ಗಣಪತಿಗೆ ನಮಿಸುತ್ತಾ ಈ ದಿನದ ನಿಮ್ಮ ರಾಶಿ ಭವಿಷ್ಯ ತಿಳಿಯಿರಿ

0
692

ಮೇಷ: ನೆಂಟರ ಅನಿರೀಕ್ಷಿತ ಆಗಮನದಿಂದ ಖರ್ಚು ಹೆಚ್ಚಾಗಬಹುದು. ಸಣ್ಣ ವ್ಯವಹಾರ ಮಾಡುವವರಿಗೆ ಉತ್ತಮ ಲಾಭ. ಯಾವುದೇ ಹಣ ಹೊಡಿಕೆ ಮಾಡಲು ಹಿರಿಯರ ಮಾರ್ಗದರ್ಶನ ಪಡೆಯಿರಿ. ದಿನದ ಅಂತ್ಯಕ್ಕೆ ಆರೋಗ್ಯದ ವಿಷಯದಲ್ಲಿ ಹೆಚ್ಚಿನ ಜಾಗ್ರತೆ ಇರಲಿ.
ವೃಷಭ: ಪ್ರಭಾವಿ ವ್ಯಕ್ತಿಗಳಿಂದ ಮಾನಸಿಕ ಕಿರಿ ಕಿರಿ ಆಗುವ ಸಂಭವ. ಉದ್ಯೋಗ ಸಿಗದೇ ಚಿಂತೆಯಲ್ಲಿ ಕಾಲ ಕಳೆಯುವ ಬದಲು ಹೆಚ್ಚಿನ ಪ್ರಯತ್ನ ಮಾಡುವುದು ಸೂಕ್ತ. ಗಣಪತಿ ಸ್ತೋತ್ರ ಪಾರಾಯಣ ಮಾಡಿರಿ.

ಮಿಥುನ: ಹೊಸ ಕೆಲಸದ ಪ್ರಯತ್ನ ನಿಮಗೆ ಶುಭ ತರಲಿದೆ. ಹೆಚ್ಚಿನ ಜನರ ಸಂಪರ್ಕ ನಿಮಗೆ ಬೆಳೆಯಲಿದೆ. ಅನ್ಯ ಜನರು ನಿಮ್ಮನು ನಗೆಪಾಟಲಿಗೆ ಸಿಲಿಕಿಸುವ ಸಾಧ್ಯತೆ ಇರುತ್ತದೆ. ದೇವಿ ಸ್ತೋತ್ರ ಪಾರಾಯಣ ಮಾಡಿರಿ.
ಕರ್ಕಾಟಕ: ವೃತ್ತಿ ಜೀವನದಲ್ಲಿ ಹೆಚ್ಚಿನ ಸಂತಸ ಸಿಗಲಿದೆ. ಅನ್ಯರ ಜೀವನದಲ್ಲಿ ನೀವು ಸಲಹೆ ನೀಡಲು ಹೋಗಿ ನಿಮಗೆ ನೀವು ತೊಂದರೆ ಮಾಡಿಕೊಳ್ಳಬೇಡಿ. ನಿಮ್ಮ ಆರೋಗ್ಯದಲ್ಲಿ ಹೆಚ್ಚಿನ ಜಾಗ್ರತೆ ನೀಡಿ.

ಸಿಂಹ: ಹೆಚ್ಚಿನ ಆತ್ಮ ವಿಶ್ವಾಸ ನಿಮ್ಮನು ಕಾಪಾಡಲಿದೆ. ಧಾರ್ಮಿಕ ಪೂಜಾ ವಿಧಾನದಲ್ಲಿ ಹೆಚ್ಚಿನ ಸಮಯ ಕಳೆಯುವ ಸಾಧ್ಯತೆ ಇರುತ್ತದೆ. ಮನೆಯಲಿ ಸಂತಸದ ವಾತಾವರಣ ನಿಮಗೆ ದೊರೆಯಲಿದೆ.
ಕನ್ಯಾ: ಮಾತಿನಲ್ಲಿ ಹಿಡಿತ ತಪ್ಪಿ ಅನ್ಯ ಜನರಿಂದ ನಿಮಗೆ ಹೆಚ್ಚಿನ ಸಮಸ್ಯೆ ಆಗಬಹುದು. ದಿನದ ಅಂತ್ಯದಲ್ಲಿ ಹೆಚ್ಚಿನ ಹಣ ವ್ಯಯ ಆಗಲಿದೆ. ದೇವಿ ಸ್ತೋತ್ರ ಪಾರಾಯಣ ಮಾಡಿದ್ರೆ ಈ ದಿನ ನಿಮಗೆ ಶುಭತರಲಿದೆ.

ತುಲಾ: ಯಾರು ಎಷ್ಟೇ ಒತ್ತಡ ನೀಡಿದರು ನೀವು ಮಾಡುವ ಕೆಲಸದಿಂದ ಎಂದು ಸಹ ಹಿಂದೆ ಸರಿಯಬೇಡಿ. ನಿಮ್ಮ ಶತ್ರುಗಳಿಗೆ ನಿಮ್ಮ ಬೆಳವಣಿಗೆ ಇಂದ ಉತ್ತಮ ಪಾಠ ಕಲಿಸಿ. ಸಂಜೆ ಸಮಯ ಹಸುವಿಗೆ ಧಾನ್ಯ ತಿನ್ನಿಸಿ ನಿಮಗೆ ಶುಭ ಆಗಲಿದೆ.
ವೃಶ್ಚಿಕ: ಸ್ವಂತ ನಿರ್ಧಾರಗಳು ಸಮಸ್ಯೆಗೆ ಸಿಲುಕಿಸುವ ಸಾಧ್ಯತೆ ಇರುತ್ತದೆ. ಪ್ರಭಾವಿ ವ್ಯಕ್ತಿಗಳ ಮಾತಿಗೆ ಬೆಲೆ ಕೊಡದೆ ನಿಮ್ಮ ಕೆಲಸದಲ್ಲಿ ನೀವು ಹೆಚ್ಚಿನ ಒತ್ತು ನೀಡಿ. ಗೃಹಿಣಿಯರಿಗೆ ಧನ ಲಾಭ ಪ್ರಾಪ್ತಿ ಆಗಲಿದೆ.

ಧನು: ಸ್ನೇಹಿತರಿಂದ ಒಂದಿಷ್ಟು ಅಂತರ ಇರುವುದು ಸೂಕ್ತ. ಯಾರು ಮಾಡಿದ ತಪ್ಪುಗಳಿಗೆ ನಿಮ್ಮ ಮೇಲೆ ಅಪವಾದ ಬರುವ ಸಂಭವ ಇರುತ್ತದೆ. ಆರೋಗ್ಯ ಸಮಸ್ಯೆ ಇದ್ದರೆ ಅದು ಕಡಿಮೆ ಆಗುವ ಸಾಧ್ಯತೆ ಇದೆ.
ಮಕರ: ಹೊಸ ಜನರ ಪರಿಚಯ ಹೆಚ್ಚಿನ ಅನುಕೂಲ ಸಿಗುತ್ತದೆ. ಹಿಂದೆ ಮಾಡಿದ ತಪ್ಪುಗಳಿಗೆ ಯೋಚಿಸುತ್ತಾ ಕಾಲ ಹರಣ ಮಾಡುವುದು ಬಿಟ್ಟು ಸಮಯವನ್ನು ಉತ್ತಮ ಕೆಲ್ಸಕ್ಕೆ ಬಳಕೆ ಮಾಡಿಕೊಳ್ಳಿ.

ಕುಂಭ: ಸಾಧ್ಯ ಆದರೆ ಕುಲ ದೇವರ ದರ್ಶನ ಪಡೆಯಿರಿ. ಮಾನಸಿಕವಾಗಿ ಭಿನ್ನಾಭಿಪ್ರಾಯ ಉಂಟಾಗಲಿದೆ. ತಂದೆ ತಾಯಿಯ ಆಶಿರ್ವಾದ ಪಡೆಯಿರಿ ನಂತರ ಕೆಲಸ ಆರಂಭ ಮಾಡಿ ನಿಮಗೆ ಶುಭ ಆಗಲಿದೆ.
ಮೀನ: ದುಶ್ಚಟ ಹೊಂದಿರುವ ಜನರ ಸಹವಾಸ ನಿಮಗೆ ಆಪತ್ತು ಮಾಡಲಿದೆ. ಸೂಕ್ತ ಸಮಯಕ್ಕೆ ನಿಮ್ಮ ಆರೋಗ್ಯ ಪರೀಕ್ಷೆ ಮಾಡಿಸಿ. ಸಾಧ್ಯ ಆದರೆ ಕುಲ ದೇವರ ದರ್ಶನ ಪಡೆಯಿರಿ. ಉತ್ತಮ ಧನ ಲಾಭ ಪ್ರಾಪ್ತಿ.

LEAVE A REPLY

Please enter your comment!
Please enter your name here