ಅನ್ನವನ್ನು ತೊಡೆಯ ಮೇಲೆ ಇಟ್ಟುಕೊಂಡು ಊಟ ಮಾಡಬಹುದೇ ತಿಳಿಯಿರಿ

0
950

ಅನ್ನವನ್ನು ದೇವರಿಗೆ ಸಮ ಎಂಬುದು ಎಲ್ಲರಿಗೂ ಗೊತ್ತು ಒಂದು ತುತ್ತು ಅನ್ನಕ್ಕೂ ಎಷ್ಟು ಪ್ರಾಮುಖ್ಯತೆ ಇದೆ ಅದರ ಬೆಲೆ ಎಷ್ಟು ಎಂದು ಗೊತ್ತು. ಬೆಲೆಯನ್ನು ಬೆಳೆಯುವ ರೈತರಿಗೆ ಮಾತ್ರ ಗೊತ್ತು ಅದರ ಕಷ್ಟ ಎಂದು ಎಂದು, ಆದರೆ ಅಕ್ಕಿಯನ್ನು ಖರೀದಿ ಮಾಡುವ ಮನುಷ್ಯನಿಗೆ ಅದರ ಮೌಲ್ಯ ಎಂದು ಸಹ ಅರ್ಥ ಆಗುವುದಿಲ್ಲ. ಹಿಂದಿನ ಕಾಲದಲ್ಲಿ ಅನ್ನವನ್ನು ಸೇವನೆ ಮಾಡುವಾಗ ಕೈ ಕಾಲು ಮುಖ ತೊಳೆದು ಕಾಲು ಮಡಚಿ ನೆಲದ ಮೇಲೆ ತಟ್ಟೆಯನ್ನು ಇಟ್ಟುಕೊಂಡು ಸೇವನೆ ಮಾಡುತ್ತಿದ್ದರು.

ಆದರೆ ಇಂದಿನ ಕಾಲದ ಜನರು ಅನ್ನವನ್ನು ಸೇವನೆ ಮಾಡುವಾಗ ಯಾವ ಯಾವ ವಿಧಾನದಲ್ಲಿ ಕುಳಿತು ಊಟ ಮಾಡುತ್ತಾರೋ ಅವರೇ ಬಲ್ಲರು ಆದರೆ ಹೀಗೆ ಮಾಡುವುದು ಸರಿಯೇ ಅದರಲ್ಲೂ ಹೆಚ್ಚು ಮಂದಿ ತಮ್ಮ ತೊಡೆಯ ಮೇಲೆ ಇಟ್ಟುಕೊಂಡು ಸೇವಿಸುತ್ತಾರೆ. ಟಿವಿ ನೋಡುತ್ತಾ ಒಂದು ಕೈ ನಲ್ಲಿ ಮೊಬೈಲ್ ಹಿಡುಕೊಂಡು ಹೀಗೆ ಹತ್ತಾರು ರೀತಿಯ ಭಂಗಿಯಲ್ಲಿ ಅನ್ನವನ್ನು ಹಿಡಿದು ಸೇವನೆ ಮಾಡ್ತಾರೆ ಆದ್ರೆ  ಹೀಗೆ ಸೇವನೆ ಮಾಡುವುದರಿಂದ ಏನೆಲ್ಲ ಸಮಸ್ಯೆ ಗೊತ್ತೇ ನಿಮ್ಮ ಊಹೆಗೂ ನಿಲುಕದ್ದು ಅನೇಕ ರೀತಿಯ ಸಮಸ್ಯೆ ನಿಮಗೆ ಬರುತ್ತದೆ.

ತೊಡೆಯ ಮೇಲೆ ಅನ್ನವನ್ನಿಟ್ಟುಕೊಂಡು ಊಟ ಮಾಡಿದರೆ ಅನ್ನದಲ್ಲಿನ ದೇವತ್ವಕ್ಕೆ ಅಗೌರವ ತೋರಿದಂತಾಗುತ್ತದೆ. ತೊಡೆಯ ಮೇಲೆ ತಟ್ಟೆಯನ್ನಿಟ್ಟು ಅನ್ನವನ್ನು ಸೇವಿಸಿದರೆ, ಇದರಿಂದ ಜೀವದ ಅಂತರ್ಮನಸ್ಸಿನ ವಾಸನೆಯ ವಿಚಾರಗಳಿಗನುಸಾರ ಪ್ರಕ್ಷೇಪಿತವಾಗುವ ಲಹರಿಗಳು ಅನ್ನದ ಮೂಲಕ ದೇಹದಲ್ಲಿ ಸಂಕ್ರಮಿತವಾಗುತ್ತವೆ. ತೊಡೆಯ ಮೇಲೆ ತಟ್ಟೆಯನ್ನಿಟ್ಟು ಊಟವನ್ನು ಮಾಡುವುದರಿಂದ ಸ್ಪರ್ಶದ ಮಾಧ್ಯಮದಿಂದ ಕಾಲು, ಮಂಡಿ ಮತ್ತು ತೊಡೆಗಳಲ್ಲಿ ಸುಪ್ತವಾಗಿರುವ ಸ್ಪಂದನಗಳು ಕಾರ್ಯನಿರತವಾಗಿ ಅನ್ನವು ಅಪವಿತ್ರವಾಗುತ್ತದೆ.

ತೊಡೆಯ ಮೇಲೆ ಇಟ್ಟು ಊಟ ಮಾಡುವುದರಿಂದ ಪಾದಗಳ ಸ್ಪರ್ಶದಿಂದ ಪಾತಾಳದಿಂದ ಬರುವ ತೊಂದರೆದಾಯಕ ಸ್ಪಂದನಗಳು ಹೆಚ್ಚಾಗಿ ಮಂಡಿಗಳ ಟೊಳ್ಳಿನಲ್ಲಿ ತಮ್ಮ ಸ್ಥಾನವನ್ನು ಮಾಡಿಕೊಳ್ಳುತ್ತವೆ. ಜನರ ಇನ್ನೊಂದು ನಂಬಿಕೆ ಏನು ಎಂದರೆ ಅನ್ನವನ್ನು ತೊಡೆಯ ಮೇಲೆ ಇಟ್ಟುಕೊಂಡು ಸೇವಿಸುವುದರಿಂದ ಅತ್ತೆ ಸೊಸೆಯರ ನಡುವೆ ಹೆಚ್ಚು ವೈಮನಸ್ಸು ನೆಡೆಯುತ್ತದೆ. ಅನ್ನವನ್ನು ಸೇವನೆ ಮಾಡುವಾಗ ದೇವರನ್ನು ಪೂಜಿಸುತ್ತಿದ್ದೇವೆ ಎಂದು ತಿಳಿದು ಅನ್ನಕ್ಕೆ ನಮಸ್ಕರಿಸಿ ನಂತರ ಸೇವನೆ ಮಾಡಿ.

ಅನ್ನವನ್ನು ಸೇವನೆ ಮಾಡುವಾಗ ಯಾವುದೇ ಕಾರಣಕ್ಕೂ ನಿಮ್ಮ ಮನಸ್ಸಿನಲ್ಲಿ ಕಲ್ಮಶ ಭಾವನೆಗಳು ಇರಬಾರದು . ಹಾಗಾಗಿ ಅನ್ನವನ್ನು ಯಾವುದೇ ಕಾರಣಕ್ಕೂ ತೊಡೆಯ ಮೇಲೆ ಇಟ್ಟು ಸೇವನೆ ಮಾಡಬೇಡಿ ಅನ್ನವನ್ನು ಯಾವುದೇ ಕಾರಣಕ್ಕೂ ವ್ಯರ್ಥ ಮಾಡಬೇಡಿ ಅನ್ನವನ್ನು ಸೇವಿಸುವ ಮೊದಲು ಅನ್ನದ ಪ್ರಾಮುಖ್ಯತೆ ತಿಳಿದು ಪೂಜಿಸಿ ಸೇವನೆ ಮಾಡಿ. ಮನೆಯಲ್ಲಿ ಇರುವ ಹಿರಿಯರು ಮಕ್ಕಳ ಮಾಡುವ ತಪ್ಪನ್ನು ಗಮನಿಸಿ ಅವರಿಗೆ ಸರಿಯಾದ ರೀತಿಯಲ್ಲಿ ಕುಳಿತು ಉಟ ಮಾಡಲು ಸೂಚಿಸಿ. ಈ ಉಪಯುಕ್ತ ಮಾಹಿತಿ ನಕಲು ಮಾಡದೆ ಶೇರ್ ಮಾಡಿ ಎಲ್ಲರಿಗು ಸಹಾಯ ಆಗಲಿ.

LEAVE A REPLY

Please enter your comment!
Please enter your name here