ಈ ದಿನ ನಿಮ್ಮ ರಾಶಿಯ ಭವಿಷ್ಯ ಹೇಗಿದೆ ತಿಳಿದುಕೊಳ್ಳಿ

0
559

ಮೇಷ : ವ್ಯಾಪಾರದಲ್ಲಿ ಅದಿಕ ನಷ್ಟ. ಹೆಂಡತಿಯೊಂದಿಗೆ ಸಣ್ಣ ಸಣ್ಣ ವಿಷಯಕ್ಕೆ ವಾಗ್ವಾದ. ಸಾಲಗಾರರ ಚಿಂತೆ ಕಾಡಲಿದೆ. ಎಳ್ಳಿನ ಕಪ್ಪು ಬಟ್ಟೆ ಶನಿ ದೇವರಿಗೆ ದೀಪ ಹಚ್ಚಿ.
ವೃಷಭ : ನಿಮ್ಮ ಮನಸಿನ ಒಂದಿಷ್ಟು ಆಸೆಗಳು ಪೂರ್ಣ ಆಗುವ ಸಾಧ್ಯತೆ. ನಿಮ್ಮ ವೃತ್ತಿಯಲ್ಲಿ ಉತ್ತಮ ಮಟ್ಟಕ್ಕೆ ಏರುವ ಸಾಧ್ಯತೆ ಇದೆ. ಶ್ರೀ ಹನುಮಂತ ದೇವರಿಗೆ ಕರ್ಪೂರ ದೀಪ ಹಚ್ಚಿರಿ.
ಮಿಥುನ : ಅನವಶ್ಯಕ ಖರ್ಚು ಹೆಚ್ಚಾಗುತ್ತದೆ. ಅವಿವಾಹಿತರಿಗೆ ಉತ್ತಮ ಸಂಭಂದ ಬರುವ ಸಾಧ್ಯತೆ. ಮಾತಿನ ಮೇಲೆ ಹೆಚ್ಚಿನ ಹಿಡಿತ ಇಟ್ಟುಕೊಳ್ಳಿ. ಶನಿ ದೇವರ ದರ್ಶನ ಪಡೆಯಿರಿ

ಕರ್ಕ : ಸ್ನೇಹಿತರಿಂದ ಉತ್ತಮ ಸಮಯಕ್ಕೆ ಸಹಾಯ ದೊರೆಯುತ್ತದೆ, ವ್ಯವಹಾರದಲ್ಲಿ ನಿರೀಕ್ಷೆ ಅಷ್ಟು ಹಣ ದುಡಿಮೆ ಆಗುವುದಿಲ್ಲ. ಶನಿ ದೇವರಿಗೆ ಬೆಲ್ಲ ಸಮರ್ಪಣೆ ಮಾಡಿ.
ಸಿಂಹ : ಮನೆಯಲ್ಲಿ ಕುಟುಂಬದ ಜೊತೆಗೆ ಸಂತಸದ ವಾತಾವರಣ ಸಿಗಲಿದೆ, ಅನವಶ್ಯಕ ಹೆಚ್ಚಿಗೆ ಖರ್ಚು. ವಿದೇಶಿ ಪ್ರಯಾಣ ಮಾಡುವವರಿಗೆ ಶುಭ ಸುದ್ದಿ. ಸಂಜೆ ಹನುಮ ದೇವರ ಸ್ತೋತ್ರ ಪಾರಾಯಣ ಮಾಡಿ.
ಕನ್ಯಾ : ವೃತ್ತಿ ಬದುಕಿನಲ್ಲಿ ಸಮಾಧಾನ ತರಲಿದೆ. ನಿಮ್ಮ ಜೀವನದಲ್ಲಿ ಹೆಚ್ಚಿನ ಪ್ರಗತಿ ಕಾಣುವಿರಿ. ತಂದೆ ಆರೋಗ್ಯದ ಬಗ್ಗೆ ನೀವು ಕಾಳಜಿ ತೆಗೆದುಕೊಳ್ಳಿ. ಶನಿ ದೇವರ ದೇಗುಲಕ್ಕೆ ಭೇಟಿ ನೀಡಿ ದೀಪ ಹಚ್ಚಿರಿ.

ತುಲಾ : ವಿವಾಹ ಆಗದ ಜನರಿಗೆ ಕಂಕಣ ಭಾಗ್ಯ ಕೂಡಿ ಬರುವ ಸಾಧ್ಯತೆ. ಅನ್ಯರಿಂದ ಕಿರಿ ಕಿರಿ. ಮನೆ ಬದಲು ಮಾಡುವವರಿಗೆ ಇಂದು ಉತ್ತಮ ದಿನ. ಆರೋಗ್ಯದ ಕಡೆ ಹೆಚ್ಚಿನ ಜಾಗ್ರತೆ ಇರಲಿ.
ವೃಶ್ಚಿಕ : ನಿಮ್ಮ ವೃತಿಯಲ್ಲಿ ಹೆಚ್ಚಿನ ಗೌರವ ಸಿಗಲಿದೆ ಹಲವು ದಿನದಿಂದ ಇರುವ ಹಣ ಕಾಸಿನ ಸಮಸ್ಯೆಗಳಿಗೆ ಇಂದು ಸ್ವಲ್ಪ ಸಮಾಧಾನ ಸಿಗಲಿದೆ. ಆಂಜನೇಯ ಸ್ವಾಮಿಯ ಸ್ತೋತ್ರ ಪಾರಾಯಣ ಮಾಡಿ ಇಂದು.
ಧನು : ಮನೆ ಮಕ್ಕಳು ಮತ್ತು ಹಿರಿಯರ ಆರೋಗ್ಯದ ಬಗ್ಗೆ ಎಂದು ಸಹ ಉದಾಸೀನ ಮಾಡಬೇಡಿ. ದೇವರ ಕೃಪೆ ನಿಮ್ಮ ಮೇಲೆ ಇರುವುದರಿಂದ ನಿಮಗೆ ಹೆಚ್ಚಿನ ಸುಖ ಪ್ರಾಪ್ತಿಯಗಲಿದೆ. ಶನಿ ದೇವರಿಗೆ ಎಳ್ಳಿನ ದೀಪ ಹಚ್ಚಿದರೆ ಶುಭ ಫಲ ದೊರೆಯಲಿದೆ.

ಮಕರ : ಆರೋಗ್ಯದ ಕಡೆಗೆ ಕಾಳಜಿ ವಹಿಸಿ ಆರೋಗ್ಯ ಸಮಸ್ಯೆ ಇದ್ದಲ್ಲಿ ತಡ ಮಾಡದೆ ವೈದ್ಯರ ಸಂಪರ್ಕ ಮಾಡುವುದು ಸೂಕ್ತ. ದಿನದ ಅಂತ್ಯಕ್ಕೆ ಧನ ಲಾಭ ಪ್ರಾಪ್ತಿ. ಸಂಜೆ ಹನುಮಾನ್ ಚಾಲೀಸ ಓದಿ ಎರಡು ಬಾರಿ.
ಕುಂಭ : ಕುಟುಂಬದ ಜನರೊಂದಿಗೆ ಪ್ರವಾಸ ಹೋಗುವ ಸಾಧ್ಯತೆ ಇರುತ್ತದೆ. ಆರೋಗ್ಯ ಸಮಸ್ಯೆ ಇದ್ದವರಿಗೆ ಸ್ವಲ್ಪ ಚೇತರಿಕೆ ಕಾಣಲಿದೆ. ದಿನದ ಅಂತ್ಯಕ್ಕೆ ಶುಭ ಸುದ್ದಿ ನಿಮಗೆ ಸಿಗಲಿದೆ. ಶನಿ ದೇವರ ದರ್ಶನ ಪಡೆಯಿರಿ
ಮೀನ : ನಿಮ್ಮ ಪ್ರೇಯಸಿಯೊಂದಿಗೆ ಸಣ್ಣ ಸಣ್ಣ ವಿಷಯಗಳಿಗೂ ಜಗಳವಾಗುವ ಸಾಧ್ಯತೆ. ನೀವು ಮಾಡದ ತಪ್ಪಿಗೆ ನಿಂದನೆಗೆ ಒಳಗಾಗುವ ಸಾಧ್ಯತೆ ಇರುತ್ತದೆ. ಆರೋಗ್ಯ ಒಂದಿಷ್ಟು ಸುಧಾರಣೆ ಆಗುವ ಸಂಭವ ಇದೆ.

LEAVE A REPLY

Please enter your comment!
Please enter your name here