ಈ ಹಣ್ಣು ಸಿಕ್ಕರೆ ಕೊಡಲೇ ತಿನ್ನಿ ಏಕೆ ಅಂದ್ರೆ

1
2675

ಉಪ್ಪಾಗೆ ಅಥವಾ ಉಪ್ಪಗೆ ನಿತ್ಯಹರಿದ್ವರ್ಣ ಕಾಡುಗಳಲ್ಲಿ ಬೆಳೆಯುವ ಒಂದು ಮರ. ಈ ಮರವು ಔಷಧೀಯ ಗುಣಗಳುಳ್ಳ ಹಣ್ಣುಗಳನ್ನು ಬಿಡುತ್ತವೆ. ಹಾಗೂ ಈ ಮರಕ್ಕೆ ಗಾಂಬೋಜ್, ಕಾಚ್ ಪುಳಿ, ಕಾಚಂಪುಳಿ, ಪಣಪ್ಪುಳಿ, ಮಂತುಹುಳಿ ಹೀಗೆ ವಿವಿಧ ಹೆಸರುಗಳಿಂದ ಕರೆಯುತ್ತರೆ. ತಮಿಳು ಮತ್ತು ಮಲಯಾಳಂನಲ್ಲಿ ಕೋಡಂಪುಳಿ ಎಂದು ಕರೆಯುತ್ತಾರೆ ಈ ಮರದ ೩೫ ಪ್ರಬೇಧಗಳು ಸಹ ಭಾರತದಲ್ಲಿದೆ. ಈ ಹಣ್ಣು ನಮ್ಮ ದೇಹಕ್ಕೆ ಸಾಕಷ್ಟು ಲಾಭ ಉಂಟು ಮಾಡುವುದು ಆದ್ರೆ ಇಂದು ಈ ಮರ ಅಪರೊಪದ ಆಗಿದೆ ಸಾಕಷ್ಟು ಜನಕ್ಕೆ ಇದರ ಹೆಸರು ಸಹ ತಿಳಿದಿಲ್ಲ. ಈ ಹಣ್ಣಿನ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಿ.

ಫೆಬ್ರುವರಿ-ಮಾರ್ಚನಲ್ಲಿ ಹೂ ಬಿಡುವ ಉಪ್ಪಾಗೆ ಹಣ್ಣಾಗುವುದು ಜುಲೈ ನವೆಂಬರ್ ತಿಂಗಳ ಮಳೆಗಾಲದಲ್ಲಿ. ಹಣ್ಣುಗಳು ತಿಳಿಹಳದಿ ಬಣ್ಣದಿಂದ ಕೂಡಿದ್ದು ಉಬ್ಬು ತಗ್ಗಿನ ಮೇಲ್ಮೈ ಹೊಂದಿ ಚಿಕ್ಕ ಕುಂಬಳಕಾಯಿಯ ರೂಪ ಅಕಾರ ಇರುತ್ತದೆ. ಉಪ್ಪಾಗೆ ಹಣ್ಣುಗಳು ಆಹಾರ ಮತ್ತು ಔಷಧೀಯ ಕಾರಣಕ್ಕಾಗಿ ಬಳಸಲ್ಪಡುತ್ತವೆ. ಬೀಜದ ಗಿಡ ಬೆಳೆ ಕೊಡಲು ಹತ್ತು-ಹನ್ನೆರಡು ವರ್ಷ ತೆಗೆದುಕೊಳ್ಳುತ್ತದೆ. ಕಸಿ ಗಿಡಕ್ಕೆ ಮೂರು ವರ್ಷ ಸಾಕು. ಇದು ಕಾಚಂಪುಳಿ ಅಥವಾ ಮಂತಪುಳಿ ಎಂದು ಕೊಡಗು ಜಿಲ್ಲೆಯಲ್ಲಿ ಹೆಚ್ಚು ಪ್ರಸಿದ್ದಿಯಲ್ಲಿದೆ. ಬಿದ್ದ ಅಥವಾ ಕೊಯ್ಲು ಮಾಡಿದ ಹಣ್ಣು ಹಾಗೂ ಕಾಯಿಗಳನ್ನು ಹೆಣೆದ ಬಿದಿರುವಿನಲ್ಲಿ ತಟ್ಟಿ ಕಬ್ಬಿಣದ ಪರದೆ ಮೇಲೆ ಬೆಂಕಿಯ ಶಾಖದಿಂದ ಒಣಗಿಸಿ ನಂತರ ಮಾರಾಟ ಮಾಡುತ್ತಾರೆ.

ಹಾಗಾದರೆ ಈ ಉಪ್ಪಾಗೆಯಿಂದ ಏನೆಲ್ಲ ಪ್ರಯೋಜನಗಳು ಇವೆ ನೋಡೋಣ ಬನ್ನಿ. ಉಪ್ಪಾಗೆಯಲ್ಲಿ ಇರುವ ಹೈಡಾಕ್ಸಿ ಸಿಟ್ರಿಕ್ ಎಂಬ ಅಂಶವು ಮಾನವನ ದೇಹದಲ್ಲಿ ಇರುವ ಅತಿಯಾದ ಕೊಬ್ಬನ್ನು ಕರಗಿಸಿಲು ಸಾಧ್ಯವಾಗುತ್ತದೆ. ಹಣ್ಣಿನ ಒಣಸಿಪ್ಪೆ ಸಂಸ್ಕರಿಸಿ ಮಂದಸಾರ ತಯಾರಿಸುತ್ತಾರೆ. ಹಂದಿಮಾಂಸದ ಮತ್ತು ಮೀನಿನ ಅಡುಗೆಗಳಿಗೆ ಬಳಸಲ್ಪಡುತ್ತದೆ ಮಾಂಸಹಾರಕ್ಕೆ ಹುಳಿ ಪದಾರ್ಥವಾಗಿ ಬಳಸುತ್ತಾರೆ. ಉಪ್ಪಾಗೆ ತಿಂದ ಆಹಾರವನ್ನು ಸುಲಭವಾಗಿ ಜೀರ್ಣಿಸುವಂತೆ ಮಾಡುತ್ತದೆ. ಹೊಟ್ಟೆಯಲ್ಲಿ ಆಗುವ ಜಂತು ಹುಳುಗಳ ಸಮಸ್ಯೆಗೆ ಉತ್ತಮ ಔಷಧಿ. ಹಣ್ಣಿನ ಸಿಪ್ಪೆಯಲ್ಲಿರುವ ಆಮ್ಲದಿಂದ ಕೊಲೆಸ್ಟ್ರಾಲ್ ಎಂಬುದನ್ನು ಹತೋಟಿಯಲ್ಲಿ ಇಟ್ಟುಕೊಳ್ಳಬಹುದು.

ಉಪ್ಪಾಗೆ ಬೀಜದ ಎಣ್ಣೆಯನ್ನು ಕಾಲಿನ ಪಾದಗಳಿಗೆ ಹಚ್ಚಿದರೆ ಬಿರುಕುಗಳು ಕಡಿಮೆ ಆಗುತ್ತದೆ. ಉಪ್ಪಾಗೆ ಹಣ್ಣಿನ ಒಣಗಿದ ಸಿಪ್ಪೆಯನ್ನು ತರಕಾರಿ, ಮೀನು ಮತ್ತು ಮಾಂಸದ ಅಡುಗೆಗೆ ಹೆಚ್ಚಾಗಿ ಬಳಸುತ್ತಾರೆ. ಉಪ್ಪಾಗೆ ಹಣ್ಣಿನ ಬೀಜದಿಂದ ತೆಗೆದ ಎಣ್ಣೆಯನ್ನು ತುಪ್ಪದಂತೆ, ಎಣ್ಣೆಯಂತೆ ಅಡುಗೆಗೂ ಬಳಸಲಾಗುತ್ತಿದೆ. ನೋಡಿದರಲ್ಲ ಮಲೆನಾಡಿನಲ್ಲಿ ಸಿಗುವ ಈ ಉಪ್ಪಾಗೆ ಎಂಬ ಹಣ್ಣಿನಿಂದ ಎಷ್ಟೆಲ್ಲ ಪ್ರಯೋಜನಗಳು ಇವೆ ..ಇದರ ಪ್ರಯೋಜನವನ್ನು ನೀವು ಸಹ ಪಡೆದುಕೊಳ್ಳಿ.  ನಮ್ಮ ವೆಬ್ಸೈಟ್ ನಲ್ಲಿರುವ ಎಲ್ಲ ಬರವಣಿಗೆಗಳಿಗೆ ವಿಶೇಷ ಕಾಪಿ ರೈಟ್ಸ್ ಹೊಂದಿದ್ದು ನಮ್ಮ ಅನುಮತಿ ಇಲ್ಲದೆ ಚಿತ್ರಗಳು ಅಥವ ಬರಹಗಳು ನಕಲು ಮಾಡಿದ್ರೆ ಕಾನೂನು ರೀತಿಯ ಕ್ರಮ ಜರುಗಿಸಲಾಗುವುದು.

1 COMMENT

  1. ಸರ್ ಈ ಹಣ್ಣು ಕರ್ನಾಟಕದ ಕೊಡಗಿನ ಪ್ರದೇಶದಲ್ಲಿ ಮಾತ್ರನ ಸಿಗುವುದು

LEAVE A REPLY

Please enter your comment!
Please enter your name here