ಮಕ್ಕಳಾಗಿಲ್ಲ ಎಂಬ ಕೊರಗಿದೆಯೇ ಹಾಗಾದ್ರೆ ಈ ಕೆಳಕಂಡ ಟಿಪ್ಸ್ ಪಾಲಿಸಿ

0
1475

ಮಕ್ಕಳಾಗಿಲ್ಲದವರಿಗೆ ಮಕ್ಕಳಾಗಿಲ್ಲ ಎಂಬ ಕೊರಗು ಸದಾ ಕಾಡುತ್ತಿರುತ್ತದೆ. ಅದಕ್ಕಾಗಿ ಅವರು ದೇವರುಗಳ ಮೊರೆ ಹೋಗುತ್ತಾರೆ, ಹರಕೆಗಳನ್ನ ಕಟ್ಟಿಕೊಳ್ಳುತ್ತಾರೆ, ಅನೇಕ ವೈದರುಗಳಿಗೆ ತೋರಿಸುತ್ತಾರೆ, ಮೆಡಿಕಲ್ ನಲ್ಲಿ ಸಿಗುವ ಅನೇಕ ಮದ್ದುಗಳನ್ನು ತೆಗೆದುಕೊಳ್ಳುತಾರೆ, ಸಾಕಷ್ಟು ಹಣವನ್ನು ಖರ್ಚು ಮಾಡುತ್ತಾರೆ. ಆದರೂ ಕೆಲವೊಮ್ಮೆ ಪ್ರಯೋಜನ ಆಗುವುದಿಲ್ಲ, ನಮ್ಮ ಮನೆಯಲ್ಲೇ ನೈಸರ್ಗಿಕವಾಗಿ ಸಿಗುವ ಈ ಕೆಳಕಂಡ ಪದಾರ್ಥಗಳ ಮೂಲಕ ಮಕ್ಕಳು ಜನಿಸುವ ಅಂಶವನ್ನುಹೇಗೆ ಹೆಚ್ಚಿಸಿಕೊಳ್ಳಬಹುದು ಎಂದು ತಿಳಿಯೋಣ.

ಕುಂಬಳಕಾಯಿ ಬೀಜಗಳು ಸಾಮಾನ್ಯವಾಗಿ ಎಲ್ಲಾ ಕಡೆ ಅತ್ಯಂತ ಸುಲಬವಾಗಿ ಸಿಗುವ ಪದಾರ್ಥ, ಇದನ್ನು ಪ್ರತಿನಿತ್ಯ ತಿನ್ನುವುದರಿಂದ ನಮ್ಮ ದೇಹದಲ್ಲಿರುವ ಕಬ್ಬಿಣದ ಹಂಶ ಹೆಚ್ಚಾಗಿ ರಕ್ತ ಪರಿಚಲನೆ ಹೆಚ್ಚಾಗಿ ಲೈಂಗಿಕ ಸಾಮರ್ಥ್ಯವು ಹೆಚ್ಚುತ್ತದೆ ಇದರಿಂದ ಮಕ್ಕಳಾಗುವ ಸಾಧ್ಯತೆ ಹೆಚ್ಚುತ್ತದೆ. ಖರವಾಗಿರುವ, ರುಚಿಯಾಗಿರುವ ಮೆಣಸಿನಕಾಯಿ ತಿನ್ನುವುದರಿಂದ ಗಂಡ ಹೆಂಡತಿಯಲ್ಲಿ ಹಾರ್ಮೋನ್ ಗಳು ಹೆಚ್ಚಾಗುತ್ತವೆ ಇದರಿಂದ ಮಕ್ಕಳಾಗುವ ಸಾಧ್ಯತೆ ಹೆಚ್ಚುತ್ತದೆ. ಇದೊಂದು ನೈಸರ್ಗಿಕ ತೈಲ, ಆಲಿವ್ ಆಯಿಲ್ ಅನ್ನು ಹಣ್ಣಿನ ಕೊಬ್ಬಿನಿಂದ ತಯಾರಿಸುತ್ತಾರೆ, ಆಲಿವ್ ಆಯಿಲ್ ನಲ್ಲಿ ವಿಟಮಿನ್ ಇ ಮತ್ತು ಕೆ ಮಿತವಾಗಿರುತ್ತ್ತದೆ. ಪ್ರತಿನಿತ್ಯ ಆಲಿವ್ ಅನ್ನು ಅಡುಗೆಯಲ್ಲಿ ಬಳಸುವುದರಿಂದ ಲೈಂಗಿಕ ಸಾಮರ್ಥ್ಯ ಹೆಚ್ಚುತ್ತದೆ. ಇದರಿಂದ ಮಕ್ಕಳಾಗಲು ಸಹಕಾರಿಯಾಗುತ್ತದೆ.

ಪನ್ನೆರ್ ನಲ್ಲಿ ಪ್ರೋಟೀನ್ ಹಾಗೂ ವಿಟಮಿನ್ ಹಂಶಗಳು ಸಮೃದ್ಧಿಯಾಗಿವೆ. ಇದನ್ನು ಪ್ರತಿನಿತ್ಯದ ಆಹಾರದಲ್ಲಿ ನಾವು ಬಳಸಬಹುದು.ಇದರಿಂದ ಸ್ತ್ರೀ ಮತ್ತು ಪುರುಷರಲ್ಲಿ ಸಂತಾನೋತ್ಪತ್ತಿ ಅಂಶ ಹೆಚ್ಚಾಗುತ್ತವೆ. ಇದರಿಂದ ಮಕ್ಕಳಾಗುವ ಸಾದ್ಯತೆ ಹೆಚ್ಚುತ್ತದೆ. ಹಸಿರು ತರಕಾರಿಗಳು ಹಾಗೂ ಸೊಪ್ಪಿನಲ್ಲಿ ಎಲ್ಲಾ ಮುಖ್ಯ ಪೌಷ್ಟಿಕಾಂಶ ಒಳಗೊಂಡಿದ್ದು ಇದು ಬೆಳವಣಿಗೆ ಮತ್ತು ಉತ್ತ್ತಮ ಆರೋಗ್ಯ ಪಡೆಯಲು ಸಹಕಾರಿಯಾಗಿದೆ. ಇದನ್ನು ಮಹಿಳೆಯರು ಹೆಚ್ಚಾಗಿ ತಿನ್ನುವುದರಿಂದ ಅವರಲ್ಲಿ ಹಾರ್ಮೋನ್ ಚಲನವಲನಗಳು ಹೆಚ್ಚಾಗುತ್ತವೆ ಹಾಗೂ ಅರೋಗ್ಯ ಸಮಸ್ಯೆಗಳು ಕಡಿಮೆಯಾಗುತ್ತವೆ. ಇದರಲ್ಲಿ ಪ್ರೋಟೀನ್ ಮತ್ತು ವಿಟಮಿನ್ ಹೆಚ್ಚಾಗಿದ್ದು ಮಹಿಳೆಯರು ಗರ್ಭಧರಿಸುವ ಸಾಧ್ಯತೆಗಳು ಹೆಚ್ಚಾಗುತ್ತದೆ ಹಾಗೂ ಹುಟ್ಟುವ ಮಗೂ ಕೂಡ ಆರೋಗ್ಯದಿಂದ ಹುಟ್ಟುತ್ತದೆ.

ದಾಳಿಂಬೆ ಹಣ್ಣನು ಮಹಿಳೆಯರು ಹೆಚ್ಚಾಗಿ ತಿನ್ನುವುದರಿಂದ ದೇಹದಲ್ಲಿ ಜೀರ್ಣಕ್ರಿಯೆ ಹೆಚ್ಚಾಗುತ್ತದೆ, ಇದರಿಂದ ಗರ್ಭಕೋಶದಲ್ಲಿ ರಕ್ತ ಸರಬರಾಜು ಉತ್ತಮಗೊಂಡು ಅವರ ಋತುಚಕ್ರ ಸರಿಯಾಗಿರುವಂತೆ ಮಾಡುತ್ತದೆ. ಪುರುಷರಲ್ಲಿ ವೀರ್ಯಾಣುಗಳನ್ನು ಹೆಚ್ಚಿಸಲು ಇದು ಸಹಕಾರಿಯಾಗಿದೆ. ಇದರಿಂದ ಉತ್ತಮ ಪಲಿತಾಂಶವನ್ನು ಪಡೆಯಬಹುದು. ಕಡಲೆಕಾಳು ಅತೀ ಸುಲಬವಾಗಿ ಸಿಗುವ ಪದಾರ್ಥ, ಎಲ್ಲಾ ಅಂಗಡಿಗಳಲ್ಲೂ ಸಿಗುತ್ತದೆ. ಇದನ್ನು ಸಾಂಬಾರು, ಪಲ್ಯ ಹಾಗೂ ಇನ್ನೂ ಅನೇಕ ಖಾಧ್ಯಗಳಲ್ಲಿ ಉಪಯೋಗಿಸಬಹುದು. ಇದರಿಂದ ಮಹಿಳೆಯರಲ್ಲಿ ಅಂಡಾಶಯದ ಕೆಲವನ್ನು ಉತ್ತಮಗೊಳಿಸುತ್ತದೆ. ಇದರಿಂದ ಮಕ್ಕಳಾಗುವ ಸಾಧ್ಯತೆಗಳು ಹೆಚ್ಚು.

ಪ್ರತಿನಿತ್ಯ ಬಾಳೆಹಣ್ಣನ್ನು ತಿನ್ನುವುದರಿಂದ ದೇಹಕ್ಕೆ ಸಾಕಷ್ಟು ಸಿಗುತ್ತದೆ. ಇದನ್ನು ತಿನ್ನುವುದರಿಂದ ರಕ್ತದೊತ್ತಡ, ಖಿನ್ನತೆ, ರಕ್ತಹೀನತೆಯನ್ನು ಕಡಿಮೆಗೊಳಿಸುತ್ತದೆ. ಮಹಿಳೆಯರು ಹೆಚ್ಚಾಗಿ ಬಾಳೆಹಣ್ಣು ತಿನ್ನುವುದರಿಂದ ಪ್ರೋಟೀನ್, ವಿಟಮಿನ್ ಹಾಗೂ ಕಬ್ಬಿಣದ ಹಂಶ ಹೆಚ್ಚಾಗುತ್ತದೆ. ಇದರಿಂದ ಮಹಿಳೆಯರ ಋತುಚಕ್ರದ ಸಮಸ್ಯೆ ಕಡಿಮೆಯಾಗುತ್ತದೆ, ಹಾಗೂ ಮಕ್ಕಳಾಗುವ ಸಾದ್ಯತೆ ಹೆಚ್ಚುತ್ತದೆ. ಬಾಳೆಹಣ್ಣು ತಿನ್ನುವುದರಿಂದ ದೇಹ ಮತ್ತು ಮನಸ್ಸುಗಳೆರಡರ ಉಷ್ಣತೆ ಕಡಿಮೆ ಆಗಿ ಹುಟ್ಟುವ ಮಗುವಿನ ಅರೋಗ್ಯ ಚೆನ್ನಾಗಿರುತ್ತದೆ.

LEAVE A REPLY

Please enter your comment!
Please enter your name here