ಶಿವನಿಗೆ ನಮಿಸುತ್ತಾ ಈ ವಾರ ನಿಮ್ಮ ರಾಶಿ ಭವಿಷ್ಯ ಹೇಗಿದೆ ತಿಳಿದುಕೊಳ್ಳಿ

1
1154

ರಾಶಿ ಭವಿಷ್ಯ ನವಂಬರ್ 11 ರಿಂದ ದಿನಾಂಕ 18 ನವೆಂಬರ್ 

ಮೇಷ: ಈ ವಾರ ನಿಮ್ಮ ರಾಶಿಗೆ ನಿಮ್ಮ ಹಲವು ದಿನಗಳಿಂದ ಮಾಡುತ್ತಿರುವ ಅನೇಕ ರೀತಿಯ ಪ್ರಯತ್ನಗಳು ಯಶಸ್ವಿಯಾಗುತ್ತವೆ. ನಿಮ್ಮ ಆತ್ಮ ಸ್ಥೈರ್ಯ ಹೆಚ್ಚಾಗಲಿದೆ. ವಾರದ ಮೊದಲ ಎರಡು ದಿನ ವ್ಯವಹಾರದಲ್ಲಿ ಉತ್ತಮ ಲಾಭ ದೊರೆಯಲಿದೆ. ನಿಮ್ಮ ಜೀವನದ ಮಟ್ಟ ಸುಧಾರಣೆ ಸಿಗಲಿದೆ. ವಾರದ ಕೊನೆ ಮೂರು ದಿನದಲ್ಲಿ ಆರೋಗ್ಯದ ವಿಷಯದಲ್ಲಿ ಸ್ವಲ್ಪ ಹೆಚ್ಚಿನ ಜಾಗ್ರತೆ ವಹಿಸಿಕೊಳ್ಳಿ. ಸಣ್ಣ ಸಣ್ಣ ವಿಷಯಗಳಿಗೆ ಮನಸ್ತಾಪ ಮಾಡಿಕೊಂಡು ನಿಮ್ಮ ಅಮೂಲ್ಯ ಸಮಯ ಎಂದು ಸಹ ಹಾಳು ಮಾಡಿಕೊಳ್ಳಬೇಡಿ. ನೀವು ಪ್ರೀತಿಯಿಂದ ಎಲ್ಲರನ್ನು ಮಾತನಾಡಿಸಿ. ಸೋಮವಾರ ಸಂಜೆ ಗೋವಿಗೆ ಒಂದು ಹಿಡಿ ಅಕ್ಕಿ ಮತ್ತು ಒಂದಿಷ್ಟು ಬೆಲ್ಲವನ್ನು ತಿನ್ನಿಸಿದರೆ ನಿಮಗೆ ವಿಶೇಷ ಲಾಭ ಸಿಗಲಿದೆ.

ವೃಷಭ: ವಾರದ ಆರಂಭದಲ್ಲಿ ನೀವು ನಿಮ್ಮ ತೀರ್ಮಾನ ಮತ್ತು ಉದ್ಯಮವನ್ನು ಹೇಗೆ ಶುರು ಮಾಡುತ್ತಿರಿ ಎನ್ನುವುದರ ಮೇಲೆ ನಿಮ್ಮ ಈ ವಾರದ ಆರ್ಥಿಕ ಸಮಸ್ಯೆಗಳು ಮತ್ತು ಲಾಭ ಲೆಕ್ಕಾಚಾರ ಆಗಲಿದೆ. ಮನೆಗೆ ಸಂಭಂದಪಟ್ಟ ವಿಷಯಗಳಿಗೆ ನೀವು ಈ ವಾರ ಹೆಚ್ಚಿನ ಒತ್ತು ನೀಡುತ್ತಿರಿ. ಯಾವುದೇ ಪತ್ರಗಳಿಗೆ ಸಹಿ ಮಾಡೋ ಮುಂಚೆ ನೀವು ಅದನ್ನ ಹೆಚ್ಚಿನ ರೀತಿಯಲ್ಲಿ ಪರಿಶೀಲನೆ ಮಾಡಿಕೊಳ್ಳುವುದು ಉತ್ತಮ. ವಾರದ ಮಧ್ಯದ ದಿನದಲ್ಲಿ ಕಣ್ಣು ಅಥವ ಕಿವಿ ಹೀಗೆ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆ ಬರುವ ಸಾಧ್ಯತೆ ಇರುತ್ತದೆ. ವಾರದ ಕೊನೆ ದಿನದಲ್ಲಿ ಗ್ರಹಗತಿಗಳು ನಿಮ್ಮ ಕಡೆ ಇರುವುದರಿಂದ ನಿಮಗೆ ಹೆಚ್ಚಿನ ನೆಮ್ಮದಿ ಸಿಗಲಿದೆ. ನಿಮ್ಮ ಎಲ್ಲ ಸಮಸ್ಯೆಗಳು ದೂರ ಆಗಲು ಬಡವರಿಗೆ ಅಕ್ಕಿ ದಾನ ಮಾಡಿ.

ಮಿಥುನ: ನಿಮ್ಮ ಹಲವು ದಿನದ ಎಲ್ಲ ರೀತಿಯ ಶ್ರಮಕ್ಕೆ ನಿಮಗೆ ಸುಖ ನೆಮ್ಮದಿ ದೊರೆಯಲಿದೆ. ಕಳೆದ ವಾರಕ್ಕೆ ಹೋಲಿಸಿದರೆ ನೀವು ಈ ವಾರ ಹೆಚ್ಚಿನ ಖುಷಿಯಿಂದಲೇ ಕೆಲಸ ಮಾಡುತ್ತಿರಿ ಹೆಚ್ಚಿನ ಕುಶಿಯಿಂದಲೇ ಎಲ್ಲ ಕೆಲಸ ಕಾರ್ಯಗಳಲ್ಲಿ ಭಾಗವಹಿಸುತೀರಿ. ಈ ವಾರ ನೀವು ತೆಗೆದುಕೊಳ್ಳುವ ಹಲವು ಕ್ಷೇತ್ರಗಳ ನಿರ್ಧಾರ ಹೆಚ್ಚಿನ ಲಾಭ ನಿಮಗೆ ಕೊಡುತ್ತದೆ. ವಾರದ ಎರಡನೆ ಅಥವ ಮೂರನೇ ದಿನದಲ್ಲಿ ಆರೋಗ್ಯದ ಕಡೆಗೆ ಹೆಚ್ಚಿನ ಜಾಗ್ರತೆ ತೆಗೆದುಕೊಳ್ಳಿ. ಮನೆಯಲ್ಲಿರುವ ಗೃಹಿಣಿಯರು ಸಂಜೆ ಸಮಯದಲ್ಲಿ ಹನುಮಾನ್ ಚಾಲೀಸ ಓದುವ ಅಭ್ಯಾಸ ಇಟ್ಟುಕೊಂಡರೆ ಮನೆ ಜನಕ್ಕೂ ಮಕ್ಕಳಿಗೂ ಮತ್ತು ನಿಮಗೂ ಹೆಚ್ಚಿನ ಫಲ ಮತ್ತು ಸುಖ ಶಾಂತಿ ನಿಮಗೆ ದೊರೆಯಲಿದೆ.

ಕರ್ಕಾಟಕ: ಹೆಚ್ಚಿನ ವೇಗದಲ್ಲಿ ಕೆಲಸ ಮಾಡಲು ಹೋಗಿ ಈ ವಾರ ತೊಂದರೆಗಳಿಗೆ ಸಿಲುಕ ಬೇಡಿ. ಕಳೆದ ವಾರಕ್ಕಿಂತ ಈ ವಾರ ಜೀವನ ಮಟ್ಟದಲ್ಲಿ ಹೆಚ್ಚಿನ ಸುಧಾರಣೆ ಸಿಗಲಿದೆ. ಮನೆಗೆ ಬೇಕಾದ ಹೆಚ್ಚಿನ ಗೃಹ ಉಪಯೋಗಿ ವಸ್ತುಗಳ ಖರೀದಿ ಹೆಚ್ಚಾಗಲಿದೆ. ವಾರದ ಮೊದಲ ಎರಡು ದಿನ ದಾಂಪತ್ಯ ಜೀವನದಲ್ಲಿ ಹೆಚ್ಚಿನ ಖುಷಿ ಮತ್ತು ಸಂತಸ ಸಿಗಲಿದೆ. ಉನ್ನತ ಶಿಕ್ಷಣ ಮಾಡುತ್ತಿರುವ ಮಕ್ಕಳು ಹೆಚ್ಚಿನ ಚಿಂತೆ ಮಾಡುವರು. ನಿಮ್ಮ ಕುಟುಂಬದಲ್ಲಿ ಕೆಲವು ಜನರನ್ನು ಹೊರತು ಪಡಿಸಿ ಉಳಿದ ಕೆಲವು ಜನರೊಂದಿಗೆ ಭಿನ್ನಬಿಪ್ರಾಯ ಬರಬಹುದು. ಯಾವುದೇ ವಿಷಯವನ್ನು ಪ್ರಸ್ತಾಪ ಮಾಡುವ ಮುಂಚೆ ನಿಮ್ಮ ಮುಂದಿನ ಭವಿಷ್ಯದ ಪರಿಣಾಮವನ್ನು ಯೋಚಿಸಿ ಮಾತನಾಡುವುದು ಸೂಕ್ತ. ದೇವಿ ಚಾಮುಂಡಿ ತಾಯಿಯ ದರ್ಶನ ಒಮ್ಮೆ ತಪ್ಪದೇ ಮಾಡಿಕೊಂಡು ಬನ್ನಿ.

ಸಿಂಹ: ನೀವು ಅಂದು ಕೊಂಡ ಸಮಯಕ್ಕೆ ಸರಿಯಾಗಿ ನಿಮ್ಮ ಎಲ್ಲ ಕೆಲಸ ಕಾರ್ಯಗಳು ಸಂಪೂರ್ಣಆಗಲಿದೆ. ಉತ್ತಮ ಆರೋಗ್ಯ ನಿಮಗೆ ದೊರೆಯಲಿದ್ದು. ಆದ್ರೆ ಕಳೆದ ವಾರಕ್ಕೆ ತಾಳೆ ಹಾಕಿದರೆ ಹಣದ ವ್ಯಯ ಹೆಚ್ಚಾಗಬಹುದು. ವಾರದ ಕೊನೆ ದಿನಗಳಲ್ಲಿ ಸಹೋದರಿ ಸಹೋದರ ಜೊತೆಗೆ ನಿಮ್ಮ ಬಾಂದವ್ಯ ಗಟ್ಟಿಯಾಗುತ್ತದೆ. ನೀವು ಅನ್ಯಾಯದ ವಿರುದ್ದ ಹೆಚ್ಚಿನ ದ್ವನಿ ಎತ್ತಲು ಪ್ರಯತ್ನ ಪಡುತ್ತೀರಿ ಆದರೆ ನಿಮ್ಮ ವಿರೋಧಿಗಳು ನಿಮ್ಮನು ಇಕ್ಕಟ್ಟಿಗೆ ಸಿಲುಕಿಸುವ ಸಾಧ್ಯತೆ ಹೆಚ್ಚು ಇರುತ್ತದೆ. ಸ್ನೇಹಿತರ ಜೊತೆಗೆ ಪ್ರವಾಸ ಹೋಗುವ ಸಂಭವ ಇರುತ್ತದೆ. ಉದ್ಯೋಗ ಹುಡುಕುತ್ತಿರುವ ಜನಕ್ಕೆ ಸ್ವಲ್ಪ ನಿರಾಳ ದೊರೆಯಲಿದೆ. ಮಂಗಳವಾರ ಬೆಳ್ಳಗೆ ಎಂಟು ಗಂಟೆ ಒಳಗೆ ನರಸಿಂಹ ಸ್ವಾಮಿಯ ದರ್ಶನ ಪಡೆಯಿರಿ ನಿಮಗೆ ಶುಭಆಗಲಿದೆ.

ಕನ್ಯಾ: ಈ ವಾರ ಹೆಚ್ಚು ಧಾರ್ಮಿಕ ಕೆಲಸದಲ್ಲಿ ಕೆಲಸ ಮಾಡುತ್ತೀರಿ. ಸಾಮಾಜಿಕ ಚಟುವಟಿಕೆಯಲ್ಲಿ ಹೆಚ್ಚಿನ ಒತ್ತು ನೀಡುವಿರಿ. ಉನ್ನತ ವ್ಯಾಸಂಗಕ್ಕೆ ವಿದೇಶಕ್ಕೆ ತೆರಳುವವರಿಗೆ ಶುಭವಾಗಲಿದೆ. ವಾರದ ಕಡೆ ದಿನದಲ್ಲಿ ಕೆಮ್ಮು ಜ್ವರ ಶೀತ ಬರುವ ಸಾಧ್ಯತೆ ಇರುತ್ತದೆ. ನಿಮ್ಮ ಗ್ರಹಗತಿಗಳು ನಿಮ್ಮ ಅನುಕೂಲಕ್ಕೆ ತಕ್ಕ ಹಾಗೇ ಇರುವುದರಿಂದ ನೆಮ್ಮದಿ ಮತ್ತು ಸುಖ ಶಾಂತಿ ಸಿಗಲಿದೆ. ನಿಮ್ಮ ವೃತ್ತಿಗೆ ಸಂಭಂಧಪಟ್ಟ ವಿಷಯಗಳ ಬಗ್ಗೆ ಯಾವುದೇ ನಿರ್ಣಯ ತೆಗೆದುಕೊಳ್ಳುವ ಮುಂಚೆ ನಿಮ್ಮ ಹಿರಿಯರ ಸಲಹೆಗಳು ಪಡೆಯುವುದು ತುಂಬಾ ಸೂಕ್ತ. ನಿಮಗೆ ಈ ವಾರ ಹೆಚ್ಚಿನ ರಾಶಿ ಫಲ ಸಿಗಲು ಗುರುವಾರ ಸಂಜೆ ಸಮಯ ಐದು ಗಂಟೆ ನಂತರ ಏಳು ಗಂಟೆ ಒಳಗಡೆ ಗೋ ಮಾತೆಗೆ ಧಾನ್ಯ ತಿನ್ನಿಸಿ.

ತುಲಾ: ಈ ವಾರ ನಿಮಗೆ ಆಸ್ತಿಗೆ ಸಂಭಂದಪಟ್ಟ ಅಥವ ನಿಮ್ಮ ವ್ಯವಹಾರದಿಂದ ಹೆಚ್ಚಿನ ಲಾಭ ಸಿಗಲಿದೆ. ನಿಮ್ಮ ವೃತ್ತಿ ಜೀವನದಲ್ಲಿ ಆಗುತ್ತಿರುವ ಕೆಲವು ಸಮಸ್ಯೆಗಳಿಗೆ ಒಳ್ಳೆಯ ಪರಿಹಾರ ಸಿಗಲಿದೆ. ವಾರದ ನಾಲ್ಕನೆ ದಿನದ ನಂತರ ದೇಹದ ಆರೋಗ್ಯ ವ್ಯತ್ಯಾಸ ಆಗಲಿದೆ. ನಿಮ್ಮ ಆರೋಗ್ಯ ಕ್ಷೀಣಿಸುವ ಸಮಯದಲ್ಲಿ ನಿಮ್ಮ ಮೇಲೆ ಒಂದಿಷ್ಟು ಹೆಚ್ಚಿನ ಜವಾಬ್ದಾರಿ ಬರಲಿದೆ. ವಾರದ ಕೊನೆ ದಿನದಲ್ಲಿ ನಿಮ್ಮ ಗೆಳೆಯ ಅಥವ ಗೆಳತಿಯೊಡನೆ ಹೆಚ್ಚಿನ ಸಮಯ ಕಳೆಯುವ ಅವಕಾಶ ನಿಮಗೆ ದೊರೆಯಲಿದೆ. ಯಾರ ಮೇಲೆಯೂ ಯಾವುದೇ ರೀತಿ ಅವಲಂಬನೆ ಮಾಡದೆ ನಿಮ್ಮ ಸ್ವಂತ ಪರಿಶ್ರಮದಿಂದ ಹೆಚ್ಚಿನ ಕೆಲಸ ಮಾಡಿದರೆ ನಿಮಗೆ ಹೆಚ್ಚಿನ ಲಾಭ ಸಿಗಲಿದೆ. ಸೋಮವಾರ ಶಿವನಿಗೆ ಬಿಲ್ವ ಸಮರ್ಪಣೆ ಮಾಡಿ ನಿಮಗೆ ಈ ವಾರ ಹೆಚ್ಚಿನ ಶುಭ ತರಲಿದೆ.

ವೃಶ್ಚಿಕ: ಈ ವಾರ ನಿಮಗೆ ವ್ಯವಹಾರದಲ್ಲಿ ಮತ್ತು ಉದ್ಯಮದಲ್ಲಿ ಹೆಚ್ಚಿನ ಪ್ರಗತಿ ಸಿಗಲಿದೆ. ನಿಮ್ಮ ಉತ್ತಮ ವ್ಯಕ್ತಿತ್ವದಿಂದ ನಿಮ್ಮ ಸ್ಥಳೀಯ ಜನರು ನಿಮ್ಮನು ಹೊಗಳುವ ಸಾಧ್ಯತೆ ಹೆಚ್ಚಿದೆ. ವಾರದ ದ್ವಿತೀಯಾರ್ಥದಲ್ಲಿ ಹೊಡಿಕೆ ಮಾಡಲು ನಿಮಗೆ ಉತ್ತಮ ಸಮಯ. ಕುಟುಂಬದ ಜನರೊಂದಿಗೆ ಪುಣ್ಯ ಕ್ಷೇತ್ರಗಳ ದರ್ಶನ ಮಾಡುವು ಅವಕಾಶ ಸಿಗಲಿದೆ. ಈ ವಾರ ಉತ್ತಮ ಆದಾಯ ಬಂದರು ನಿಮ್ಮ ಹೆಚ್ಚಿನ ಖರ್ಚುಗಳಿಂದ ವ್ಯಯವೇ ಹೆಚ್ಚಾಗಲಿದೆ. ಗೃಹಿಣಿಯರಿಗೆ ಶುಭ ಸುದ್ದಿ ಸಿಗಲಿದೆ. ಉದ್ಯೋಗ ಹುಡುಕುವವರಿಗೆ ಅಷ್ಟೇನೂ ಈ ವಾರ ಉತ್ತಮವಾಗಿಲ್ಲ. ಮಂಗಳವಾರ ಸಂಜೆ ಸಮಯದಲ್ಲಿ ಹನುಮಂತ ದೇವರ ದರ್ಶನ ಪಡೆದು ಹನುಮಾನ್ ಚಾಲೀಸ ಪಾರಾಯಣ ಮಾಡಿದ್ರೆ ನಿಮಗೆ ಹೆಚ್ಚಿನ ಲಾಭ ಸಿಗಲಿದೆ.

ಧನಸ್ಸು: ಈ ವಾರ ನೀವು ತೆಗೆದುಕೊಳ್ಳುವ ಹಲವು ನಿರ್ಧಾರಗಳು ನಿಮ್ಮ ಜೀವನದಲ್ಲಿ ಹೆಚ್ಚಿನ ಬದಲಾವಣೆ ತರಲಿದೆ. ಉದ್ಯೋಗ ಹುಡುಕುತ್ತಿರುವ ಜನಕ್ಕೆ ಈ ವಾರದ ಅಂತ್ಯದ ಒಳಗೆ ಒಳ್ಳೆಯ ಉದ್ಯೋಗ ಪಪ್ರಾಪ್ತಿಯಾಗಲಿದೆ. ಸ್ವಂತ ನಿರ್ಧಾರ ತೆಗೆದುಕೊಂಡರು ಒಮ್ಮೆ ಅದನ್ನು ಮನೆ ಜನರೊಂದಿಗೆ ಚರ್ಚಿಸಿ. ವಾರದ ಮೂರನೇ ದಿನದಲ್ಲಿ ನೀವು ಮಾಡುವ ಕೆಲಸಗಳಿಗೆ ಹೆಚ್ಚುವರಿ ಆದಾಯ ದೊರೆಯಲಿದೆ. ಖರ್ಖನೆಯಲ್ಲಿ ಕೆಲಸ ಮಾಡುವ ನೌಕರಿ ಮಾಡುವ ಜನಕ್ಕೆ ಹಿರಿಯರಿಂದ ಒಂದಿಷ್ಟು ಕಿರಿ ಕಿರಿ ತಪ್ಪುವುದಿಲ್ಲ. ಆರೋಗ್ಯ ಸ್ಥಿರವಾಗಿ ಇರಲಿದೆ. ನಿಮ್ಮ ಸಂಭಂದಿಕರ ಮದ್ವೆಗೆ ಆಹ್ವಾನ ದೊರೆಯುವ ಸಾಧ್ಯತೆ ಇರುತ್ತದೆ. ಹೆಚ್ಚಿನ ಫಲ ಸಿಗಲು ನೀವು ಮಂಗಳವಾರ ಹನುಮಾನ್ ಚಾಲೀಸ ಪಾರಾಯಣ ತಪ್ಪದೇ ಮಾಡಿ.

ಮಕರ: ಈ ವಾರ ನಿಮ್ಮ ಪ್ರೀತಿಪಾತ್ರರಿಂದ ನಿಮಗೆ ಒಳ್ಳೆ ಉಡುಗೊರೆ ದೊರೆಯುವ ಸಾಧ್ಯತೆ ಇರುತ್ತದೆ. ನಿಮ್ಮ ಕೆಲಸದಲ್ಲಿ ನಿಮ್ಮ ಕಿರಿಯ ವ್ಯಕ್ತಿಗಳು ನಿಮ್ಮಿಂದ ಹೆಚ್ಚಿನ ಸಲಹೆ ಪಡೆದುಕೊಳ್ಳಲಿದ್ದಾರೆ. ವಾರದ ಮೊದಲ ನಾಲ್ಕು ದಿನ ನೀವು ವಾಹನ ಓಡಿಸುವಾಗ ಅತೀ ಹೆಚ್ಚಿನ ಜಾಗ್ರತೆ ವಹಿಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಅತೀ ವೇಗಕ್ಕೆ ನೀವು ಹೋಗಬಾರದು. ನಿಮ್ಮ ಶಿಸ್ತು ಬದ್ದ ಜೀವನದಿಂದ ನಿಮಗೆ ಹೆಚ್ಚು ಅನುಕೂಲ ಸಿಗಲಿದೆ. ಮಕ್ಕಳ ಪ್ರಗತಿ ನಿಮ್ಮ ಮನಸಿಗೆ ನೆಮ್ಮದಿ ತರಲಿದೆ. ಸರ್ಕಾರ ಸ್ವಾಮ್ಯದಲ್ಲಿ ಕೆಲಸ ಮಾಡುವ ನೌಕಕರಿಗೆ ವರ್ಗಾವಣೆ ಬರುವ ಸಾಧ್ಯತೆ ಇರುತ್ತದೆ. ನಿಮ್ಮ ಈ ವಾರ ಮತ್ತಷ್ಟು ಲಾಭ ಪಡೆಯಲು ಬುಧವಾರ ಸಂಜೆ ಸಮಯದಲ್ಲಿ ಗಣಪತಿ ದೇಗುಲಕ್ಕೆ ಒಂದು ಹಿಡಿ ಅಕ್ಕಿ ದಾನ ಮಾಡಿ.

ಕುಂಭ: ಹಣ ಹೊಡಿಕೆ ಮಾಡಲು ಮತ್ತು ವಿದೇಶಿ ವ್ಯವಹಾರ ಮಾಡುವವರಿಗೆ ಈ ವಾರ ತುಂಬಾ ಉತ್ತಮ ಸಮಯ. ನಿಮ್ಮ ಈ ವಾರ ಆದಾಯ ಹೆಚ್ಚಾಗುತ್ತಾ ಹೋದಂತೆ ನಿಮ್ಮ ಆತ್ಮ ವಿಶ್ವಾಸ ಕೂಡ ಕಳೆದ ವಾರಕ್ಕಿಂತ ಹೆಚ್ಚಾಗಲಿದೆ. ನಿಮ್ಮ ಸಂಭಂದಿಕರು ಅಥವ ನಿಮ್ಮ ಸ್ನೇಹಿತರು ನಿಮ್ಮನು ಹಣಕಾಸಿನ ನೆರವು ಕೇಳುವ ಸಂಭವ ಇರುತ್ತದೆ. ವಾರಾಂತ್ಯದಲ್ಲಿ ಕೆಲಸ ಹುಡುಕುವವರಿಗೆ ಉತ್ತಮ ಕೆಲಸ ದೊರೆಯಲಿದೆ. ನಿಮ್ಮ ಒಳ್ಳೆ ವ್ಯಕ್ತಿತ್ವದಿಂದ ನೀವು ಒಂದಿಷ್ಟು ಸಾಮಾಜಿಕ ಕಾರ್ಯಗಳಲ್ಲಿ ತೊಡಗುವ ಸಂಭವ ಇರುತ್ತದೆ. ಕಾಲೇಜು ಹೋಗುತ್ತಿರುವ ವಿದ್ಯಾರ್ಥಿಗಳ ಮನಸ್ಸು ಚಂಚಲವಾಗಿ ದುಶ್ಚಟಕ್ಕೆ ದಾಸರಾಗುವ ಸಾಧ್ಯತೆ ಇರುವುದರಿಂದ ನೀವು ಅನ್ಯ ಸ್ನೇಹಿತರಿಂದ ಅಂತರ ಕಾಯ್ದುಕೊಳ್ಳಿ.

ಮೀನ: ಈ ವಾರದ ಅಂತ್ಯದಲ್ಲಿ ಕುಟುಂಬದ ಜನರೊಂದಿಗೆ ಅಥವ ಸ್ನೇಹಿತರೊಂದಿಗೂ ಪ್ರಯಾಣ ಮಾಡುವ ಸಾಧ್ಯತೆ ಇರುತ್ತದೆ. ನಿಮ್ಮ ಉದ್ಯೋಗದ ವಿಷಯದಲ್ಲಿ ನೀವು ಉತ್ತಮ ನಿರ್ಧಾರ ತೆಗೆದುಕೊಳ್ಳುತೀರಿ. ಈ ವಾರ ಆರೋಗ್ಯದಲ್ಲಿ ಹೆಚ್ಚಿನ ಅಭಿವೃದಿಕಾಣಲಿದೆ. ವಾರಾಂತ್ಯದ ಅಂತ್ಯದಲ್ಲಿ ಹೆಚ್ಚಿನ ಧನ ಲಾಭ ಸಿಗಲಿದೆ. ನಿಮ್ಮ ಮಡದಿಯೊಂದಿಗೆ ಉತ್ತಮ ಬಾಂದವ್ಯ ಸಿಗಲಿದ್ದು ಹೆಚ್ಚಿನ ಸಂತಸ ಕುಶಿ ನಿಮ್ಮ ಜೊತೆಗೆ ಇರಲಿದೆ. ಟ್ರಾನ್ಸ್ಪೋರ್ಟ್ ಮತ್ತು ಕಬ್ಬಿಣದ ವ್ಯವಹಾರ ಮಾಡುವವರಿಗೆ ವಾರದ ಅಂತ್ಯದಲ್ಲಿ ಹೆಚ್ಚಿನ ನಷ್ಟ ಆಗಲಿದೆ. ನಿಮ್ಮ ಕುಲ ದೇವರ ದರ್ಶನ ಪಡೆಯಿರಿ. ನಿಮ್ಮ ಗ್ರಹಗತಿಗಳಿಗೆ ಮತ್ತಷ್ಟು ಫಲ ಸಿಗಲು ಶಿವನಿಗೆ ಬಿಲ್ವ ಪತ್ರೆ ಸಮರ್ಪಣೆ ಮಾಡಿ ನಿಮಗೆ ಶುಭಆಗಲಿದೆ.

1 COMMENT

LEAVE A REPLY

Please enter your comment!
Please enter your name here