ಈ ಕೆಲಸ ಮಾಡಿದ್ರೆ ನಿಮ್ಮ ಮನಸ್ಸು ಯಾವಾಗಲು ಕುಶಿ ಇಂದ ಇರುತ್ತದೆ

0
826

ಪ್ರತಿಯೊಬ್ಬ ಮನುಷ್ಯ ತನ್ನ ದೇಹವನ್ನು ದೇಹದ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳುತ್ತಾರೋ ಹಾಗೆ ತಮ್ಮ ಮನಸ್ಸನ್ನು ಸಹ ಕಾಪಾಡಿಕೊಳ್ಳಬೇಕು ದೈಹಿಕವಾಗಿ ತೊಂದರೆ ಆದರೆ ಅದನ್ನು ಗುಣಪಡಿಸಿಕೊಳ್ಳಬಹುದು ಆದರೆ ಮನಸ್ಸಿಗೆ ತೊಂದರೆ ಆದರೆ ಹೇಗೆ ಅದನ್ನು ಗುಣಪಡಿಸಿಕೊಳ್ಳಬಹುದು. ಮನಸ್ಸಿಗೆ ಹೇಗೆ ತೊಂದರೆ ಆಗುತ್ತದೆ ಎಂದು ಯೋಚಿಸುತ್ತಿದ್ದಿರ ಬನ್ನಿ ನೋಡೋನ. ಎಲ್ಲರಿಗೂ ಸಹ ಒಂದಲ್ಲ ಒಂದು ಬಾರಿ ಮನಸ್ಸು ಎಂಬುದು ಕೆಟ್ಟಿರುತ್ತದೆ ನೀವು ಬೆಳಿಗ್ಗೆ ಎದ್ದಾಗಿನಿಂದ ನಿಮಗೆ ಯಾವುದೇ ರೀತಿಯ ಕೆಲಸಗಳನ್ನು ಮಾಡಲು ಆಸಕ್ತಿ ಇರುವುದಿಲ್ಲ ಏನು ಮಾಡಲು ಹೋದರು ಬೇಜಾರು ಎನ್ನಿಸುತ್ತದೆ ಇದನ್ನೇ ಮನಸ್ಸು ಸರಿಯಿಲ್ಲ ಎಂದು ಹೇಳುವುದು ಮನಸ್ಸಿನ ಆರೋಗ್ಯ ಕೆಟ್ಟಿದೆ ಎನ್ನುವುದು. ಒಬ್ಬ ಮನುಷ್ಯ ದೈಹಿಕವಾದ ಆರೋಗ್ಯ ಸರಿಯಿಲ್ಲ ಅಂದರು ಸ್ವಲ್ಪ ಪ್ರಯತ್ನ ಮಾಡಿ ಕೆಲಸಗಳನ್ನು ಮಾಡಲು ಇಷ್ಟ ಪಡುತ್ತಾನೆ ಆದರೆ ಮನಸ್ಸು ಸರಿ ಇಲ್ಲ ಅಂದರೆ ಆ ದಿನವೇ ವೆಸ್ಟ್ ಅನ್ನಿಸುತ್ತದೆ. ಹಾಗಾಗಿ ಬೆಳಿಗ್ಗೆ ಎದ್ದಾಗಿನಿಂದ ಮನಸ್ಸು ಲವಲವಿಕೆಯಿಂದ ಕೂಡಿರಬೇಕು ಮನಸ್ಸಿಗೆ ನೆಮ್ಮದಿ ಎಂಬುದು ಸಿಕ್ಕರೆ ಏನೇ ಕೆಲಸಗಳನ್ನೂ ಆದರೂ ಮಾಡಬಹುದು.

ಹಾಗಾದರೆ ಮನಸ್ಸನ್ನು ಆರೋಗ್ಯವಾಗಿ ಇಟ್ಟುಕೊಳ್ಳುವುದು ಹೇಗೆ ಎಂದು ನೋಡೋಣ ಬನ್ನಿ. ಮನಸ್ಸು ಎಂಬುದು ಬೇಗ ಚಂಚಲತೆಗೆ ಒಳಗಾಗುತ್ತದೆ ಜೊತೆಗೆ ಒಂದು ನಿಮಿಷದಲ್ಲಿ ಎಷ್ಟೆಲ್ಲ ವಿಷಯಗಳನ್ನು ಯೋಚಿಸುತ್ತಲೇ ಇರುತ್ತದೆ ಈ ವಿಷಯಗಳಲ್ಲಿ ಒಳ್ಳೆಯ ಯೋಚನೆಗಳು ಇರುತ್ತವೆ ಕೆಟ್ಟ ಯೋಚನೆಗಳು ಇರುತ್ತವೆ ನಮ್ಮ ಈ ಎಲ್ಲ ಯೋಚನೆಗಳನ್ನು ಕಡಿಮೆ ಮಾಡಿಕೊಂಡು ನಮ್ಮ ಮನಸ್ಸಿನಲ್ಲಿ ಸದಾ ಒಳ್ಳೆಯ ಯೋಚನೆಗಳು ಬಂದರೆ ಮನಸ್ಸು ಯಾವಾಗಲೂ ಆರೋಗ್ಯದಿಂದ ಇರುತ್ತವೆ.

ನಮ್ಮ ಇಂದಿನ ಜೀವನವೇ ಬಿಡುವಿಲ್ಲದ ಸಮಯ. ಯೋಚನೆ. ಕೆಲಸ. ಪೈಪೋಟಿ.ವ್ಯವಹಾರ ಒತ್ತಡ. ಹೆಚ್ಚು ದುಡಿಮೆ.ಇವೆಲ್ಲ ಇಂದಿನ ಜೀವನದ ಜಂಜಾಟ ಇದರಲ್ಲಿ ಸಿಕ್ಕಿಕೊಂಡು ನಮ್ಮ ಮನಸ್ಸು ಅನಾರೋಗ್ಯಕ್ಕೆ ಒಳಗಾಗುತ್ತದೆ. ಈ ಜಂಜಾಟದ ಜೀವನದಲ್ಲಿ ಯಲ್ಲರ ಮನಸ್ಸು ವಿದ ವಿಧವಾಗಿ ಯೋಚಿಸುತ್ತಲೇ ಇರುತ್ತದೆ ಬೇರೆಯವರು ಉನ್ನತ ಮಟ್ಟದಲ್ಲಿ ಇದ್ದರೆ ಅವರನ್ನು ನೋಡಿ ಅಸುಹೆ ಪಡುವುದು. ಬೇರೆಯವರಿಗೆ ಕೆಟ್ಟದ್ದನ್ನು ಬಯಸುವುದು ಹೀಗೆ ನಮ್ಮ ಮನಸ್ಸು ಹೇಗೆಲ್ಲ ಯೋಚಿಸುತ್ತದೆ ಎಂದರೆ ಹತೋಟಿಗೆ ಇಟ್ಟುಕೊಳ್ಳಲು ಸಾಧ್ಯವಾಗದೇ ಇರುವುದೇ ಮನಸ್ಸು.

ಹಾಗಾದರೆ ಈ ಮನಸ್ಸುನ್ನು ಚಂಚಲತೆಗೆ ಒಳಗಾಗದೆ ಇರುವಂತೆ ನೋಡಿಕೊಳ್ಳುವುದು ಹೇಗೆ ನೋಡೋಣ ಬನ್ನಿ. ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಳ್ಳಬೇಕು ಅಂದರೆ ಅಧ್ಯಾತ್ಮದ ಕಡೆಗೆ ಹೆಚ್ಚು ಹೋಗಬೇಕು.ಜಪ ತಪ. ಯೋಗ ಇವುಗಳನ್ನು ಮಾಡಬೇಕು. ದೇವರ ಆರಾಧನೆಯನ್ನು ಮಾಡಬೇಕು. ಒಳ್ಳೆಯ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕು. ಒಳ್ಳೆಯ ಕೆಲಸ ಕಾರ್ಯಗಳನ್ನು ಮಾಡುತ್ತ ಇರಬೇಕು. ತಮ್ಮ ಬಗ್ಗೆ ತಾವು ಮೊದಲು ತಿಳಿದುಕೊಳ್ಳಬೇಕು. ಮನಸ್ಸು ಕ್ರಿಯಾಶೀಲತೆ ಇಂದ ಇರಲು ಬೆಳಿಗ್ಗೆ ಎದ್ದ ತಕ್ಷಣ ಯೋಗ ಜಪ ತಪ ದೇವರ ದ್ಯಾನಗಳನ್ನು ಮಾಡಬೇಕು.

ನಮ್ಮ ಮನಸ್ಸು ಸದಾ ಕ್ರಿಯಾಶೀಲವಾಗಿ ಇರಲು ನಿತ್ಯ ಸೃಜನಾತ್ಮಕ ಚಟುವಟಿಕೆಗಳ ನ್ನು ಮಾಡಬೇಕು.ಯಾವುದೇ ಕೆಲಸಕ್ಕೂ ನಿರ್ದಿಷ್ಟವಾದ ನಿರ್ಧಾರಗಳನ್ನು ಮಾಡಬೇಕು ಆಗ ನಿಮ್ಮ ಮನಸ್ಸು ಸದಾ ಆರೋಗ್ಯವಾಗಿ ಇದ್ದು ಸದಾ ಒಳ್ಳೆಯದನ್ನು ಅಲೋಚಿಸುತ್ತದೆ.

LEAVE A REPLY

Please enter your comment!
Please enter your name here