ಚಿಕನ್ ತಿನ್ನುವವರು ತಿಳಿಯಲೇ ಬೇಕು ಈ ಮಾಹಿತಿ

0
1001

ಮಾಂಸಹಾರಿಗಳಿಗೆ ಕೋಳಿಯ ಪದಾರ್ಥಗಳನ್ನು ತಿನ್ನುವುದು ಎಂದರೆ ಪಂಚ ಪ್ರಾಣ. ಕೋಳಿಯಿಂದ ತಯಾರಿಸಿದ ಯಾವುದೇ ಪದಾರ್ಥಗಳನ್ನು ಇಷ್ಟಪಡದೆ ಇರುವವರು ಇಲ್ಲವೆನ್ನಬಹುದು. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಹೊಸ ಹೊಸ ರೀತಿಯ ಖಾದ್ಯಗಳು ಸಿಗುತ್ತದೆ. ಇದನ್ನು ಯಾವುದೇ ಚಿಂತೆಯಿಲ್ಲದೆ ನಾವು ತಿನ್ನುತ್ತೇವೆ. ಒಮ್ಮೆ ತಿಂದ ಮೇಲೆ ಮತ್ತೆ ಮತ್ತೆ ತಿನ್ನುವ ಆಸೆ ನಮಗೆ. ಕೆಲವು ಜನರು ಚಿಕನ್ ಹೊರಗಡೆ ಸೇವನೆ ಮಾಡಿದರೆ ಇನ್ನು ಕೆಲವರು ಕೋಳಿಯ ಮಾಂಸವನ್ನು ತಂದು ಮನೆಯಲ್ಲೇ ಬಗೆ ಬಗೆಯ ರುಚಿಕರ ತಿನಿಸು ಮಾಡಿಕೊಂಡು ತಿನ್ನುತ್ತಾರೆ. ನಮ್ಮ ದೇಶದಲ್ಲಿ ಪ್ರತಿ ನಿತ್ಯ ಕೋಟಿ ಗಟ್ಟಲೆ ಫಾರಂ ಕೋಳಿಗಳನ್ನು ಕೊಲ್ಲಲಾಗುತ್ತದೆ. ನಾಟಿ ಕೋಳಿ ಬೆಲೆ ದುಬಾರಿ ಮತ್ತು ಅದು ಸಿಟಿ ಕಡೆ ಕಡೆಯಲ್ಲಿ ಸಿಗುವುದು ಅಪರೊಪ ಆದ್ದರಿಂದಲೇ ಜನರು ಫಾರಂ ಕೊಳಿಗಳನ್ನೇ ತಿನ್ನುವ ಅನಿವಾರ್ಯ ಸ್ತಿತಿಗೆ ಬಂದಿದ್ದಾರೆ.

ಈ ಲೇಖನದಲ್ಲಿ ತಿಳಿಸಿರುವ ವಿಷಯಗಳು ನಿಮ್ಮನು ಬೆಚ್ಚಿಬೀಳಿಸಬಹುದು. ಯಾಕೆಂದರೆ ಮಾಂಸದ ಕೋಳಿಗಳು ಆರೋಗ್ಯಕ್ಕೆ ಎಷ್ಟು ಹಾನಿಕರ. ಕೋಳಿಗಳಿಗೆ ಹಾಕುವ ಆಹಾರ ಹಾಗೂ ಇಂಜೆಕ್ಷನ್ ನಮ್ಮ ಆರೋಗ್ಯವನ್ನು ಹಾಳುಮಾಡುತ್ತದೆ. ಹೆಚ್ಚಿನ ಆದಾಯ ಮಾಡಲು ಮಾಂಸದ ಕೋಳಿಗಳಿಗೆ ಸೈರಾಯಿಡ್ ಎಂಬ ಇಂಜೆಕ್ಷನ್ ಕೊಡುತ್ತಾರೆ. ಈ ಇಂಜೆಕ್ಷನ್ಅನ್ನು ಕೋಳಿಯ ಕುತ್ತಿಗೆ ಹಾಗೂ ರೆಕ್ಕೆಗಳಿಗೆ ಕೊಡುತ್ತಾರೆ. ತಜ್ಞರು ತುಂಬಾ ಸಂಶೋದನೆ ನಡೆಸಿ ಕೋಳಿಯ ತಲೆ ಹಾಗೂ ಕುತ್ತಿಗೆ ಭಾಗವನ್ನು ತಿನ್ನಲೇ ಬಾರದು ಎಂದು ಸಲಹೆ ನೀಡಿದ್ದಾರೆ.

ಸೈರಾಯಿಡ್ ಇಂಜೆಕ್ಷನ್ ಕೊಟ್ಟಿರುವ ಕೋಳಿಗಗಳನ್ನು ತಿಂದರೆ ಆಗುವ ಅಡ್ಡಪರಿಣಾಮಗಳು ಕೆಳಕಂಡಂತಿವೆ.
ಮಹಿಳೆಯರಿಗೆ ಗರ್ಭಕೋಶದ ಸಮಸ್ಯೆ ಕಂಡುಬರಬಹುದು, ಮಾಂಸದ ಕೋಳಿಗಳಿಂದ ಕ್ಯಾನ್ಸರ್ ಮತ್ತು ಕೊಲೆಸ್ಟ್ರಾಲ್ ಹೆಚ್ಚುವ ಸಾಧ್ಯತೆಗಳು ಅಧಿಕವಾಗಿದೆ. ಶರೀರದ ಗುಣಗಳನ್ನು ಕ್ರಮಬದ್ಧವಾಗಿ ನಡೆಸುವ ಹಾರ್ಮೋನ್ ಬಿಡುಗಡೆಯಲ್ಲಿ ಕೂಡ ವ್ಯತ್ಯಾಸ ಕಂಡು ಬರುತ್ತದೆ. ಈ ಕೊಳಿಗಳಿಂದ ಯಾವುದೇ ಸೋಂಕುಗಳಿಗೆ ಒಳಗಾದರೆ ಆಗ ಚಿಕಿತ್ಸೆ ನೀಡುವುದು ತುಂಬಾ ಕಷ್ಟ. ಇದರಿಂದ ಹೃದಯಗಾತ ಹಾಗುವ ಸಾಧ್ಯತೆಗಳು ಕೂಡ ಇದೆ. ಹೊಟ್ಟೆಯಲ್ಲಿ ಗೆಡ್ಡೆಗಳು ಬೆಳೆಯುವ ಸಾದ್ಯತೆ ಇದೆ.ಈ ಎಲ್ಲಾ ಪರಿಣಾಮಗಳು ದೀರ್ಘಕಾಲದಲ್ಲಿ ಎದುರಾಗುತ್ತವೆ. ಹಾಗಾಗಿ ಮಾಂಸದ ಕೋಳಿಗಳನ್ನು ತಿನ್ನುವ ಬದಲು ಊರಿನ ಕೋಳಿಗಳನ್ನು ತಿನ್ನುವುದು ಸೂಕ್ತ. ವೈದ್ಯರು ಹೇಳುವ ಪ್ರಕಾರ ಕುತ್ತಿಗೆ ಹಾಗೂ ರೆಕ್ಕೆಯ ಭಾಗಗಳನ್ನು ಬಿಟ್ಟು ಬೇರೆ ಭಾಗಗಳನ್ನು ತಿನ್ನುವುದು ಒಳಿತು.

ಇತ್ತೇಚೆಗೆ ಕೆಲವು ಫಾರಂ ನವರು ಹಣದ ಆಸೆಗೆ ಬಿದ್ದು ಕೋಳಿಗಳಿಗೆ ತೂಕ ಹೆಚ್ಚು ಬರಿಸಲು ಈ ರೀತಿಯ ದಂದೆ ಮಾಡುತ್ತಿರುವುದು ಈಗಾಗಲೇ ಸಾಕಷ್ಟು ಜನಕ್ಕೂ ತಿಳಿದಿದೆ. ಆದರೆ ಅತೀಯಾಗಿ ಕೋಳಿಗಳಿಗೆ ಸ್ಟೀರಾಯ್ಡ್ ಇಂಜೆಕ್ಷನ್ ನೀಡುವುದರಿಂದ ಅದರ ಬೆಳವಣಿಗೆಯಲ್ಲಿ ವೇಗ ಬರುತ್ತದೆ. ಇದನ್ನು ಸೇವಿಸುವ ಮನುಷ್ಯನಿಗೆ ಅನೇಕ ರೀತಿಯ ಸಮಸ್ಯೆಗಳು ಬರುತ್ತಿವೆ. ಆದ್ರೆ ನಾಟಿ ಕೋಳಿ ಸೇವನೆ ಆರೋಗ್ಯಕ್ಕೆ ತುಂಬಾ ಒಳ್ಳೇದು. ನಿಮಗೆ ಸಾಧ್ಯ ಆದ್ರೆ ನಾಟಿ ಕೋಳಿ ಚಿಕನ್ ತಿನ್ನುವ ಅಭ್ಯಾಸ ಮಾಡಿಕೊಳ್ಳಿ ನಿಮ್ಮ ಆರೋಗ್ಯ ಸುಪರ್ ಆಗಿರುತ್ತೆ.

LEAVE A REPLY

Please enter your comment!
Please enter your name here