ನಿಮ್ಮ ಜೀವನ ಸುಖವಾಗಿರಲು ಈ ಟಿಪ್ಸ್ ಫಾಲೋ ಮಾಡಿ

0
755

ಮನುಷ್ಯ ಎಂದ ಮೇಲೆ ಯಾರಿಗೆ ತಾನೇ ಸಮಸ್ಯೆ ಎಂಬುದು ಇರುವುದಿಲ್ಲ ಸಮಸ್ಯೆ ಎಂಬುದು ಮನುಷ್ಯನಿಗೆ ಬರದೆ ಇನ್ನು ಯಾರಿಗೆ ಬರುತ್ತದೆ ಹೇಳಿ ಅಲ್ಲವೇ. ಆದರೆ ಮನುಷ್ಯ ಮಾಡುವ ದೊಡ್ಡ ತಪ್ಪು ಎಂದರೆ ತನಗೆ ಸಮಸ್ಯೆ ಬಂದಿದೆ ಎಂದು ತನ್ನ ಎಲ್ಲ ರೀತಿಯ ಕೆಲಸ ಕಾರ್ಯಗಳನ್ನು ಬಿಟ್ಟು ಆ ಒಂದು ಸಮಸ್ಯೆಯ ಬಗ್ಗೆ ಅಲೋಚಿಸುತ್ತ ಕುಳಿತು ಬಿಡುತ್ತಾನೆ ಕುಳಿತರು ನಿಂತರು ಬರಿ ಆ ಸಮಸ್ಯೆಯ ಬಗ್ಗೆ ಅಲೋಚಿಸುತ್ತ ಸರಿಯಾದ ಆಹಾರ ಸೇವಿಸುವುದು ನಿತ್ಯ ಮಾಡಬೇಕಾದ ಕೆಲಸ ಕಾರ್ಯಗಳನ್ನು ಮರೆತು ಕುಳಿತು ಬಿಡುತ್ತಾನೆ.

ಕೆಲವರಿಗಂತೂ ತಮ್ಮ ಸಮಸ್ಯೆ ಬಗ್ಗೆ ಯೋಚಿಸುತ್ತಾ ತಮ್ಮನ್ನೇ ತಾವು ಮರೆತು ಬಿಡುತ್ತಾರೆ ಉದಾಹರಣೆಗೆ ನೀವು ನೋಡಿರಬಹುದು ತಮ್ಮ ಸಮಸ್ಯೆ ಬಗ್ಗೆ ಯೋಚನೆ ಮಾಡುತ್ತ ಎಷ್ಟೋ ರೀತಿಯ ಅಪಘಾತಗಳು ಸಹ ಸಂಭವಿಸಿವೆ. ಅದರೆ ಹೀಗೆ ಸಮಸ್ಯೆ ಬಗ್ಗೆ ಯೋಚನೆ ಮಾಡಿದರೆ ತಮ್ಮ ಸಮಸ್ಯೆಗಳಿಗೆಲ್ಲ ಪರಿಹಾರ ಸಿಗುತ್ತದ ಇಲ್ಲ ಅಲ್ಲವಾ ಸುಮ್ಮನೆ ಯೋಚನೆ ಮಾಡುತ್ತ ತಮ್ಮ ಆರೋಗ್ಯ ಕೆಡುತ್ತ ಹೋಗುತ್ತದೆ. ಅದು ಅಲ್ಲಾದೆ ಇಂದಿನ ಜೀವನವೇ ಒಂದು ರೀತಿಯ ಜಂಜಾಟ. ಪೈಪೋಟಿ ಯ ಜೀವನ ಇದರಲ್ಲಿ ಸಮಸ್ಯೆ ಎಂಬುದು ಸರ್ವೇ ಸಾಮಾನ್ಯ ಈ ಸಮಸ್ಯೆ ಇಂದ ನಮ್ಮ ಸಂತೋಷ. ನಗು ಎಂಬುದನ್ನು ನಾವು ಕಳೆದುಕೊಳ್ಳಬಾರದು. ಮನುಷ್ಯ ಹುಟ್ಟಿದಾಗಿನಿಂದ ಸಾಯುವ ವರೆಗೆ ಸಮಸ್ಯೆ ಅವನ ಬೆನ್ನ ಹಿಂದೆಯೇ ಇರುತ್ತದೆ ಹಾಗಾಗಿ ಈ ಸಮಸ್ಯೆಗಳಿಗೆ ಹೆದರಿ ಕುಳಿತುಕೊಳ್ಳಬಾರದು ಈ ಸಮಸ್ಯೆ ಇಂದ ಹೇಗೆ ಹೊರ ಬರಬೇಕು ಎಂದು ತಿಳಿದುಕೊಂಡರೆ ಸಮಸ್ಯೆ ತಾನೇ ತಾನಾಗಿ ದೂರವಾಗುತ್ತದೆ.

ಇಂದಿನ ಜನಗಳು ತಮ್ಮ ಉದ್ಯೋಗ ರಂಗದಲ್ಲಿ ಬರುವ ಸಮಸ್ಯೆಗಳನ್ನು ಹೊತ್ತಿಕೊಂಡು ಬಂದು ಮನೆಯ ಮಂದಿಗಳ ಜೊತೆ ಕೋಪ ಮಾಡಿಕೊಂಡು ಜಗಳವಾಡಿ ಮತ್ತೆ ಸಮಸ್ಯೆಯನ್ನು ಉದ್ಭವ ಮಾಡಿಕೊಳ್ಳುತ್ತಾರೆ. ಅದಕ್ಕಾಗಿ ಉದ್ಯೋಗದ ಸಮಸ್ಯೆಯನ್ನು ಉದ್ಯೋಗದಲ್ಲೇ ಪರಿಹರಿಸಿಕೊಳ್ಳಬೇಕು ಮನೆಯ ಸಮಸ್ಯೆಯನ್ನು ಮನೆಯಲ್ಲೇ ಪರಿಹರಿಸಿಕೊಳ್ಳಬೇಕು ಹಾಗಾ ಮತ್ತೊಂದು ಸಮಸ್ಯೆ ಎಂಬುದು ಹುಟ್ಟಿಕೊಳ್ಳುವುದಿಲ್ಲ. ಯಾವುದೇ ಎಂತಹ ಸಮಸ್ಯೆಗಳೇ ಬಂದರು ತಾಳ್ಮೆ ಎಂಬುದನ್ನು ಮೊದಲು ಇಟ್ಟುಕೊಳ್ಳಬೇಕು ಹಾಗ ಸಮಸ್ಯೆಗಳಿಗೆ ಸುಲಭವಾಗಿ ಪರಿಹಾರ ಸಿಗುತ್ತದೆ.

ಜೀವನದಲ್ಲಿ ಸಾದಾ ಸಂತೋಷದಿಂದ ಇದ್ದರೆ ನಗು ನಗುತ್ತಾ ಇದ್ದರೆ ಸಮಸ್ಯೆ ದೂರವಾಗುತ್ತದೆ. ನಿಮಗೆ ಸಂಭಂದ ಇಲ್ಲದ ವಿಷಯಗಳನ್ನು ಸುಮ್ಮನೆ ನಿಮ್ಮ ಮೈಮೇಲೆ ಎಳೆದುಕೊಂಡು ನಿಮ್ಮ ಸಂತೋಷವನ್ನು ಕಳೆದುಕೊಳ್ಳಬೇಡಿ. ಒಂದು ಸಮಸ್ಯೆ ಬಗ್ಗೆ ಹೆಚ್ಚು ಯೋಚಿಸುವುದರಿಂದ ಆರೋಗ್ಯವು ಕೆಡುತ್ತದೆ.ಹಾಗಾಗಿ ಯಾವುದೇ ಸಮಸ್ಯೆಗಳಿಗೂ ಎದರದೆ ಆರೋಗ್ಯವನ್ನು ಕಾಪಾಡಿಕೊಂಡು ಸುಲಭವಾಗಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ.

LEAVE A REPLY

Please enter your comment!
Please enter your name here