ಸಕಲ ರೋಗಗಳಿಗೂ ಈ ಹಣ್ಣು ಬೇಕು

0
2035

ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ಅನ್ನೋ ಮಹಾಮಾರಿ ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿದೆ. ಈ ರೋಗ ಎಷ್ಟು ಮಾರಕವಾಗಿದೆಯೋ, ಇದರ ಔಷಧಿಯ ಬೆಲೆಯೂ ಅಷ್ಟೇ ಎತ್ತರದಲ್ಲಿದೆ. ಜೊತೆಗೆ ಈ ಕಾಯಿಲೆ ಕೊನೆಯ ಹಂತಕ್ಕೆ ಬಂದರೆ ಜೀವವನ್ನು ಬದುಕಿಸುವುದಕ್ಕೆ ಆಗುವುದಿಲ್ಲ. ಆದರೇ ಚಾಮರಾಜ ನಗರ ಜಿಲ್ಲೆಯ ರೈತನೊಬ್ಬ ತಮ್ಮ ಮನೆಯಲ್ಲಿ ಬೆಳೆದ ಒಂದು ಸಸ್ಯದಿಂದ ಕ್ಯಾನ್ಸರ್ ಕಾಯಿಲೆ ಎಂಬ ಮಾರಕರೋಗಕ್ಕೆ ಸಂಜೀವಿನಿಯಾಗಿದೆ ಅದು ಯಾವ ಸಸ್ಯ ಗೊತ್ತೇ ಅದೇ ಹನುಮಫಲ. ಕ್ಯಾನ್ಸರ್ ರೋಗ ಬಂದರೆ ಸಿರಿವಂತರು ಗುಣಮುಖರಾಗುತ್ತಾರೆ, ಬಡವರಿಗೆ ಸಾವೇ ಗತಿ ಎಂಬ ಸ್ಥಿತಿಯಿರುವಾಗ , ಚಾಮರಾಜನಗರದಿಂದ ಹದಿನೈದು ಕಿ.ಮೀ. ದೂರದಲ್ಲಿರುವ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಮಹೇಶ್ ಕುಮಾರ್ ಅವರ ಹಿತ್ತಲಿನಲ್ಲಿ ಬೆಳೆದಿರುವ ಈ ಹಿತ್ತಲ ಮದ್ದಾದ ಹನುಮಫಲ ಅಕ್ಷರಶಃ ಸಂಜೀವಿನಿಯಾಗಿದ್ದು, ಬಡವರಿಗೆ ಒಂದು ದೊಡ್ಡ ವರ ಸಿಕ್ಕ ಹಾಗೆ ಆಗಿದೆ.

ಹನುಮಫಲ ಇದು ಇತ್ತಿಚೇಗೆ ಮಾರುಕಟ್ಟೆಯಲ್ಲಿ ಹೆಚ್ಚು ಸಿಗುತ್ತಿರುವ ಹಣ್ಣುಗಳಲ್ಲಿ ಒಂದಾಗಿದೆ.ಇದೊಂದು ಹೈಬ್ರಿಡ್ ಹಣ್ಣು. ಹನುಮಫಲ ಹಣ್ಣು ಸೀತಾಫಲವನ್ನು ಹೋಲುತ್ತದೆಯಾದರೂ ಇದು ಗಾತ್ರದಲ್ಲಿ ಮೂರು ನಾಲ್ಕು ಪಟ್ಟು ದೊಡ್ಡದು. ಹನುಮಫಲದ ಹಣ್ಣುಗಳು ಸುಮಾರು ಮೂರು ಕೆಜಿ ತೂಕವನ್ನು ಹೊಂದಿದೆ. ಹನುಮಫಲ ಹಣ್ಣು ಗಾತ್ರದಲ್ಲಿ ತುಂಬಾ ದೊಡ್ಡದಾಗಿರುವುದರಿಂದ ಇದು ಭಾರತದಲ್ಲಿ ಹನುಮಫಲ ಅಂತಲೇ ಪ್ರಸಿದ್ಧಿ ಪಡೆದಿದೆ.ಇದನ್ನು ಇಂಗ್ಲೀಷ್ ನಲ್ಲಿ ಅಟೆಮೊಯ್ ಎಂದು ಹೇಳಲಾಗುತ್ತದೆ.

ಹನುಮಫಲ ಕೇವಲ ತಿನ್ನಲಷ್ಟೇ ಅಲ್ಲ, ಇದರ ಹಣ್ಣು, ಎಲೆ ಎಲ್ಲವೂ ಔಷಧಿಗಳ ಆಗರ ತುಂಬಿದೆ ಅದರಲ್ಲೂ ಇತ್ತೀಚಿನ ದೊಡ್ಡ ಸಮಸ್ಯೆಯಾದ ಕ್ಯಾನ್ಸರ್ ಸಮಸ್ಯೆಗೆ ಉತ್ತಮ ಮದ್ದು ಈ ಹಣ್ಣು. ಹನುಮಫಲ ಆಯುರ್ವೇದ ಗುಣಗಳನ್ನು ಹೊಂದಿದ್ದು ಇದರ ಎಲೆ. ಹಣ್ಣು ಕ್ಯಾನ್ಸರ್ ಅನ್ನು ಗುಣಪಡಿಸುತ್ತದೆ. ಹಾಗಾದರೆ ಈ ಹನುಮಫಲ ಸಸ್ಯದಿಂದ ಹೇಗೆ ಕ್ಯಾನ್ಸರ್ಗೆ ಔಷಧಿಯನ್ನು ತಯಾರಿಸುತ್ತಾರೆ ನೋಡೋಣ ಬನ್ನಿ. ಈ ಹನುಮಫಲ ಸಸ್ಯದಿಂದ ಎಲೆಗಳನ್ನು ತೆಗೆದು 5 ಲೀಟರ್​ ನೀರಿಗೆ ಹಾಕಿ ಕುದಿಸಲಾಗುತ್ತದೆ. ಈ ನೀರು ಐದರಿಂದ ಲೀಟರ್​ನಿಂದ ಒಂದು ಲೀಟರ್​ಗೆ ಬರುವವರೆಗೆ ಕುದಿಸಬೇಕು. ನಂತರ ಈ ಕಷಾಯವನ್ನು ಬೆಳಗ್ಗೆ ಮತ್ತು ರಾತ್ರಿ ಆಹಾರವನ್ನು ಸೇವಿಸುವ ಮುನ್ನ 50 ಮಿಲಿಯಷ್ಟು ಸೇವಿಸಬೇಕು. ಇದನ್ನು ಸೇವಿಸುವಾಗ ಆದಷ್ಟು ಉಪ್ಪು, ಹುಳಿ, ಖಾರವನ್ನು ನಿಯಂತ್ರಿಸಬೇಕಾಗುತ್ತದೆ. ಇದರ ಜೊತೆ ಲಘು ವ್ಯಾಯಾಮ, ವಾಯು ವಿಹಾರ ಮಾಡುವುದರಿಂದ ಎರಡು ಕಿಮೋಥೆರಫಿಗಿಂತಲೂ ಉತ್ತಮವಾಗಿ ಈ ಕಷಾಯ ಪರಿಣಾಮ ಬಿರುವುದು ಖಂಡಿತ.

ಹಾಗಾಗಿ ಕ್ಯಾನ್ಸರ್ ಸಮಸ್ಯೆ ಇಂದ ಒದ್ದಾಡುತ್ತಿರುವ ಈ ಸಮಸ್ಯೆಯನ್ನು ಗುಣಪಡಿಸಿಕೊಳ್ಳಲು ಆಗದೆ ಇರುವವರು ಈ ಹನುಮಫಲವನ್ನು ಸೇವನೆ ಮಾಡಿ ನಿಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ. ಕ್ಯಾನ್ಸರ್ ಎಂಬ ಮಹಾಮಾರಿಯನ್ನು ನಿಮ್ಮಿಂದ ದೂರಮಾಡಿಕೊಳ್ಳಿ.

LEAVE A REPLY

Please enter your comment!
Please enter your name here