ಪವಾಡ ಪುರುಷ ಶ್ರೀ ಶ್ರೀ ಶ್ರೀ ಗುರು ರಾಘವೇಂದ್ರ ಗುರು ಸಾರ್ವಭೌಮರು

0
941

ಜೀವನದಲ್ಲಿ ಗುರು ರಾಘವೇಂದ್ರ ಸ್ವಾಮಿಗಳನ್ನು ನಂಬಿದರೆ ನಿಮಗೆ ಯಾವುದೇ ರೀತಿಯ ಸಮಸ್ಯೆ ಬರುವುದಿಲ್ಲ ಏಕೆ ಅಂದರೆ ಗುರು ರಾಯರು ನಮ್ಮ ಅನುಭವಕ್ಕೆ ಬಂದಮೇಲೆ ಮಾತ್ರ ತಿಳಿಯೋದು ಅವರ ಶಕ್ತಿ ಏನು ಎಂಬುದು. ಉದಾಹರಣೆ ನೀಡಬೇಕು ಎಂದರೆ ಮೊದಲಿಗೆ ನನ್ನನು ನಾನೇ ಕೊಡುತ್ತೇನೆ ಏಕೆಂದರೆ ಎಲ್ಲೋ ಇದ್ದ ವ್ಯಕ್ತಿಯನ್ನು ಇಂದು ಉನ್ನತ ಸ್ಥಾನಕ್ಕೆ ಕರೆದುಕೊಂಡು ಹೋಗಿದ್ದು ಬೇರೆ ಯಾರು ಅಲ್ಲ ನಮ್ಮ ಶ್ರೀ ಶ್ರೀ ಶ್ರೀ ಗುರು ರಾಘವೇಂದ್ರ ಗುರು ಸಾರ್ವಭೌಮರು. ನಮ್ಮ ಜೀವನದಲ್ಲಿ ನಾವು ಏನೇ ಓದಿನ ವಿಷಯಕ್ಕೆ ಮತ್ತು ಇತರೆ ವಿಷಯಗಳಿಗೆ ಎಷ್ಟೇ ಶ್ರಮ ಹಾಕಿರಬಹುದು ನಿಜ ಆದರೆ ದೈವ ಇಚ್ಛೆ ಇಲ್ಲದೆ ಒಂದು ಹುಲ್ಲು ಕಡ್ಡಿ ಕೂಡ ಅಲುಗಾಡದು ಎಂಬುದು ಎಲ್ಲರಿಗು ತಿಳಿದಿದೆ.

ನಮ್ಮ ಆಧುನಿಕ ಜಗತ್ತು ಬದಲಾದಂತೆ ನಮ್ಮಲ್ಲಿ ಯುವಕ ಯುವತಿಯರು ಪಾರ್ಟಿ ಹೋಟಲ್ ಎಂದು ಸುತ್ತಲು ಸಮಯ ಇರುತ್ತದೆ ಆದರೆ ಒಂದು ಕ್ಷಣ ದೇವರನ್ನು ನೆನೆಯಲು ಸಹ ಅವರಿಗೆ ಸಹಾಯ ಇರುವುದಿಲ್ಲ ಕೊನೆ ಕೊನೆಗೆ ದೈವವನ್ನೇ ಪ್ರಶ್ನೆ ಮಾಡುವ ಸ್ತಿತಿಗೆ ಬಂದಿದ್ದಾರೆ. ಅದು ಏಕೆ ಇರಲಿ ಗುರು ರಾಯರ ಭಕ್ತಿಗೆ ನೀವು ಪಾತ್ರರಾದರೆ ನಿಮಗೆ ಐಶರ್ಯ ಸಂಪತ್ತು ಆರೋಗ್ಯ ಯಶಸ್ಸು ಬೇಡ ಎಂದರು ಹುಡುಕಿಕೊಂಡು ಬರುವುದು ಮಾತ್ರ ಸತ್ಯ.

ರಾಯರನ್ನು ಒಲಿಸಿಕೊಳ್ಳುವುದು ತುಂಬಾ ಸುಲಭ ಇವರಿಗೆ ಹಿಂದೂ ಮುಸ್ಲಿಂ ಕ್ರೈಸ್ತ ಜೈನ ಎಂಬ ಬೇಧ ಬಾವ ಇಲ್ಲವೇ ಇಲ್ಲ ಎಲ್ಲರನ್ನು ಪ್ರೀತಿಯಿಂದಲೇ ಕಾಣುತ್ತಾರೆ. ಭಕ್ತಿಯಿಂದ ಗುರು ರಾಯರೇ ಕಾಪಾಡಿ ಎಂದರೆ ಸಾಕು ಎಂತಹ ಕಷ್ಟಗಳೇ ಇದ್ದರು ನಮ್ಮೆ ಮೇಲೆ ಕೃಪೆ ತೋರುವರು. ನಾವು ಮಂತ್ರಾಲಯದಲ್ಲಿ ಅನ್ಯ ಧರ್ಮದ ಜನರನ್ನು ಸಾಕಷ್ಟು ಕಂಡಿದ್ದೇನೆ ಅವರ ಬಳಿ ನಾವು ಹೆಚ್ಚಾಗಿ ಮಾತನಾಡಿದ್ದೇನೆ ಅವರು ಗುರು ರಾಯರ ಮೇಲೆ ಇಟ್ಟಿರುವ ಭಕ್ತಿ ಎಂತಹುದು ಎಂದು ಕೇಳಿ ನನಗೆ ಆಶ್ಚರ್ಯ ಆಗಿದೆ. ಸಾಕಷ್ಟು ಅನುಭವಕ್ಕೆ ಬಂದ ಮೇಲೆ ಅಲ್ಲಿಗೆ ಭೇಟಿ ನೀಡಿದ್ದಾರೆ ನಮ್ಮ ಮುಸಲ್ಮಾನ್ ಸ್ನೇಹಿತರು ಎಷ್ಟೋ ಜನ ಗುರು ರಾಘವೇಂದ್ರ ಸ್ವಾಮಿಗಳನ್ನು ನಂಬುತ್ತಾರೆ ಏಕೆ ಅಂದ್ರೆ ಅವ್ರಿಗೆ ಅಂತಹ ಅನುಭವ ಸಿಕ್ಕಿದೆ.

ಗುರು ರಾಘವೇಂದ್ರ ಸ್ವಾಮಿಗಳನ್ನು ಪ್ರೀತಿಯಿಂದ ಭಕ್ತಿಯಿಂದ ಒಲಿಸಿಕೊಳ್ಳುವುದು ತುಂಬಾ ಸುಲಭ ಅದು ಹೇಗೆ ಅಂದ್ರೆ ಪ್ರತಿ ಗುರುವಾರ ಎನ್ನದೆ ಪ್ರತಿ ನಿತ್ಯ ಗುರು ರಾಯರ ಸ್ತೋತ್ರ 108 ಬಾರಿ ಪಾರಾಯಣ ಮಾಡುವುದು. ಗುರು ರಾಯರಿಗೆ ನಿಮ್ಮ ಇಷ್ಟದ ಹೊವನ್ನು ಇಟ್ಟು ಪ್ರಾರ್ಥನೆ ಮಾಡುವುದು. ಪ್ರತಿ ಗುರುವಾರ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ಭೇಟಿ ನೀಡಿ ಭಕ್ತಿಯಿಂದ ಪ್ರಾರ್ಥನೆ ಮಾಡುವುದು ನಿಮ್ಮ ಬಯಕೆ ಇಚ್ಛೆ ಈಡೀರಿದ ನಂತರ ಹೆಜ್ಜೆ ನಮಸ್ಕಾರ ಮಾಡುವುದು ಹೀಗೆ ಸಾಕಷ್ಟು ಸೇವೆಗಳು ಮಾಡಿ ನೀವು ರಾಯರ ಕೃಪೆಗೆ ಪಾತ್ರರಾಗಬಹುದು.

LEAVE A REPLY

Please enter your comment!
Please enter your name here