಥವಾ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ, ಎಲ್ಲಾ ಪೋಷಕಾಂಶಗಳು, ನಾರಿನಂಶಗಳು ಮತ್ತು ಸೂಕ್ಷ್ಮ ಸಕ್ಕರೆಯ ಅಂಶಗಳು ಚೆನ್ನಾಗಿ ದೇಹಗತವಾಗುತ್ತವೆ. ಈ ಕ್ರಮದಲ್ಲಿ ಹಣ್ಣುಗಳನ್ನು ಸೇವಿಸಿದರೆ, ನೀವು ಸೇವಿಸಿದ ಹಣ್ಣಿನ ಬಹು ಅಂಶವು ಸಂಪೂರ್ಣವಾಗಿ ದೇಹಗತವಾಗುತ್ತದೆ

ನೀವು ಊಟವಾದ ಕೂಡಲೇ ಹಣ್ಣನ್ನು ಸೇವಿಸಿದರೆ, ಅದರಲ್ಲೂ ವಿಶೇಷವಾಗಿ ಭಾರೀ ಊಟ ಸೇವಿಸಿದ ಕೂಡಲೇ ಹಣ್ಣನ್ನು ಸೇವಿಸಿದರೆ ಮತ್ತು ಇತರ ಆಹಾರಗಳ ಜೊತೆಗೆ ಸೇರಿಸಿ ಸೇವಿಸಿದರೆ, ಹಣ್ಣು ಇತರ ಆಹಾರಗಳ ಜೊತೆಗೆ ಹೊಟ್ಟೆಯಲ್ಲಿ ಬಹು ಸಮಯ ಇದ್ದು, ಕರುಳಿನಲ್ಲಿಯೇ ಕೊಳೆತು ಬಿಡಬಹುದು ಅಥವಾ ಅಲ್ಲಿ ಕ್ರಿಮಿಗಳು ಉತ್ಪತ್ತಿಯಾಗಬಹುದು. ಊಟದಲ್ಲಿ ಹಣ್ಣುಗಳ ಜೊತೆಗೆ ಏನೇನನ್ನೋ ಸೇರಿಸುವುದಕ್ಕೆ ಬದಲಾಗಿ, ಒಂದು ಬಾರಿ ಸೇವಿಸುವಾಗ ಸ್ವಲ್ಪ ಹೆಚ್ಚೇ ಹಣ್ಣುಗಳನ್ನು ಸೇವಿಸುವುದು ಒಳ್ಳೆಯದು.

ಹಣ್ಣುಗಳನ್ನು ಯಾವ ಸಮಯದಲ್ಲಿ ಸೇವಿಸಬಾರದು ಎಂದು ನೋಡೋಣ ಬನ್ನಿ . ನಿದ್ದೆ ಮಾಡಲು ತೆರಳುವ ಸ್ವಲ್ಪವೇ ಸಮಯಕ್ಕೆ ಮೊದಲು ಹಣ್ಣುಗಳನ್ನು ಸೇವಿಸುವುದು ಒಳ್ಳೆಯ ಕ್ರಮ ಅಲ್ಲ. ಇದು ಇದ್ದಕ್ಕಿದ್ದಂತೆಯೇ ರಕ್ತದ ಸಕ್ಕರೆಯ ಅಂಶವನ್ನು ಮತ್ತು ಇನ್ಸುಲಿನ್‌ ಮಟ್ಟವನ್ನು ಏರಿಸುತ್ತದೆ ಮತ್ತು ಇದರಿಂದಾಗಿ ನಿರಾಳವಾಗಿ ನಿದ್ದೆ ಹೋಗಲು ಕಷ್ಟವಾಗುತ್ತದೆ. ಸಾಯಂಕಾಲದ ಸಮಯದಲ್ಲಿ ಹಣ್ಣುಗಳನ್ನು ತಿನ್ನುವುದನ್ನು ತಪ್ಪಿಸಿಕೊಳ್ಳಿ ಮತ್ತು ಯಾವುದೇ ಹಣ್ಣಾದರೂ ಸಹ ಅದನ್ನು ರಾತ್ರಿ ಮಲಗುವುದಕ್ಕೆ 3 ಗಂಟೆ ಮೊದಲು ಸೇವಿಸಬೇಕು. ಊಟ ಆದ ತಕ್ಷಣ ಹಣ್ಣುಗಳನ್ನು ಸೇವಿಸಬಾರದು. ಹಣ್ಣುಗಳನ್ನು ಶೇಖರಣೆ ಮಾಡಿ ಹಿಡುವುದು ಹೇಗೆ ಗೊತ್ತೆ. ಹಣ್ಣುಗಳನ್ನು ಯಾವತ್ತೂ ಮೊಟ್ಟೆ, ಸಮುದ್ರಾಹಾರ ಅಥವಾ ಹಸಿ ಮಾಂಸದ ಸಮೀಪ ಇರಿಸಬೇಡಿ. ಹಣ್ಣುಗಳನ್ನು ಖರೀದಿಸುವಾಗ ಅಥವಾ ಮನೆಯಲ್ಲಿ ಸಂಗ್ರಹಿಸುವಾಗ ಯಾವಾಗಲೂ ಪ್ರತ್ಯೇಕ ವಾಗಿಯೆ ಇರಿಸ ಬೇಕು. ಹಣ್ಣುಗಳನ್ನು ಹೆಚ್ಚು ಗಾಳಿ ಹಾಡುವ ಸ್ಥಳದಲ್ಲಿ ಇಡಬೇಕು. ಕೊಳೆತ ಹಣ್ಣುಗಳನ್ನು ತೆಗೆದುಬಿಡಬೇಕು ಇಲ್ಲದಿದ್ದರೆ ಎಲ್ಲ ಹಣ್ಣುಗಳು ಬೇಗ ಕೊಳೆತುಹೋಗುತ್ತವೆ

ಹಣ್ಣುಗಳನ್ನು ಖರೀದಿ ಮಾಡುವಾಗ ಸ್ವಲ್ಪ ಸ್ವಲ್ಪ ಮಾತ್ರ ತೆಗೆದುಕೊಳ್ಳಿ ಇಲ್ಲ ಅಂದರೆ ಹಣ್ಣಗಳು ತುಂಬ ದಿನಗಳು ಇರುವುದಿಲ್ಲ. ಹಣ್ಣುಗಳ ಜ್ಯುಸ್ ಉತ್ತಮ. ಹಣ್ಣುಗಳನ್ನು ಹಾಗೇ ತಿನ್ನುವುದು ಉತ್ತಮವಾದರೂ ಜೀರ್ಣಕ್ರಿಯೆ ಸುಲಭವಾಗಲು ಮಿಕ್ಸಿಯಲ್ಲಿ ಜ್ಯೂಸ್ ಮಾಡಿಕೊಳ್ಳುವುದು ಇನ್ನು ಉತ್ತಮ ಏಕೆಂದರೆ ಜ್ಯೂಸ್ ಮಾಡುವ ಮೂಲಕ ತಿರುಳು, ಬೀಜ ತಿನ್ನುವಂತಿದ್ದರೆ ಮತ್ತು ನಾರು ಅತಿ ಚಿಕ್ಕದಾಗಿ ಕತ್ತರಿಸಲ್ಪಟ್ಟು ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತವೆ. ಅಲ್ಲದೇ ವಿವಿಧ ಹಣ್ಣುಗಳ ಮಿಶ್ರಣದ ಮೂಲಕ ಬೇರೆ ಬೇರೆ ಬಣ್ಣಗಳಿಂದ ತುಂಬಿದ ಜ್ಯೂಸ್ ನೋಡುತ್ತಿದ್ದಂತೆಯೇ ಕುಡಿಯಲು ಮನಸ್ಸಾಗುತ್ತದೆ. ಈ ಮೂಲಕ ಲಭ್ಯವಾದ ಶಕ್ತಿ ಇಡಿಯ ದಿನದ ಚೈತನ್ಯವನ್ನು ಉಳಿಸಿಕೊಳ್ಳುತ್ತದೆ

ಹಣ್ಣುಗಳನ್ನು ಸೇವಿಸುವುದರಿಂದ ಆಗುವ ಲಾಭಗಳು. ದೇಹದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ದಿನಕ್ಕೆ ಅವಶ್ಯವಿರುವ ಪೋಷಕಾಂಶಗಳು ಮತ್ತು ಶಕ್ತಿ ಲಭ್ಯವಾಗುತ್ತದೆ. ದೇಹದ ವಿಷಕಾರಿ ವಸ್ತುಗಳನ್ನು ಹೊರಹಾಕಲು ನೆರವಾಗುತ್ತವೆ. ಮೆದುಳು, ಹೃದಯ, ಮೂತ್ರಪಿಂಡ ಮೊದಲಾದ ಅಂಗಗಳ ಕಾರ್ಯಕ್ಷಮತೆ ಹೆಚ್ಚುತ್ತದೆ. ಅನಾರೋಗ್ಯಕ್ಕೆ ಕಾರಣವಾದ ಫ್ರೀ ರ್‍ಯಾಡಿಕಲ್ ಕಣಗಳನ್ನು ದೂರವಾಗಿಸುತ್ತದೆ. ಈ ಎಲ್ಲಾ ಪ್ರಯೋಜನಗಳನ್ನು ಪಡೆಯಲು ವಿವಿಧ ಹಣ್ಣುಗಳನ್ನು ಸಮರ್ಪಕವಾದ ಸಮಯದಲ್ಲಿ ಸೇವಿಸುವುದು ಅಗತ್ಯವಾಗಿದೆ. ನೋಡಿದರಲ್ಲ ಹಣ್ಣುಗಳನ್ನು ಯಾವ ಸಮಯದಲ್ಲಿ ಹೇಗೆ ಸೇವನೆ ಮಾಡಬೇಕು ಎಂದು ನೀವು ಕೂಡ ಇದನ್ನು ಅನುಸರಿಸಿ ಆರೋಗ್ಯವನ್ನು ಉತ್ತಮಗೊಳ್ಳಿಸಿಕೊಳ್ಳಿ .

LEAVE A REPLY

Please enter your comment!
Please enter your name here