ಈ ಒಂದು ಹಣ್ಣು ತಿನ್ನುವವರಿಗೆ ಹತ್ತಾರು ಲಾಭ ಇದೆ

0
717

ನಿಸರ್ಗವು ನಮಗೆ ಎಷ್ಟೆಲ್ಲ ರೀತಿಯ ಕೊಡುಗೆಗಳನ್ನು ನೀಡಿದೆ ಅದರಲ್ಲಿ ಒಂದಾಗಿರುವ ಹಣ್ಣುಗಳು ಇವುಗಳು ಮನುಷ್ಯನ ಆರೋಗ್ಯವನ್ನು ಉತ್ತಮಪಡಿಸಿಕೊಳ್ಳಲು ದೇವರು ನೀಡಿರುವ ವರ ಎಂದೇ ಹೇಳಬಹುದು. ಈ ಹಣ್ಣಿಗಳು ನಮ್ಮ ಆರೋಗ್ಯವನ್ನು ಹೇಗೆ ಕಾಪಾಡುತ್ತವೆ.ಯಾವ ಹಣ್ಣುಗಳು ಯಾವ ರೀತಿಯಲ್ಲಿ ಆರೋಗ್ಯವನ್ನು ಕಾಪಾಡುತ್ತದೆ ಜೊತೆಗೆ ಯಾವ ಸಮಯದಲ್ಲಿ ಹೇಗೆ ಸೇವಿಸಬೇಕು ಎಂಬುದನ್ನು ಸಹ ತಿಳಿದುಕೊಂಡು ಸೇವಿಸುವುದು ಅಷ್ಟೇ ಮುಖ್ಯ.

ದೇವರು ನಮಗೆ ಎಷ್ಟೆಲ್ಲ ರೀತಿಯ ಹಣ್ಣುಗಳನ್ನು ನೀಡಿದ್ದಾನೆ ಅದರಲ್ಲಿ ಒಂದಾಗಿರುವ ಪರಂಗಿ(ಪಪ್ಪಾಯ) ಹಣ್ಣು ಎಲ್ಲಾ ಹಣ್ಣುಗಳಿಗಿಂತ ವಿಶಿಷ್ಟ ಹಣ್ಣಾಗಿದ್ದು, ಇದನ್ನು ಹಣ್ಣುಗಳ ರಾಣಿಯೆಂದೇ ಕರೆಯಲಾಗುತ್ತದೆ. ವೈಜ್ಞಾನಿಕವಾಗಿ ಈ ಹಣ್ಣನ್ನು ಕರಿಕ ಪರಂಗಿ ಎಂದು ಸಹ ಕರೆಯುತ್ತಾರೆ. ಈ ಪರಂಗಿ ಹಣ್ಣಿನಲ್ಲಿ ವಿಟಮಿನ್ ಸಿ.ಎ. ಪೊಟ್ಯಾಶಿಯಂ. ಮೆಗ್ನಿಷಿಯ್ ಅಂಶಗಳು ಇದ್ದು ಮನುಷ್ಯನ ಆರೋಗ್ಯವನ್ನು ಕಾಪಾಡುವುದರಲ್ಲಿ ಉತ್ತಮವಾದ ಹಣ್ಣು.

ಹಾಗಾದರೆ ಈ ಪರಂಗಿ ಹಣ್ಣನ್ನು ಸೇವನೆ ಮಾಡಿದರೆ ಏನೆಲ್ಲ ಲಾಭಗಳು ಆಗುತ್ತವೆ ನೋಡೋಣ. ಪರಂಗಿ ಹಣ್ಣಿನಲ್ಲಿ ಪೆಪಿನ್ ಎಂಬ ಪ್ರೊಟೀನ್ ಅಂಶವಿದ್ದು ಇದು ಎಂತದ್ದೇ ಆಹಾರವನ್ನು ಸಹ ಸುಲಭವಾಗಿ ಜೀರ್ಣಿಸುತ್ತದೆ. ನಿತ್ಯ ಪರಂಗಿ ಹಣ್ಣು ಸೇವಿಸಿದರೆ ಮೂತ್ರಕೋಶದಲ್ಲಿ ಕಲ್ಲುಗಳು ಆಗುವುದಿಲ್ಲ. ಪರಂಗಿ ಹಣ್ಣಿನಲ್ಲಿ ಹೆಚ್ಚು ನಾರಿನ ಅಂಶ ಹಾಗೂ ವಿಟಮಿನ್ ಸಿ ಹೆಚ್ಚಾಗಿದ್ದು ಇದು ದೇಹದಲ್ಲಿ ಇರುವ ಕೊಬ್ಬನ್ನು ಕರಗಿಸುತ್ತದೆ. ಪರಂಗಿ ಹಣ್ಣು ಹೃದಯ ಸಂಭಂದಿ ಕಾಯಿಲೆಗಳು ಬರದ ಹಾಗೆ ನೋಡಿಕೊಳ್ಳುತ್ತದೆ.

ನಿತ್ಯ ಪರಂಗಿ ಹಣ್ಣು ಸೇವನೆ ಮಾಡುತ್ತಿದ್ದಾರೆ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು. ಪರಂಗಿ ಹಣ್ಣಿನಲ್ಲಿ ವಿಟಮಿನ್ ಎ ಅಂಶವಿದ್ದು ಇದು ಕಣ್ಣುಗಳ ಆರೋಗ್ಯವನ್ನು ಕಾಪಾಡುತ್ತದೆ. ಪರಂಗಿ ಹಣ್ಣು ಸೇವನೆಯಿಂದ ರಾತ್ರಿ ಕುರುಡು ಸಮಸ್ಯೆ ಹೋಗುತ್ತದೆ. ಪರಂಗಿ ಕಾಯಿಯ ರಸಕ್ಕೆ ಸ್ವಲ್ಪ ಜೇನು ತುಪ್ಪ ಹಾಕಿಕೊಂಡು ಕುಡಿದರೆ ಹೊಟ್ಟೆಯಲ್ಲಿ ಇರುವ ಜಂತು ಹುಳುಗಳು ಹೋಗುತ್ತವೆ.

ಪರಂಗಿ ಹಣ್ಣಿನಲ್ಲಿ ಆಂಟಿ ಇನ್‌ಫ್ಲಾಮೇಟರಿ ಅಂಶಗಳು ವಿಟಮಿನ್ ಸಿಯೊಂದಿಗೆ ಜೊತೆಗೂಡಿ ಸಂಧಿವಾತದ ಮೂಲವನ್ನು ಹೊರ ಹಾಕುತ್ತವೆ. ಪರಂಗಿಯಲ್ಲಿ ಇರುವ ಪೆಪೇನ್ ಅಂಶ ನೋವನ್ನು ನಿವಾರಿಸಿ ಋತುಚಕ್ರವನ್ನು ನಿರಾಳಗೊಳಿಸುತ್ತದೆ. ಪರಂಗಿಯಲ್ಲಿರುವ ಉತ್ಕರ್ಷಣ ನಿರೋಧಿ ಅಂಶ, ಫೈಟೋನ್ಯೂಟ್ರಿಯೆಂಟ್ಸ್ ಮತ್ತು ಫ್ಲೇವಿನೋಯಿಡ್ಸ್ ಕರುಳಿನ ಕೋಶಗಳನ್ನು ಮುಕ್ತ ರೇಡಿಕಲ್ ಹಾನಿಯಿಂದ ತಪ್ಪಿಸುತ್ತವೆ. ಬಾಣಂತಿಯರು ಪರಂಗಿ ಸೇವಿಸಿದರೆ ಅವರ ಎದೆಹಾಲು ಹೆಚ್ಚಾಗುತ್ತದೆ. ಬಾಯಿಯಲ್ಲಿ ಹುಣ್ಣು ಆಗಿದ್ದರೆ ಪರಂಗಿ ಗಿಡದ ಹಾಲನ್ನು ಹುಣ್ಣಿಗೆ ಹಚ್ಚಿದರೆ ಕಡಿಮೆಯಾಗುತ್ತದೆ

ಪರಂಗಿ ಹಣ್ಣು ಕೇವಲ ಆರೋಗ್ಯಕ್ಕೆ ಮಾತ್ರವಲ್ಲದೆ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಸಹಾಯ ಮಾಡುವ ಹಣ್ಣು ಸಹ ಹೇಗೆಲ್ಲ ಸಹಾಯವಾಗುತ್ತದೆ ನೋಡೋಣ. ಪರಂಗಿ ಹಣ್ಣನ್ನು ರುಬ್ಬಿ. ಆ ಪೇಸ್ಟನ್ನು ಮುಖಕ್ಕೆ ಲೇಪಿಸಿ. ಸ್ವಲ್ಪ ಹೊತ್ತು ಬಿಟ್ಟು ತೊಳೆದರೆ, ಮುಖಕ್ಕೆ ಹೊಳಪು ಬರುತ್ತದೆ. ಪರಂಗಿ ತಿರುಳನ್ನು ಜೇನಿನೊಂದಿಗೆ ಬೆರೆಸಿ ಫೇಸ್ ಪ್ಯಾಕ್ ಮಾಡಿ ಸ್ವಲ್ಪ ಸಮಯದ ನಂತರ ಮುಖ ತೊಳೆದರೆ ಚರ್ಮ ಮೃದುವಾಗುತ್ತದೆ. ಪರಂಗಿ .ಹಸಿ ಹಾಲು, ಜೇನು ತುಪ್ಪ ಸೇರಿಸಿ ಫೇಸ್ ಪ್ಯಾಕ್ ಹಾಕಿಕೊಂಡರೆ ಮುಖದ ಅಂದ ಹೆಚ್ಚುವುದು. ಪರಂಗಿ ಸಿಪ್ಪೆಯಿಂದ ಮುಖವನ್ನು ನಿಧಾನವಾಗಿ ಮಸಾಜ್ ಮಾಡಿದರೆ ಮುಖದ ಕಲೆಗಳು ನಿವಾರಣೆಯಾಗುವುದು.

ಪರಂಗಿ ಹಣ್ಣು ಹಾಗೂ ಮುಲ್ತಾನಿ ಮಿಟ್ಟಿಯನ್ನು ಬೆರೆಸಿ ಮುಖಕ್ಕೆ ಹಚ್ಚಿಕೊಂಡು ಅದು ಒಣಗಿದ ನಂತರ ತೊಳೆಯಬೇಕು ಇದು ಮೊಡವೆಗಳನ್ನು ಹೋಗಿಸುತ್ತದೆ. ಪರಂಗಿ ಹಣ್ಣಿನ ತಿರುಳಿಗೆ ಅಲೋವಿರಾ ತಿರುಳು ಬೆರೆಸಿ ಮುಖಕ್ಕೆ ಹಚ್ಚುವುದರಿಂದ ಎಣ್ಣೆಯ ಅಂಶ ಮತ್ತು ಒಣ ಚರ್ಮ ಹೋಗುತ್ತದೆ. ಪರಂಗಿ ಹಣ್ಣನ್ನು ಯಾರು ಸೇವಿಸಬಾರದು ಗೊತ್ತೇ. ಗರ್ಭಿಣಿಯರು ಪರಂಗಿ ಹಣ್ಣನ್ನು ಸೇವಿಸಬಾರದು.ಯಾಕೆಂದರೆ ಇದರ ಸೇವನೆಯಿಂದ ಗರ್ಭಪಾತ ಆಗುವ ಸಾಧ್ಯತೆ ಹೆಚ್ಚಿರುತ್ತದೆ. ಪುರುಷರು ಹೆಚ್ಚಿನ ಪರಂಗಿ ಸೇವಿಸಿದರೆ ವೀರ್ಯದ ಗಣತಿಯನ್ನು ಕಡಿಮೆ ಮಾಡುತ್ತದೆ. ನೋಡಿದರಲ್ಲ ಪರಂಗಿ ಹಣ್ಣು ಸೇವಿಸಿದರೆ ಎಷ್ಟೆಲ್ಲ ಉಪಯೋಗಗಳು ಆಗುತ್ತವೆ ನೀವು ಸೇವಿಸಿ ಆದರೆ ಯಾವುದನ್ನು ಸೇವಿಸಿದರೂ ಮಿತಿ ಇರಲಿ.

LEAVE A REPLY

Please enter your comment!
Please enter your name here