ಸಿಗರೇಟ್ ಸೇದುವುದು ಇಂದಿನ ಜನಗಳಲ್ಲಿ ಅದರಲ್ಲೂ ಇಂದಿನ ಯುವಕ ಯುವತಿಯರಿಗೆ ಒಂದು ಫ್ಯಾಷನ್ ಆಗಿದೆ. ಸಿಗರೇಟ್ ಸೇದುವುದರಿಂದ ಖುಷಿ ಸಿಗುತ್ತದೆ ಮನಸ್ಸಿಗೆ ಸಂತೋಷ ಸಿಗುತ್ತದೆ ಎಂದು ಹೇಳುವುದೇ ಹೆಚ್ಚು. ಯಾವುದೇ ಟೀ ಸ್ಟಾಲ್ ಗಳನ್ನು ನೋಡಿದರು ಒಂದು ಕೈಯಲ್ಲಿ ಟೀ ಒಂದು ಕೈಯಲ್ಲಿ ಸಿಗರೇಟ್ ಇಟ್ಟುಕೊಂಡಿರುವ ಸಂಖ್ಯೆಯೇ ಹೆಚ್ಚು. ಎಷ್ಟೋ ಅಂಗಡಿಗಳ ಮುಂದೆ ಒಂದು ಬರಹವನ್ನು ಹಾಕಿರುತ್ತಾರೆ ಅದು ಏನು ಗೊತ್ತೇ ಈ ಜಾಗದಲ್ಲಿ ಧೂಮಪಾನ ಮಾಡಬೇಡಿ ಧೂಮಪಾನ ಮಾಡಿದರೆ ದಂಡ ವಿಧಿಸಲಾಗುತ್ತದೆ ಎಂದು ಬರಹ ಹಾಕಿರುತ್ತಾರೆ ಆದರೂ ಸಹ ಕೆಲವರು ಜನ ದಂಡ ಕಟ್ಟರು ಧೂಮಪಾನ ಮಾತ್ರ ಬಿಡುವುದಿಲ್ಲ.
ಧೂಮಪಾನ ಮಾಡುವುದರಿಂದ ಎಷ್ಟೆಲ್ಲ ತೊಂದರೆಗಳು ಆಗುತ್ತವೇ ಎಂದು ಎಲ್ಲರಿಗೂ ಗೊತ್ತು ಅದನ್ನು ತಿಳಿದುಕೊಂಡು ಕೆಲವರು ಸಿಗರೇಟ್ ಕಡೆ ಹೋಗುವುದಿಲ್ಲ ಆದರೆ ಸ್ನೇಹಿತರ ಜೊತೆ ಸೇರಿ ಮೋಜು ಮಸ್ತಿಗಾಗಿ ಎಲ್ಲರು ಸಿಗರೇಟ್ ಕಡೆ ಹೋಗುತ್ತಾರೆ ಅದು ಅವರನ್ನು ಯಾವ ಮಟ್ಟಿಗೆ ಕರೆದು ಕೊಂಡು ಹೋಗುತ್ತದೆ ಎಂದರೆ ಸಿಗರೇಟ್ ಕಡೆ ಹೋಗದೆ ಇರುವವರು ಸಿಗರೇಟ್ ಬಿಟ್ಟು ಇರಲು ಸಾಧ್ಯವಾಗುವುದಿಲ್ಲ ಅನ್ನುವ ರೀತಿ ಆಗುತ್ತಾರೆ. ಆದರೆ ಕೆಲವರು ತಮ್ಮ ಮೇಲೆ ಬೀಳುವ ಹೆಚ್ಚು ಒತ್ತಡ ಟೆನ್ಸನ್ ಅನ್ನು ಕಡಿಮೆ ಮಾಡಿ ಕೊಳ್ಳಲು ಸಿಗರೇಟ್ ಸೇದುತ್ತಾರೆ.
ಸಿಗರೇಟ್ ಸೆದಿದರೆ ಮಾತ್ರ ಅವರ ಮನಸ್ಸಿಗೆ ರಿಲಿಕ್ಸ್ ಸಿಗುತ್ತದೆ ದಿನ ಪೂರ್ತಿ ಉಲ್ಲಾಸದಿಂದ ಇರಲು ಸಾಧ್ಯ ಎಂಬ ಮಟ್ಟಿಗೆ ಸಿಗರೇಟ್ ಮೇಲೆ ಸಂಭಂದ ಬೆಳೆಸಿಕೊಂಡಿರುತ್ತಾರೆ. ಆದರೆ ಇದನ್ನು ಸೇದುವಾಗ ಸಿಗರೇಟ್ ಪ್ರಭಾವ ಗೊತ್ತಾಗುವುದಿಲ್ಲ ಆದರೆ ಆರೋಗ್ಯ ಕೆಟ್ಟಾಗ ಸಿಗರೇಟ್ ಪ್ರಭಾವ ಗೊತ್ತಾಗುತ್ತದೆ. ಸಿಗರೇಟ್ ಇಂದ ಆರೋಗ್ಯದ ಮೇಲೆ ಆಗುವ ಕೆಟ್ಟ ಪರಿಣಾಮದಿಂದ ಸಿಗರೇಟ್ ಸಹವಾಸವೇ ಬೇಡ ಅನ್ನಿಸುತ್ತದೆ ಇನ್ನು ಮೇಲೆ ಯಾವುದೇ ಕಾರಣಕ್ಕೂ ಸಿಗರೇಟ್ ಮುಟ್ಟಬಾರದು ಎಂದು ಅಂದುಕೊಂಡರೂ ಸಹ ನಾವು ಅದನ್ನು ಬಿಟ್ಟರು ಅದು ನಮ್ಮನ್ನು ಬಿಡುವುದಿಲ್ಲ
ಆದರೆ ಎಷ್ಟೇ ಕಷ್ಟ ಆದರೂ ಸಹ ಎಲ್ಲವನ್ನು ಸಹಿಸಿಕೊಂಡು ಮನಸ್ಸು ಮಾಡಿದರೆ ಎಂತಹ ಕೆಲಸವನ್ನೇ ಮಾಡಬಹುದು ಆದರೆ ಈ ಸಿಗರೇಟ್ ಬಿಡುವುದು ಕಷ್ಟವೇ ಮನಸ್ಸಿದ್ದರೆ ಮಾರ್ಗ ಎಂಬಂತೆ ಮನಸ್ಸು ಗಟ್ಟಿ ಮಾಡಿಕೊಂಡು ಸಿಗರೇಟ್ ಇಂದ ದೂರವಾದರೆ ನಿಮ್ಮ ಆರೋಗ್ಯವು ಉತ್ತಮವಾಗಿರುತ್ತದೆ. ಸಿಗರೇಟ್ ಬಿಟ್ಟ ನಂತರ ವೈದ್ಯರು ಹೇಳುವ ಸಲಹೆಗಳನ್ನು ಪಾಲಿಸಬೇಕು ಆಗ ಆರೋಗ್ಯವು ಸುಧಾರಿಸುತ್ತದೆ ಅದು ಏನು ನೋಡೋಣ. ಸಿಗರೇಟ್ ಬಿಟ್ಟ ನಂತರ ವಿಟಮಿನ್ ಇ ಮಾತ್ರೆಗಳನ್ನು ಸೇವಿಸಬೇಕು. ಇದನ್ನು ಸೇವನೆ ಮಾಡುವುದರಿಂದ ನಿಮ್ಮ ಹೃದಯದ ಆರೋಗ್ಯಕ್ಕೆ ಯಾವುದೇ ತೊಂದರೆಗಳು ಆಗುವುದಿಲ್ಲ. ರಕ್ತ ಸುಗಮವಾಗಿ ಹರಿಯುತ್ತದೆ. ಸಿಗರೇಟ್ ಬಿಟ್ಟ ಮೇಲು ಸ್ನೇಹಿತರು ಸಿಗರೇಟ್ ಸೇದುವುದನ್ನು ನೋಡಿ ನಾನು ಸೆದಬೇಕು ಎನ್ನಿಸುತ್ತದೆ ಆದರೆ ಮತ್ತೆ ಆಸೆ ಆಯಿತು ಒಂದೇ ಒಂದು ಸೇದುತ್ತೇನೆ ಎಂದು ಮತ್ತೆ ಶುರು ಮಾಡಿದರೆ ನಿಮ್ಮ ಆರೋಗ್ಯವನ್ನು ಸರಿ ಪಡಿಸಿಕೊಳ್ಳಲು ತುಂಬಾ ಕಷ್ಟ ಆಗುತ್ತದೆ ಹಾಗಾಗಿ ಯಾವುದೇ ಕಾರಣಕ್ಕೂ ಸಿಗರೇಟ್ ಕಡೆ ಒಲದೆ ಆರೋಗ್ಯವನ್ನು ಹತೋಟಿಯಲ್ಲಿ ಇಟ್ಟುಕೊಳ್ಳಿ.