ಈ ರೀತಿ ತಲೆಗೆ ಮೆಸಜ್ ಮಾಡಿದ್ರೆ ನಿಮಗೆ ಹಲವು ಲಾಭ ಸಿಗುತ್ತೆ

0
737

ತಲೆನೋವು ಎಂಬುದು ಒಂದು ಸಾಮಾನ್ಯ ಸಮಸ್ಯೆ ಈ ತಲೆನೋವು ಎಂಬುದು ಯಾರಿಗೆ ತಾನೇ ಬಂದಿಲ್ಲ ಹೇಳಿ ಈ ಸಮಸ್ಯೆಯನ್ನು ಅನುಭವಿಸದೇ ಇರುವವರೇ ಯಾರು ಇಲ್ಲ ಆದರೆ ಈ ನೋವು ಎಂಬುದು ಯಾಕೆ ಬರುತ್ತದೆ ಎಂಬುದು ಮಾತ್ರ ಯಾರಿಗೂ ಗೊತ್ತಿಲ್ಲ ಈ ತಲೆನೋವು ಬರಲು ಹಲವಾರು ಕಾರಣಗಳು ಇವೆ ಹೆಚ್ಚಿನ ಒತ್ತಡ. ಸೈನಸ್ , ಹೆಚ್ಚು ಯೋಚನೆ ಕೆಲಸ ಬಿಸಿಲಿನ ದೆಗೆಗೆ ಸರಿಯಾದ ಊಟದ ಕ್ರಮವಿಲ್ಲದಿರುವುದು ಕೆಲವರಿಗೆ ಬೆಳಿಗ್ಗೆ ಎದ್ದ ತಕ್ಷಣ ಟೀ ಕಾಫಿ ಕುಡಿಯದೆ ಇದ್ದರು ಸಹ ತಲೆನೋವು ಬರುತ್ತದೆ. ಹೆಚ್ಚು ತಿರುಗಾಟ ಕಣ್ಣಿನ ದೃಷ್ಟಿಯ ಸಮಸ್ಯೆ ಕೆಲವು ಔಷಧಿಗಳನ್ನು ಸೇವಿಸುವುದರಿಂದ ಸಹ ತಲೆನೋವು ಎಂಬುದು ಕಾಣಿಸುತ್ತದೆ ಆದರೆ ಈ ತಲೆನೋವು ಬಂದ ತಕ್ಷಣ ಔಷದಿ ತೆಗೆದುಕೊಂಡರೆ ಕಡಿಮೆ ಆಗುವ ಸಾಧ್ಯತೆ ಇರುತ್ತದೆ ಆದರೆ ಕಾಳಜಿ ವಹಿಸದೆ ನಿರ್ಲಕ್ಷೆ ಮಾಡಿದರೆ ತಲೆನೋವು ಸಮಸ್ಯೆ ಹೋಗಿಸುವುದು ಸ್ವಲ್ಪ ಕಷ್ಟ.

ಆದರೆ ಈ ತಲೆನೋವು ಎಂಬುದನ್ನು ಹೋಗಿಸಬೇಕು ಎಂದರೆ ನಮ್ಮ ಮೆದುಳಿಗೆ ರಕ್ತ ಹರಿಯುವ ನರಗಳನ್ನು ಪ್ರಚೋದಿಸಿ ರಕ್ತಸಂಚಾರ ಹೆಚ್ಚುವಂತೆ ಮಾಡ ಬೇಕು ಇದಕ್ಕೆ ಅಮೃತಾಂಜನ, ಟೈಗರ್ ಬಾಮ್ ಹಚ್ಚುವುದು ಸಹಜ ಆದರೆ ಇದರಿಂದ ಕೆಲವರಿಗೆ ಏನು ಪ್ರಯೋಜನ ಆಗುವುದಿಲ್ಲ ಇಂತಹವರು ಔಷಧಿಗಳ ಮೊರೆ ಹೋಗುತ್ತಾರೆ ಆದರೆ ಔಷಧಿಗಳ ಕಡೆ ಹೋಗದೆ ಕೆಲವು ರೀತಿಯ ಎಣ್ಣೆಗಳಿಂದ ಮಸಾಜ್ ಮಾಡಿಕೊಂಡರೆ ತಲೆನೋವನ್ನು ಕಡಿಮೆ ಮಾಡಿಕೊಳ್ಳಬಹುದು ಹಾಗಾದರೆ ಅವುಗಳು ಯಾವ ಎಣ್ಣೆಗಳು ಎಂದು ನೋಡೋಣ ಬನ್ನಿ

ಮಲ್ಲಿಗೆಯಂತಹ ಸುವಾಸನೆ ಕೊಡುವ ಲ್ಯಾವೆಂಡರ್ ಎಣ್ಣೆಯಲ್ಲಿ ಲಿನಿಯಲ್ ಅಸ್ತೆರ್ ಎಂಬ ಪೋಷಕಾಂಶಗಳಿದ್ದು ಇವು ಅತ್ಯುತ್ತಮವಾದ ಉರಿಯೂತ ನಿವಾರಕಗಳಾಗಿವೆ. ಈ ಎಣ್ಣೆ ಯನ್ನು ಮಸಾಜ್ ಮಾಡಿಕೊಳ್ಳುವುದರಿಂದ ಇದು ನರಗಳ ಮೂಲಕ ಹಾದು ಹೋಗಿ ತಲೆನೋವನ್ನು ಕಡಿಮೆ ಮಾಡುತ್ತದೆ. ಸೈನಸ್ ತಲೆನೋವು ಉಂಟಾಗಿದ್ದರೆ ನೀಲಗಿರಿ ಎಣ್ಣೆ ಒಳ್ಳೆಯದು ಈ ಎಣ್ಣೆಯ ಕೆಲವು ತೊಟ್ಟುಗಳಿಂದ ಹಣೆ, ಹಣೆಯ ಪಕ್ಕದ ಭಾಗ ಮತ್ತು ಕಿವಿಯ ಹಿಂಭಾಗದ ಮೂಳೆ ಇರುವಲ್ಲಿ ಹಚ್ಚಿದರೆ ಅತ್ಯುತ್ತಮ ಪರಿಹಾರವನ್ನು ಪಡೆಯಬಹುದು. ಆದರೆ ಈ ಎಣ್ಣೆ ಕಣ್ಣಿಗೆ ಹೋದರೆ ಭಾರೀ ಉರಿ ತರಿಸುವ ಕಾರಣ ಕಣ್ಣಿಗೆ ಹೋಗದಂತೆ ಅತಿ ಹೆಚ್ಚಿನ ಎಚ್ಚರಿಕೆ ವಹಿಸಬೇಕು.

ಹೆಲಿಕ್ರೈಸಮ್ ಎಣ್ಣೆಯ ಸುವಾಸನೆಯನ್ನು ಸೇವಿಸಿದಾಗ ಇದರ ವಾಸನೆಗೇನರಗಳು ಸಡಿಲಗೊಂಡು ಮೆದುಳಿಗೆ ಹೆಚ್ಚಿನ ರಕ್ತಸಂಚಾರ ಒದಗಿಸಲು ನೆರವಾಗುವ ಮೂಲಕ ತಲೆನೋವು ಕಡಿಮೆಗೊಳ್ಳಲು ಸಾಧ್ಯವಾಗುತ್ತದೆ. ಇದು ಅಲರ್ಜಿಕಾರಕವೂ ಅಲ್ಲ, ವಿಷಕಾರಿಯೂ ಅಲ್ಲದ ಕಾರಣ ಎಲ್ಲರಿಗೂ ಉತ್ತಮ ಆದರೆ ಗರ್ಭಿಣಿಯರು ಬಳಸಬಾರದು. ಮಾನಸಿಕ ಒತ್ತಡದಿಂದ ತಲೆನೋವು ಬಂದರೆ ಪುದೀನಾ ಎಣ್ಣೆ ತುಂಬ ಒಳ್ಳೆಯದು ಇದನ್ನು ಮಸಾಜ್ ಮಾಡಿಕೊಳ್ಳುವುದರಿಂದ ತಲೆನೋವು ಸೆಳೆತ ಹಾಗೂ ಮೈಕೈನೋವಿಗೂ ಉತ್ತಮ ಪರಿಹಾರ ಸಿಗುತ್ತದೆ

ಹರಳೆಣ್ಣೆಯನ್ನು ಸ್ವಲ್ಪ ಬಿಸಿ ಮಾಡಿ ತಲೆಗೆ ಮಸಾಜ್ ಮಾಡಿಕೊಳ್ಳುವುದರಿಂದ ಸಹ ತಲೆನೋವು ಹೋಗುತ್ತದೆ. ಆಲಿವ್ ಎಣ್ಣೆಯನ್ನು ತಲೆಗೆ ಹಚ್ಚಿಕೊಂಡು ಮಸಾಜ್ ಮಾಡಿದರೆ ತಲೆ ನೋವು ಕಡಿಮೆ ಆಗುತ್ತದೆ. ಹಾಗಾಗಿ ತಲೆನೋವು ಸಮಸ್ಯೆ ಇರುವವರು ಮೊದಲೇ ಔಷಧಿಗಳನ್ನು ತೆಗೆದುಕೊಳ್ಳುವ ಮೊದಲು ಈ ಎಣ್ಣೆಗಳಿಂದ ಮಸಾಜ್ ಮಾಡಿಕೊಳ್ಳಿ ನೋವು ಕಡಿಮೆ ಆಗದೆ ಹೆಚ್ಚುತ್ತಿದ್ದರೆ ಮಾತ್ರ ಔಷದಿಗಳನ್ನ ತೆಗೆದುಕೊಳ್ಳಿ

LEAVE A REPLY

Please enter your comment!
Please enter your name here