ಮಕ್ಕಳು ಇವರನ್ನು ದೇವರಿಗೆ ಸಮಾನ ಎನ್ನುತ್ತಾರೆ ಪ್ರತಿಯೊಬ್ಬ ತಂದೆ ತಾಯಿಯ ಜೀವವೇ ಮಕ್ಕಳು ತಂದೆ ತಾಯಿಗೆ ಎಷ್ಟೇ ಕಷ್ಟ ಬಂದರೂ ಅದನ್ನು ಹೇಳಿಕೊಳ್ಳದೆ ಎಲ್ಲವನ್ನು ಸಹಿಸಿಕೊಂಡು ಮಕ್ಕಳು ಸಂತೋಷವಾಗಿ ಇರುವ ಹಾಗೆ ನೋಡಿಕೊಳ್ಳುತ್ತಾರೆ. ಮಕ್ಕಳಿಗೆ ಸ್ವಲ್ಪ ನೋವು ಆದರೂ ತಂದೆ ತಾಯಿಗೆ ನೋವು ಆಯಿತು ಎಂಬಂತೆ ಭಾಷವಾಗುತ್ತದೆ. ಮಕ್ಕಳಿಗೆ ಒಂದು ಚಿಕ್ಕ ಗಾಯವಾದರು ದೊಡ್ಡ ಗಾಯವಾದಂತೆ ನೋವು ಅನುಭವಿಸುತ್ತಾರೆ. ಅಂತಹ ಅಸ್ತಿಯಾಗಿರುವ ಮಕ್ಕಳನ್ನು ಹೇಗೆ ಬೆಳೆಸಬೇಕು ಮಕ್ಕಳು ಹೇಗಿರಬೇಕು. ಎಂಬುದನ್ನು ತುಂಬಾ ಯೋಚಿಸುತ್ತಾರೆ.
ಎಲ್ಲ ಮಕ್ಕಳಿಗಿಂತ ನಮ್ಮ ಮಕ್ಕಳು ಉನ್ನತ ಮಟ್ಟದಲ್ಲಿ ಇರಬೇಕು. ಎಲ್ಲ ಮಕ್ಕಳಿಗಿಂತ ನಮ್ಮ ಮಕ್ಕಳು ಎಲ್ಲದರಲ್ಲೂ ಮುಂದು ಇರಬೇಕು ಯಾವುದಕ್ಕೂ ಕಡಿಮೆ ಇರಬಾರದು ಎಂದು ಬಯಸುತ್ತಾರೆ. ಮಕ್ಕಳು ಕೇಳುವುದನೆಲ್ಲ ಇಲ್ಲ ಎಂಬಂತೆ ಕೊಡಿಸುತ್ತಾರೆ ಮಕ್ಕಳ ಆಸೆಗಳನ್ನು ಹಿಡೇರಿಸುತ್ತಾರೆ. ಆದರೆ ತಮ್ಮ ಮಕ್ಕಳು ಯಾರಿಗೂ ಕಡಿಮೆ ಇಲ್ಲದಂತೆ ಮಾಡಲು ತಮ್ಮ ಆಸೆಗಳನ್ನು ತಮ್ಮ ಮಕ್ಕಳ ಮೇಲೆ ಒತ್ತಡ ಹೇರುತ್ತಾರೆ. ಹೀಗೆ ಓದಬೇಕು ಹೀಗೆ ಇರಬೇಕು. ಎಂದು ಮಕ್ಕಳಿಗೆ ಇಷ್ಟ ಇಲ್ಲದಿದ್ದರೂ ಅವರ ಮೇಲೆ ಹೊರೆ ಹೇರುತ್ತಾರೆ. ಮಕ್ಕಳಿಗೆ ಏನು ಇಷ್ಟ ಅವರು ಏನು ಇಷ್ಟ ಪಡುತ್ತಾರೆ ಅದನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ಕೊಡದೆ ತಂದೆ ತಾಯಿಯರಿಗೆ ಏನು ಇಷ್ಟ ಅದೇ ಆಗಬೇಕು ಎಂದು ಒತ್ತಡ ಹೇರುತ್ತಾರೆ.
ಮಕ್ಕಳಿಗೆ ಅವರು ಇಷ್ಟ ಪಟ್ಟ ಹಾಗೆ ಕಲಿಯಲು ಬಿಡದೆ ತಂದೆ ತಾಯಿಗೆ ಇಷ್ಟ ಆಗುವ ಹಾಗೆ ಕಲಿಯ ಬೇಕು ಎಂದು ಹೇಳುತ್ತಾರೆ. ಹಾಗೆ ಕಲಿಯಲು ಮಕ್ಕಳು ಇಷ್ಟ ಪಡದೆ ಇದ್ದರೆ ಅವರಿಗೆ ಒಡೆದು ಕಲಿಸಲು ಹೋಗುತ್ತಾರೆ. ತಂದೆ ತಾಯಿಗೆ ಕೋಪ ಬಂದಾಗ ಒಂದು ಚಿಕ್ಕ ವಿಷಯಕ್ಕೂ ಮಕ್ಕಳು ಹೇಳಿದ ಮಾತು ಕೇಳಲಿಲ್ಲ ಎಂದರೆ ಮುಗಿಯಿತು ಮಕ್ಕಳಿಗೆ ಯಾವ ಜಾಗಕ್ಕೆ ಹೊಡೆಯುತ್ತಾರೆ ಎಂಬುದೇ ಅವರಿಗೆ ಗೊತ್ತಿರುವುದಿಲ್ಲ ಆದರೆ ಹಾಗೆ ಹೊಡೆಯುವ ತಂದೆ ತಾಯಿಗಳು ಹೊಡೆಯುವ ಮುನ್ನ ತಮ್ಮ ಕೋಪವನ್ನು ತಮ್ಮ ಹತೋಟಿಯಲ್ಲಿ ಇಟ್ಟುಕೊಂಡಿರಬೇಕು. ಮಕ್ಕಳು ಹೇಳಿದ ಮಾತು ಕೇಳಲಿಲ್ಲ ಅಂದರೆ ತಲೆಯ ಮೇಲೆ ಎರಡೇಟು ಕೊಟ್ಟರೆ ಸಾಕು ಅವರು ಕೇಳುತ್ತಾರೆ ಅನ್ನುತ್ತಾರೆ ಹೀಗೆ ಮಾಡುವುದರಿಂದ ಮಕ್ಕಳು ಮಾನಸಿಕವಾಗಿ ಖಿನ್ನತೆಗೆ ಒಳಗಾಗುತ್ತಾರೆ.
ಮಕ್ಕಳು ತಮ್ಮ ಗ್ರಹಣ ಶಕ್ತಿಯನ್ನು ಕಳೆದುಕೊಳ್ಳುತ್ತಾರೆ. ಮಕ್ಕಳಿಗೆ ಹೊಡೆಯುವ ಹೆಟುಗಳು ಯಾವ ಜಾಗದಲ್ಲಿ ಬೀಳುತ್ತದೆ ಎಂದು ಗೊತ್ತಾಗುವುದಿಲ್ಲ ಹಾಗೆ ಬಿದ್ದ ಹೆಟುಗಳು ಮಕ್ಕಳ ಆರೋಗ್ಯವನ್ನು ಕೆಡಿಸುತ್ತವೆ. ಮಕ್ಕಳಿಗೆ ಹೊಡೆದಷ್ಟು ಮಕ್ಕಳು ತಮ್ಮ ಹಠವನ್ನು ಹೆಚ್ಚು ಮಾಡುತ್ತಾರೆ ವಿನಹ ಕಡಿಮೆ ಮಾಡುವುದಿಲ್ಲ. ಮಕ್ಕಳಿಗೆ ಹೊಡೆಯುವುದರಿಂದ ಮಕ್ಕಳ ಮನಸ್ಸಿನಲ್ಲಿ ತಪ್ಪು ಯೋಚನೆಗಳು ಹೆಚ್ಚಾಗಿ ವೃಷ್ಟಿಯಾಗುತ್ತವೆ. ಮಕ್ಕಳಿಗೆ ಹೊಡೆದಷ್ಟು ಮಕ್ಕಳ ವರ್ತನೆ ಮತ್ತಷ್ಟು ಕೆಡುತ್ತದೆ. ಮಕ್ಕಳನ್ನು ಬೇರೆಯವರ ಎದುರಿನಲ್ಲಂತೂ ಹೊಡೆಯಲೇಬೇಡಿ. ಅವರಿಗೆ ಅದು ಅವಮಾನವಾದಂತೆ ಅನಿಸುತ್ತದೆ. ಆದ್ದರಿಂದ ತಂದೆ ತಾಯಿಯರು ಎಲ್ಲವನ್ನೂ ತಮ್ಮ ದೃಷ್ಟಿಕೋನದಿಂದಲೇ ನೋಡುವ ಬದಲು ಮಗುವಿನ ಸ್ಥಾನದಲ್ಲಿ ನಿಂತು ಯೋಚಿಸಬೇಕು ಮಕ್ಕಳಿಗೆ ಹೊಡೆದು ಬುದ್ದಿ ಕಲಿಸುವ ಬದಲು ಮಕ್ಕಳಿಗೆ ಸಮದಾನವಾಗಿ ಹೇಳಿದರೆ ಮಕ್ಕಳು ಬೇಗ ಹರಿತುಕೊಳ್ಳುತ್ತಾರೆ.