ಮುಖದಲ್ಲಿ ನಗು ಇದ್ದವರಿಗೆ ಈ ಇಪ್ಪತ್ತು ಲಾಭ ಸಿಗುತ್ತದೆ

0
822

ದೇವರು ಮನುಷ್ಯ ನಿಗೆ ಎಷ್ಟೆಲ್ಲ ಉಡುಗೊರೆಗಳನ್ನು ನೀಡಿದ್ದಾನೆ ಅದರಲ್ಲಿ ನಗು ಸಹ ಒಂದು. ಈ ನಗು ಎಂಬುದು ಮನುಷ್ಯನ ಜೀವನದಲ್ಲಿ ತುಂಬಾ ಮಹತ್ವವುಳ್ಳದ್ದು ಮನುಷ್ಯನಿಗೆ ಈ ನಗು ಅನ್ನುವುದು ಒಂದು ಇದ್ದರೆ ಸಾಕು ಅವರ ಜೀವನ ಎಂಬುದು ತುಂಬಾ ಉಲ್ಲಾಸವಾಗಿ ಇರುತ್ತದೆ. ಮನುಷ್ಯನಿಗೆ ಒಂದಲ್ಲ ಒಂದು ರೀತಿಯ ತೊಂದರೆಗಳು ಕಷ್ಟಗಳು ಇದ್ದೆ ಇರುತ್ತವೆ ಯಾರಿಗೆ ತಾನೇ ಕಷ್ಟ ಎಂಬುದು ಇಲ್ಲ ಆದರೆ ಕಷ್ಟ ಬಂದಿತು ಎಂದು ಮುಖವನ್ನು ಬೇಜಾರಿನಲ್ಲಿ ಇಟ್ಟುಕೊಂಡು ಕುಳಿತರೆ ಕಷ್ಟಗಳು ಹೋಗುತ್ತವ ಇನ್ನು ಹೆಚ್ಚು ಆಗುತ್ತವೆ ವಿನಹ ಕಡಿಮೆ ಆಗುವುದಿಲ್ಲ ಆದರೆ ಏನೇ ಕಷ್ಟ ಬಂದರೂ ಪರವಾಗಿಲ್ಲ ನಗುವೆ ಜೀವನ ಎಂದು ನಗು ನಗುತ್ತಾ ಇದ್ದರೆ ಆ ಕಷ್ಟಗಳೇ ನಮ್ಮಿಂದ ದೂರ ಹೋಗುತ್ತವೆ. ನಮ್ಮ ಕಷ್ಟಗಳನ್ನು ಹೋಗಿಸಿ ಅದಕ್ಕೆ ಪರಿಹಾರ ನೀಡುವ ಶಕ್ತಿ ಈ ನಗುವಿಗೆ ಇದೆ ಅದಕ್ಕಾಗಿಯೇ ಕವಿಗಳು ಹೇಳಿರುವುದು ಏನಾದರೂ ಬರಲಿ ನಗು ನಗುತ್ತಾ ಇರುವುದೇ ಜೀವನ ಎಂದು.

ನಗು ಎಂಬುದು ಮನುಷ್ಯನ ಕಷ್ಟಗಳನ್ನು ಅವನ ದುಃಖವನ್ನು ಹೋಗಿಸುವ ಜೊತೆಗೆ ಅವನ ಆರೋಗ್ಯವನ್ನು ಸಹ ಕಾಪಾಡುತ್ತದೆ. ಇಂದಿನ ಕಾಲದಲ್ಲಿ ಸಂಜೆ ಆಯಿತು ಎಂದರೆ ಸಾಕು ಅಕ್ಕ ಪಕ್ಕದ ಜನಗಳೆಲ್ಲ ಒಂದು ಕಡೆ ಸೇರಿ ಕುಳಿತು ಮಾತನಾಡುವುದು ನಗುವುದು ಮಾಡುತ್ತಿದ್ದರು ಆದರೆ ಇಂದಿನ ಕಾಲದಲ್ಲಿ ಜನರಿಗೆ ಕೆಲಸ ಒತ್ತಡಗಳೇ ಹೆಚ್ಚು ಬೆಳಿಗ್ಗೆ ಕೆಲಸಕ್ಕೆ ಹೋಗುವುದು ರಾತ್ರಿ ಕೆಲಸದಿಂದ ಬಂದು ಮಲಗುವುದು ಮನೆಯ ಮಂದಿಗಳ ಜೊತೆ ಕುಳಿತು ಮಾತನಾಡುವುದು ನಗುವುದು ಇವೆಲ್ಲ ಮಯವಾಗಿಬಿಬಿಟ್ಟಿದೆ ಜೊತೆಗೆ ಇಂದಿನ ಜಗತ್ತಿನಲ್ಲಿ ಹಣ ಇದ್ದರೆ ಜೀವನ ನಗು ಎಂಬಂತೆ ಆಗಿದೆ ನಗುವನ್ನು ಸಹ ಹಣ ಕೊಟ್ಟು ಪಡೆಯುವ ಸಮಯ ಬಂದಿದೆ. ಎಲ್ಲರೂ ಈ ನಗುವನ್ನು ಸಹ ತಮ್ಮ ವ್ಯವಹಾರಗಳ ಜೊತೆಗೆ ಸೇರಿಸಿ ಕೊಂಡಿಬಿಟ್ಟಿದ್ದಾರೆ.

ನಗು ಎಂಬುದು ನಮಗೆ ಎಷ್ಟು ಪ್ರಯೋಜನ ಎಂಬುದು ಗೊತ್ತೇ. ನಗು ಎಂಬುದು ನಮ್ಮ ಆರೋಗ್ಯವನ್ನು ಕಾಪಾಡುತ್ತದೆ. ನಗು ಎಂಬುದು ನಮ್ಮ ಮನಸ್ಸಿನ ಗೊಂದಲಗಳನ್ನು ದೂರ ಮಾಡುತ್ತದೆ. ನಗು ಎಂಬುದು ನಮ್ಮ ಯಾವುದೇ ಕಷ್ಟಗಳಿಗೆ ಪರಿಹಾರ ನೀಡುತ್ತದೆ. ನಗು ಎಂಬುದು ನಮ್ಮ ವ್ಯವಹಾರಗಳಲ್ಲೂ ಸಹ ಸಹಾಯ ಮಾಡುತ್ತದೆ. ನಗುವುದರಿಂದ ಶರೀರದಲ್ಲಿ ಇರುವ ಎಂಡಾಫ್ರಿನ್ಸ್ ಎಂಬ ರಾಸಾಯನಿಕ ಕಣಗಳು ಅಧಿಕವಾಗಿ ಬಿಡುಗಡೆ ಹೊಂದಿ ದೇಹದಲ್ಲಿ ಇರುವ ನೋವುಗಳನ್ನು ನಿವಾರಣೆ ಮಾಡುತ್ತದೆ. ಹೆಚ್ಚು ನಗುವುದರಿಂದ ನಿದ್ರಾಹೀನತೆ ಸಮಸ್ಯೆ ಹೋಗುತ್ತದೆ.

ನಗು ಎಂಬುದು ಮನುಷ್ಯನ ರಕ್ತದೊತ್ತಡ. ಹೃದಯದ ಸಮಸ್ಯೆಗಳನ್ನು ಹೋಗಿಸುತ್ತದೆ. ನಗುವುದರಿಂದ ನಮ್ಮ ರೋಗನಿರೋಧಕ ಶಕ್ತಿ ಹೆಚ್ಚಿ ನಮ್ಮ ಶರೀರದೊಳಗಿನ ರೋಗ ಹರಡುವ ಬ್ಯಾಕ್ಟೀರಿಯಾಗಳನ್ನು ನಾಶ ಮಾಡುತ್ತದೆ. ನಗು ನಮ್ಮ ಅಂತರ್ಗತ ಅವಯವಗಳಿಗೆ ರಕ್ತ ಸಂಚಾರವನ್ನು ಹೆಚ್ಚಿಸಿ ಸಾಮರ್ಥ್ಯ ಹೆಚ್ಚಿಸುವಲ್ಲಿ ಸಹಾಯ ಮಾಡುತ್ತದೆ. ನಗು ರಕ್ತದಲ್ಲಿನ ಆಮ್ಲಜನಕ ಪ್ರಮಾಣವನ್ನು ಹೆಚ್ಚಿಸುತ್ತದೆ. ನಗು ಎಂಬುದು ನಮ್ಮ ಜ್ಞಾಪಕ ಶಕ್ತಿಯನ್ನು ಹೆಚ್ಚಿಸುತ್ತದೆ. ನಗು ಎಂಬುದು ದೇಹಕ್ಕೆ ಒಂದು ಒಳ್ಳೆಯ ಇದ್ದಂತೆ. ನಗುನಗುತ್ತಾ ಸದಾ ಖುಷಿಯಿಂದ ಕೆಲಸ ಮಾಡುವವವರು ಹೆಚ್ಚು ಉತ್ಪಾದನಾ ಹಾಗೂ ಗುಣಮಟ್ಟದ ಕೆಲಸ ಮಾಡುತ್ತಾರೆ.

ನಗು ಶಕ್ತಿ ಹೆಚ್ಚಿಸಿ, ಒತ್ತಡವನ್ನು ಕಮ್ಮಿ ಮಾಡುತ್ತದೆ. ಕೆಲಸದ ಒತ್ತಡದಿಂದ ಆಗುವ ಆರೋಗ್ಯ ಸಮಸ್ಯೆಯಿಂದ ಕೂಡ ದೂರ ಮಾಡುತ್ತದೆ. ಯಾರೋ ಜೋಕ್ಸು ಮಾಡಿದರು ಯಾರೋ ನಗಿಸಿದರು ಎಂದು ನಗುವುದು ನಮ್ಮ ಮನಸ್ಸಿನ ಮೇಲೆ ಪರಿಣಾಮ ಬೀರುವುದಿಲ್ಲ ಯಾವುದೇ ಕೆಲಸ ಕಾರ್ಯವನ್ನು ನಿಮ್ಮ ಅಂತರಾಳದಿಂದ ನೋಡಿ ಆ ಕೆಲಸ ಕಾರ್ಯಗಳು ನಿಮ್ಮ ಮನಸ್ಸಿಗೆ ನೆಮ್ಮದಿ ತಂದು ಕೊಟ್ಟಾಗ ನಿಮ್ಮಲ್ಲಿ ನಗು ಬರುತ್ತದೆ ನಗು ಎಂಬುದು ನಿಮ್ಮೊಳಗೆ ಇರುವ ಒಂದು ಅಗಾಧವಾದ ಶಕ್ತಿ ಇದು ನಿಮ್ಮ ಬಳಿ ಯಾವಾಗಲೂ ಇರುವ ಹಾಗೆ ನೋಡಿಕೊಳ್ಳಿ ಸಂತೋಷದಿಂದ ನಗು ನಗುತ ಜೀವನ ನೆಡೆಸಿ.

LEAVE A REPLY

Please enter your comment!
Please enter your name here